Psalms · chapter 106 · verse 36
Psalm 106:36 in Kannada
ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು.
Avara vigrahagalige seve maadidaru avu avarige nenu aadavu.
Psalm 106:36 in English
- King James Version (KJV)
- And they served their idols: which were a snare unto them.
- World English Bible (WEB)
- They served their idols, which became a snare to them.
- American Standard Version (ASV)
- And served their idols, Which became a snare unto them.
- Bible in Basic English (BBE)
- And they gave worship to images; which were a danger to them:
- Darby Translation (DBY)
- And they served their idols; and they were a snare unto them:
- Webster's Bible (WBS)
- And they served their idols: which were a snare to them.
- Young's Literal Translation (YLT)
- And serve their idols, And they are to them for a snare.
Read in context
- 34ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.
- 35ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು.
- 36ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು.
- 37ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು.
- 38ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು.
Cross references
- Deuteronomy 7:16 ಧರ್ಮೋಪದೇಶಕಾಂಡ 7:16ನಿನ್ನ ದೇವರಾದ ಕರ್ತನು ನಿನಗೆ ಒಪ್ಪಿಸುವ ಜನಗಳನ್ನೆಲ್ಲಾ ನೀನು ಸಂಹರಿಸಿಬಿಡುವಿ; ಅವರ ಮೇಲೆ ನೀನು ಕಟಾಕ್ಷವಿಡಬಾರದು; ಇಲ್ಲವೆ ಅವರ ದೇವರು ಗಳನ್ನು ಸೇವಿಸಬಾರದು; ಅದು ನಿನಗೆ ಉರುಲಾ ಗುವದು.
- Judges 2:3 ನ್ಯಾಯಸ್ಥಾಪಕರು 2:3ಆದದರಿಂದ--ನಾನು ಸಹ ಅವರನ್ನು ನಿಮ್ಮ ಎದುರಿನಿಂದ ಓಡಿಸಿಬಿಡುವದಿಲ್ಲ. ಅವರು ನಿಮ್ಮ ಪಕ್ಕದಲ್ಲಿ ಮುಳ್ಳುಗಳಂತಿರುವರು; ಅವರ ದೇವರುಗಳು ನಿಮಗೆ ಉರುಲಾಗುವವೆಂದು ನಾನು ಹೇಳಿದ್ದೆನು.
- Exodus 23:33 ವಿಮೋಚನಕಾಂಡ 23:33ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು.
- Psalm 78:58 ಕೀರ್ತನೆಗಳು 78:58ತಮ್ಮ ಉನ್ನತ ಸ್ಥಳಗಳಿಂದ ಆತನಿಗೆ ಕೋಪವನ್ನೆಬ್ಬಿಸಿ ಕೆತ್ತಿದ ತಮ್ಮ ವಿಗ್ರಹಗಳಿಂದ ಆತನಿಗೆ ರೋಷವನ್ನೆಬ್ಬಿಸಿದರು.
- Judges 2:12–15 ನ್ಯಾಯಸ್ಥಾಪಕರು 2:12–15ತಮ್ಮ ತಂದೆಗಳನ್ನು ಐಗುಪ್ತದಿಂದ ಹೊರಡಮಾಡಿದ ತಮ್ಮ ದೇವರಾದ ಕರ್ತನನ್ನು ಬಿಟ್ಟು ತಮ್ಮ ಸುತ್ತಲಿರುವ ಜನಗಳ ಅನ್ಯ ದೇವರುಗಳ ಹಿಂದೆಹೋಗಿ ಅವುಗಳಿಗೆ ಅಡ್ಡಬಿದ್ದು ಕರ್ತನಿಗೆ ಕೋಪವನ್ನೆಬ್ಬಿಸಿದರು. ಅವರು ಕರ್ತನನ್ನು ಬಿಟ್ಟು ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದರು. ಆದದರಿಂದ ಕರ್ತನು ಇಸ್ರಾಯೇಲಿಗೆ ವಿರೋಧ ವಾಗಿ ಉರಿಗೊಂಡು ಅವರನ್ನು ಕೊಳ್ಳೆಹೊಡೆಯುವ ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ತರುವಾಯ ಅವರು ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟನು. ಕರ್ತನು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಇಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವದಕ್ಕೆ ಕರ್ತನ ಕೈ ಅವರ ಮೇಲೆ ಇತ್ತು.
- Judges 2:19 ನ್ಯಾಯಸ್ಥಾಪಕರು 2:19ಆ ನ್ಯಾಯಾಧಿಪತಿ ಸತ್ತಾಗ ಅವರು ತಿರುಗಿ ಮಾರ್ಗ ತಪ್ಪಿ ಅನ್ಯದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದು ತಮ್ಮ ತಂದೆಗಳಿಗಿಂತ ಅಧಿಕವಾಗಿ ತಮ್ಮನ್ನು ಕೆಡಿಸಿಕೊಂಡು ತಮ್ಮ ಕೃತ್ಯಗಳನ್ನೂ ತಮ್ಮ ಕಾಠಿಣ್ಯದ ಮಾರ್ಗವನ್ನೂ ಬಿಡದೇ ಹೋದರು.
- Judges 10:6 ನ್ಯಾಯಸ್ಥಾಪಕರು 10:6ಆದರೆ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ಮುಂದೆ ಕೆಟ್ಟತನಮಾಡಿ ಬಾಳನನ್ನೂ ಅಷ್ಟೋರೆತನ್ನೂ ಸಿರಿಯಾ ದೇಶದ ದೇವರುಗಳನ್ನೂ ಚೀದೋನಿನ ದೇವರುಗಳನ್ನೂ ಮೋವಾಬಿನ ದೇವರುಗಳನ್ನೂ ಅಮ್ಮೋನನ ಮಕ್ಕಳ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸುವವರಾಗಿ ಕರ್ತನನ್ನು ಸೇವಿ ಸದೆ ಆತನನ್ನು ಬಿಟ್ಟು ಹೋದರು.
- Ezekiel 16:15–63 ಯೆಹೆಜ್ಕೇಲನು 16:15–63ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸ ವಿಟ್ಟು ನಿನ್ನ ಕೀರ್ತಿಯ ನಿಮಿತ್ತವಾಗಿ ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿವಿಾರಿ ಹಾದರತನ ಮಾಡಿದೆ; ಒಬ್ಬೊಬ್ಬನಿಗೂ ಒಳಗಾದೆ. ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ. ಇದಲ್ಲದೆ ನಾನು ನಿನಗೆ ಬೆಳ್ಳಿ ಬಂಗಾರದಿಂದ ಮಾಡಿಸಿಕೊಟ್ಟಿದ್ದ ನಿನ್ನ ಅಂದವಾದ ಆಭರಣಗಳನ್ನು ತೆಗೆದು ಅವುಗಳಿಂದ ಪುರುಷ ರೂಪಗಳನ್ನು ಮಾಡಿಕೊಂಡು ಅದರ ಸಂಗಡ ವ್ಯಭಿಚಾರ ಮಾಡಿದಿ. ನಿನ್ನ ಕಸೂತಿಯ ಬಟ್ಟೆಗಳನ್ನು ತೆಗೆದು ಅವರಿಗೆ ಹೊದಿಸಿ ನನ್ನ ಎಣ್ಣೆಯನ್ನೂ ಧೂಪ ವನ್ನೂ ಅವರ ಮುಂದೆ ಇಟ್ಟೆ. ನಾನು ನಿನಗೆ ನನ್ನ ಆಹಾರವನ್ನೂ ನಿನಗೆ ನಯವಾದ ಹಿಟ್ಟನ್ನೂ ಎಣ್ಣೆ ಮತ್ತು ಜೇನುಗಳನ್ನೂ ಸುವಾಸನೆಗಾಗಿ ಕೊಟ್ಟೆ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ ಎಂದು ದೇವರಾದ ಕರ್ತನು ಹೇಳುತ್ತಾನೆ. ಇದಾದ ಮೇಲೆ ನನಗೆ ಹುಟ್ಟಿದ್ದ ನನ್ನ ಕುಮಾರರನ್ನೂ ಕುಮಾರ್ತೆ ಯರನ್ನೂ ಅವರ ಆಹಾರಕ್ಕಾಗಿ ಅರ್ಪಿಸಿದಿ. ಈ ನಿನ್ನ ವ್ಯಭಿಚಾರ ಸಾಮಾನ್ಯವಾದದ್ದಲ್ಲ, ನೀನು ನನ್ನ ಮಕ್ಕಳನ್ನು ಕೊಂದು ಅವರಿಗೆ ಬೆಂಕಿಯನ್ನು ದಾಟುವ ಹಾಗೆ ಒಪ್ಪಿಸಿದಿಯಲ್ಲಾ; ನಿನ್ನ ಎಲ್ಲಾ ಅಸಹ್ಯಗಳ ಲ್ಲಿಯೂ ನಿನ್ನ ವ್ಯಭಿಚಾರಗಳಲ್ಲಿಯೂ ನಿನ್ನ ಎಳೆಯ ಪ್ರಾಯದ ದಿವಸಗಳನ್ನು ನೀನು ಬರೀ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದದ್ದನ್ನು ನೀನು ಜ್ಞಾಪಕ ಮಾಡಲಿಲ್ಲ. ಇದಲ್ಲದೆ ಈ ನಿನ್ನ ಎಲ್ಲಾ ಕೆಟ್ಟತನಗಳ ತರುವಾಯ ಆಗಿದ್ದೇನಂದರೆ (ಅಯ್ಯೋ! ಅಯ್ಯೋ ಎಂದು ನಿನಗೆ ದೇವರಾದ ಕರ್ತನು ಹೇಳುತ್ತಾನೆ;) ನೀನು ಪ್ರತಿಯೊಂದು ಬೀದಿಯಲ್ಲಿಯೂ ಉನ್ನತ ಸ್ಥಳಗಳನ್ನು ಕಟ್ಟಿ ನಿನಗೆ ಉತ್ತಮವಾದ ಸ್ಥಳಗ ಳನ್ನು ಮಾಡಿಕೊಂಡಿರುವಿ. ಪ್ರತಿಯೊಂದು ಕಡೆ ಮೂಲೆ ಮೂಲೆಗೂ ಉನ್ನತ ಸ್ಥಳವನ್ನು ಕಟ್ಟಿ ನಿನ್ನ ಸೌಂದರ್ಯವನ್ನು ದುರುಪಯೋಗಪಡಿಸಿಕೊಂಡು ಹಾದು ಹೋಗುವ ಪ್ರತಿಯೊಬ್ಬರಿಗೂ ನಿನ್ನ ಕಾಲು ಗಳನ್ನು ಅಗಲಿಸಿದಿ; ನಿನ್ನ ವ್ಯಭಿಚಾರವನ್ನು ವೃದ್ಧಿಸಿದಿ. ಇದಲ್ಲದೆ ಮಾಂಸದಲ್ಲಿ (ಶರೀರಭಾವದಲ್ಲಿ) ಮದಿ ಸಿದ ನಿನ್ನ ನೆರೆಯವರಾದ ಐಗುಪ್ತ್ಯರ ಸಂಗಡ ವ್ಯಭಿ ಚಾರ ಮಾಡಿದಿ; ಮತ್ತು ನನ್ನನ್ನು ರೇಗಿಸುವ ಹಾಗೆ ವ್ಯಭಿಚಾರವನ್ನು ಹೆಚ್ಚಿಸಿದಿ. ಆದದರಿಂದ ಇಗೋ, ನಾನು ನನ್ನ ಕೈಯನ್ನು ನಿನ್ನ ಮೇಲೆ ಚಾಚಿ ನಿನ್ನ ಸಾಮಾನ್ಯವಾದ ಆಹಾರವನ್ನು ಕಡಿಮೆಮಾಡಿದೆ; ನಿನ್ನ ದುರ್ಮಾರ್ಗಕ್ಕೆ ನಾಚಿಕೆಪಟ್ಟು ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯರ ಕುಮಾರ್ತೆಯರ ಚಿತ್ತಕ್ಕೆ ನಿನ್ನನ್ನು ಒಪ್ಪಿಸಿಬಿಟ್ಟೆ. ಇದಲ್ಲದೆ ಅಶ್ಶೂರ್ಯ ರೊಂದಿಗೂ ತೃಪ್ತಿಯಾಗಲಾರದಷ್ಟು ವ್ಯಭಿಚಾರಮಾಡಿ ದರೂ ನಿನಗೆ ತೃಪ್ತಿಯಾಗಲಿಲ್ಲ; ಹೌದು, ಅವರ ಸಂಗಡ ವ್ಯಭಿಚಾರ ಮಾಡಿದ್ದೀ; ಆದರೂ ತೃಪ್ತಿಯಾಗ ಲಿಲ್ಲ. ಇದಲ್ಲದೆ ಈ ನಿನ್ನ ವ್ಯಭಿಚಾರವನ್ನು ಕಾನಾನ್ ದೇಶದಿಂದ ಕಸ್ದೀಯ ದೇಶದವರೆಗೂ ಹೆಚ್ಚು ಮಾಡಿದಿ. ಆದರೂ ನೀನು ಇದರಲ್ಲಿ ತೃಪ್ತಿ ಹೊಂದಲಿಲ್ಲ. ನೀನು ಈ ಸಂಗತಿ ಗಳನ್ನೆಲ್ಲಾ ಸ್ವಯಿಚ್ಛೆಯಾಗಿ ನಡೆಸುವ ಜಾರಸ್ತ್ರೀಯ ಕೆಲಸವನ್ನೇ ಮಾಡಿದಿಯಲ್ಲಾ! ನಿನ್ನ ಹೃದಯವು ಎಷ್ಟೊಂದು ಬಲಹೀನವಾಗಿದೆ ಎಂದು ದೇವರಾದ ಕರ್ತನು ಹೇಳುತ್ತಾನೆ. ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ ಗದ್ದುಗೆಯನ್ನು ಕಟ್ಟಿ ಪ್ರತಿಯೊಂದು ಹಾದಿಯಲ್ಲಿಯೂ ಉನ್ನತಸ್ಥಾನವನ್ನು ಮಾಡಿಕೊಂಡು ಕೂಲಿಯನ್ನು ಉದಾಸೀನ ಮಾಡುವ ವ್ಯಭಿಚಾರಿಣಿಯು ನೀನಲ್ಲ; ಆದರೆ ಗಂಡನಿಗೆ ಬದ ಲಾಗಿ ಅನ್ಯರನ್ನು ಅಂಗೀಕರಿಸುವ ವ್ಯಭಿಚಾರಿ ಹೆಂಡತಿ ಯಾಗಿರುವಿ! ಅವರು ವ್ಯಭಿಚಾರಿಗಳಿಗೆಲ್ಲ ಬಹು ಮಾನ ಕೊಡುತ್ತಾರೆ; ಆದರೆ ನೀನು ನಿನ್ನ ಪ್ರಿಯರಿಗೆಲ್ಲ ನಿನ್ನ ಬಹುಮಾನಗಳನ್ನು ಕೊಟ್ಟು ಅವರನ್ನು ಬಾಡಿಗೆಗೆ ಪಡೆದು ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಬಹುಮಾನ ಕೊಡುತ್ತೀ. ಹೀಗಿರುವ ದರಿಂದ ಹೆಂಗಸರಿಗೆ ವಿರೋಧವಾದದ್ದು ನಿನ್ನ ವ್ಯಭಿ ಚಾರದಲ್ಲಿ ನಿನಗಾಯಿತು; ವ್ಯಭಿಚಾರಮಾಡುವ ಹಾಗೆ ನಿನ್ನನ್ನು ಯಾರೂ ಹಿಂಬಾಲಿಸುವದಿಲ್ಲ; ನೀನು ಬಹು ಮಾನ ಕೊಡುತ್ತೀಯೇ ಹೊರತು ನಿನಗೆ ಯಾರೂ ಬಹುಮಾನ ಕೊಡುವದಿಲ್ಲ. ಆದದರಿಂದ ಇದು ವಿರೋಧವಾದದ್ದಾಗಿದೆ. ಆದಕಾರಣ ಓ ವ್ಯಭಿಚಾರಿಣಿಯೇ, ನೀನು ಕರ್ತನ ವಾಕ್ಯವನ್ನು ಕೇಳು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಅಸಹ್ಯವು ಸುರಿಯಲ್ಪಟ್ಟ ಕಾರಣ ದಿಂದಲೂ ನಿನ್ನ ಬೆತ್ತಲೆತನವು ಪ್ರಕಟವಾಗುವಂತೆ ನಿನ್ನ ಪ್ರಿಯರ ಸಂಗಡ ಮಾಡಿದ ವ್ಯಭಿಚಾರದಿಂದಲೂ ನಿನ್ನ ಎಲ್ಲಾ ಅಸಹ್ಯವಾದ ವಿಗ್ರಹಗಳಿಂದಲೂ ನೀನು ಅವರಿಗೆ ಕೊಟ್ಟ ನಿನ್ನ ಮಕ್ಕಳ ರಕ್ತದಿಂದಲೂ ಇಗೋ, ನೀನು ಆನಂದ ಪಟ್ಟವರೊಂದಿಗೆ ಪ್ರೀತಿ ಮಾಡಿದವರೆ ಲ್ಲರನ್ನೂ ಹಗೆಮಾಡಿದವರೆಲ್ಲರನ್ನೂ ಸಹ ಕೂಡಿಸು ವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ ಅವರಿಗೆ ನಿನ್ನ ಬೆತ್ತಲೆಯನ್ನು ಪ್ರಕಟಪಡಿಸು ವೆನು. ಆಗ ಅವರು ನಿನ್ನ ಬೆತ್ತಲೆಯನ್ನು ನೋಡುವರು. ದಾಂಪತ್ಯವನ್ನು ಮುರಿದು ರಕ್ತ ಸುರಿಸುವಂಥ ಹೆಂಗಸರಿಗೆ ವಿಧಿಸುವಂಥ ತಕ್ಕ ದಂಡನೆಗಳನ್ನು ನಿನಗೂ ವಿಧಿಸಿ, ಕೋಪೋದ್ರೇಕದಿಂದಲೂ ರೋಷಾವೇಶ ದಿಂದಲೂ ನಿನಗೆ ರಕ್ತವನ್ನು ಸುರಿಸುವೆನು. ಇದಲ್ಲದೆ ನಿನ್ನನ್ನು ಅವರ ಕೈಗಳಲ್ಲಿ ಒಪ್ಪಿಸುವೆನು. ಅವರು ನಿನ್ನ ಎತ್ತರ ಸ್ಥಳಗಳನ್ನೆಲ್ಲಾ ಕೆಡವಿಹಾಕಿ ನಿನ್ನ ಉನ್ನತ ಸ್ಥಾನ ಗಳನ್ನು ಒಡೆದು ಬಿಡುವರು; ಅವರು ನಿನ್ನ ವಸ್ತ್ರಗಳನ್ನು ತೆಗೆದುಹಾಕಿ ನಿನ್ನ ಸೌಂದರ್ಯವುಳ್ಳ ಆಭರಣಗಳನ್ನು ಕಸಿದುಕೊಂಡು ನಿನ್ನನ್ನು ಬರೀ ಬೆತ್ತಲೆಯನ್ನಾಗಿ ಮಾಡಿ ಬಿಟ್ಟು ಹೋಗುವರು. ಅವರು ನಿನಗೆ ವಿರುದ್ಧವಾಗಿ ಒಂದು ಕೂಟವನ್ನು ಕರಕೊಂಡು ಬಂದು ಕಲ್ಲುಗಳನ್ನು ನಿನ್ನ ಮೇಲೆ ಎಸೆದು, ತಮ್ಮ ಕತ್ತಿಗಳಿಂದ ನಿನ್ನನ್ನು ತಿವಿಯುವರು. ಅವರು ನಿನ್ನ ಮನೆಗಳನ್ನು ಸುಟ್ಟು ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯ ತೀರಿಸುವರು; ನೀನು ವ್ಯಭಿಚಾರ ಮಾಡುವದನ್ನು ನಾನು ನಿಲ್ಲಿಸುವೆನು; ಆಗ ನೀನು ಕೂಲಿ ಸಹ ಕೊಡುವದನ್ನು ನಿಲ್ಲಿಸುವೆನು; ಈ ರೀತಿ ನನ್ನ ಸಿಟ್ಟನ್ನು ನಿನ್ನಲ್ಲಿ ವಿಶ್ರಾಂತಿ ಪಡಿಸುತ್ತೇನೆ, ನನ್ನ ರೋಷವನ್ನು ನಿನ್ನ ಕಡೆಯಿಂದ ತೊಲಗಿಸುತ್ತೇನೆ; ಶಾಂತನಾಗಿ ನಿನ್ನ ಮೇಲೆ ಕೋಪ ಗೊಳ್ಳುವದಿಲ್ಲ. ನೀನು ನಿನ್ನ ಯೌವನ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ ಇಗೋ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ. ನಿನ್ನ ಎಲ್ಲಾ ಅಸಹ್ಯವಾದವುಗಳ ಮೇಲೆ ಈ ಅಪವಿತ್ರತೆಯನ್ನು ನೀನು ಮಾಡಬಾರದು. ಇಗೋ, ಗಾದೆ ಹೇಳುವವರೆಲ್ಲರೂ--ತಾಯಿಯಂತೆ ಮಗಳು ಎಂಬ ಗಾದೆಯನ್ನು ನಿನಗೆ ವಿರುದ್ಧವಾಗಿ ಹೇಳುವರು. ಗಂಡನಿಗೂ ಮಕ್ಕಳಿಗೂ ಬೇಸರ ಪಡುವವಳಾದ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನಿಗೂ ಮಕ್ಕಳಿಗೂ ಬೇಸರ ಪಡುವವರಾದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು. ನಿನ್ನ ಎಡಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸಮಾರ್ಯವೇ ನಿನ್ನ ಅಕ್ಕ; ಬಲಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸೊದೋಮ್ ನಿನ್ನ ತಂಗಿ. ಆದರೂ ನೀನು ಅವರ ಮಾರ್ಗಗಳಲ್ಲಿ ನಡೆಯಲಿಲ್ಲ, ಅವರ ಅಸಹ್ಯಗಳ ಹಾಗೆ ಮಾಡಲಿಲ್ಲ, ಅವರ ದುರ್ನಡತೆಯು ಅತ್ಯಲ್ಪವೆಂದು ಸದಾ ಅವರಿಗಿಂತ ಬಹಳ ಕೆಟ್ಟವಳಾಗಿ ನಡೆದುಕೊಂಡೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಜೀವದಾಣೆ, ನಿನ್ನ ತಂಗಿಯಾದ ಸೊದೋಮು, ತಾನಾದರೂ ತನ್ನ ಕುಮಾರ್ತೆಯ ರಾದರೂ ನೀನು ನಿನ್ನ ಕುಮಾರ್ತೆಯರು ಮಾಡಿದ ಹಾಗೆ ಮಾಡಲಿಲ್ಲ. ಇಗೋ, ಸೊದೋಮ್ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ. ಇದಲ್ಲದೆ ಅವರು ಅಹಂಕಾರಿಗಳಾಗಿದ್ದು ನನ್ನ ಮುಂದೆ ಅಸಹ್ಯ ವಾದವುಗಳನ್ನು ನಡಿಸಿದರು. ಆದದರಿಂದ ನಾನು ಅದನ್ನು ನೋಡಿ ಅವರನ್ನು ನಿರ್ಮೂಲ ಮಾಡಿದೆನು. ಸಮಾರ್ಯವೆಂಬಾಕೆಯು ಸಹ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದಿ, ನೀನು ಮಾಡಿದ ಲೆಕ್ಕವಿಲ್ಲ ದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ. ನಿನ್ನ ದೋಷಗಳೇ ನಿನ್ನ ಅಕ್ಕ ತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆ ಪಡು; ನೀನು ಅವರಿಗಿಂತ ಅಸಹ್ಯವಾಗಿ ಮಾಡಿದ ನಿನ್ನ ಪಾಪಗಳಿಗೆ ತಕ್ಕ ನಿಂದೆಯನ್ನು ಹೊತ್ತುಕೋ; ಅವರು ನಿನಗಿಂತ ನೀತಿವಂತರು; ಹೌದು, ನೀನು ನಿನ್ನ ಸಹೋದರಿಗಳನ್ನು ನೀತಿವಂತರೆಂದು ತೋರ್ಪಡಿಸಿ ದ್ದರಿಂದ ನೀನೇ ನಾಚಿಕೆಪಟ್ಟು ನಿನ್ನ ನಿಂದೆಯನ್ನು ಹೊತ್ತುಕೋ. ನಾನು ಅವರ ಸೆರೆಯನ್ನೂ ಕುಮಾರ್ತೆಯರ ಸಹಿತವಾದ ಸೊದೋಮಿನ ಸೆರೆಯನ್ನೂ ಕುಮಾರ್ತೆ ಯರ ಸಹಿತವಾದ ಸಮಾರ್ಯದ ಸೆರೆಯನ್ನೂ ತಪ್ಪಿಸುವಾಗ ಅವರೊಂದಿಗೆ ನಿನ್ನ ಸೆರೆಯವರ ಸೆರೆಯನ್ನು ತಪ್ಪಿಸುವೆನು. ನೀನು ನಿನ್ನ ನಿಂದೆಯನ್ನು ಹೊತ್ತು ಕೊಂಡು ಅವರನ್ನು ಆದರಿಸುವಾಗ ನೀನು ಲಜ್ಜೆಪಡುವಿ, ನಾಚಿಕೆಗೊಳ್ಳುವಿ. ಆ ಸಮಾರ್ಯ, ಸೊದೋಮ್ ಎಂಬ ನಿನ್ನ ಅಕ್ಕತಂಗಿಯರೂ ಕುಮಾರ್ತೆಯರೂ ತಮ್ಮ ಪೂರ್ವಸ್ಥಿತಿಗೆ ತಿರುಗುವರು. ನೀನೂ ಕುಮಾರ್ತೆ ಯರೂ ಪೂರ್ವಸ್ಥಿತಿಗೆ ತಿರುಗಿಕೊಳ್ಳುವಿರಿ. ನಿನ್ನ ಸಹೋದರಿಯಾದ ಸೊದೋಮ್ ನಿನ್ನ ಗರ್ವದ ದಿವಸಗಳಲ್ಲಿ ನಿನ್ನ ಬಾಯಿಂದ ಉಚ್ಚರಿಸಲ್ಪಡಲಿ. ಅರಾಮಿನ ಕುಮಾರ್ತೆಯರಿಂದಲೂ ಮತ್ತು ಅದರ ಸುತ್ತಲಿರುವಂತೆ ಎಲ್ಲವುಗಳಿಂದಲೂ, ನಿನ್ನನ್ನು ಉದಾ ಸೀನ ಮಾಡಿದಂತ ಎಲ್ಲಾ ಫಿಲಿಷ್ಟಿಯರ ಕುಮಾರ್ತೆಯ ರಿಂದಲೂ ನಿನಗೆ ನಿಂದೆಯು ಬಂದ ಕಾಲದ ಹಾಗೆ ನಿನ್ನ ಕೆಟ್ಟತನವು ಪ್ರಕಟವಾಗುವದಕ್ಕೆ ಪೂರ್ವದಲ್ಲಿಯೇ ನೀನು ನಿನ್ನ ದುಷ್ಕರ್ಮಗಳನ್ನೂ ಅಸಹ್ಯಗಳನ್ನೂ ಹೊತ್ತುಕೊಂಡಿರುವಿ ಎಂದು ಕರ್ತನು ಹೇಳುತ್ತಾನೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಮಾಡಿದ್ದಕ್ಕೆ ತಕ್ಕ ಹಾಗೆ ನಾನು ನಿನಗೆ ಮಾಡುತ್ತೇನೆ; ನೀನು ಒಡಂಬಡಿಕೆಯನ್ನು ವಿಾರಿ ನನ್ನ ಆಣೆಯನ್ನು ತಿರಸ್ಕರಿಸಿರುವಿ. ಆದಾಗ್ಯೂ ನಿನ್ನ ಯೌವನದ ದಿನಗಳಲ್ಲಿ ನಾನು ನಿನ್ನ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಂಡು ನಿನಗಾಗಿ ನಿತ್ಯವಾದ ಒಡಂಬಡಿಕೆ ಯೊಂದನ್ನು ಸ್ಥಾಪಿಸುವೆನು. ಆಗ ನೀನು ನಿನ್ನ ಮಾರ್ಗಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಸಹೋ ದರಿಗಳಾದ ನಿನ್ನ ಅಕ್ಕತಂಗಿಯರನ್ನು ಸೇರುವಾಗ ನಾಚಿಕೆಪಡುವಿ. ಅವರನ್ನು ನಿನ್ನ ಕುಮಾರ್ತೆಗಳಂತೆ ಕೊಡುವೆನು. ಆದರೆ ಇದು ನಿನ್ನ ಒಡಂಬಡಿಕೆ ಯಿಂದಲ್ಲ. ನಾನು ಈ ಒಡಂಬಡಿಕೆಯನ್ನು ನಿಮ್ಮೊಂದಿಗೆ ಸ್ಥಾಪಿಸುವೆನು; ಆದದರಿಂದ ನಾನೇ ಕರ್ತ ನೆಂದು ನಿಮಗೆ ಗೊತ್ತಾಗುವದು.ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- 2 Chronicles 33:2–9 2 ಪೂರ್ವಕಾಲವೃತ್ತಾಂತ 33:2–9ಆದರೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಜನಾಂಗಗಳ ಅಸಹ್ಯಗಳ ಪ್ರಕಾರವೇ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಏನಂದರೆ, ಅವನು ತನ್ನ ತಂದೆಯಾದ ಹಿಜ್ಕೀಯನು ಕೆಡವಿಹಾಕಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಎಬ್ಬಿಸಿ ತೋಪುಗಳನ್ನು ಹಾಕಿ ಆಕಾಶದ ಸೈನ್ಯ ಕ್ಕೆಲ್ಲಾ ಅಡ್ಡಬಿದ್ದು ಅವುಗಳನ್ನು ಸೇವಿಸಿದನು. ಇದ ಲ್ಲದೆ--ಯೆರೂಸಲೇಮಿನಲ್ಲಿ ನನ್ನ ಹೆಸರು ಯುಗ ಯುಗಕ್ಕೂ ಇರುವದೆಂದು ಕರ್ತನು ಹೇಳಿದ ಕರ್ತನ ಆಲಯದಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು. ಕರ್ತನ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು. ಬೆನ್ ಹಿನ್ನೋಮ್ ಮಗನ ತಗ್ಗಿನಲ್ಲಿ ತನ್ನ ಮಕ್ಕಳನ್ನು ಬೆಂಕಿ ದಾಟುವಂತೆ ಮಾಡಿದನು; ಮೇಘಮಂತ್ರ ಸರ್ಪ ಮಂತ್ರಗಳನ್ನೂ ಮಾಟವನ್ನು ಮಾಡಿದನು; ಯಕ್ಷಿಣಿ ಗಾರರ ಮಂತ್ರಗಾರರ ಬಳಿಯಲ್ಲೂ ವಿಚಾರಿಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸುವಂತೆ ಆತನ ಸಮ್ಮುಖ ದಲ್ಲಿ ಬಹಳವಾಗಿ ಕೆಟ್ಟತನವನ್ನು ಮಾಡಿದನು. ದೇವರು--ಈ ಆಲಯದಲ್ಲಿಯೂ ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆದುಕೊಂಡ ಯೆರೂ ಸಲೇಮಿನಲ್ಲಿಯೂ ನಾನು ನನ್ನ ಹೆಸರನ್ನು ಯುಗ ಯುಗಕ್ಕೂ ಇರಿಸುವೆನೆಂದೂ ಮೋಶೆಯಿಂದ ಬರೆ ಯಿಸಿದ ಸಮಸ್ತ ನ್ಯಾಯಪ್ರಮಾಣವೂ ಆಜ್ಞೆಗಳೂ ಕಟ್ಟಳೆಗಳೂ ಇವುಗಳ ಪ್ರಕಾರ ನಾನು ಅವರಿಗೆ ಆಜ್ಞಾಪಿಸಿದ್ದೆನ್ನೆಲ್ಲವನ್ನು ಅವರು