Psalms · chapter 103 · verse 7
Psalm 103:7 in Kannada
ಆತನು ತನ್ನ ಮಾರ್ಗಗಳನ್ನು ಮೋಶೆಗೂ ತನ್ನ ಕ್ರಿಯೆಗಳನ್ನು ಇಸ್ರಾಯೇಲಿನ ಮಕ್ಕಳಿಗೂ ತಿಳಿಯಮಾಡಿದನು.
Aatanu tanna maargagalannu moshegoo tanna kriyegalannu israayelina makkaligoo tiliyamaadidanu.
Psalm 103:7 in English
- King James Version (KJV)
- He made known his ways unto Moses, his acts unto the children of Israel.
- World English Bible (WEB)
- He made known his ways to Moses, his deeds to the children of Israel.
- American Standard Version (ASV)
- He made known his ways unto Moses, His doings unto the children of Israel.
- Bible in Basic English (BBE)
- He gave knowledge of his way to Moses, and made his acts clear to the children of Israel.
- Darby Translation (DBY)
- He made known his ways unto Moses, his acts unto the children of Israel.
- Webster's Bible (WBS)
- He made known his ways to Moses, his acts to the children of Israel.
- Young's Literal Translation (YLT)
- He maketh known His ways to Moses, To the sons of Israel His acts.
Read in context
- 5ನಿನ್ನ ಯೌವನವು ಹದ್ದಿನಂತೆ ಹೊಸದಾಗುವ ಹಾಗೆ ನಿನ್ನ ಬಾಯಿಯನ್ನು ಒಳ್ಳೇದ ರಿಂದ ತೃಪ್ತಿಪಡಿಸುತ್ತಾನೆ.
- 6ಕುಗ್ಗಿಸಲ್ಪಡುವವರೆಲ್ಲರಿಗೆ ಕರ್ತನು ನೀತಿಯನ್ನೂ ನ್ಯಾಯವನ್ನೂ ನಡಿಸುತ್ತಾನೆ.
- 7ಆತನು ತನ್ನ ಮಾರ್ಗಗಳನ್ನು ಮೋಶೆಗೂ ತನ್ನ ಕ್ರಿಯೆಗಳನ್ನು ಇಸ್ರಾಯೇಲಿನ ಮಕ್ಕಳಿಗೂ ತಿಳಿಯಮಾಡಿದನು.
- 8ಕರ್ತನು ಅಂತಃಕರಣವೂ ದಯೆಯೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳವನಾಗಿದ್ದಾನೆ.
- 9ಆತನು ಸದಾಕಾಲಕ್ಕೂ ಗದರಿಸುವದಿಲ್ಲ; ನಿತ್ಯವೂ ಕೋಪಿ ಸುವಾತನಲ್ಲ;
Cross references
- Exodus 33:13 ವಿಮೋಚನಕಾಂಡ 33:13ಈಗ ನಿನ್ನ ದೃಷ್ಟಿಯಲ್ಲಿ ನನಗೆ ಕೃಪೆ ದೊರಕ್ಕಿದ್ದಾದರೆ ನಾನು ನಿನ್ನನ್ನು ತಿಳಿಯುವ ಹಾಗೆ ನಿನ್ನ ಮಾರ್ಗವನ್ನು ನನಗೆ ತೋರಿಸು. ಆಗ ನಿನ್ನ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಿರುವದು. ಈ ಜನಾಂಗವು ನಿನ್ನ ಜನರೆಂದು ತಿಳಿದುಕೋ ಎಂದು ನಾನು ಬೇಡಿಕೊಳ್ಳುತ್ತೇನೆ ಎಂದು ಹೇಳಿದನು.
- Psalm 147:19 ಕೀರ್ತನೆಗಳು 147:19ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
- Psalm 78:11 ಕೀರ್ತನೆಗಳು 78:11ಆತನು ಅವರಿಗೆ ತೋರಿ ಸಿದ ಆತನ ಕೃತ್ಯಗಳನ್ನೂ ಆದ್ಭುತಗಳನ್ನೂ ಮರೆತು ಬಿಟ್ಟರು.
