Psalms · chapter 111 · verse 4
Psalm 111:4 in Kannada
ಆತನು ತನ್ನ ಅದ್ಭುತಗಳನ್ನು ಕುರಿತು ಜ್ಞಾಪಕಮಾಡಿದ್ದಾನೆ; ಕರ್ತನು ಕೃಪಾಳುವೂ ಅಂತಃ ಕರಣವೂ ಉಳ್ಳಾತನೇ.
Aatanu tanna adbhutagalannu kuritu jnyaapakamaadiddaane; kartanu krupaaluvoo antah karanavoo ullaatane.
Psalm 111:4 in English
- King James Version (KJV)
- He hath made his wonderful works to be remembered: the LORD [is] gracious and full of compassion.
- World English Bible (WEB)
- He has caused his wonderful works to be remembered. The LORD is gracious and merciful.
- American Standard Version (ASV)
- He hath made his wonderful works to be remembered: Jehovah is gracious and merciful.
- Bible in Basic English (BBE)
- Certain for ever is the memory of his wonders: the Lord is full of pity and mercy.
- Darby Translation (DBY)
- He hath made his wonders to be remembered: Jehovah is gracious and merciful.
- Webster's Bible (WBS)
- He hath made his wonderful works to be remembered: the LORD [is] gracious and full of compassion.
- Young's Literal Translation (YLT)
- A memorial He hath made of His wonders, Gracious and merciful [is] Jehovah.
Read in context
- 2ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ.
- 3ಆತನ ಕೆಲಸವು ಪ್ರಭೆಯೂ ಮಹಿಮೆಯೂ ಉಳ್ಳದ್ದು; ಆತನ ನೀತಿಯು ಎಂದೆಂದಿಗೂ ನಿಲ್ಲುತ್ತದೆ.
- 4ಆತನು ತನ್ನ ಅದ್ಭುತಗಳನ್ನು ಕುರಿತು ಜ್ಞಾಪಕಮಾಡಿದ್ದಾನೆ; ಕರ್ತನು ಕೃಪಾಳುವೂ ಅಂತಃ ಕರಣವೂ ಉಳ್ಳಾತನೇ.
- 5ಆತನು ತನಗೆ ಭಯಪಡುವ ವರಿಗೆ ಆಹಾರ ಕೊಟ್ಟಿದ್ದಾನೆ; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವನು.
- 6ಅನ್ಯ ಜನರ ಬಾಧ್ಯತೆಯನ್ನು ಅವರಿಗೆ ಕೊಡುವ ಹಾಗೆ ತನ್ನ ಕೆಲಸಗಳ ಬಲವನ್ನು ಜನರಿಗೆ ತೋರಿಸಿದ್ದಾನೆ.
Cross references
- Psalm 103:8 ಕೀರ್ತನೆಗಳು 103:8ಕರ್ತನು ಅಂತಃಕರಣವೂ ದಯೆಯೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳವನಾಗಿದ್ದಾನೆ.
- Isaiah 63:7 ಯೆಶಾಯ 63:7ಕರ್ತನು ನಮಗೆ ಮಾಡಿದ್ದೆಲ್ಲಾದರ ಪ್ರಕಾರ, ಕರ್ತನ ಪ್ರೀತಿ ಕೃಪೆಗಳನ್ನೂ ಕರ್ತನ ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು; ಆತನು ತನ್ನ ಅಂತಃಕರುಣೆಯ ಪ್ರಕಾರವೂ ತನ್ನ ಕೃಪೆಯ ಮಹಾ ಒಳ್ಳೇತನದ ಪ್ರಕಾರವೂ ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ.
- Psalm 145:8 ಕೀರ್ತನೆಗಳು 145:8ಕರ್ತನು ಕೃಪಾಳುವೂ ಅಂತಃಕರಣವೂ ದೀರ್ಘಶಾಂತಿಯೂ ಮಹಾಕರುಣೆಯುಳ್ಳವನೂ ಆಗಿದ್ದಾನೆ.
- Ephesians 1:6–8 ಎಫೆಸದವರಿಗೆ 1:6–8ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ. ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು. ಹೀಗೆ ಆತನು ತನ್ನ ಕೃಪಾತಿಶಯದಲ್ಲಿ ಸಕಲ ಜ್ಞಾನವನ್ನೂ ಬುದ್ದಿಯನ್ನೂ ಇನ್ನೂ ಹೆಚ್ಚಾಗಿ ನಮ್ಮ ಕಡೆಗೆ ತೋರಿಸಿದ್ದಾನೆ.
- Psalm 86:5 ಕೀರ್ತನೆಗಳು 86:5ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ.
- Deuteronomy 31:19–30 ಧರ್ಮೋಪದೇಶಕಾಂಡ 31:19–30ಹೀಗಿರುವದರಿಂದ ಈಗ ಈ ಹಾಡನ್ನು ಬರೆದು ಕೊಳ್ಳಿರಿ; ಇಸ್ರಾಯೇಲ್ ಮಕ್ಕಳಿಗೆ ಅದನ್ನು ಕಲಿಸು; ಇಸ್ರಾಯೇಲ್ ಮಕ್ಕಳಲ್ಲಿ ಈ ಹಾಡು ನನಗೆ ಸಾಕ್ಷಿಯಾ ಗಿರುವ ಹಾಗೆ ಅದನ್ನು ಅವರ ಬಾಯಿಗಳಲ್ಲಿ ಇಡು. ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ ಅವರು ತಿಂದು ತೃಪ್ತಿಯಾಗಿ ಕೊಬ್ಬಿದವ ರಾದಾಗ ಅವರು ಅನ್ಯದೇವರುಗಳ ಕಡೆಗೆ ತಿರುಗಿ ಕೊಂಡು ಅವುಗಳನ್ನು ಸೇವಿಸಿ ನನಗೆ ಕೋಪವನ್ನೆಬ್ಬಿಸಿ ನನ್ನ ಒಡಂಬಡಿಕೆಯನ್ನು ವಿಾರುವರು. ಅನಂತರ ಬಹಳ ಕೇಡುಗಳೂ ಇಕ್ಕಟ್ಟುಗಳೂ ಅವರಿಗೆ ಸಂಭವಿಸು ವಾಗ ಈ ಹಾಡು ಅವರಿಗೆ ವಿರೋಧವಾಗಿ ಸಾಕ್ಷಿಯಾಗಿ ಉತ್ತರ ಕೊಡುವದು; ಯಾಕಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತುಹೋಗುವದಿಲ್ಲ; ನಾನು ಪ್ರಮಾಣಮಾಡಿದ ದೇಶದಲ್ಲಿ ಅವರನ್ನು ತರುವದಕ್ಕಿಂತ ಮುಂಚೆ ಅವರು ಈಹೊತ್ತು ಮಾಡುವ ಕಲ್ಪನೆಗಳನ್ನು ನಾನು ಬಲ್ಲೆನು. ಆದದರಿಂದ ಮೋಶೆ ಅದೇ ದಿವಸದಲ್ಲಿ ಈ ಹಾಡನ್ನು ಬರೆದು ಇಸ್ರಾಯೇಲ್ ಮಕ್ಕಳಿಗೆ ಕಲಿಸಿದನು. ಆತನು ನೂನನ ಮಗನಾದ ಯೆಹೋಶುವನಿಗೆ ಆಜ್ಞೆಕೊಟ್ಟು--ಬಲವಾಗಿರು; ಧೈರ್ಯವಾಗಿರು; ನಾನು ಇಸ್ರಾಯೇಲ್ ಮಕ್ಕಳಿಗೆ ಪ್ರಮಾಣಮಾಡಿದ ದೇಶಕ್ಕೆ ನೀನು ತರುವಿ; ನಾನು ನಿನ್ನ ಸಂಗಡ ಇರುವೆನು ಅಂದನು. ಇದಲ್ಲದೆ ಮೋಶೆ ಈ ನ್ಯಾಯಪ್ರಮಾಣದ ವಾಕ್ಯಗಳನ್ನು ಪುಸ್ತಕದಲ್ಲಿ ಬರೆದು ಮುಗಿಸಿದಾಗ ಮೋಶೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಿಗೆ ಆಜ್ಞಾಪಿಸಿ-- ನ್ಯಾಯ ಪ್ರಮಾಣದ ಈ ಪುಸ್ತಕವನ್ನು ತಕ್ಕೊಂಡು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷದ ಒಂದು ಪಾರ್ಶ್ವದಲ್ಲಿ ಇಡಿರಿ; ಅದು ನಿಮಗೆ ವಿರೋಧವಾದ ಸಾಕ್ಷಿಗೆ ಅಲ್ಲಿ ಇರಲಿ. ನಿನ್ನ ದ್ರೋಹವನ್ನೂ ನಿನ್ನ ಬಗ್ಗದ ಕುತ್ತಿಗೆಯನ್ನೂ ನಾನು ಬಲ್ಲೆನು; ಇಗೋ, ಈಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರು ವಾಗಲೇ ಕರ್ತನಿಗೆ ದ್ರೋಹಮಾಡಿದವರಾದಿರಿ; ನಾನು ಸತ್ತ ಮೇಲೆ ಇನ್ನೇನ್ನಾಗುವದು? ನಿಮ್ಮ ಗೋತ್ರಗಳ ಎಲ್ಲಾ ಹಿರಿಯರನ್ನೂ ನಿಮ್ಮ ಅಧಿಕಾರಿ ಗಳನ್ನೂ ನನ್ನ ಬಳಿಗೆ ಕೂಡಿಸಿರಿ; ಆಗ ಈ ಮಾತುಗಳನ್ನು ಅವರು ಕೇಳುವಹಾಗೆ ಆಡುವೆನು; ಆಕಾಶವನ್ನೂ ಭೂಮಿಯನ್ನೂ ಸಾಕ್ಷಿಗೆ ಕರೆಯುವೆನು. ನಾನು ಸತ್ತ ಮೇಲೆ ನೀವು ಪೂರ್ಣವಾಗಿ ನಿಮ್ಮನ್ನು ನೀವು ಕೆಡಿಸಿ ಕೊಂಡು ನಾನು ನಿಮಗೆ ಆಜ್ಞಾಪಿಸಿದ ಮಾರ್ಗದಿಂದ ತೊಲಗಿ ಹೋಗುವಿರೆಂದು ನಾನು ಬಲ್ಲೆನು; ನೀವು ಕರ್ತನ ಮುಂದೆ ಕೆಟ್ಟದ್ದನ್ನು ಮಾಡಿ ನಿಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನೆಬ್ಬಿಸುವ ಕಾರಣ ಕಡೇ ದಿವಸಗಳಲ್ಲಿ ನಿಮಗೆ ಕೇಡುಸಂಭವಿಸುವದು ಎಂದು ಹೇಳಿದನು.ಆಗ ಮೋಶೆ ಇಸ್ರಾಯೇಲ್ ಸಭೆಗೆ ಕೇಳುವ ಹಾಗೆ ಈ ಹಾಡಿನ ಮಾತುಗಳನ್ನು ಹೇಳಿ ಮುಗಿಸಿದನು. ಆಗ ಮೋಶೆ ಇಸ್ರಾಯೇಲ್ ಸಭೆಗೆ ಕೇಳುವ ಹಾಗೆ ಈ ಹಾಡಿನ ಮಾತುಗಳನ್ನು ಹೇಳಿ ಮುಗಿಸಿದನು.
- Romans 5:20–21 ರೋಮಾಪುರದವರಿಗೆ 5:20–21ಹೇಗಾದರೂ ಅಪರಾಧವು ಹೆಚ್ಚಾಗಿ ಕಂಡುಬರುವ ಹಾಗೆ ನ್ಯಾಯಪ್ರಮಾಣವು ಪ್ರವೇಶಿಸಿತು; ಆದರೆ ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು. ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು.
