Psalms · chapter 16 · verse 1
Psalm 16:1 in Kannada
ಓ ದೇವರೇ, ನನ್ನನ್ನು ಕಾಪಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ.
O devare, nannannu kaapaadu; ninnalli bharavasavittiddene.
Psalm 16:1 in English
- King James Version (KJV)
- Michtam of David. Preserve me, O God: for in thee do I put my trust.
- World English Bible (WEB)
- A Poem by David. Preserve me, God, for I take refuge in you.
- American Standard Version (ASV)
- Michtam of David. Preserve me, O God; for in thee do I take refuge.
- Bible in Basic English (BBE)
- Michtam. Of David. Keep me safe, O God: for in you I have put my faith.
- Darby Translation (DBY)
- Michtam of David. Preserve me, O God: for I trust in thee.
- Webster's Bible (WBS)
- Michtam of David. Preserve me, O God: for in thee do I put my trust.
- Young's Literal Translation (YLT)
- A Secret Treasure of David. Preserve me, O God, for I did trust in Thee.
Read in context
- 1ಓ ದೇವರೇ, ನನ್ನನ್ನು ಕಾಪಾಡು; ನಿನ್ನಲ್ಲಿ ಭರವಸವಿಟ್ಟಿದ್ದೇನೆ.
- 2ನೀನೇ ನನ್ನ ಕರ್ತನು; ನನ್ನ ಒಳ್ಳೇತನ ನಿನಗೆ ಮಾತ್ರವಲ್ಲದೆ
- 3ಭೂಮಿಯಲ್ಲಿರುವ ಪರಿಶುದ್ಧರಿಗೂ ನನ್ನ ಸಂತೋಷ ವಾಗಿರುವ ಮುಖ್ಯಸ್ಥರಿಗೂ ಸೇರುತ್ತದೆಂದು ಓ ನನ್ನ ಆತ್ಮವೇ, ನೀನು ಕರ್ತನಿಗೆ ಹೇಳಿದ್ದೀ.
Cross references
- Isaiah 26:3–4 ಯೆಶಾಯ 26:3–4ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ. ನೀವು ಕರ್ತನಲ್ಲಿ ಸದಾ ಭರವಸವಿಡಿರಿ; ಕರ್ತನಾದ ಯೆಹೋವನಲ್ಲಿ ನಿತ್ಯವಾದ ಬಲವುಂಟು.
- Psalm 31:23 ಕೀರ್ತನೆಗಳು 31:23ಕರ್ತನ ಎಲ್ಲಾ ಪರಿಶುದ್ಧರೇ, ಆತನನ್ನು ಪ್ರೀತಿ ಮಾಡಿರಿ; ಕರ್ತನು ನಂಬಿಕೆಯುಳ್ಳವರನ್ನು ಕಾಯು ತ್ತಾನೆ; ಅಹಂಕಾರ ಮಾಡುವವನಿಗೆ ಬಹಳವಾಗಿ ಮುಯ್ಯಿಗೆಮುಯ್ಯಿ ತೀರಿಸುತ್ತಾನೆ.ಕರ್ತನಲ್ಲಿ ನಿರೀಕ್ಷಿ ಸುವವರೆಲ್ಲರೇ, ಧೈರ್ಯವಾಗಿರ್ರಿ; ಆತನು ನಿಮ್ಮ ಹೃದಯವನ್ನು ದೃಢಪಡಿಸುವನು.
- Psalm 17:8 ಕೀರ್ತನೆಗಳು 17:8ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು.
- Psalm 56:1 ಕೀರ್ತನೆಗಳು 56:1ಓ ದೇವರೇ, ನನ್ನನ್ನು ಕರುಣಿಸು; ಮನುಷ್ಯನು ನನ್ನನ್ನು ನುಂಗಬೇಕೆಂದಿದ್ದಾನೆ; ದಿನವೆಲ್ಲಾ ಯುದ್ಧಮಾಡುತ್ತಾ ನನ್ನನ್ನು ಬಾಧಿಸುತ್ತಾನೆ.
- 2 Timothy 1:12 2 ತಿಮೊಥೆಯನಿಗೆ 1:12ಇದರ ನಿಮಿತ್ತದಿಂದಲೇ ಈ ಶ್ರಮೆಗಳನ್ನು ಅನುಭವಿಸುತ್ತಾ ಇದ್ದೇನೆ; ಆದರೂ ನಾನು ನಾಚಿಕೆಪಡುವದಿಲ್ಲ; ಯಾಕಂ ದರೆ ನಾನು ನಂಬಿರುವಾತನನ್ನು ಬಲ್ಲೆನು, ನಾನು ಆತನಿಗೆ ಒಪ್ಪಿಸಿದ್ದನ್ನು ಆತನು ಆ ದಿನಕ್ಕಾಗಿ ಕಾಪಾಡು ವದಕ್ಕೆ ಶಕ್ತನಾಗಿದ್ದಾನೆಂದೂ ದೃಢವಾಗಿ ನಂಬಿದ್ದೇನೆ.
- Psalm 116:6 ಕೀರ್ತನೆಗಳು 116:6ಕರ್ತನು ಸಾಧು ಜನರನ್ನು ಕಾಪಾಡುತ್ತಾನೆ; ನಾನು ಕುಗ್ಗಿದವನಾದಾಗ ನನಗೆ ಸಹಾಯಮಾಡಿದನು.
- Psalm 7:1 ಕೀರ್ತನೆಗಳು 7:1ನನ್ನ ದೇವರಾದ ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು;
- Psalm 84:12 ಕೀರ್ತನೆಗಳು 84:12ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
- Psalm 60:1 ಕೀರ್ತನೆಗಳು 60:1ಓ ದೇವರೇ, ಕೋಪಿಸಿಕೊಂಡು ನಮ್ಮನ್ನು ತಳ್ಳಿ ಚದರಿಸಿಬಿಟ್ಟಿದ್ದೀ; ಮತ್ತೆ ನಮ್ಮ ಕಡೆಗೆ ತಿರುಗಿಕೋ.
- Jeremiah 17:7–8 ಯೆರೆಮೀಯ 17:7–8ಯಾವನು ಕರ್ತನಲ್ಲಿ ಭರವಸವಿಟ್ಟಿರುವನೋ ಯಾವನಿಗೆ ಕರ್ತನು ನಿರೀಕ್ಷೆ ಯಾಗಿದ್ದಾನೋ ಆ ಮನುಷ್ಯನು ಧನ್ಯನು. ಅವನು ನೀರಿನ ಬಳಿಯಲ್ಲಿ ನೆಡಲ್ಪಟ್ಟು ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು; ಧಗೆಯು ಬರುವಾಗ ಅದು ಬಾಡಿಹೋಗದೆ ಅದರ ಎಲೆ ಹಸುರಾಗಿರುವದು; ಕ್ಷಾಮದ ವರುಷದಲ್ಲಿ ಅದಕ್ಕೆ ಚಿಂತೆ ಇರುವದಿಲ್ಲ ಇಲ್ಲವೆ ಫಲಫಲಿಸುವದನ್ನು ನಿಲ್ಲಿಸುವದಿಲ್ಲ.
- Proverbs 2:8 ಜ್ಞಾನೋಕ್ತಿಗಳು 2:8ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ.
- Psalm 9:10 ಕೀರ್ತನೆಗಳು 9:10ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.