- Nehemiah 9:14 ನೆಹೆಮೀಯ 9:14ನೀನು ಪರಿಶುದ್ಧ ಸಬ್ಬತ್ ದಿವಸವನ್ನು ಅವರಿಗೆ ತಿಳಿಸಿ ನಿನ್ನ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಪ್ರಮಾಣವನ್ನೂ
- Psalm 77:20 ಕೀರ್ತನೆಗಳು 77:20ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.
- Deuteronomy 34:10 ಧರ್ಮೋಪದೇಶಕಾಂಡ 34:10ಆದರೆ ಐಗುಪ್ತದೇಶದಲ್ಲಿ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿ ದಕ್ಕೆ ಕರ್ತನು ಅವನನ್ನು ಕಳುಹಿಸಿದ ಸಮಸ್ತ ಗುರುತು ಗಳ ಮತ್ತು ಅದ್ಭುತಗಳ ವಿಷಯದಲ್ಲಿಯೂ
- Psalm 99:7 ಕೀರ್ತನೆಗಳು 99:7ಆತನು ಮೇಘಸ್ತಂಭದಲ್ಲಿಂದ ಅವರ ಸಂಗಡ ಮಾತನಾಡಿದನು; ಆತನ ಸಾಕ್ಷಿಗಳನ್ನೂ ಆತನು ಅವರಿಗೆ ಕೊಟ್ಟ ನಿಯಮಗಳನ್ನೂ ಅವರು ಕೈಕೊಂಡರು.
- John 5:45–47 ಯೋಹಾನನು 5:45–47ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ. ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ; ಯಾಕಂದರೆ ಅವನು ನನ್ನ ವಿಷಯವಾಗಿ ಬರೆದನು.ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು. ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು.
- Exodus 19:8 ವಿಮೋಚನಕಾಂಡ 19:8ಜನರೆಲ್ಲಾ ಏಕವಾಗಿ ಉತ್ತರ ಕೊಟ್ಟು--ಕರ್ತನು ಹೇಳಿದವುಗಳನ್ನೆಲ್ಲಾ ಮಾಡುತ್ತೇವೆ ಎಂದು ಹೇಳಿದರು. ಆಗ ಮೋಶೆಯು ಜನರ ಮಾತುಗಳನ್ನು ಕರ್ತನಿಗೆ ತಿರಿಗಿ ಹೇಳಿದನು.
- Exodus 24:2–4 ವಿಮೋಚನಕಾಂಡ 24:2–4ಮೋಶೆ ಒಬ್ಬನೇ ಕರ್ತನ ಸವಿಾಪಕ್ಕೆ ಬರಲಿ; ಆದರೆ ಅವರು ಸವಿಾಪಕ್ಕೆ ಬರಬಾರದು. ಇಲ್ಲವೆ ಜನರು ಅವನ ಸಂಗಡ ಬರಬಾರದು ಎಂದು ಹೇಳಿದನು. ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು. ಮೋಶೆಯು ಕರ್ತನ ಮಾತುಗಳನ್ನೆಲ್ಲಾ ಬರೆದು ಬೆಳಿಗ್ಗೆ ಎದ್ದು ಬೆಟ್ಟದ ಕೆಳಗೆ ಯಜ್ಞವೇದಿಯನ್ನು ಕಟ್ಟಿಸಿ ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ಅನುಸಾರವಾಗಿ ಹನ್ನೆರಡು ಸ್ತಂಭಗಳನ್ನು ನಿಲ್ಲಿಸಿದನು.
- Exodus 20:21 ವಿಮೋಚನಕಾಂಡ 20:21ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.