ಮಾಡಲು ಜಾಗ್ರತೆ ಯಾಗಿದ್ದರೆ ನಾನು ನಿಮ್ಮ ಪಿತೃಗಳಿಗೋಸ್ಕರ ನೇಮಿಸಿದ ದೇಶದೊಳಗಿಂದ ಇಸ್ರಾಯೇಲಿನ ಪಾದವನ್ನು ನಾನು ಇನ್ನು ಮೇಲೆ ಚಲಿಸ ಮಾಡುವದಿಲ್ಲವೆಂದೂ ಆತನು ದಾವೀದನಿಗೂ ಅವನ ಮಗನಾದ ಸೊಲೊಮೋನ ನಿಗೂ ಹೇಳಿದ ದೇವರ ಆಲಯದಲ್ಲಿ ಅವನು ಕೆತ್ತಿದ ವಿಗ್ರಹವನ್ನು ಮಾಡಿಸಿ ಇರಿಸಿದನು. ಹೀಗೆಯೇ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ನಾಶ ಮಾಡಿದ ಜನಾಂಗಗಳಿಗಿಂತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಕೆಟ್ಟದ್ದನ್ನು ಮಾಡು ವದಕ್ಕೆ ತಪ್ಪಿಹೋಗುವಂತೆ ಮನಸ್ಸೆಯು ಮಾಡಿದನು.
- Joshua 23:13 ಯೆಹೋಶುವ 23:13ನಿಮ್ಮ ದೇವರಾದ ಕರ್ತನು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿ ಬಿಡುವದಿಲ್ಲ. ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದೊಳಗಿಂದ ನೀವು ನಾಶವಾಗುವ ವರೆಗೂ ಅವರು ನಿಮಗೆ ಉರುಲಾಗಿಯೂ ಬೋನಾ ಗಿಯೂ ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯ ವಾಗಿ ತಿಳಿದುಕೊಳ್ಳುವಿರಿ.
- 2 Kings 17:8–11 2 ಅರಸುಗಳು 17:8–11ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು. ಇಸ್ರಾಯೇಲಿನ ಮಕ್ಕಳು ಗುಪ್ತವಾಗಿ ತಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಅಯುಕ್ತ ವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲು ಗೊಂಡು ಕೋಟೆಯುಳ್ಳ ಪಟ್ಟಣಗಳ ವರೆಗೂ ತಮ್ಮ ಎಲ್ಲಾ ಪಟ್ಟಣಗಳಲ್ಲಿ ತಮಗೆ ಉನ್ನತ ಸ್ಥಳಗಳನ್ನು ಕಟ್ಟಿಸಿ ಕೊಂಡಿದ್ದರು. ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ ಹಸುರಾದ ಎಲ್ಲಾ ಮರಗಳ ಕೆಳಗೂ ತಮಗೆ ವಿಗ್ರಹಗಳನ್ನು ನಿಲ್ಲಿಸಿ ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು--
- Judges 2:17 ನ್ಯಾಯಸ್ಥಾಪಕರು 2:17ಅವರು ತಮ್ಮ ನ್ಯಾಯಾಧಿಪತಿಗಳ ಮಾತನ್ನು ಕೇಳದೆ ಅನ್ಯದೇವರುಗಳ ಹಿಂದೆ ಜಾರತ್ವಮಾಡಿ ಅವುಗಳಿಗೆ ಅಡ್ಡಬಿದ್ದು ತಮ್ಮ ತಂದೆಗಳು ಕರ್ತನ ಆಜ್ಞೆಗಳನ್ನು ಕೇಳಿ ನಡೆದ ಮಾರ್ಗವನ್ನು ಶೀಘ್ರವಾಗಿ ತೊರೆದು ಬಿಟ್ಟರು; ಅವರು ಮಾಡಿದ ಪ್ರಕಾರ ಮಾಡಲಿಲ್ಲ.