Psalms · chapter 106 · verse 33
Psalm 106:33 in Kannada
ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು.
Avaru devaraatmanannu kena kidaru; aadadarinda avanu buddhiheenateyinda maatanaadidanu.
Psalm 106:33 in English
- King James Version (KJV)
- Because they provoked his spirit, so that he spake unadvisedly with his lips.
- World English Bible (WEB)
- because they were rebellious against his spirit, he spoke rashly with his lips.
- American Standard Version (ASV)
- Because they were rebellious against his spirit, And he spake unadvisedly with his lips.
- Bible in Basic English (BBE)
- For they made his spirit bitter, and he said unwise things.
- Darby Translation (DBY)
- For they provoked his spirit, so that he spoke unadvisedly with his lips.
- Webster's Bible (WBS)
- Because they provoked his spirit, so that he spoke unadvisedly with his lips.
- Young's Literal Translation (YLT)
- For they have provoked his spirit, And he speaketh wrongfully with his lips.
Read in context
- 31ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು.
- 32ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು.
- 33ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು.
- 34ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.
- 35ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು.
Cross references
- Numbers 20:10–11 ಅರಣ್ಯಕಾಂಡ 20:10–11ಮೋಶೆಯೂ ಆರೋನನೂ ಸಭೆಯನ್ನು ಬಂಡೆಯ ಮುಂದೆ ಕೂಡಿಸಿ ಅವರಿಗೆ--ತಿರುಗಿಬಿದ್ದವರೇ, ಕೇಳಿರಿ; ನಾವು ನಿಮಗೋಸ್ಕರ ಈ ಬಂಡೆಯೊಳಗಿಂದ ನೀರನ್ನು ಹೊರಡಿಸಬೇಕೋ ಎಂದು ಹೇಳಿದರು. ಮೋಶೆಯು ತನ್ನ ಕೈಯನ್ನು ಎತ್ತಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು; ಆಗ ಬಹಳ ನೀರು ಹೊರಗೆ ಬಂತು; ಸಭೆಯೂ ಅವರ ಪಶುಗಳೂ ಕುಡಿದವು.
- James 3:2 ಯಾಕೋಬನು 3:2ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿ ಪೂರ್ಣನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.
- Psalm 78:40 ಕೀರ್ತನೆಗಳು 78:40ಎಷ್ಟೋ ಸಾರಿ ಅವರು ಅರಣ್ಯದಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಕಾಡಿನಲ್ಲಿ ಆತನನ್ನು ದುಃಖ ಪಡಿಸಿದರು.
- Psalm 39:1 ಕೀರ್ತನೆಗಳು 39:1ನನ್ನ ನಾಲಿಗೆಯಿಂದ ಪಾಪಮಾಡದ ಹಾಗೆ ನನ್ನ ಮಾರ್ಗಗಳನ್ನು ಕಾಪಾಡಿ ಕೊಳ್ಳುವೆನೆಂದೂ ದುಷ್ಟನು ನನ್ನ ಮುಂದೆ ಇರುವಾಗ ನನ್ನ ಬಾಯಿಗೆ ಕಡಿವಾಣ ಇಟ್ಟುಕೊಳ್ಳುವೆನೆಂದೂ ಹೇಳಿದೆನು.
- Psalm 107:11 ಕೀರ್ತನೆಗಳು 107:11ದೇವರ ಮಾತುಗಳನ್ನು ಎದುರಿಸಿ, ಮಹೋನ್ನತನ ಆಲೋಚನೆಯನ್ನು ಅಸಹ್ಯಿಸಿದ್ದರಿಂದ
- Job 2:10 ಯೋಬನು 2:10ಆದರೆ ಅವನು ಅವಳಿಗೆ--ಮೂರ್ಖ ಹೆಂಗಸರಲ್ಲಿ ಒಬ್ಬಳು ಮಾತನಾಡುವ ಪ್ರಕಾರ ನೀನೂ ಮಾತನಾಡುವಿಯಾ? ದೇವರ ಕೈಯಿಂದ ಒಳ್ಳೇದನ್ನು ಹೊಂದುತ್ತೇವಲ್ಲಾ? ಕೆಟ್ಟದ್ದನ್ನು ಹೊಂದುವದು ಬೇಡವೋ ಅಂದನು. ಇವೆಲ್ಲವುಗಳಲ್ಲಿ ಯೋಬನು ತನ್ನ ತುಟಿಗಳಿಂದ ಪಾಪಮಾಡಲಿಲ್ಲ.
