Psalms · chapter 25 · verse 7
Psalm 25:7 in Kannada
ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
O kartane, nanna yauvanada paapagalannoo drohagalannoo jnyaapaka maadikollade ninna karuneya prakaara ninna olle tanada nimitta neenu nannannu jnyaapaka maadiko.
Psalm 25:7 in English
- King James Version (KJV)
- Remember not the sins of my youth, nor my transgressions: according to thy mercy remember thou me for thy goodness’ sake, O LORD.
- World English Bible (WEB)
- Don’t remember the sins of my youth, nor my transgressions. Remember me according to your loving kindness, for your goodness’ sake, LORD.
- American Standard Version (ASV)
- Remember not the sins of my youth, nor my transgressions: According to thy lovingkindness remember thou me, For thy goodness’ sake, O Jehovah.
- Bible in Basic English (BBE)
- Do not keep in mind my sins when I was young, or my wrongdoing: let your memory of me be full of mercy, O Lord, because of your righteousness.
- Darby Translation (DBY)
- Remember not the sins of my youth, nor my transgressions; according to thy loving-kindness remember thou me, for thy goodness' sake, Jehovah.
- Webster's Bible (WBS)
- Remember not the sins of my youth, nor my transgressions: according to thy mercy remember thou me for thy goodness' sake, O LORD.
- Young's Literal Translation (YLT)
- Sins of my youth, and my transgressions, Do not Thou remember. According to Thy kindness be mindful of me, For Thy goodness' sake, O Jehovah.
Read in context
- 5ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.
- 6ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.
- 7ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
- 8ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.
- 9ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.
Cross references
- Isaiah 43:25 ಯೆಶಾಯ 43:25ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು.
- Isaiah 38:17 ಯೆಶಾಯ 38:17ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.
- Hebrews 10:16–18 ಇಬ್ರಿಯರಿಗೆ 10:16–18ಹೇಗೆಂದರೆ ಆತನು ಮೊದಲು ಹೇಳಿದಂತೆ--ಆ ದಿನಗಳಾದ ಮೇಲೆ ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು, ಅವರ ಮನಸ್ಸುಗಳಲ್ಲಿ ಅವುಗಳನ್ನು ಬರೆಯುವೆನು. ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಇದೇ. ಇದಲ್ಲದೆ ಅವರ ಪಾಪಗಳನ್ನೂ ದುಷ್ಕೃತ್ಯ ಗಳನ್ನೂ ನನ್ನ ನೆನಪಿಗೆ ಇನ್ನೆಂದಿಗೂ ತರುವದಿಲ್ಲ ಎಂದು ಕರ್ತನು ಹೇಳುತ್ತಾನೆ. ಪಾಪವು ಪರಿಹಾರವಾದಲ್ಲಿ ಇನ್ನು ಎಂದಿಗೂ ಅದಕ್ಕಾಗಿ ಅರ್ಪಣೆ ಇರುವದಿಲ್ಲ.
- Hebrews 8:12 ಇಬ್ರಿಯರಿಗೆ 8:12ನಾನು ಅವರ ಅನೀತಿಯ ವಿಷಯವಾಗಿ ಕರುಣೆಯುಳ್ಳವನಾಗಿದ್ದು ಅವರ ಪಾಪಗಳನ್ನೂ ಅಪರಾಧಗಳನ್ನೂ ನನ್ನ ನೆನಪಿಗೆ ಇನ್ನೆಂದಿಗೂ ತರುವದಿಲ್ಲ ಎಂದು ಕರ್ತನು ನುಡಿಯು ತ್ತಾನೆ.ಇಲ್ಲಿ ಆತನು--ಹೊಸಒಡಂಬಡಿಕೆಯೆಂದು ಹೇಳಿದ್ದರಲ್ಲಿ ಮೊದಲಿದ್ದದ್ದನ್ನು ಹಳೆಯದಾಗಿ ಮಾಡಿ ದ್ದಾನೆ. ಅದು ಹಳೇದಾಗುತ್ತಾ ಕ್ಷೀಣವಾಗಿ ಇಲ್ಲದಂತಾ ಗುವದಕ್ಕೆ ಸಿದ್ಧವಾಗಿದೆ ಎಂದು ಹೇಳುತ್ತಾನೆ.
