Psalms · chapter 127 · verse 3
Psalm 127:3 in Kannada
ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ.
Igo, makkalu kartaninda sikkida svaasthyavaagi ddaare; garbhaphalavu aatana bahumaanavaagide.
Psalm 127:3 in English
- King James Version (KJV)
- Lo, children [are] an heritage of the LORD: [and] the fruit of the womb [is his] reward.
- World English Bible (WEB)
- Behold, children are a heritage of the LORD. The fruit of the womb is his reward.
- American Standard Version (ASV)
- Lo, children are a heritage of Jehovah; [And] the fruit of the womb is [his] reward.
- Bible in Basic English (BBE)
- See, sons are a heritage from the Lord; the fruit of the body is his reward.
- Darby Translation (DBY)
- Lo, children are an inheritance from Jehovah, [and] the fruit of the womb a reward.
- Webster's Bible (WBS)
- Lo, children [are] a heritage of the LORD: [and] the fruit of the womb [is his] reward.
- Young's Literal Translation (YLT)
- Lo, an inheritance of Jehovah [are] sons, A reward [is] the fruit of the womb.
Read in context
- 1ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ.
- 2ರೊಟ್ಟಿಗಾಗಿ ವ್ಯಥೆಪಟ್ಟು ಬೆಳಿಗ್ಗೆ ಬೇಗ ಏಳುವದೂ ರಾತ್ರಿ ತಡವಾಗಿ ಮಲಗುವದೂ ವ್ಯರ್ಥವೇ. ಆತನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಅದನ್ನು ಕೊಡುತ್ತಾನೆ.
- 3ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ.
- 4ಯೌವನದ ಮಕ್ಕಳು ಪರಾಕ್ರಮಶಾಲಿಯ ಕೈಯಲ್ಲಿ ಬಾಣಗಳು ಹೇಗೋ ಹಾಗೆಯೇ.ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು.
- 5ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು.
Cross references
- Psalm 128:3–4 ಕೀರ್ತನೆಗಳು 128:3–4ನಿನ್ನ ಹೆಂಡತಿಯು ನಿನ್ನ ಮನೆಯ ಪಕ್ಕದಲ್ಲಿರುವ ಫಲಭರಿತ ವಾದ ದ್ರಾಕ್ಷೇಗಿಡದ ಹಾಗೆಯೂ ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು ಎಣ್ಣೇಮರಗಳ ಸಸಿಗಳ ಹಾಗೆಯೂ ಇರುವರು. ಇಗೋ, ಕರ್ತನಿಗೆ ಭಯಪಡುವ ಮನುಷ್ಯನು ಹೀಗೆಯೇ ಆಶೀರ್ವದಿಸಲ್ಪಡುವನು.
- Deuteronomy 28:4 ಧರ್ಮೋಪದೇಶಕಾಂಡ 28:4ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ.
- 1 Samuel 1:27 1 ಸಮುವೇಲನು 1:27ನಾನು ಕರ್ತನಿಗೆ ಮಾಡಿದ ವಿಜ್ಞಾಪನೆಯಂತೆ ಆತನು ನನಗೆ ಕೊಟ್ಟನು.ಆದದರಿಂದ ನಾನು ಅವನನ್ನು ಕರ್ತನಿಗೆ ಒಪ್ಪಿಸಿದ್ದೇನೆ; ಅವನು ಜೀವಿಸಿರುವ ವರೆಗೆ ಕರ್ತನಿಗೆ ಒಪ್ಪಿಸಲ್ಪಟ್ಟಿರುವನು ಅಂದಳು. ಅವನು ಅಲ್ಲಿ ಕರ್ತನನ್ನು ಆರಾಧಿಸಿದನು.
- Genesis 48:4 ಆದಿಕಾಂಡ 48:4ಆತನು ನನಗೆ--ಇಗೋ, ನಿನ್ನನ್ನು ಅಭಿವೃದ್ಧಿಪಡಿಸಿ ಹೆಚ್ಚಿಸಿ ಜನ ಸಮೂಹವನ್ನಾಗಿ ಮಾಡಿ ನಿನ್ನ ತರುವಾಯ ಹುಟ್ಟುವ ನಿನ್ನ ಸಂತತಿಗೆ ಈ ದೇಶವನ್ನು ಶಾಶ್ವತ ಸ್ವಾಸ್ಥ್ಯವಾಗಿ ಕೊಡುತ್ತೇನೆ ಎಂದು ಹೇಳಿದನು.
- Isaiah 8:18 ಯೆಶಾಯ 8:18ಇಗೋ, ನನಗೆ ಕರ್ತನು ದಯಪಾಲಿಸಿದ ಮಕ್ಕಳೂ ನಾನೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೈನ್ಯಗಳ ಕರ್ತನಿಂದುಂಟಾದ ಗುರುತುಗಳಾಗಿಯೂ ಅದ್ಭುತ ಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ.
- Genesis 33:5 ಆದಿಕಾಂಡ 33:5ಆಗ ಏಸಾವನು ತನ್ನ ಕಣ್ಣುಗಳನ್ನೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ನೋಡಿ--ನಿನ್ನ ಜೊತೆ ಯಲ್ಲಿರುವ ಇವರು ಯಾರು ಎಂದು ಕೇಳಿದನು. ಅದಕ್ಕವನು--ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು ಅಂದನು.