- 1 Corinthians 11:24–26 1 ಕೊರಿಂಥದವರಿಗೆ 11:24–26ಸ್ತ್ರೋತ್ರಮಾಡಿ ಅದನ್ನು ಮುರಿದು--ತೆಗೆದುಕೊಳ್ಳಿರಿ, ತಿನ್ನಿರಿ; ಇದು ನಿಮಗೋಸ್ಕರ ಮುರಿಯಲ್ಪಟ್ಟ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡಿರಿ ಅಂದನು. ಅದೇ ರೀತಿಯಾಗಿ ಊಟವಾದ ಮೇಲೆ ಆತನು ಪಾತ್ರೆಯನ್ನು ತೆಗೆದುಕೊಂಡು--ಈ ಪಾತ್ರೆಯು ನನ್ನ ರಕ್ತದಲ್ಲಿರುವ ಹೊಸಒಡಂಬಡಿಕೆ ಯಾಗಿದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡಿರಿ ಅಂದನು. ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣ ವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
- Psalm 112:4 ಕೀರ್ತನೆಗಳು 112:4ಯಥಾರ್ಥರಿಗೆ ಕತ್ತಲಲ್ಲಿ ಬೆಳಕು ಹುಟ್ಟುತ್ತದೆ; ಆತನು ಕೃಪೆಯೂ ಅಂತಃಕರಣವೂ ನೀತಿ ಯೂ ಉಳ್ಳಾತನೇ.
- Psalm 78:38 ಕೀರ್ತನೆಗಳು 78:38ಆದಾಗ್ಯೂ ಆತನು ಅಂತಃಕರಣವುಳ್ಳವನಾಗಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಹೌದು, ಆತನು ಅನೇಕ ಸಾರಿ ತನ್ನ ಕೋಪವನ್ನು ತೋರಿಸದೆ ಕೋಪೋದ್ರೇಕವನ್ನೂ ಮಾಡಿಕೊಳ್ಳಲಿಲ್ಲ.
- Psalm 78:4–8 ಕೀರ್ತನೆಗಳು 78:4–8ನಾವು ಕರ್ತನ ಸ್ತೋತ್ರಗಳನ್ನೂ ಆತನ ತ್ರಾಣವನ್ನೂ ಆತನು ಮಾಡಿದ ಅದ್ಭುತಗಳನ್ನೂ ವಿವರಿಸುತ್ತಾ ಅವರ ಮಕ್ಕಳಿಗೆ, ಮುಂದಿನ ವಂಶಕ್ಕೆ ಮರೆಮಾಡುವದಿಲ್ಲ. ಆತನು ಯಾಕೋಬನಲ್ಲಿ ಸಾಕ್ಷಿ ಯನ್ನು ಸ್ಥಾಪಿಸಿ ಇಸ್ರಾಯೇಲಿನಲ್ಲಿ ನ್ಯಾಯಪ್ರಮಾಣವನ್ನು ಇಟ್ಟು ಮುಂದಿನ ವಂಶವು ಅಂದರೆ ಹುಟ್ಟುವ ದಕ್ಕಿರುವ ಮಕ್ಕಳು ತಿಳಿದು, ಎದ್ದು, ತಮ್ಮ ಮಕ್ಕಳಿಗೆ ವಿವರಿಸಲಾಗಿ ಇವರು ದೇವರಲ್ಲಿ ತಮ್ಮ ನಿರೀಕ್ಷೆ ಇಡುವಂತೆಯೂ ದೇವರ ಕ್ರಿಯೆಗಳನ್ನು ಮರೆತುಬಿಡ ದಂತೆಯೂ ಆತನ ಆಜ್ಞೆಗಳನ್ನು ಕೈಕೊಂಡು ತಮ್ಮ ತಂದೆಗಳ ಹಾಗೆ ತಮ್ಮ ಹೃದಯವನ್ನು ಸ್ಥಿರಪಡಿಸು ವಂತೆಯೂ ತಮ್ಮ ಆತ್ಮವು ದೇವರೊಂದಿಗೆ ಸ್ಥಿರವಾಗು ವಂತೆಯೂ ಗರ್ವದಿಂದ ತಿರುಗಿ ಬೀಳುವಂಥ ವಂಶ ವಾಗಿರದ ಹಾಗೆಯೂ ಅದನ್ನು ತಮ್ಮ ಮಕ್ಕಳಿಗೆ ತಿಳಿ ಯಮಾಡಬೇಕೆಂದು ನಮ್ಮ ತಂದೆಗಳಿಗೆ ಆತನು ಆಜ್ಞಾಪಿಸಿದನು.
- Psalm 86:15 ಕೀರ್ತನೆಗಳು 86:15ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.