- Job 13:26 ಯೋಬನು 13:26ನನಗೆ ವಿರೋಧವಾಗಿ ಕಹಿಯಾದ ವುಗಳನ್ನು ಬರೆದುಕೊಂಡಿದ್ದೀ; ನನ್ನ ಯೌವನದ ಅಕ್ರಮಗಳನ್ನು ನನಗೆ ಬಾಧ್ಯವಾಗಿ ಕೊಡುತ್ತೀ.
- Jeremiah 3:25 ಯೆರೆಮೀಯ 3:25ನಮ್ಮ ನಾಚಿಕೆಯಲ್ಲಿ ಮಲಗಿಕೊಳ್ಳುತ್ತೇವೆ; ನಮ್ಮ ಗಲಭೆ ನಮ್ಮನ್ನು ಮುಚ್ಚಿಕೊಳ್ಳುತ್ತದೆ; ನಾವೂ ನಮ್ಮ ತಂದೆಗಳೂ ನಮ್ಮ ಯೌವನದಾರಭ್ಯ ಇಂದಿನವರೆಗೂ ನಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿ ನಮ್ಮ ದೇವ ರಾದ ಕರ್ತನ ಸ್ವರಕ್ಕೆ ಕಿವಿಗೊಡಲಿಲ್ಲ.
- Ephesians 1:6–7 ಎಫೆಸದವರಿಗೆ 1:6–7ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ. ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು.
- Psalm 79:8 ಕೀರ್ತನೆಗಳು 79:8ಪೂರ್ವಕಾಲದ ಅಕ್ರಮಗಳನ್ನು ನಮಗೆ ವಿರೋಧವಾಗಿ ಜ್ಞಾಪಕಮಾಡಿ ಕೊಳ್ಳಬೇಡ. ನಿನ್ನ ಅಂತಃಕರಣಗಳು ಬೇಗ ನಮ್ಮನ್ನು ಎದುರುಗೊಳ್ಳಲ್ಲಿ; ಬಹಳವಾಗಿ ಕುಗ್ಗಿ ಹೋಗಿದ್ದೇವೆ.
- Psalm 51:1 ಕೀರ್ತನೆಗಳು 51:1ಓ ದೇವರೇ, ನನ್ನ ಮೇಲೆ ಕರುಣೆಯಿಡು; ನಿನ್ನ ಪ್ರೀತಿಕರುಣೆಯ ಪ್ರಕಾರ ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ದ್ರೋಹ ಗಳನ್ನು ಅಳಿಸಿಬಿಡು.
- Ephesians 2:4–8 ಎಫೆಸದವರಿಗೆ 2:4–8ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ನೀವು ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ;) ನಮ್ಮನ್ನು ಆತನ ಕೂಡ ಎಬ್ಬಿಸಿ ಕ್ರಿಸ್ತ ಯೇಸುವಿನಲ್ಲಿ ಆತನೊಂದಿಗೆ ಪರ ಲೋಕದ ಸ್ಥಳಗಳಲ್ಲಿ ಕೂಡ್ರಿಸಿದ್ದಾನೆ. ಹೀಗೆ ಕ್ರಿಸ್ತ ಯೇಸುವಿನ ಲ್ಲಿರುವ ಕರುಣೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಣ ಯುಗಗಳಲ್ಲಿ ನಮಗೆ ತೋರಿಸಬೇಕೆಂದಿದ್ದನು. ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.
- Psalm 119:124 ಕೀರ್ತನೆಗಳು 119:124ನಿನ್ನ ಕರುಣೆಯ ಪ್ರಕಾರ ನಿನ್ನ ಸೇವಕನಿಗೆ ಮಾಡಿ ನಿನ್ನ ನಿಯಮಗಳನ್ನು ನನಗೆ ಕಲಿಸು.
- Psalm 6:4 ಕೀರ್ತನೆಗಳು 6:4ಓ ಕರ್ತನೇ, ಹಿಂತಿರುಗಿ ನನ್ನ ಪ್ರಾಣವನ್ನು ತಪ್ಪಿಸಿಬಿಡು. ಹಾ! ನಿನ್ನ ಕರುಣೆಯ ನಿಮಿತ್ತ ನನ್ನನ್ನು ರಕ್ಷಿಸು.