Psalms · chapter 118 · verse 6
Psalm 118:6 in Kannada
ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
Kartanu nanna paravaagiddaane; naanu bhayapadenu; manushyanu nanage enu maaduvanu?
Psalm 118:6 in English
- King James Version (KJV)
- The LORD [is] on my side; I will not fear: what can man do unto me?
- World English Bible (WEB)
- The LORD is on my side. I will not be afraid. What can man do to me?
- American Standard Version (ASV)
- Jehovah is on my side; I will not fear: What can man do unto me?
- Bible in Basic English (BBE)
- The Lord is on my side; I will have no fear: what is man able to do to me?
- Darby Translation (DBY)
- Jehovah is for me, I will not fear; what can man do unto me?
- Webster's Bible (WBS)
- The LORD [is] on my side; I will not fear: what can man do to me?
- Young's Literal Translation (YLT)
- Jehovah [is] for me, I do not fear what man doth to me.
Read in context
- 4ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಕರ್ತನಿಗೆ ಭಯಪಡುವವರು ಹೇಳಲಿ.
- 5ಇಕ್ಕಟ್ಟಿನೊಳಗಿಂದ ಕರ್ತನಿಗೆ ಕೂಗಿದೆನು; ಕರ್ತನು ಉತ್ತರ ಕೊಟ್ಟು ನನ್ನನ್ನು ವಿಶಾಲ ಸ್ಥಳದಲ್ಲಿ ನಿಲ್ಲಿಸಿ ದನು.
- 6ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
- 7ನನಗೆ ಸಹಾಯ ಮಾಡುವವರೊಂದಿಗೆ ಕರ್ತನು ನನ್ನ ಪಕ್ಷವನ್ನು ಹಿಡಿಯುತ್ತಾನೆ. ಆದದರಿಂದ ನಾನು ನನ್ನ ಹಗೆಯವರ ಮೇಲೆ ನನ್ನಾಶೆಯನ್ನು ತೀರಿಸು ವದನ್ನು ನಾನು ನೋಡುವೆನು.
- 8ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು.
Cross references
- Hebrews 13:6 ಇಬ್ರಿಯರಿಗೆ 13:6ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Romans 8:31 ರೋಮಾಪುರದವರಿಗೆ 8:31ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
- Psalm 56:4 ಕೀರ್ತನೆಗಳು 56:4ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
- Psalm 56:11 ಕೀರ್ತನೆಗಳು 56:11ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯ ಪಡೆನು; ಮನುಷ್ಯನು ನನಗೆ ಏನು ಮಾಡಬಲ್ಲನು?
- Micah 7:8–10 ಮೀಕ 7:8–10ನನ್ನ ಶತ್ರುವೇ, ನನ್ನ ಮೇಲೆ ಸಂತೋಷಪಡಬೇಡ; ನಾನು ಬಿದ್ದಿದ್ದರೂ ತಿರುಗಿ ಏಳುವೆನು; ಕತ್ತಲೆಯಲ್ಲಿ ಕೂತುಕೊಂಡರೂ ನನಗೆ ಬೆಳಕು ಕರ್ತನೇ. ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು. ನನ್ನ ಶತ್ರುಗಳು ಸಹ ಅದನ್ನು ನೋಡುವರು; ನಿನ್ನ ದೇವರಾದ ಕರ್ತನು ಎಲ್ಲಿ ಎಂದು ನನಗೆ ಹೇಳಿದವಳನ್ನು ನಾಚಿಕೆಯು ಮುಚ್ಚುವದು; ನನ್ನ ಕಣ್ಣುಗಳು ಅವಳನ್ನು ನೋಡುವವು, ಈಗಲೇ ಬೀದಿಗಳಲ್ಲಿರುವ ಕೆಸರಿನಂತೆ ತುಳಿಯಲ್ಪಡು ವಳು.
- Psalm 27:1–3 ಕೀರ್ತನೆಗಳು 27:1–3ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು? ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು. ನನಗೆ ವಿರೋಧವಾಗಿ ದಂಡು ಇಳಿದರೂ ನನ್ನ ಹೃದಯವು ಭಯಪಡದು; ಯುದ್ಧವು ನನ್ನ ಮೇಲೆ ಎದ್ದರೂ ಇದರಲ್ಲಿಯೂ ನಾನು ಭರವಸವಾಗಿರುವೆನು.
- Psalm 56:9 ಕೀರ್ತನೆಗಳು 56:9ನಾನು ನಿನ್ನನ್ನು ಕೂಗಿ ಕೊಂಡಾಗ ನನ್ನ ಶತ್ರುಗಳು ಹಿಂದಿರುಗುವರು; ದೇವರು ನನಗಿದ್ದಾನೆ ಎಂಬದನ್ನು ಬಲ್ಲೆನು.
- Jeremiah 20:11 ಯೆರೆಮೀಯ 20:11ಆದರೆ ಕರ್ತನು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾನೆ; ಆದದರಿಂದ ನನ್ನನ್ನು ಹಿಂಸಿಸು ವವರು ಎಡವುವರು, ಗೆಲ್ಲುವದಿಲ್ಲ; ಅನುಕೂಲ ವಾಗದೆ ಇದ್ದದರಿಂದ ಅವರು ಬಹಳ ನಾಚಿಕೆಪಡುವರು; ಅವರ ಗಲಿಬಿಲಿಯು ನಿತ್ಯವಾಗಿರುವದು. ಅದು ಮರೆತು ಹೋಗಲ್ಪಡುವದಿಲ್ಲ.
- Psalm 23:4 ಕೀರ್ತನೆಗಳು 23:4ಹೌದು, ನಾನು ಮರಣದ ನೆರಳಿನ ಕಣಿವೆಯಲ್ಲಿ ನಡೆದರೂ ಕೇಡಿಗೆ ಭಯಪಡೆನು; ಯಾಕಂದರೆ ನೀನು ನನ್ನ ಸಂಗಡ ಇದ್ದೀ; ನಿನ್ನ ಕೋಲೂ ದೊಣ್ಣೆಯೂ ನನ್ನನ್ನು ಆದರಿಸುತ್ತವೆ.
- Isaiah 51:12 ಯೆಶಾಯ 51:12ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು?
- Psalm 46:11 ಕೀರ್ತನೆಗಳು 46:11ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Psalm 146:5 ಕೀರ್ತನೆಗಳು 146:5ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು.