Psalms · chapter 119 · verse 9
Psalm 119:9 in Kannada
ಯೌವನಸ್ಥನು ಯಾವದರಿಂದ ತನ್ನ ನಡತೆಯನ್ನು ಶುಚಿಮಾಡಿಕೊಳ್ಳುವನು? ನಿನ್ನ ವಾಕ್ಯವನ್ನು ಕೈಕೊಳ್ಳು ವದರಿಂದಲೇ.
Yauvanasthanu yaavadarinda tanna nadateyannu shuchimaadikolluvanu? Ninna vaakyavannu kaikollu vadarindale.
Psalm 119:9 in English
- King James Version (KJV)
- Wherewithal shall a young man cleanse his way? by taking heed [thereto] according to thy word.
- World English Bible (WEB)
- How can a young man keep his way pure? By living according to your word.
- American Standard Version (ASV)
- Wherewith shall a young man cleanse his way? By taking heed [thereto] according to thy word.
- Bible in Basic English (BBE)
- BETH How may a young man make his way clean? by guiding it after your word.
- Darby Translation (DBY)
- BETH. Wherewithal shall a young man cleanse his path? by taking heed according to thy word.
- Webster's Bible (WBS)
- BETH. Wherewith shall a young man cleanse his way? by taking heed [to it] , according to thy word.
- Young's Literal Translation (YLT)
- [Beth.] With what doth a young man purify his path? To observe — according to Thy word.
Read in context
- 7ನಿನ್ನ ನೀತಿಯ ನ್ಯಾಯಗಳನ್ನು ನಾನು ಕಲಿ ಯುವಾಗ ಯಥಾರ್ಥ ಹೃದಯದಿಂದ ನಿನ್ನನ್ನು ಕೊಂಡಾ ಡುವೆನು.
- 8ನಿನ್ನ ನಿಯಮಗಳನ್ನು ಕೈಕೊಳ್ಳುವ ನನ್ನನ್ನು ಸಂಪೂರ್ಣವಾಗಿ ಕೈಬಿಡಬೇಡ.
- 9ಯೌವನಸ್ಥನು ಯಾವದರಿಂದ ತನ್ನ ನಡತೆಯನ್ನು ಶುಚಿಮಾಡಿಕೊಳ್ಳುವನು? ನಿನ್ನ ವಾಕ್ಯವನ್ನು ಕೈಕೊಳ್ಳು ವದರಿಂದಲೇ.
- 10ನನ್ನ ಪೂರ್ಣಹೃದಯದಿಂದ ನಿನ್ನನ್ನು ಹುಡುಕಿದ್ದೇನೆ; ನಿನ್ನ ಆಜ್ಞೆಗಳಿಂದ ನಾನು ತಪ್ಪಿಹೋಗ ದಂತೆ ಮಾಡು.
- 11ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ.
Cross references
- 2 Timothy 2:22 2 ತಿಮೊಥೆಯನಿಗೆ 2:22ಯೌವನದ ಇಚ್ಚೆಗಳಿಂದ ಸಹ ಓಡಿಹೋಗು; ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳು ವವರ ಸಂಗಡ ನೀತಿ ವಿಶ್ವಾಸ ಪ್ರೀತಿ ಸಮಾಧಾನ ಇವುಗಳನ್ನು ಅನುಸರಿಸು.
- James 1:21–25 ಯಾಕೋಬನು 1:21–25ಆದಕಾರಣ ಎಲ್ಲಾ ಮಲಿನತೆಯನ್ನೂ ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಒಳಗೆ ಬೇರೂರಿರುವ ವಾಕ್ಯಕ್ಕೆ ನಮ್ರತೆ ಯಿಂದ ಎಡೆಕೊಡಿರಿ; ಅದು ನಿಮ್ಮ ಆತ್ಮಗಳನ್ನು ರಕ್ಷಿಸು ವದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ. ನೀವು ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ. ಯಾವನಾದರೂ ವಾಕ್ಯವನ್ನು ಕೇಳುವವ ನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟು ಮುಖವನ್ನು ನೋಡಿದ ಮನುಷ್ಯನಂತಿರುವನು. ಇವನು ತನ್ನನ್ನು ನೋಡಿ ಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು. ಆದರೆ ಬಿಡುಗಡೆ ಯನ್ನುಂಟುಮಾಡುವ ಪರಿಪೂರ್ಣವಾದ ನಿಯಮ ವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು (ವಾಕ್ಯವನ್ನು) ಕೇಳಿ ಮರೆತುಹೋಗುವವ ನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ಕ್ರಿಯೆಯಿಂದ ಧನ್ಯನಾಗುವನು.
- 2 Timothy 3:15–17 2 ತಿಮೊಥೆಯನಿಗೆ 3:15–17ಚಿಕ್ಕಂದಿನಿಂದಲೂ ನೀನು ಪರಿಶುದ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ. ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು. ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
- Joshua 1:7 ಯೆಹೋಶುವ 1:7ನನ್ನ ಸೇವಕನಾದ ಮೋಶೆಯು ನಿನಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣವೆಲ್ಲಾದರ ಪ್ರಕಾರ ನೀನು ಕೈಕೊಂಡು ನಡೆ ಯುವ ಹಾಗೆ ಬಲವಾಗಿರು, ಬಹು ಧೈರ್ಯದಿಂದಿರು, ನೀನು ಹೋಗುವ ಸ್ಥಳದಲ್ಲೆಲ್ಲಾ ಸಫಲವಾಗುವ ಹಾಗೆ ಅದನ್ನು (ನ್ಯಾಯಪ್ರಮಾಣವನ್ನು) ಬಿಟ್ಟು ಬಲ ಕ್ಕಾದರೂ ಎಡಕ್ಕಾದರೂ ತಿರುಗಬೇಡ.
- Psalm 25:7 ಕೀರ್ತನೆಗಳು 25:7ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
- Psalm 119:11 ಕೀರ್ತನೆಗಳು 119:11ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ.
- Titus 2:4–6 ತೀತನಿಗೆ 2:4–6ಇದಲ್ಲದೆ ದೇವರ ವಾಕ್ಯವು ದೂಷಿಸಲ್ಪ ಡದಂತೆ ಯೌವನ ಸ್ತ್ರೀಯರು ಸ್ವಸ್ಥಚಿತ್ತರೂ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವವರೂ ವಿವೇಕವುಳ್ಳವರೂ ಪತಿವ್ರತೆಯರೂ ಮನೆಯನ್ನು ನೋಡಿಕೊಳ್ಳುವವರೂ ಒಳ್ಳೆಯವರೂ ತಮ್ಮ ಗಂಡಂದಿ ರಿಗೆ ವಿಧೇಯರೂ ಆಗಿರಬೇಕೆಂದು ಅವರಿಗೆ ಹೇಳು. ಹಾಗೆಯೇ ಯೌವನಸ್ಥರು ಸ್ವಸ್ಥಚಿತ್ತರಾಗಿರಬೇಕೆಂದು ಅವರನ್ನು ಎಚ್ಚರಿಸು.
- Psalm 1:1–3 ಕೀರ್ತನೆಗಳು 1:1–3ಭಕ್ತಿಹೀನರ ಆಲೋಚನೆಯಂತೆ ನಡೆಯದೆ ಪಾಪಿಗಳ ಮಾರ್ಗದಲ್ಲಿ ನಿಲ್ಲದೆ ಕುಚೋದ್ಯಗಾರರು ಕೂತುಕೊಳ್ಳುವಲ್ಲಿ ಕೂತುಕೊಳ್ಳದೆ ಕರ್ತನ ನ್ಯಾಯ ಪ್ರಮಾಣದಲ್ಲಿ ಸಂತೋಷಿಸಿ ಅದನ್ನ್ನು ರಾತ್ರಿ ಹಗಲು ಧ್ಯಾನಿಸುವ ಮನುಷ್ಯನೇ ಧನ್ಯನು. ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ, ಎಲೆ ಬಾಡದಂಥ, ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು; ಅವನು ಮಾಡು ವದೆಲ್ಲಾ ಸಫಲವಾಗುವದು.
- Proverbs 1:10 ಜ್ಞಾನೋಕ್ತಿಗಳು 1:10ನನ್ನ ಮಗನೇ, ಪಾಪಿ ಗಳು ನಿನ್ನನ್ನು ಆಕರ್ಷಿಸಿದರೆ ನೀನು ಒಪ್ಪಬೇಡ.
- Psalm 34:11 ಕೀರ್ತನೆಗಳು 34:11ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಕರ್ತನ ಭಯವನ್ನು ನಿಮಗೆ ಕಲಿಸುವೆನು.
- Psalm 19:7–11 ಕೀರ್ತನೆಗಳು 19:7–11ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಕರ್ತನ ಕಟ್ಟಳೆಗಳು ನ್ಯಾಯವಾದವುಗಳಾಗಿದ್ದು ಹೃದಯಕ್ಕೆ ಸಂತೋಷಕರವಾಗಿವೆ; ಕರ್ತನ ಆಜ್ಞೆಯು ಶುದ್ಧವಾ ದದ್ದು; ಕಣ್ಣುಗಳನ್ನು ಬೆಳಗಿಸುತ್ತದೆ. ಕರ್ತನ ಭಯವು ಪವಿತ್ರವಾಗಿದ್ದು ಎಂದೆಂದಿಗೂ ನೆಲೆಯಾಗಿದೆ. ಕರ್ತನ ನ್ಯಾಯಗಳು ಸತ್ಯವಾಗಿದ್ದು ಒಟ್ಟಾಗಿ ನೀತಿಯುಳ್ಳವುಗ ಳಾಗಿವೆ. ಅವು ಬಂಗಾರಕ್ಕಿಂತಲೂ ಬಹಳ ಅಪರಂಜಿ ಗಿಂತಲೂ ಅಪೇಕ್ಷಿಸತಕ್ಕವುಗಳು; ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾದವು ಗಳು. ನಿನ್ನ ಸೇವಕನು ಅವುಗಳಿಂದ ಎಚ್ಚರಿಸಲ್ಪಡು ತ್ತಾನೆ; ಅವುಗಳನ್ನು ಕೈಕೊಳ್ಳುವದರಲ್ಲಿ ದೊಡ್ಡ ಪ್ರತಿ ಫಲ ಉಂಟು.
- Psalm 119:97–105 ಕೀರ್ತನೆಗಳು 119:97–105ನಿನ್ನ ನ್ಯಾಯಪ್ರಮಾಣವನ್ನು ನಾನು ಎಷ್ಟೋ ಪ್ರೀತಿ ಮಾಡುತ್ತೇನೆ, ದಿನವೆಲ್ಲಾ ಅದೇ ನನ್ನ ಧ್ಯಾನವು. ನಿನ್ನ ಆಜ್ಞೆಗಳ ಮೂಲಕ ನನ್ನ ಶತ್ರುಗಳಿಗಿಂತ ನನ್ನನ್ನು ಜ್ಞಾನಿಯಾಗಿ ಮಾಡಿದ್ದೀ; ಅವು ಎಂದೆಂದಿಗೂ ನನ್ನಲ್ಲಿ ಅವೆ. ನನ್ನ ಬೋಧಕರೆಲ್ಲರಿಗಿಂತ ನಾನು ಬುದ್ಧಿವಂತ ನಾಗಿದ್ದೇನೆ; ನಿನ್ನ ಸಾಕ್ಷಿಗಳು ನನ್ನ ಧ್ಯಾನವಾಗಿವೆ. ನಾನು ಪೂರ್ವಿಕರಿಗಿಂತ ವಿವೇಕಿಯಾಗಿದ್ದೇನೆ; ನಿನ್ನ ಕಟ್ಟಳೆಗಳನ್ನು ಕೈಕೊಂಡಿದ್ದೇನೆ. ನಿನ್ನ ವಾಕ್ಯವನ್ನು ಕೈಕೊಳ್ಳುವ ಹಾಗೆ ಎಲ್ಲಾ ಕೆಟ್ಟದಾರಿಗಳಿಂದ ನನ್ನ ಪಾದ ಗಳನ್ನು ಹಿಂದೆಗೆದ್ದಿದ್ದೇನೆ. ನಿನ್ನ ನ್ಯಾಯವಿಧಿಗಳಿಂದ ನಾನು ತೊಲಗಲಿಲ್ಲ; ನೀನು ನನ್ನನ್ನು ಬೋಧಿಸಿದ್ದೀ. ನಿನ್ನ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿ ಯಾಗಿವೆ, ಅವು ನನ್ನ ಬಾಯಿಗೆ ಜೇನಿಗಿಂತ ಸಿಹಿ ಯಾಗಿವೆ. ನಾನು ನಿನ್ನ ಕಟ್ಟಳೆಗಳಿಂದ ವಿವೇಕಿ ಯಾಗಿದ್ದೇನೆ. ಆದದರಿಂದ ಮೋಸದ ಮಾರ್ಗಗ ಳನ್ನೆಲ್ಲಾ ಹಗೆಮಾಡಿದ್ದೇನೆ. ನಿನ್ನ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.