Skip to content
ThuthiThuthiThuthi
Psalms · chapter 104 of 150 · 35 verses

Psalm 104 in Kannada

ಕೀರ್ತನೆಗಳು 104

  1. ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ನನ್ನ ದೇವರಾದ ಓ ಕರ್ತನೇ, ನೀನು ಬಹಳ ದೊಡ್ಡವನಾಗಿದ್ದು ಗೌರವ ವನ್ನೂ ಪ್ರಭೆಯನ್ನೂ ಹೊದ್ದುಕೊಂಡಿದ್ದೀ.

    Bless the LORD, O my soul. O LORD my God, thou art very great; thou art clothed with honour and majesty.

  2. ಆತನು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುವಾತನೂ ಆಕಾಶ ವನ್ನು ಪರದೆ ಹಾಗೆ ಹಾಸುವಾತನೂ ಆಗಿದ್ದಾನೆ.

    Who coverest [thyself] with light as [with] a garment: who stretchest out the heavens like a curtain:

  3. ಆತನು ನೀರುಗಳಲ್ಲಿ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾನೆ; ಮೋಡಗಳನ್ನು ತನ್ನ ರಥವಾಗಿ ಮಾಡು ತ್ತಾನೆ. ಗಾಳಿಯ ರೆಕ್ಕೆಗಳ ಮೇಲೆ ನಡೆದು ಹೋಗು ತ್ತಾನೆ.

    Who layeth the beams of his chambers in the waters: who maketh the clouds his chariot: who walketh upon the wings of the wind:

  4. ಆತನು ತನ್ನ ದೂತರನ್ನು ಆತ್ಮಗಳನ್ನಾಗಿಯೂ ಉರಿಯುವ ಬೆಂಕಿಯನ್ನು ತನ್ನ ಸೇವಕರನ್ನಾಗಿಯೂ ಮಾಡುತ್ತಾನೆ.

    Who maketh his angels spirits; his ministers a flaming fire:

  5. ಯುಗಯುಗಾಂತರಗಳಿಗೂ ಅದು ಕದಲದ ಹಾಗೆ ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಆತನು ಸ್ಥಾಪಿಸಿದನು.

    [Who] laid the foundations of the earth, [that] it should not be removed for ever.

  6. ನೀನು ಜಲಾಗಾಧದಿಂದ ವಸ್ತ್ರದ ಹಾಗೆ ಅದನ್ನು ಮುಚ್ಚಿದ್ದೀ; ಬೆಟ್ಟಗಳ ಮೇಲೆ ನೀರುಗಳು ನಿಂತವು.

    Thou coveredst it with the deep as [with] a garment: the waters stood above the mountains.

  7. ಅವು ನಿನ್ನ ಗದರಿಕೆಯಿಂದ ಓಡಿಹೋದವು; ನಿನ್ನ ಗುಡುಗಿನ ಶಬ್ದದಿಂದ ಅವು ಓಡಿಹೋದವು.

    At thy rebuke they fled; at the voice of thy thunder they hasted away.

  8. ಬೆಟ್ಟ ಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀನು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.

    They go up by the mountains; they go down by the valleys unto the place which thou hast founded for them.

  9. ಅವು ದಾಟದ ಹಾಗೆಯೂ ಭೂಮಿಯನ್ನು ಮುಚ್ಚುವದಕ್ಕೆ ತಿರಿಗಿ ಬಾರದ ಹಾಗೆಯೂ ಮೇರೆಯನ್ನು ಇಟ್ಟಿದ್ದೀ.

    Thou hast set a bound that they may not pass over; that they turn not again to cover the earth.

  10. ಬುಗ್ಗೆ ಗಳನ್ನು ಹಳ್ಳಗಳಿಗೆ ಕಳುಹಿಸುತ್ತೀ; ಅವು ಬೆಟ್ಟಗಳ ನಡುವೆ ಹರಿಯುತ್ತವೆ;

    He sendeth the springs into the valleys, [which] run among the hills.

  11. ಕಾಡಿನ ಮೃಗಗಳಿಗೆಲ್ಲಾ ಅವು ನೀರು ಕುಡಿಸುತ್ತವೆ; ಕಾಡು ಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.

    They give drink to every beast of the field: the wild asses quench their thirst.

  12. ಆಕಾಶದ ಪಕ್ಷಿಗಳು ಅವುಗಳ ಹತ್ತಿರ ವಾಸವಾಗಿದ್ದು ಕೊಂಬೆಗಳ ಮಧ್ಯ ದಲ್ಲಿಂದ ಹಾಡುತ್ತವೆ.

    By them shall the fowls of the heaven have their habitation, [which] sing among the branches.

  13. ಬೆಟ್ಟಗಳಿಗೆ ತನ್ನ ಉಪ್ಪರಿಗೆ ಗಳೊಳಗಿಂದ ನೀರು ಹಾಕುತ್ತಾನೆ; ತನ್ನ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.

    He watereth the hills from his chambers: the earth is satisfied with the fruit of thy works.

  14. ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ.

    He causeth the grass to grow for the cattle, and herb for the service of man: that he may bring forth food out of the earth;

  15. ದ್ರಾಕ್ಷಾರಸವು ಮನುಷ್ಯನ ಹೃದಯವನ್ನು ಸಂತೋಷ ಪಡಿಸುತ್ತದೆ; ಎಣ್ಣೆಯು ಅವನ ಮುಖವನ್ನು ಪ್ರಕಾ ಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಹೃದಯವನ್ನು ಬಲಪಡಿಸುತ್ತದೆ.

    And wine [that] maketh glad the heart of man, [and] oil to make [his] face to shine, and bread [which] strengtheneth man’s heart.

  16. ಆತನು ನೆಟ್ಟ ಕರ್ತನ ಮರಗಳಾದ ಲೆಬನೋನಿನ ದೇವದಾರುಗಳು ತೃಪ್ತಿ ಯಾಗುತ್ತವೆ.

    The trees of the LORD are full [of sap;] the cedars of Lebanon, which he hath planted;

  17. ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ಬಕದ ಮನೆಯು ತುರಾಯಿ ಗಿಡಗಳಲ್ಲಿ ಅದೆ.

    Where the birds make their nests: [as for] the stork, the fir trees [are] her house.

  18. ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ, ಬಂಡೆ ಗಳು ಮೊಲಗಳಿಗೆ ಆಶ್ರಯವಾಗಿವೆ.

    The high hills [are] a refuge for the wild goats; [and] the rocks for the conies.

  19. ನೇಮಿಸಿದ ಕಾಲಗಳಿಗೋಸ್ಕರ ಚಂದ್ರನನ್ನು ಉಂಟು ಮಾಡಿದ್ದಾನೆ; ಸೂರ್ಯನು ತನ್ನ ಅಸ್ತಮಾನ ವನ್ನು ತಿಳಿದಿದ್ದಾನೆ.

    He appointed the moon for seasons: the sun knoweth his going down.

  20. ನೀನು ಕತ್ತಲನ್ನು ಬರಮಾಡುತ್ತೀ; ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗ ಗಳೆಲ್ಲಾ ಸಂಚರಿಸುತ್ತವೆ.

    Thou makest darkness, and it is night: wherein all the beasts of the forest do creep [forth].

  21. ಸಿಂಹದ ಮರಿಗಳು ಬೇಟೆ ಗೋಸ್ಕರವೂ ದೇವರಿಂದ ತಮ್ಮ ಆಹಾರವನ್ನು ಹುಡು ಕುವದಕ್ಕೋಸ್ಕರವೂ ಗರ್ಜಿಸುತ್ತವೆ.

    The young lions roar after their prey, and seek their meat from God.

  22. ಸೂರ್ಯನು ಹುಟ್ಟಲು ಅವು ಕೂಡಿ ಬಂದು ತಮ್ಮ ಗವಿಗಳಲ್ಲಿ ಮಲಗುತ್ತವೆ.

    The sun ariseth, they gather themselves together, and lay them down in their dens.

  23. ಮನುಷ್ಯನು ತನ್ನ ಕೆಲಸಕ್ಕೂ ಸಾಯಂ ಕಾಲದ ವರೆಗೆ ತನ್ನ ಪ್ರಯಾಸಕ್ಕೂ ಹೊರಡುತ್ತಾನೆ.

    Man goeth forth unto his work and to his labour until the evening.

  24. ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ.

    O LORD, how manifold are thy works! in wisdom hast thou made them all: the earth is full of thy riches.

  25. ದೊಡ್ಡದೂ ವಿಶಾಲವಾದದ್ದೂ ಆದ ಸಮುದ್ರವದೆ; ಅದರಲ್ಲಿ ಲೆಕ್ಕವಿಲ್ಲದ ಜೀವಜಂತುಗಳೂ ಸಣ್ಣ ದೊಡ್ಡ ಮೃಗಗಳೂ ಅವೆ.

    [So is] this great and wide sea, wherein [are] things creeping innumerable, both small and great beasts.

  26. ಅದರಲ್ಲಿ ಹಡಗುಗಳು ಹೋಗು ತ್ತವೆ; ಅದರಲ್ಲಿ ಆಡುವದಕ್ಕೆ ನೀನು ರೂಪಿಸಿದ ಲೆವಿ ಯಾತಾನವು ಅದೆ.

    There go the ships: [there is] that leviathan, [whom] thou hast made to play therein.

  27. ನೀನು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವಹಾಗೆ ಅವುಗಳೆಲ್ಲಾ ನಿನ್ನನ್ನು ಕಾದುಕೊಳ್ಳುತ್ತವೆ.

    These wait all upon thee; that thou mayest give [them] their meat in due season.

  28. ನೀನು ಅವುಗಳಿಗೆ ಕೊಡಲು ಅವು ಕೂಡಿಸುತ್ತವೆ; ನೀನು ನಿನ್ನ ಕೈ ತೆರೆಯಲು ಒಳ್ಳೇ ದರಿಂದ ತೃಪ್ತಿಯಾಗುತ್ತವೆ.

    [That] thou givest them they gather: thou openest thine hand, they are filled with good.

  29. ನೀನು ನಿನ್ನ ಮುಖವನ್ನು ಮರೆಮಾಡಲು ತಲ್ಲಣಿಸುತ್ತವೆ; ನೀನು ಅವುಗಳ ಶ್ವಾಸವನ್ನು ತೆಗೆದು ಬಿಡಲು, ಅವು ಸತ್ತುಹೋಗಿ, ತಮ್ಮ ಧೂಳಿಗೆ ತಿರುಗುತ್ತವೆ.

    Thou hidest thy face, they are troubled: thou takest away their breath, they die, and return to their dust.

  30. ನೀನು ನಿನ್ನ ಶ್ವಾಸ ವನ್ನು ಕಳುಹಿಸಲು ಅವು ನಿರ್ಮಿಸಲ್ಪಡುತ್ತವೆ; ನೀನು ಭೂಮಿಯ ಮುಖವನ್ನು ಹೊಸದಾಗಿ ಮಾಡುತ್ತೀ.

    Thou sendest forth thy spirit, they are created: and thou renewest the face of the earth.

  31. ಕರ್ತನ ಮಹಿಮೆಯು ಯುಗಯುಗಕ್ಕೂ ಇರಲಿ; ಕರ್ತನು ತನ್ನ ಕೆಲಸಗಳಲ್ಲಿ ಸಂತೋಷಪಡಲಿ.

    The glory of the LORD shall endure for ever: the LORD shall rejoice in his works.

  32. ಆತನು ಭೂಮಿಯನ್ನು ದೃಷ್ಟಿಸಲು ಅದು ನಡು ಗುತ್ತದೆ; ಬೆಟ್ಟಗಳನ್ನು ಮುಟ್ಟಲು ಅವು ಹೊಗೆ ಹಾಯುತ್ತವೆ.

    He looketh on the earth, and it trembleth: he toucheth the hills, and they smoke.

  33. ನಾನು ಜೀವಿತಕಾಲವೆಲ್ಲಾ ಕರ್ತನಿಗೆ ಹಾಡು ವೆನು ನಾನು ಇರುವ ವರೆಗೆ ದೇವರನ್ನು ಕೀರ್ತಿಸುವೆನು.

    I will sing unto the LORD as long as I live: I will sing praise to my God while I have my being.

  34. ಆತನ ವಿಷಯವಾದ ನನ್ನ ಧ್ಯಾನವು ಸಿಹಿಯಾಗಿ ರುವದು; ನಾನು ಕರ್ತನಲ್ಲಿ ಸಂತೋಷಪಡುವೆನು.ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.

    My meditation of him shall be sweet: I will be glad in the LORD.

  35. ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.

    Let the sinners be consumed out of the earth, and let the wicked be no more. Bless thou the LORD, O my soul. Praise ye the LORD.

All chapters of Psalms · Kannada Bible · Psalm 104 in Tamil

Kannada Bible: Kannada Old Version, public domain.

King James Version: public domain.