Psalms · chapter 119 · verse 96
Psalm 119:96 in Kannada
ಎಲ್ಲಾ ಸಂಪೂರ್ಣತೆಯ ಮೇರೆ ಯನ್ನು ನೋಡಿದ್ದೇನೆ; ಆದರೆ ನಿನ್ನ ಆಜ್ಞೆಯು ಬಹಳ ವಿಸ್ತಾರವಾಗಿದೆ.
Ellaa sampoornateya mere yannu nodiddene; aadare ninna aajnyeyu bahala vistaaravaagide.
Psalm 119:96 in English
- King James Version (KJV)
- I have seen an end of all perfection: [but] thy commandment [is] exceeding broad.
- World English Bible (WEB)
- I have seen a limit to all perfection, but your commands are boundless. MEM
- American Standard Version (ASV)
- I have seen an end of all perfection; [But] thy commandment is exceeding broad.
- Bible in Basic English (BBE)
- I have seen that nothing on earth is complete; but your teaching is very wide.
- Darby Translation (DBY)
- I have seen an end of all perfection: thy commandment is exceeding broad.
- Webster's Bible (WBS)
- I have seen an end of all perfection: [but] thy commandment [is] exceeding broad.
- Young's Literal Translation (YLT)
- Of all perfection I have seen an end, Broad [is] Thy command — exceedingly!
Read in context
- 94ನಾನು ನಿನ್ನ ವನೇ, ನನ್ನನ್ನು ರಕ್ಷಿಸು; ನಿನ್ನ ಕಟ್ಟಳೆಗಳನ್ನು ಹುಡುಕಿ ದ್ದೇನೆ.
- 95ದುಷ್ಟರು ನನ್ನನ್ನು ನಾಶಮಾಡುವದಕ್ಕೆ ನನಗಾಗಿ ಕಾದುಕೊಳ್ಳುತ್ತಾರೆ. ನಿನ್ನ ಸಾಕ್ಷಿಗಳನ್ನು ಗ್ರಹಿಸಿ ಕೊಳ್ಳುತ್ತೇನೆ.
- 96ಎಲ್ಲಾ ಸಂಪೂರ್ಣತೆಯ ಮೇರೆ ಯನ್ನು ನೋಡಿದ್ದೇನೆ; ಆದರೆ ನಿನ್ನ ಆಜ್ಞೆಯು ಬಹಳ ವಿಸ್ತಾರವಾಗಿದೆ.
- 97ನಿನ್ನ ನ್ಯಾಯಪ್ರಮಾಣವನ್ನು ನಾನು ಎಷ್ಟೋ ಪ್ರೀತಿ ಮಾಡುತ್ತೇನೆ, ದಿನವೆಲ್ಲಾ ಅದೇ ನನ್ನ ಧ್ಯಾನವು.
- 98ನಿನ್ನ ಆಜ್ಞೆಗಳ ಮೂಲಕ ನನ್ನ ಶತ್ರುಗಳಿಗಿಂತ ನನ್ನನ್ನು ಜ್ಞಾನಿಯಾಗಿ ಮಾಡಿದ್ದೀ; ಅವು ಎಂದೆಂದಿಗೂ ನನ್ನಲ್ಲಿ ಅವೆ.
Cross references
- Matthew 24:35 ಮತ್ತಾಯನು 24:35ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
- Ecclesiastes 2:11 ಪ್ರಸಂಗಿ 2:11ಆಗ ನನ್ನ ಕೈಗಳು ನಡಿಸಿದವುಗಳೆಲ್ಲವನ್ನು ನಾನು ಪ್ರಯಾಸ ಪಟ್ಟ ಪ್ರಯಾಸವನ್ನು ದೃಷ್ಟಿಸಿದೆನು; ಇಗೋ, ಎಲ್ಲವೂ ವ್ಯರ್ಥ ಮತ್ತು ಮನಸ್ಸಿಗೆ ಆಯಾಸಕರ. ಸೂರ್ಯನ ಕೆಳಗೆ ಯಾವ ಲಾಭವಿಲ್ಲ.
- Matthew 5:18 ಮತ್ತಾಯನು 5:18ಆಕಾಶವೂ ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ನ್ಯಾಯಪ್ರಮಾಣದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Matthew 22:37–40 ಮತ್ತಾಯನು 22:37–40ಯೇಸು ಅವ ನಿಗೆ--ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣ ದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು. ಈ ಆಜ್ಞೆಯು ಮೊದಲನೆಯದೂ ದೊಡ್ಡದೂ ಆಗಿದೆ. ಅದರಂತೆ-- ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕೆಂಬದು ಎರಡನೆಯದು. ನ್ಯಾಯ ಪ್ರಮಾಣವೆಲ್ಲವೂ ಪ್ರವಾದನೆಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಗೊಂಡಿವೆ ಅಂದನು.
- Psalm 39:5–6 ಕೀರ್ತನೆಗಳು 39:5–6ಇಗೋ, ನನ್ನ ದಿವಸ ಗಳನ್ನು ಗೇಣುದ್ದವಾಗಿ ಮಾಡಿದ್ದೀ; ನನ್ನ ಆಯುಷ್ಯವು ನಿನ್ನ ಮುಂದೆ ಏನೂ ಇಲ್ಲದ ಹಾಗಿದೆ; ನಿಶ್ಚಯವಾಗಿ ಉತ್ತಮ ಸ್ಥಿತಿಯಲ್ಲಿರುವ ಪ್ರತಿಯೊಬ್ಬನು ಒಟ್ಟಾರೆಯಲ್ಲಿ ವ್ಯರ್ಥವಾದವನೇ. ಸೆಲಾ. ನಿಶ್ಚಯವಾಗಿ ಮನುಷ್ಯನು ವ್ಯರ್ಥವಾದ ತೋರಿಕೆ ಯಲ್ಲಿ ನಡೆದುಕೊಳ್ಳುತ್ತಾನೆ; ನಿಶ್ಚಯವಾಗಿ ವ್ಯರ್ಥ ವಾದ ಗದ್ದಲ ಮಾಡುತ್ತಾರೆ. ಅವನು ಐಶ್ವರ್ಯವನ್ನು ಕುಪ್ಪೆ ಮಾಡುತ್ತಾನೆ; ಆದರೆ ಅದನ್ನು ಕೂಡಿಸುವವರು ಯಾರೋ ಅರಿಯನು.
- Ecclesiastes 1:2–3 ಪ್ರಸಂಗಿ 1:2–3ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥಗಳಲ್ಲಿ ವ್ಯರ್ಥ ಎಂದು ಪ್ರಸಂಗಿ ಹೇಳುತ್ತಾನೆ; ಎಲ್ಲವೂ ವ್ಯರ್ಥ. ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸದಲ್ಲಿ ಅವನಿಗೆ ಲಾಭವೇನು?
- Psalm 19:7–8 ಕೀರ್ತನೆಗಳು 19:7–8ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಕರ್ತನ ಕಟ್ಟಳೆಗಳು ನ್ಯಾಯವಾದವುಗಳಾಗಿದ್ದು ಹೃದಯಕ್ಕೆ ಸಂತೋಷಕರವಾಗಿವೆ; ಕರ್ತನ ಆಜ್ಞೆಯು ಶುದ್ಧವಾ ದದ್ದು; ಕಣ್ಣುಗಳನ್ನು ಬೆಳಗಿಸುತ್ತದೆ.
- 1 Samuel 17:8 1 ಸಮುವೇಲನು 17:8ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾ ಯೇಲ್ ಸೈನ್ಯದವರಿಗೆ ಕೂಗಿ ಹೇಳಿದ್ದೇನಂದರೆ--ಯಾಕೆ ನೀವು ವ್ಯೂಹ ಕಟ್ಟಲು ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರ ಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆದು ಕೊಳ್ಳಿರಿ; ಅವನು ನನ್ನ ಮುಂದೆ ಬರಲಿ.
