Psalms · chapter 112 · verse 7
Psalm 112:7 in Kannada
ಅವನು ಕೆಟ್ಟಸುದ್ದಿಗೆ ಭಯಪಡನು; ಅವನ ಹೃದಯವು ಕರ್ತನಲ್ಲಿ ಭರವಸವಿಟ್ಟು ಸ್ಥಿರವಾಗಿದೆ.
Avanu kettasuddige bhayapadanu; avana hrudayavu kartanalli bharavasavittu sthiravaagide.
Psalm 112:7 in English
- King James Version (KJV)
- He shall not be afraid of evil tidings: his heart is fixed, trusting in the LORD.
- World English Bible (WEB)
- He will not be afraid of evil news. His heart is steadfast, trusting in the LORD.
- American Standard Version (ASV)
- He shall not be afraid of evil tidings: His heart is fixed, trusting in Jehovah.
- Bible in Basic English (BBE)
- He will have no fear of evil news; his heart is fixed, for his hope is in the Lord.
- Darby Translation (DBY)
- He shall not be afraid of evil tidings; his heart is fixed confiding in Jehovah;
- Webster's Bible (WBS)
- He shall not be afraid of evil tidings: his heart is fixed, trusting in the LORD.
- Young's Literal Translation (YLT)
- Of an evil report he is not afraid, Prepared is His heart, confident in Jehovah.
Read in context
- 5ಒಳ್ಳೇಮನುಷ್ಯನು ದಯೆ ತೋರಿಸಿ ಸಾಲಕೊಡುತ್ತಾನೆ; ತನ್ನ ಕಾರ್ಯಗಳನ್ನು ನ್ಯಾಯದಿಂದ ನಡಿಸುವನು.
- 6ನಿಶ್ಚಯವಾಗಿ ಅವನು ಎಂದೆಂದಿಗೂ ಕದಲನು; ನೀತಿವಂತನು ನಿತ್ಯವಾಗಿ ಜ್ಞಾಪಕದಲ್ಲಿ ಇರುವನು.
- 7ಅವನು ಕೆಟ್ಟಸುದ್ದಿಗೆ ಭಯಪಡನು; ಅವನ ಹೃದಯವು ಕರ್ತನಲ್ಲಿ ಭರವಸವಿಟ್ಟು ಸ್ಥಿರವಾಗಿದೆ.
- 8ಅವನ ಹೃದಯವು ದೃಢವಾಗಿದೆ; ತನ್ನ ವೈರಿಗಳ ಮೇಲೆ ತನ್ನ ಇಷ್ಟವನ್ನು ನೋಡುವ ಮಟ್ಟಿಗೂ ಭಯಪಡನು.
- 9ಅವನು ಬಡವರಿಗೆ ಧಾರಾಳವಾಗಿ ಕೊಡುತ್ತಾನೆ; ಅವನ ನೀತಿ ಎಂದೆಂದಿಗೂ ನಿಲ್ಲು ತ್ತದೆ; ಅವನ ಕೊಂಬು ಘನದಿಂದ ಎತ್ತಲ್ಪಡುವದು.ದುಷ್ಟನು ನೋಡಿ ದುಃಖಪಡುವನು; ತನ್ನ ಹಲ್ಲು ಗಳನ್ನು ಕಡಿದು ಕರಗಿಹೋಗುವನು; ದುಷ್ಟರ ಆಶೆಯು ನಾಶವಾಗುವದು.
Cross references
- Isaiah 26:3–4 ಯೆಶಾಯ 26:3–4ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ. ನೀವು ಕರ್ತನಲ್ಲಿ ಸದಾ ಭರವಸವಿಡಿರಿ; ಕರ್ತನಾದ ಯೆಹೋವನಲ್ಲಿ ನಿತ್ಯವಾದ ಬಲವುಂಟು.
- Proverbs 1:33 ಜ್ಞಾನೋಕ್ತಿಗಳು 1:33ನನಗೆ ಕಿವಿಗೊಡುವವನಾದರೋ ಜೀವಿಸಿ ಯಾವ ಕೇಡಿನ ಭಯವಿಲ್ಲದೆ ನೆಮ್ಮದಿಯಲ್ಲಿರುವನು.
- Psalm 57:7 ಕೀರ್ತನೆಗಳು 57:7ಓ ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ಸ್ಥಿರವಾಗಿದೆ; ನಾನು ಹಾಡುವೆನು, ಕೀರ್ತಿಸುವೆನು.
- Psalm 118:6 ಕೀರ್ತನೆಗಳು 118:6ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
- John 14:1 ಯೋಹಾನನು 14:1ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
- Proverbs 3:25–26 ಜ್ಞಾನೋಕ್ತಿಗಳು 3:25–26ಆಕಸ್ಮತ್ತಾದ ಭಯ ಕ್ಕಾಗಲಿ ಇಲ್ಲವೆ ಅವರ ಮೇಲೆ ಬರುವ ದುಷ್ಟರ ನಾಶನಕ್ಕಾಗಲಿ ನೀನು ಭಯಪಡದಿರು. ಕರ್ತನೇ ನಿನಗೆ ಭರವಸನಾಗಿದ್ದು ನಿನ್ನ ಪಾದವು ತೆಗೆಯಲ್ಪಡ ದಂತೆ ಆತನು ಕಾಪಾಡುವನು.
- Psalm 34:4 ಕೀರ್ತನೆಗಳು 34:4ನಾನು ಕರ್ತನನ್ನು ಹುಡು ಕಿದೆನು; ಆಗ ಆತನು ನನಗೆ ಉತ್ತರಕೊಟ್ಟು ನನ್ನ ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದನು.
- Psalm 56:3–4 ಕೀರ್ತನೆಗಳು 56:3–4ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು. ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
- Psalm 64:10 ಕೀರ್ತನೆಗಳು 64:10ನೀತಿವಂತನು ಕರ್ತನಲ್ಲಿ ಸಂತೋಷಪಟ್ಟು ಆತನಲ್ಲಿ ಭರವಸವಿ ಡುವನು. ಯಥಾರ್ಥ ಹೃದಯವುಳ್ಳವರೆಲ್ಲರು ಹೆಚ್ಚಳ ಪಡುವರು.
- Psalm 118:8–9 ಕೀರ್ತನೆಗಳು 118:8–9ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು. ಅಧಿಪತಿಗಳಲ್ಲಿ ಭರವಸವಿಡುವದಕ್ಕಿಂತ ಕರ್ತನನ್ನು ನಂಬಿಕೊಳ್ಳುವದು ಒಳ್ಳೇದು.
- Psalm 27:1–3 ಕೀರ್ತನೆಗಳು 27:1–3ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು? ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು. ನನಗೆ ವಿರೋಧವಾಗಿ ದಂಡು ಇಳಿದರೂ ನನ್ನ ಹೃದಯವು ಭಯಪಡದು; ಯುದ್ಧವು ನನ್ನ ಮೇಲೆ ಎದ್ದರೂ ಇದರಲ್ಲಿಯೂ ನಾನು ಭರವಸವಾಗಿರುವೆನು.
- Psalm 62:8 ಕೀರ್ತನೆಗಳು 62:8ಎಲ್ಲಾ ಕಾಲದಲ್ಲಿ ಆತನಲ್ಲಿ ಭರವಸ ವಿಡಿರಿ, ಜನರೇ; ನಿಮ್ಮ ಹೃದಯವನ್ನು ಆತನ ಮುಂದೆ ಹೊಯ್ಯಿರಿ; ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.