Psalms · chapter 111 · verse 2
Psalm 111:2 in Kannada
ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ.
Kartana kelasagalu doddavu; avugalalli santoshapaduvavarellaru avugalannu shodhisuttaare.
Psalm 111:2 in English
- King James Version (KJV)
- The works of the LORD [are] great, sought out of all them that have pleasure therein.
- World English Bible (WEB)
- The LORD’s works are great, pondered by all those who delight in them.
- American Standard Version (ASV)
- The works of Jehovah are great, Sought out of all them that have pleasure therein.
- Bible in Basic English (BBE)
- The works of the Lord are great, searched out by all those who have delight in them.
- Darby Translation (DBY)
- Great are the works of Jehovah; sought out of all that delight in them.
- Webster's Bible (WBS)
- The works of the LORD [are] great, sought out by all them that have pleasure in them.
- Young's Literal Translation (YLT)
- Great [are] the works of Jehovah, Sought out by all desiring them.
Read in context
- 1ಕರ್ತನನ್ನು ಸ್ತುತಿಸಿರಿ; ನಾನು ಕರ್ತನನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ ಸಭೆಯಲ್ಲಿಯೂ ಕೊಂಡಾಡುವೆನು.
- 2ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ.
- 3ಆತನ ಕೆಲಸವು ಪ್ರಭೆಯೂ ಮಹಿಮೆಯೂ ಉಳ್ಳದ್ದು; ಆತನ ನೀತಿಯು ಎಂದೆಂದಿಗೂ ನಿಲ್ಲುತ್ತದೆ.
- 4ಆತನು ತನ್ನ ಅದ್ಭುತಗಳನ್ನು ಕುರಿತು ಜ್ಞಾಪಕಮಾಡಿದ್ದಾನೆ; ಕರ್ತನು ಕೃಪಾಳುವೂ ಅಂತಃ ಕರಣವೂ ಉಳ್ಳಾತನೇ.
Cross references
- Psalm 104:24 ಕೀರ್ತನೆಗಳು 104:24ಓ ಕರ್ತನೇ, ನಿನ್ನ ಕೆಲಸಗಳು ಎಷ್ಟೋ ಉಂಟು! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟು ಮಾಡಿದ್ದೀ; ಭೂಮಿಯು ನಿನ್ನ ಸಂಪತ್ತಿನಿಂದ ತುಂಬಿದೆ.
- Proverbs 24:14 ಜ್ಞಾನೋಕ್ತಿಗಳು 24:14ಹೀಗೆ ನಿನ್ನ ಪ್ರಾಣಕ್ಕೆ ಜ್ಞಾನದ ತಿಳುವಳಿಕೆಯು ಇರುವದು; ಅದು ಸಿಕ್ಕಿದಾಗ ಬಹುಮಾನವಿರುವದು; ನಿನ್ನ ನಿರೀಕ್ಷೆಯು ನಿರರ್ಥಕವಾಗುವದಿಲ್ಲ.
- Psalm 143:5 ಕೀರ್ತನೆಗಳು 143:5ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.
- Psalm 139:14 ಕೀರ್ತನೆಗಳು 139:14ನಾನು ಭಯಭರಿತನಾಗಿಯೂ ಅದ್ಭುತ ವಾಗಿಯೂ ಮಾಡಲ್ಪಟ್ಟದ್ದರಿಂದ ನಿನ್ನನ್ನು ಕೊಂಡಾ ಡುತ್ತೇನೆ; ನಿನ್ನ ಕೆಲಸಗಳು ಅದ್ಭುತಗಳಾಗಿವೆ ಎಂದು ನನ್ನ ಮನಸ್ಸಿಗೆ ಚೆನ್ನಾಗಿ ತಿಳಿದಿದೆ;
- Ephesians 1:19 ಎಫೆಸದವರಿಗೆ 1:19ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದ ದ್ದೆಂಬದನ್ನೂ ಆತನ ಬಲಾತಿಶಯವು ಎಷ್ಟು ಮಹತ್ತಾದ ದ್ದೆಂಬದನ್ನೂ ನೀವು ತಿಳುಕೊಳ್ಳು ವಂತೆ ಅನುಗ್ರಹಿಸಲಿ.
- Jeremiah 32:17–19 ಯೆರೆಮೀಯ 32:17–19ಓ ಕರ್ತನಾದ ದೇವರೇ, ಇಗೋ, ನೀನು ನಿನ್ನ ಮಹಾಬಲದಿಂದ ನಿನ್ನ ಕೈಚಾಚಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ್ದೀ; ನಿನಗೆ ಕಠಿಣವಾದ ಕಾರ್ಯ ಒಂದೂ ಇಲ್ಲ. ನೀನು ಸಾವಿರಾರು ತಲೆಗಳ ವರೆಗೆ ಪ್ರೀತಿ, ದಯೆ ತೋರಿಸಿ ತಂದೆಗಳ ಅಕ್ರಮವನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸಲ್ಲಿಸುವವನಾಗಿದ್ದೀ; ಮಹತ್ವ ವುಳ್ಳವನೂ ಪರಾಕ್ರಮವುಳ್ಳ ದೇವರೂ ಸೈನ್ಯಗಳ ಕರ್ತನೂ ಎಂಬದು ಆತನ ಹೆಸರು. ಆಲೋಚನೆ ಯಲ್ಲಿ ದೊಡ್ಡವನು ಕ್ರಿಯೆಯಲ್ಲಿ ಬಲಿಷ್ಠನು; ನಿನ್ನ ಕಣ್ಣುಗಳು ಮನುಷ್ಯರ ಮಕ್ಕಳ ಎಲ್ಲಾ ಮಾರ್ಗಗಳ ಮೇಲೆ ಒಬ್ಬೊಬ್ಬನಿಗೆ ಅವನವನ ಮಾರ್ಗದ ಪ್ರಕಾರ ವಾಗಿಯೂ ಅವನವನ ಕ್ರಿಯೆಗಳ ಫಲದ ಪ್ರಕಾರ ವಾಗಿಯೂ ಕೊಡುವ ಹಾಗೆ ತೆರೆದವೆ.
- Revelation 15:3 ಪ್ರಕಟನೆ 15:3ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
- Ephesians 2:7–10 ಎಫೆಸದವರಿಗೆ 2:7–10ಹೀಗೆ ಕ್ರಿಸ್ತ ಯೇಸುವಿನ ಲ್ಲಿರುವ ಕರುಣೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಣ ಯುಗಗಳಲ್ಲಿ ನಮಗೆ ತೋರಿಸಬೇಕೆಂದಿದ್ದನು. ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ. ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ. ದೇವರು ಮುಂದಾಗಿ ನೇಮಿಸಿದ ಸತ್ಕ್ರಿಯೆ ಗಳಲ್ಲಿ ನಾವು ನಡೆಯುವಂತೆ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟವರಾದ ನಾವು ಆತನ ಕೆಲಸವಾಗಿದ್ದೇವೆ.
- Daniel 4:3 ದಾನಿಯೇಲನು 4:3ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು.
- Psalm 77:11–12 ಕೀರ್ತನೆಗಳು 77:11–12ಕರ್ತನ ಕ್ರಿಯೆಗಳನ್ನು ನೆನಸಿ ನಿಶ್ಚಯವಾಗಿ ಪುರಾತನ ಅದ್ಭುತ ಗಳನ್ನು ಜ್ಞಾಪಿಸಿಕೊಳ್ಳುವೆನು. ನಿನ್ನ ಕೆಲಸವನ್ನೆಲ್ಲಾ ಸ್ಮರಿಸಿ ನಿನ್ನ ಕೃತ್ಯಗಳನ್ನು ಕುರಿತು ಮಾತನಾಡುವೆನು.
- Ecclesiastes 3:11 ಪ್ರಸಂಗಿ 3:11ತನ್ನ ಸಮಯದಲ್ಲಿ ಪ್ರತಿಯೊಂದನ್ನು ಆತನು ಸುಂದರವಾಗಿ ಮಾಡಿದ್ದಾನೆ. ಆದಿಯಿಂದ ಅಂತ್ಯದ ವರೆಗೂ ದೇವರು ನಡಿಸುವ ಕೆಲಸವನ್ನು ಯಾವ ಮನುಷ್ಯನೂ ಗ್ರಹಿಸಲಾರದಂತೆ ಅವರ ಹೃದಯದಲ್ಲಿ ಆತನು ಲೋಕವನ್ನು ಇಟ್ಟಿದ್ದಾನೆ.
- Proverbs 17:16 ಜ್ಞಾನೋಕ್ತಿಗಳು 17:16ಬುದ್ಧಿಹೀನನಿಗೆ ಮನಸ್ಸಿಲ್ಲದೆ ಇರು ವದರಿಂದ ಜ್ಞಾನವನ್ನು ಸಂಪಾದಿಸುವದಕ್ಕೆ ಅವನ ಕೈಯಲ್ಲಿ ಕ್ರಯ ಯಾಕೆ?