- 1 Samuel 17:49–51 1 ಸಮುವೇಲನು 17:49–51ತನ್ನ ಕೈಯನ್ನು ಚೀಲದಲ್ಲಿ ಹಾಕಿ ಅದರಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು ಕವಣೆಯಲ್ಲಿಟ್ಟು ಬೀಸಿ ಫಿಲಿಷ್ಟಿ ಯನ ಹಣೆಯನ್ನು ತಾಕುವಂತೆ ಎಸೆದನು. ಆ ಕಲ್ಲು ಅವನ ಹಣೆಯೊಳಗೆ ಹೊಕ್ಕಿದ್ದರಿಂದ ಅವನು ನೆಲದ ಮೇಲೆ ಬೋರಲು ಬಿದ್ದನು. ಹೀಗೆಯೇ ದಾವೀದನು ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನ ಮೇಲೆ ಬಲಗೊಂಡು ಫಿಲಿಷ್ಟಿಯನನ್ನು ಹೊಡೆದು ಅವನನ್ನು ಕೊಂದುಹಾಕಿದನು. ದಾವೀದನ ಕೈಯಲ್ಲಿ ಕತ್ತಿಯು ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನೇ ಒರೆಯಿಂದ ಕಿತ್ತು ಅವನ ತಲೆಯನ್ನು ಕಡಿದು ಅವನನ್ನು ಕೊಂದು ಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತುಹೋದದ್ದನ್ನು ಕಂಡಾಗ ಓಡಿಹೋದರು.
- Romans 7:14 ರೋಮಾಪುರದವರಿಗೆ 7:14ನ್ಯಾಯ ಪ್ರಮಾಣವು ಆತ್ಮೀಕವಾದದ್ದೆಂದು ನಾವು ಬಲ್ಲೆವು; ಆದರೆ ನಾನು ಶರೀರಾಧೀನನೂ ಪಾಪದ ಅಧೀನದಲ್ಲಿ ರುವದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ.
- 1 Samuel 9:2 1 ಸಮುವೇಲನು 9:2ಇವನಿಗೆ ಒಳ್ಳೇ ಯೌವನಸ್ಥ ನಾದ ಸೌಲನೆಂಬ ಹೆಸರುಳ್ಳ ಒಬ್ಬ ಸುಂದರನಾದ ಮಗನಿದ್ದನು. ಇಸ್ರಾ ಯೇಲ್ ಮಕ್ಕಳಲ್ಲಿ ಅವನಿಗಿಂತ ಸೌಂದರ್ಯವುಳ್ಳವನು ಒಬ್ಬನೂ ಇರಲಿಲ್ಲ. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾದವನಾಗಿದ್ದನು.
- 1 Samuel 31:4–5 1 ಸಮುವೇಲನು 31:4–5ಆದಕಾರಣ ಅವನು ತನ್ನ ಆಯುಧ ಹಿಡಿಯುವವನಿಗೆ--ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ತಿವಿದುಬಿಟ್ಟು ಅವಮಾನ ಮಾಡದ ಹಾಗೆ ನೀನು ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ಅದರಿಂದ ತಿವಿ ಅಂದನು. ಆದರೆ ಅವನ ಆಯುಧ ಹಿಡಿಯು ವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡ ಲೊಲ್ಲದೆ ಹೋದನು. ಆಗ ಸೌಲನು ತಾನೇ ಕತ್ತಿ ಯನ್ನು ತಕ್ಕೊಂಡು ಅದರ ಮೇಲೆ ಬಿದ್ದನು. ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹಿಡಿಯುವವನು ನೋಡಿದಾಗ ಅವನೂ ಹಾಗೆಯೇ ತನ್ನ ಕತ್ತಿಯ ಮೇಲೆ ಬಿದ್ದು ಅವನ ಸಂಗಡ ಸತ್ತನು.