Psalms · chapter 140 · verse 2
Psalm 140:2 in Kannada
ಅವರು ಹೃದಯದಲ್ಲಿ ಕೇಡು ಗಳನ್ನು ಕಲ್ಪಿಸುತ್ತಾರೆ; ಅವರು ತಪ್ಪದೆ ಯುದ್ಧಕ್ಕೆ ಕೂಡಿಕೊಳ್ಳುತ್ತಾರೆ.
Avaru hrudayadalli kedu galannu kalpisuttaare; avaru tappade yuddhakke koodikolluttaare.
Psalm 140:2 in English
- King James Version (KJV)
- Which imagine mischiefs in [their] heart; continually are they gathered together [for] war.
- World English Bible (WEB)
- those who devise mischief in their hearts. They continually gather themselves together for war.
- American Standard Version (ASV)
- Who devise mischiefs in their heart; Continually do they gather themselves together for war.
- Bible in Basic English (BBE)
- For their hearts are full of evil designs; and they are ever making ready causes of war.
- Darby Translation (DBY)
- Who devise mischiefs in [their] heart; every day are they banded together for war.
- Webster's Bible (WBS)
- Who imagine mischiefs in [their] heart; continually are they assembled [for] war.
- Young's Literal Translation (YLT)
- Who have devised evils in the heart, All the day they assemble [for] wars.
Read in context
- 1ಓ ಕರ್ತನೇ, ಕೆಡುಕರಿಂದ ನನ್ನನ್ನು ಬಿಡಿಸು; ಬಲಾತ್ಕಾರಿಗಳಿಂದ ತಪ್ಪಿಸಿ ನನ್ನನ್ನು ಕಾಪಾಡು.
- 2ಅವರು ಹೃದಯದಲ್ಲಿ ಕೇಡು ಗಳನ್ನು ಕಲ್ಪಿಸುತ್ತಾರೆ; ಅವರು ತಪ್ಪದೆ ಯುದ್ಧಕ್ಕೆ ಕೂಡಿಕೊಳ್ಳುತ್ತಾರೆ.
- 3ತಮ್ಮ ನಾಲಿಗೆಗಳನ್ನು ಹಾವಿನ ಹಾಗೆ ಅವರು ಹದಮಾಡುತ್ತಾರೆ; ಸರ್ಪಗಳ ವಿಷವು ಅವರ ತುಟಿಗಳ ಕೆಳಗಿದೆ ಸೆಲಾ.
- 4ಓ ಕರ್ತನೇ, ದುಷ್ಟನ ಕೈಗಳಿಗೆ ನನ್ನನ್ನು ತಪ್ಪಿಸಿ ಕಾಪಾಡು; ಬಲಾತ್ಕಾರಿಯಿಂದ ನನ್ನನ್ನು ತಪ್ಪಿಸಿ ಕಾಯಿ; ನಾನು ಎಡವಿ ಬೀಳಬೇಕೆಂದು ಯೋಚಿಸುತ್ತಾರೆ.
Cross references
- Psalm 56:6 ಕೀರ್ತನೆಗಳು 56:6ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
- Psalm 36:4 ಕೀರ್ತನೆಗಳು 36:4ಕುಯುಕ್ತಿಯನ್ನು ತನ್ನ ಹಾಸಿಗೆಯ ಮೇಲೆ ಕಲ್ಪಿಸುತ್ತಾನೆ; ಒಳ್ಳೇದಲ್ಲದ ಮಾರ್ಗದಲ್ಲಿ ನಿಂತು ಕೊಳ್ಳುತ್ತಾನೆ; ಕೆಟ್ಟದ್ದನ್ನು ಅಸಹ್ಯಿಸುವದಿಲ್ಲ.
- Psalm 64:5–6 ಕೀರ್ತನೆಗಳು 64:5–6ಕೆಟ್ಟಕಾರ್ಯದಲ್ಲಿ ಅವರು ತಮ್ಮನ್ನು ತಾವೇ ಪ್ರೋತ್ಸಾಹ ಮಾಡಿಕೊಳ್ಳುತ್ತಾರೆ; ಬಲೆಗಳನ್ನು ಒಡ್ಡು ವದಕ್ಕೆ ಮಾತನಾಡುತ್ತಾ--ನಮ್ಮನ್ನು ನೋಡುವವ ರಾರೆಂದು ಹೇಳುತ್ತಾರೆ. ಅವರು ದ್ರೋಹಗಳನ್ನು ಹುಡುಕುತ್ತಾರೆ; ಎಚ್ಚರಿಕೆಯಿಂದ ಹುಡುಕಿದ್ದನ್ನು ಅವರು ಪೂರೈಸುತ್ತಾರೆ; ಅವರೆಲ್ಲರ ಅಂತರಗವೂ ಹೃದಯವೂ ಅಶೋದ್ಯವಾಗಿವೆ.
- Micah 2:1–3 ಮೀಕ 2:1–3ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ. ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ. ಆದದರಿಂದ ಕರ್ತನು ಹೇಳುವದೇನಂದರೆ--ಇಗೋ, ನಾನು ಈ ಕುಟುಂಬಕ್ಕೆ ವಿರೋಧವಾಗಿ ಕೆಟ್ಟದ್ದನ್ನು ಯೋಚಿಸು ತ್ತೇನೆ; ಆದದರಿಂದ ನೀವು ನಿಮ್ಮ ಕುತ್ತಿಗೆಗಳನ್ನು ಹಿಂತೆ ಗೆಯದೆ ಅಹಂಕಾರವಾಗಿ ನಡೆಯದೆ ಇರುವಿರಿ; ಇದು ಕೆಟ್ಟಕಾಲವೇ.
- Hosea 7:6 ಹೋಶೇಯ 7:6ಅವರು ಹೊಂಚು ಹಾಕಿಕೊಂಡಿ ರುವಾಗ ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ; ಅವರ ರೊಟ್ಟಿಗಾರನು ರಾತ್ರಿ ಯೆಲ್ಲಾ ನಿದ್ರೆ ಮಾಡುತ್ತಾನೆ, ಬೆಳಿಗ್ಗೆ ಅದು ಪ್ರಜ್ವಲಿ ಸುವ ಬೆಂಕಿಯ ಹಾಗೆ ಉರಿಯುತ್ತದೆ.
- Proverbs 12:20 ಜ್ಞಾನೋಕ್ತಿಗಳು 12:20ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ.
- Nahum 1:11 ನಹೂಮ 1:11ಕರ್ತನಿಗೆ ವಿರೋಧವಾಗಿ ದುರಾ ಲೋಚನೆ ಮಾಡಿ ಕೇಡನ್ನು ಯೋಚಿಸುವವನು ನಿನ್ನೊಳ ಗಿಂದ ಹೊರಟಿದ್ದಾನೆ.
- Psalm 120:7 ಕೀರ್ತನೆಗಳು 120:7ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ.
- Psalm 2:1–2 ಕೀರ್ತನೆಗಳು 2:1–2ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ? ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ.
- Psalm 21:11 ಕೀರ್ತನೆಗಳು 21:11ಅವರು ನಿನಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು; ಪೂರೈಸಲಾ ರದ ಯುಕ್ತಿಯನ್ನು ಕಲ್ಪಿಸಿದರು.
- Psalm 38:12 ಕೀರ್ತನೆಗಳು 38:12ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.
- 1 Samuel 26:1–25 1 ಸಮುವೇಲನು 26:1–25ಜೀಫ್ಯರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು--ದಾವೀದನು ಯೆಷಿಮೋನಿಗೆ ಎದುರಾದ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ ಅಂದರು. ಆಗ ಸೌಲನು ಎದ್ದು ಜೀಫ್ ಅರಣ್ಯ ದಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿ ನಲ್ಲಿ ಆಯಲ್ಪಟ್ಟ ಮೂರು ಸಾವಿರ ಜನರ ಸಂಗಡ ಜೀಫ್ ಅರಣ್ಯಕ್ಕೆ ಹೋಗಿ ಯೆಷಿಮೋನಿಗೆ ಎದುರಾಗಿ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿದನು. ಆದರೆ ಸೌಲನು ತನ್ನನ್ನು ಹಿಂದಟ್ಟಿ ಅರಣ್ಯಕ್ಕೆ ಬಂದ ದ್ದನ್ನು ನೋಡಿ ದಾವೀದನು ಅರಣ್ಯದಲ್ಲಿ ನಿಂತನು. ದಾವೀದನು ಗೂಢಾಚಾರರನ್ನು ಕಳುಹಿಸಿ ಸೌಲನು ಬಂದದ್ದು ನಿಶ್ಚಯವೆಂದು ತಿಳುಕೊಂಡನು. ದಾವೀ ದನು ಎದ್ದು ಸೌಲನು ಇಳುಕೊಂಡಿದ್ದ ಸ್ಥಳಕ್ಕೆ ಬಂದನು; ಸೌಲನೂ ಅವನ ದಂಡಿನ ನಾಯಕನಾಗಿ ರುವ ನೇರನ ಮಗನಾದ ಅಬ್ನೇರನೂ ಮಲಗಿರುವ ಸ್ಥಳವನ್ನು ದಾವೀದನು ನೋಡಿದನು. ಆದರೆ ಸೌಲನು ಮಧ್ಯದಲ್ಲಿ ಮಲಗಿದ್ದನು; ಜನರು ಅವನ ಸುತ್ತಲೂ ದಂಡಾಗಿ ಇಳಿದುಕೊಂಡಿದ್ದರು. ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನೂ ಚೆರೂಯಳ ಮಗ ನಾಗಿರುವ ಯೋವಾಬನ ಸಹೋದರನಾದ ಅಬೀಷೈ ಯನ್ನೂ ನೋಡಿ--ನನ್ನ ಸಂಗಡ ದಂಡಿನಲ್ಲಿ ಪ್ರವೇಶಿ ಸಲು ಬರುವವನು ಯಾರೆಂದು ಕೇಳಿದನು; ಅದಕ್ಕೆ ಅಬೀಷೈಯು--ನಾನು ನಿನ್ನ ಸಂಗಡ ಬರುವೆನು ಅಂದನು. ಹಾಗೆಯೇ ದಾವೀದನೂ ಅಬೀಷೈಯೂ ರಾತ್ರಿಯಲ್ಲಿ ಆ ಜನರ ಬಳಿಗೆ ಬಂದರು. ಇಗೋ, ಸೌಲನು ಕಂದಕದೊಳಗೆ ಮಲಗಿ ನಿದ್ರೆಮಾಡು ತ್ತಿದ್ದನು; ಅವನ ಈಟಿಯು ಅವನ ತಲೆದಿಂಬಿನ ಬಳಿ ಯಲ್ಲಿ ನೆಟ್ಟಿತ್ತು. ಆದರೆ ಅವನ ಸುತ್ತಲೂ ಅಬ್ನೇರನೂ ಜನರೂ ಮಲಗಿದ್ದರು. ಆಗ ಅಬೀಷೈಯು ದಾವೀ ದನಿಗೆ--ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಲ್ಲಿ ನೆಲಕ್ಕೆ ಹತ್ತುವಂತೆ ಹೊಡೆಯಲು ಅಪ್ಪಣೆ ಕೊಡಬೇಕು; ಎರಡು ಸಾರಿ ಹೊಡೆಯುವದಿಲ್ಲ ಅಂದನು. ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು. ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು. ನಾನು ನನ್ನ ಕೈಯನ್ನು ಕರ್ತನ ಅಭಿಷಿಕ್ತನ ಮೇಲೆ ಹಾಕದಹಾಗೆ ಕರ್ತನು ನನಗೆ ಆಟಂಕಮಾಡಲಿ. ಆದರೆ ನೀನು ಅವನ ತಲೆದಿಂಬಿನ ಬಳಿಯಲ್ಲಿರುವ ಈಟಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೋ; ನಾವು ಹೋಗೋಣ ಅಂದನು. ದಾವೀದನು ಸೌಲನ ತಲೆ ದಿಂಬಿನ ಬಳಿಯಲ್ಲಿದ್ದ ಈಟಿಯನ್ನೂ ನೀರಿನ ತಂಬಿಗೆ ಯನ್ನೂ ತೆಗೆದುಕೊಂಡ ಮೇಲೆ ಅವರು ಹೊರಟು ಹೋದರು. ಒಬ್ಬರಾದರೂ ನೋಡಿದ್ದಿಲ್ಲ; ಅರಿತಿದ್ದಿಲ್ಲ; ಯಾರೂ ಎಚ್ಚತ್ತಿರಲಿಲ್ಲ. ಯಾಕಂದರೆ ಕರ್ತನಿಂದ ಅಗಾಧ ನಿದ್ರೆಯು ಅವರ ಮೇಲೆ ಇಳಿದ ಕಾರಣ ಅವರೆಲ್ಲರೂ ನಿದ್ರೆ ಮಾಡುತ್ತಿದ್ದರು. ದಾವೀದನು ದಾಟಿ ಆ ಕಡೆಗೆ ಹೋಗಿ ತಮಗೂ ಅವರಿಗೂ ಮಧ್ಯದಲ್ಲಿ ಬಹಳ ಸ್ಥಳ ಇರುವ ಹಾಗೆ ದೂರವಾಗಿರುವ ಒಂದು ಬೆಟ್ಟದ ಕೊನೆಯಲ್ಲಿ ನಿಂತು ಜನರಿಗೂ ನೇರನ ಮಗನಾದ ಅಬ್ನೇರನಿಗೂ ಎದು ರಾಗಿ ಕೂಗಿ ಹೇಳಿದ್ದೇನಂದರೆ-- ಅಬ್ನೇರನೇ, ನೀನು ಪ್ರತ್ಯುತ್ತರ ಕೊಡುವದಿಲ್ಲವೋ ಅಂದನು. ಅದಕ್ಕೆ ಅಬ್ನೇರನು ಪ್ರತ್ಯುತ್ತರವಾಗಿ--ಅರಸನಿಗೆ ಎದುರಾಗಿ ಕೂಗುವ ನೀನು ಯಾರು ಅಂದನು. ಆಗ ದಾವೀ ದನು ಅಬ್ನೇರನಿಗೆ ಹೇಳಿದ್ದೇನಂದರೆ -- ನೀನು ಪರಾಕ್ರಮಶಾಲಿ ಅಲ್ಲವೇ? ಇಸ್ರಾಯೇಲಿನಲ್ಲಿ ನಿನಗೆ ಸಮಾನನಾದವನು ಯಾರು? ಆದರೆ ನೀನು ನಿನ್ನ ಒಡೆಯನಾದ ಅರಸನನ್ನು ಕಾಯದೆ ಹೋದದ್ದೇನು? ಯಾಕಂದರೆ ಜನರಲ್ಲಿ ಒಬ್ಬನು ನಿನ್ನ ಒಡೆಯನಾದ ಅರಸನನ್ನು ಸಂಹರಿಸುವದಕ್ಕೆ ಬಂದಿದ್ದನು. ನೀನು ಮಾಡಿದ ಈ ಕಾರ್ಯ ಒಳ್ಳೇದಲ್ಲ. ಕರ್ತನ ಜೀವ ದಾಣೆ--ಕರ್ತನ ಅಭಿಷಿಕ್ತನಾದ ನಿಮ್ಮ ಒಡೆಯನನ್ನು ಕಾಯದೆ ಹೋದದರಿಂದ ಮರಣಕ್ಕೆ ನೀವು ಪಾತ್ರರು. ಈಗ ಅರಸನ ತಲೆದಿಂಬಿನ ಬಳಿಯಲ್ಲಿದ್ದ ಅವನ ಈಟಿಯೂ ನೀರಿನ ತಂಬಿಗೆಯೂ ಎಲ್ಲಿ ಇವೆಯೋ ನೋಡು ಅಂದನು. ಆಗ ಸೌಲನು ದಾವೀದನ ಶಬ್ದವನ್ನು ತಿಳುಕೊಂಡು--ನನ್ನ ಕುಮಾರನಾದ ದಾವೀ ದನೇ, ಇದು ನಿನ್ನ ಸ್ವರವಲ್ಲವೋ ಅಂದನು. ದಾವೀ ದನು--ಅರಸನಾದ ನನ್ನ ಒಡೆಯನೇ, ನನ್ನ ಸ್ವರವೇ ಹೌದು ಅಂದನು. ನನ್ನ ಒಡೆಯನು ತನ್ನ ಸೇವಕ ನನ್ನು ಹೀಗೆ ಹಿಂದಟ್ಟುವದೇನು? ನಾನೇನು ಮಾಡಿ ದೆನು? ನನ್ನ ಕೈಯಲ್ಲಿ ಏನು ಕೆಟ್ಟತನ ಅದೆ? ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಕರ್ತನು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ ಕಾಣಿಕೆಯನ್ನು ಅಂಗೀಕರಿಸಲಿ; ಆದರೆ ಮನುಷ್ಯರ ಮಕ್ಕಳು ಇದನ್ನು ಮಾಡಿದರೆ ಅವರು ಕರ್ತನ ಮುಂದೆ ಶಪಿಸಲ್ಪಡಲಿ. ಯಾಕಂದರೆ ನೀನು ಹೋಗಿ ಅನ್ಯದೇವರುಗಳನ್ನು ಸೇವಿಸು ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಕರ್ತನ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು. ಆದದರಿಂದ ಕರ್ತನ ಮುಖದ ಮುಂದೆ ನನ್ನ ರಕ್ತವು ನೆಲದ ಮೇಲೆ ಬೀಳದಿರಲಿ. ಯಾಕಂದರೆ ಒಬ್ಬನು ಬೆಟ್ಟಗಳಲ್ಲಿ ಕೌಜುಗವನ್ನು ಬೇಟೆಯಾಡುವಂತೆ ಇಸ್ರಾಯೇಲಿನ ಅರಸನು ಒಂದು ಕೀಟವನ್ನು ಹುಡು ಕಲು ಹೊರಟನು ಎಂಬದೇ. ಆಗ ಸೌಲನುನಾನು ಪಾಪಮಾಡಿದೆನು; ನನ್ನ ಮಗನಾದ ದಾವೀ ದನೇ, ತಿರಿಗಿ ಬಾ; ಯಾಕಂದರೆ ನನ್ನ ಜೀವವು ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡುಮಾಡೆನು; ಇಗೋ, ನಾನು ಹುಚ್ಚು ಕೆಲಸಮಾಡಿದ್ದೇನೆ. ಮಹಾ ಹೆಚ್ಚಾದ ತಪ್ಪು ಮಾಡಿದೆನು ಅಂದನು. ದಾವೀದನು ಪ್ರತ್ಯುತ್ತರ ವಾಗಿ--ಇಗೋ, ಅರಸನ ಈಟಿಯು ಇಲ್ಲಿ ಅದೆ. ಪ್ರಾಯದವರಲ್ಲಿ ಒಬ್ಬನು ಈ ಕಡೆಗೆ ಬಂದು ಅದನ್ನು ತಕ್ಕೊಂಡು ಹೋಗಲಿ. ಆದರೆ ಕರ್ತನು ಪ್ರತಿಯೊ ಬ್ಬನಿಗೆ ಅವನ ನೀತಿಗೂ ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಕರ್ತನು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು. ಆದರೆ ನಾನು ಕರ್ತನ ಅಭಿಷಿಕ್ತನ ಮೇಲೆ ನನ್ನ ಕೈಚಾಚಲು ಮನಸ್ಸಿ ಲ್ಲದೆ ಇದ್ದೆನು. ಇಗೋ, ಈ ದಿನ ನಿನ್ನ ಪ್ರಾಣವು ನನ್ನ ದೃಷ್ಟಿಗೆ ಹೇಗೆ ದೊಡ್ಡದಾಗಿತ್ತೋ ಹಾಗೆಯೇ ನನ್ನ ಪ್ರಾಣವು ಕರ್ತನ ದೃಷ್ಟಿಗೆ ದೊಡ್ಡದಾಗಿರಲಿ. ಆತನು ನನ್ನನ್ನು ಎಲ್ಲಾ ಸಂಕಟದಿಂದ ತಪ್ಪಿಸಿಬಿಡಲಿ ಅಂದನು.ಆಗ ಸೌಲನು ದಾವೀದನಿಗೆ--ನನ್ನ ಮಗನಾದ ದಾವೀದನೇ, ನೀನು ಆಶೀರ್ವದಿಸಲ್ಪ ಡುವಿ; ನೀನು ಮಹತ್ಕಾರ್ಯಗಳನ್ನು ಮಾಡುವಿ, ಗೆದ್ದೇ ಗೆಲ್ಲುವಿ ಅಂದನು. ಹಾಗೆಯೇ ದಾವೀದನು ತನ್ನ ದಾರಿಹಿಡಿದು ಹೋದನು; ಸೌಲನು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು. ಆಗ ಸೌಲನು ದಾವೀದನಿಗೆ--ನನ್ನ ಮಗನಾದ ದಾವೀದನೇ, ನೀನು ಆಶೀರ್ವದಿಸಲ್ಪ ಡುವಿ; ನೀನು ಮಹತ್ಕಾರ್ಯಗಳನ್ನು ಮಾಡುವಿ, ಗೆದ್ದೇ ಗೆಲ್ಲುವಿ ಅಂದನು. ಹಾಗೆಯೇ ದಾವೀದನು ತನ್ನ ದಾರಿಹಿಡಿದು ಹೋದನು; ಸೌಲನು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.