- Genesis 1:28 ಆದಿಕಾಂಡ 1:28ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿದನು. ದೇವರು--ಅಭಿವೃದ್ಧಿಯಾಗಿ ಹೆಚ್ಚಿ ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿ ಕೊಳ್ಳಿರಿ; ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆಯೂ ದೊರೆತನಮಾಡಿರಿ ಎಂದು ಅವರಿಗೆ ಹೇಳಿದನು.
- 1 Samuel 1:19–20 1 ಸಮುವೇಲನು 1:19–20ಅವರು ಉದಯದಲ್ಲಿ ಎದ್ದು ಕರ್ತನ ಮುಂದೆ ಆರಾಧಿಸಿ ಹಿಂತಿರುಗಿಕೊಂಡು ರಾಮದಲ್ಲಿರುವ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಕೂಡಿದನು; ಆಗ ಕರ್ತನು ಅವಳನ್ನು ಜ್ಞಾಪಕಮಾಡಿಕೊಂಡನು. ಹನ್ನಳು ಗರ್ಭವತಿ ಯಾಗಿ ಕಾಲವು ಪೂರ್ತಿಯಾದ ತರುವಾಯ ಆದದ್ದೇ ನಂದರೆ, ಅವಳು ಮಗನನ್ನು ಹೆತ್ತು--ನಾನು ಅವನನ್ನು ಕರ್ತನ ಬಳಿಯಲ್ಲಿ ಕೇಳಿಕೊಂಡೆನು ಎಂದು ಹೇಳಿ ಅವನಿಗೆ ಸಮುವೇಲನೆಂದು ಹೆಸರಿಟ್ಟಳು.
- Joshua 24:3–4 ಯೆಹೋಶುವ 24:3–4ಆದರೆ ನಾನು ನದಿಯ ಆಚೆಯಲ್ಲಿದ್ದ ನಿಮ್ಮ ತಂದೆಯಾದ ಅಬ್ರಹಾಮನನ್ನು ತಕ್ಕೊಂಡು ಬಂದು ಅವನನ್ನು ಕಾನಾನ್ ದೇಶವನ್ನೆಲ್ಲಾ ಸಂಚಾರ ಮಾಡಿಸಿ ಅವನ ಸಂತಾನವನ್ನು ಅಭಿವೃದ್ಧಿ ಮಾಡಿದೆನು; ಅವನಿಗೆ ಇಸಾಕನನ್ನು ಕೊಟ್ಟೆನು; ಇಸಾಕನಿಗೆ ಯಾಕೋಬನನ್ನೂ ಏಸಾವನನ್ನೂ ಕೊಟ್ಟು ಏಸಾವನಿಗೆ ಸೇಯಾರ್ ಪರ್ವತದ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟೆನು. ಆದರೆ ಯಾಕೋಬನೂ ಅವನ ಮಕ್ಕಳೂ ಐಗುಪ್ತಕ್ಕೆ ಹೋದರು.
- Genesis 24:60 ಆದಿಕಾಂಡ 24:60ಇದ ಲ್ಲದೆ ಅವರು ರೆಬೆಕ್ಕಳನ್ನು ಆಶೀರ್ವದಿಸಿ ಆಕೆಗೆ--ನೀನು ನಮ್ಮ ಸಹೋದರಿ, ನೀನು ಸಹಸ್ರ ಸಹಸ್ರಗಳಿಗೆ ತಾಯಿಯಾಗು; ನಿನ್ನ ಸಂತಾನದವರು ತಮ್ಮನ್ನು ಹಗೆ ಮಾಡುವವರ ದ್ವಾರಗಳನ್ನು ಸ್ವಾಧೀನಮಾಡಿಕೊಳ್ಳಲಿ ಅಂದರು.
- Genesis 30:1–2 ಆದಿಕಾಂಡ 30:1–2ರಾಹೇಲಳು ತಾನು ಯಾಕೋಬನಿಗೆ ಇನ್ನು ಹೆರುವದಿಲ್ಲವೆಂದು ತಿಳಿದಾಗ ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೇಕಿಚ್ಚು ಪಟ್ಟು ಯಾಕೋಬನಿಗೆ--ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ ಅಂದಳು. ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿ ಕೊಂಡು--ನಿನಗೆ ಗರ್ಭ ಫಲವನ್ನು ಕೊಡದ ದೇವರ ಸ್ಥಾನದಲ್ಲಿ ನಾನಿದ್ದೇನೋ ಅಂದನು.
- Genesis 41:51–52 ಆದಿಕಾಂಡ 41:51–52ಚೊಚ್ಚಲ ಮಗನಿಗೆ ಯೋಸೇಫನು ಮನಸ್ಸೆ ಎಂದು ಹೆಸರಿಟ್ಟನು. ಯಾಕಂದರೆ ಅವನು--ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನೆಲ್ಲಾ ಮರೆತುಬಿಡುವಂತೆ ಮಾಡಿದನು ಅಂದನು. ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯಾಮ್ ಎಂದು ಹೆಸರಿಟ್ಟನು: ಯಾಕಂದರೆ ನಾನು ಬಾಧೆಯನ್ನನುಭವಿಸಿದ ದೇಶದಲ್ಲಿ ಫಲಭರಿತ ನಾಗುವಂತೆ ದೇವರು ಮಾಡಿದ್ದಾನೆ ಅಂದನು.