- Psalm 141:3 ಕೀರ್ತನೆಗಳು 141:3ಓ ಕರ್ತನೇ, ನನ್ನ ಬಾಯಿಗೆ ಕಾವ ಲಿಡು; ನನ್ನ ತುಟಿಗಳ ಕದವನ್ನು ಕಾಯಿ. ಅಪರಾಧ ಮಾಡುವ ಮನುಷ್ಯರ ಸಂಗಡ ದುಷ್ಟತ್ವದಿಂದ ಕರ್ಮಗಳನ್ನು ನಡಿಸುವ ಕೆಟ್ಟ ಕಾರ್ಯಕ್ಕೆ
- Genesis 35:16–18 ಆದಿಕಾಂಡ 35:16–18ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು. ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು. (ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
- Job 38:2 ಯೋಬನು 38:2ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು?
- Job 40:4–5 ಯೋಬನು 40:4–5ಇಗೋ, ನೀಚನಾಗಿದ್ದೇನೆ; ನಿನಗೆ ಏನು ಪ್ರತ್ಯುತ್ತರ ಕೊಡಲಿ? ನನ್ನ ಕೈಯಿಂದ ಬಾಯಿ ಮುಚ್ಚಿಕೊಳ್ಳುತ್ತೇನೆ. ಒಂದು ಸಾರಿ ಮಾತಾಡಿದೆನು, ಆದರೆ ಉತ್ತರ ಕೊಡೆನು; ಹೌದು, ಎರಡು ಸಾರಿ. ಆದರೆ ಹೆಚ್ಚು ಮಾತಾಡೆನು ಅಂದೆನು.
- Job 42:7–8 ಯೋಬನು 42:7–8ಕರ್ತನು ಈ ಮಾತುಗಳನ್ನೆಲ್ಲಾ ಯೋಬನಿಗೆ ಹೇಳಿದ ಮೇಲೆ ಕರ್ತನು ತೇಮಾನ್ಯನಾದ ಎಲೀಫಜ ನಿಗೆ -- ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ಕೋಪಗೊಂಡಿದ್ದೇನೆ; ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾಡಲಿಲ್ಲ. ಹಾಗಾದರೆ ಈಗ ಏಳು ಎತ್ತುಗಳೂ ಏಳು ಹೋತಗಳೂ ನಿಮ ಗೋಸ್ಕರ ತಕ್ಕೊಂಡು ನನ್ನ ಸೇವಕನಾದ ಯೋಬನ ಬಳಿಗೆ ಬನ್ನಿರಿ; ಅವುಗಳನ್ನು ನಿಮಗೋಸ್ಕರ ದಹನ ಬಲಿಯಾಗಿ ಅರ್ಪಿಸಿರಿ; ನನ್ನ ಸೇವಕನಾದ ಯೋಬನು ನಿಮಗೋಸ್ಕರ ಪ್ರಾರ್ಥನೆ ಮಾಡುವನು. ನಾನು ನಿಮ್ಮ ಬುದ್ಧಿಹೀನತೆಯ ಪ್ರಕಾರ ಮಾಡದ ಹಾಗೆ ಅವನ ಪ್ರಾರ್ಥನೆಯನ್ನು ಅಂಗೀಕರಿಸುವೆನು. ಯಾಕಂ ದರೆ ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾ ಡಲಿಲ್ಲ.
- Genesis 30:1 ಆದಿಕಾಂಡ 30:1ರಾಹೇಲಳು ತಾನು ಯಾಕೋಬನಿಗೆ ಇನ್ನು ಹೆರುವದಿಲ್ಲವೆಂದು ತಿಳಿದಾಗ ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೇಕಿಚ್ಚು ಪಟ್ಟು ಯಾಕೋಬನಿಗೆ--ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ ಅಂದಳು.