- Acts 7:35–60 ಅಪೊಸ್ತಲರ ಕೃತ್ಯಗಳು 7:35–60ಅವರು ಯಾವ ಮೋಶೆಗೆ--ನಿನ್ನನ್ನು ಅಧಿಕಾರಿ ಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿ ದವರು ಯಾರೆಂದು ಹೇಳಿ ಬೇಡವೆಂದರೋ ಅವ ನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿರುವಂತೆಯೂ ಬಿಡುಗಡೆ ಮಾಡುವವನನ್ನಾಗಿರುವಂತೆಯೂ ಕಳುಹಿಸಿದನು. ಅವನು ಐಗುಪ್ತದೇಶದಲ್ಲಿಯೂ ಕೆಂಪು ಸಮುದ್ರ ದಲ್ಲಿಯೂ ನಾಲ್ವತ್ತು ವರುಷ ಅಡವಿಯಲ್ಲಿಯೂ ಅದ್ಭುತ ಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದ ಮೇಲೆ ಅವರನ್ನು ನಡೆಸಿಕೊಂಡು ಬಂದನು. ನಿಮ್ಮ ದೇವರಾದ ಕರ್ತನು ನನ್ನನ್ನು ಎಬ್ಬಿಸಿದಂತೆ ನಿಮ್ಮ ಸಹೋದರರಲ್ಲಿ ಒಬ್ಬ ಪ್ರವಾದಿಯನ್ನು ನಿಮ ಗಾಗಿ ಎಬ್ಬಿಸುವನು; ನೀವು ಆತನ ಮಾತಿಗೆ ಕಿವಿಗೊಡ ಬೇಕೆಂದು ಇಸ್ರಾಯೇಲ್ ಜನರಿಗೆ ಹೇಳಿದ ಆ ಮೋಶೆಯು ಇವನೇ. ಇವನೇ ಸೀನಾಯಿ ಬೆಟ್ಟದಲ್ಲಿ ತನ್ನೊಡನೆಯೂ ಪಿತೃಗಳೊಡನೆಯೂ ಮಾತನಾಡಿದ ದೂತನೊಂದಿಗೆ ಅಡವಿಯಲ್ಲಿದ್ದ ಸಭೆ ಯಲ್ಲಿದ್ದುಕೊಂಡು ಜೀವಕರವಾದ ದೇವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು. ಆದರೆ ನಮ ಪಿತೃಗಳು ಅವನ ಮಾತುಗಳಿಗೆ ವಿಧೇಯರಾಗದೆ ಅವನನ್ನು ತಳ್ಳಿಬಿಟ್ಟು ತಮ್ಮ ಹೃದಯಗಳಲ್ಲಿ ಹಿಂದಕ್ಕೆ ಐಗುಪ್ತದ ಕಡೆಗೆ ತಿರುಗಿಕೊಂಡು ಅವರು ಆರೋನ ನಿಗೆ--ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ; ಆದದರಿಂದ ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರು ಗಳನ್ನು ನಮಗೆ ಮಾಡಿಕೊಡು ಎಂದು ಹೇಳಿದರು. ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಸ್ವಂತ ಕೈಗಳಿಂದ ಮಾಡಿದ ಕೆಲಸಗಳಲ್ಲಿ ಉಲ್ಲಾಸಪಟ್ಟರು. ಆದರೆ ದೇವರು ಅವರಿಗೆ ವಿಮುಖನಾಗಿ ಆಕಾಶದ ನಕ್ಷತ್ರಗಣ ವನ್ನು ಪೂಜಿಸುವದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವದೇನಂದರೆ-- ಓ ಇಸ್ರಾಯೇಲ್ ಮನೆತನದವರೇ, ನೀವು ಅರಣ್ಯದಲ್ಲಿ ನಾಲ್ವತ್ತು ವರುಷ ಪ್ರಾಣಿಗಳನ್ನು ಕೊಂದು ಬಲಿಗಳನ್ನು ನನಗೆ ಅರ್ಪಿಸುತ್ತಿದ್ದಿರೆ ಹೌದು, ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನು ರೊಂಫಾ ದೇವತೆಯ ನಕ್ಷತ್ರವನ್ನೂ ಹೊತ್ತುಕೊಂಡು ಹೋದಿರಿ. ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಅಟ್ಟಿಬಿಡುವೆನು ಎಂಬದು. ಸಾಕ್ಷೀಗುಡಾರವು ಅಡವಿಯೊಳಗೆ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ಮೋಶೆಯ ಸಂಗಡ ಮಾತನಾಡಿದಾತನು ಅವನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸ ಬೇಕೆಂದು ನೇಮಿಸಿದ್ದನು. ತರುವಾಯ ಬಂದ ನಮ್ಮ ಪಿತೃಗಳು ಸಹ ತಮ್ಮ ಮುಂದೆ ದೇವರು ಹೊರಡಿಸಿದ ಅನ್ಯಜನಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಂಡಾಗ ಯೆಹೋಶುವನ ಕೂಡ ಆ ಗುಡಾರವನ್ನು ತಂದರು. ಅದು ದಾವೀದನ ಕಾಲದ ವರೆಗೂ ಅಲ್ಲೇ ಇತ್ತು. ದಾವೀದನು ದೇವರ ಸನ್ನಿಧಾನದಲ್ಲಿ ದಯೆ ಹೊಂದಿ ಯಾಕೋಬನ ದೇವರಿಗೋಸ್ಕರ ಆಲಯ ವನ್ನು ಕಟ್ಟಬೇಕೆಂದು ಅಪೇಕ್ಷಿಸಿದನು. ಆದರೆ ಸೊಲೊಮೋನನು ಆತನಿಗೋಸ್ಕರ ಮನೆಯನ್ನು ಕಟ್ಟಿಸಿದನು. ಆದರೂ ಮಹೋನ್ನತನು ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವಾತನಲ್ಲ. ಯಾಕಂದರೆ-- ಆಕಾಶವು ನನಗೆ ಸಿಂಹಾಸನ, ಭೂಮಿಯು ನನ್ನ ಪಾದಪೀಠ, ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ಇಲ್ಲವೆ ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವದು? ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಪ್ರವಾದಿಯು ನುಡಿದಿದ್ದಾನೆ. ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. ಪ್ರವಾದಿ ಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿ ದ್ದಾರೆ? ಅವರು ಆ ನೀತಿವಂತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು. ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ. ದೇವದೂತರ ಮೂಲಕ ನೇಮಕವಾದ ನ್ಯಾಯ ಪ್ರಮಾಣವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸಲಿಲ್ಲ ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಅವರು ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಅವನ ಮೇಲೆ ಹಲ್ಲುಕಡಿದರು. ಆದರೆ ಅವನು ಪವಿತ್ರಾತ್ಮಭರಿತನಾಗಿ ಪರಲೋಕ ದೊಳಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು-- ಆಗೋ, ಪರಲೋಕವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರು ವದನ್ನೂ ನಾನು ನೋಡುತ್ತೇನೆ ಎಂದು ಹೇಳಿದನು. ಆದರೆ ಅವರು ಮಹಾಶಬ್ದದಿಂದ ಕೂಗಿ ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಒಮ್ಮನಸ್ಸಿನಿಂದ ಅವನ ಮೇಲೆ ಬಿದ್ದು ಅವನನ್ನು ಊರಹೊರಕ್ಕೆ ನೂಕಿಕೊಂಡು ಹೋಗಿ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಪಾದಗಳ ಬಳಿಯಲ್ಲಿ ಇಟ್ಟರು. ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು--ಕರ್ತನಾದ ಯೇಸುವೇ, ನನ್ನಾತ್ಮವನ್ನು ಸೇರಿ ಸಿಕೋ ಎಂದು ದೇವರನ್ನು ಪ್ರಾರ್ಥಿಸಿ,ಮೊಣ ಕಾಲೂರಿ--ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು. ಮೊಣ ಕಾಲೂರಿ--ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು.