Psalms · chapter 105 · verse 9
Psalm 105:9 in Kannada
ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಇಸಾಕನಿಗೆ ಇಟ್ಟ ಆಣೆಯನ್ನೂ ಆತನು ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾನೆ.
Abrahaamana sangada maadida odambadikeyannoo isaakanige itta aaneyannoo aatanu yugayugakkoo jnyaapaka maadikondiddaane.
Psalm 105:9 in English
- King James Version (KJV)
- Which [covenant] he made with Abraham, and his oath unto Isaac;
- World English Bible (WEB)
- the covenant which he made with Abraham, his oath to Isaac,
- American Standard Version (ASV)
- [The covenant] which he made with Abraham, And his oath unto Isaac,
- Bible in Basic English (BBE)
- The agreement which he made with Abraham, and his oath to Isaac;
- Darby Translation (DBY)
- Which he made with Abraham, and of his oath unto Isaac;
- Webster's Bible (WBS)
- Which [covenant] he made with Abraham, and his oath to Isaac;
- Young's Literal Translation (YLT)
- That He hath made with Abraham, And His oath to Isaac,
Read in context
- 7ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ.
- 8ತನ್ನ ಒಡಂಬಡಿಕೆಯನ್ನೂ ಸಾವಿರ ತಲಾಂತರಗ ಳಿಗೆ ಆಜ್ಞಾಪಿಸಿದ ತನ್ನ ಮಾತನ್ನೂ
- 9ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಇಸಾಕನಿಗೆ ಇಟ್ಟ ಆಣೆಯನ್ನೂ ಆತನು ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾನೆ.
- 10ಅದನ್ನು ಯಾಕೋಬನಿಗೆ ದೃಢ ಮಾಡಿದನು ಮತ್ತು ಇಸ್ರಾಯೇಲಗೆ ನಿತ್ಯ ಒಡಂಬಡಿಕೆ ಯಾಗಿ ಸ್ಥಾಪಿಸಿ ಹೇಳಿದ್ದೇನಂದರೆ--
- 11ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.
Cross references
- Genesis 17:2 ಆದಿಕಾಂಡ 17:2ನನಗೂ ನಿನಗೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ಮಾಡುವೆನು; ಇದಲ್ಲದೆ ನಿನ್ನನ್ನು ಅತ್ಯಧಿಕವಾಗಿ ಹೆಚ್ಚಿಸುವೆನು ಎಂದು ಅವನಿಗೆ ಹೇಳಿದನು.
- Genesis 26:3 ಆದಿಕಾಂಡ 26:3ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಸಂಗಡ ಇದ್ದು ನಿನ್ನನ್ನು ಆಶೀರ್ವದಿಸುವೆನು. ನಿನಗೂ ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆಯಾದ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು.
- Genesis 22:16–18 ಆದಿಕಾಂಡ 22:16–18ಅವನು ಹೇಳಿದ್ದೇನಂದರೆ--ನಾನು ನನ್ನ ಮೇಲೆ ನಾನೇ ಆಣೆಯಿಟ್ಟು ಕೊಂಡಿದ್ದೇನೆ ಎಂದು ಕರ್ತನು ಹೇಳು ತ್ತಾನೆ. ಯಾಕಂದರೆ ನೀನು ಈ ಕಾರ್ಯವನ್ನು ಮಾಡಿ ನಿನ್ನ ಒಬ್ಬನೇ ಮಗನನ್ನು ನನಗೆ ಕೊಡುವದಕ್ಕೆ ಹಿಂತೆಗೆಯದೆ ಇದ್ದದರಿಂದ ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು. ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ.
- Hebrews 6:17 ಇಬ್ರಿಯರಿಗೆ 6:17ಅದರಲ್ಲಿ ದೇವರು ತನ್ನ ಸಂಕಲ್ಪವು ನಿಶ್ಚಲವಾದದ್ದೆಂಬದನ್ನು ವಾಗ್ದಾನಕ್ಕೆ ಬಾಧ್ಯರಾಗುವವರಿಗೆ ಬಹು ಸ್ಪಷ್ಟವಾಗಿ ತೋರಿಸ ಬೇಕೆಂದು ಆಣೆಯಿಟ್ಟು ತನ್ನ ಮಾತನ್ನು ಸ್ಥಿರಪಡಿಸಿದನು.
- Genesis 12:7 ಆದಿಕಾಂಡ 12:7ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಿನ್ನ ಸಂತತಿಗೆ ನಾನು ಈ ದೇಶವನ್ನು ಕೊಡುವೆನು ಅಂದನು. ಆಗ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಕರ್ತನಿಗೆ ಬಲಿಪೀಠವನ್ನು ಕಟ್ಟಿದನು.
- Acts 7:8 ಅಪೊಸ್ತಲರ ಕೃತ್ಯಗಳು 7:8ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು. ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು. ಇಸಾಕನಿಂದ ಯಾಕೋಬನು ಹುಟ್ಟಿದನು. ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು.
- Genesis 28:13 ಆದಿಕಾಂಡ 28:13ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು.
- Galatians 3:17 ಗಲಾತ್ಯದವರಿಗೆ 3:17ನಾನು ಹೇಳುವದೇನಂದರೆ, ದೇವರು ಕ್ರಿಸ್ತನಲ್ಲಿ ಮೊದಲು ಸ್ಥಿರಪಡಿಸಿದ ಒಡಂಬಡಿಕೆಯನ್ನು ನಾನೂರ ಮೂವತ್ತು ವರುಷಗಳ ಮೇಲೆ ಬಂದ ನ್ಯಾಯಪ್ರಮಾಣವು ರದ್ದು ಮಾಡಿ ಆ ವಾಗ್ದಾನವನ್ನು ವ್ಯರ್ಥಮಾಡುವದಿಲ್ಲ.
- Genesis 35:11 ಆದಿಕಾಂಡ 35:11ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.
- Nehemiah 9:8 ನೆಹೆಮೀಯ 9:8ಅವನ ಹೃದಯವು ನಿನ್ನ ಮುಂದೆ ನಂಬಿಕೆಯುಳ್ಳದ್ದೆಂದು ಕಂಡುಕೊಂಡು ಕಾನಾನ್ಯರೂ ಹಿತ್ತಿಯರೂ ಅಮೋರಿ ಯರೂ ಪೆರಿಜ್ಜೀಯರೂ ಯೆಬೂಸಿಯರೂ ಗಿರ್ಗಾಷಿ ಯರೂ ಇವರ ದೇಶವನ್ನು ಅವನ ಸಂತಾನಕ್ಕೆ ಕೊಡುವ ಹಾಗೆ ಅವನ ಸಂಗಡ ಒಡಂಬಡಿಕೆಯನ್ನು ಮಾಡಿದಿ; ನೀನು ಸತ್ಯವಂತನಾಗಿರುವದರಿಂದ ನಿನ್ನ ವಾಕ್ಯಗಳನ್ನು ಈಡೇರಿಸಿದಿ.