Psalms · chapter 25 · verse 8
Psalm 25:8 in Kannada
ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.
Kartanu olleyavanoo nyaayavullavanoo aagi ddaane; aadadarinda aatanu paapada maargadalli iruvavarige bodhisuvanu.
Psalm 25:8 in English
- King James Version (KJV)
- Good and upright [is] the LORD: therefore will he teach sinners in the way.
- World English Bible (WEB)
- Good and upright is the LORD, therefore he will instruct sinners in the way.
- American Standard Version (ASV)
- Good and upright is Jehovah: Therefore will he instruct sinners in the way.
- Bible in Basic English (BBE)
- Good and upright is the Lord: so he will be the teacher of sinners in the way.
- Darby Translation (DBY)
- Good and upright is Jehovah; therefore will he instruct sinners in the way:
- Webster's Bible (WBS)
- Good and upright [is] the LORD: therefore will he teach sinners in the way.
- Young's Literal Translation (YLT)
- Good and upright [is] Jehovah, Therefore He directeth sinners in the way.
Read in context
- 6ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.
- 7ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
- 8ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.
- 9ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.
- 10ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.
Cross references
- James 1:5 ಯಾಕೋಬನು 1:5ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆ ಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲ ರಿಗೂ ಉದಾರ ಮನಸ್ಸಿನಿಂದ ಕೊಡುವಾತನಾಗಿದ್ದಾನೆ.
- Ephesians 1:17–18 ಎಫೆಸದವರಿಗೆ 1:17–18ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಪೂರ್ಣನಾದ ತಂದೆಯೂ ಆಗಿರುವಾತನು ತನ್ನ ವಿಷಯವಾದ ತಿಳುವಳಿಕೆಗನುಸಾರವಾಗಿ ಜ್ಞಾನ ಪ್ರಕಟನೆಗಳ ಆತ್ಮ ವನ್ನು ನಿಮಗೆ ಅನುಗ್ರಹಿಸುವಂತೆಯೂ ಆತನು ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ ಆತನ ಕರೆಯು ವಿಕೆಯ ನಿರೀಕ್ಷೆಯು ಎಂಥದೆಂಬದನ್ನೂ ಪರಿಶುದ್ಧ ರಲ್ಲಿರುವ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನೂ
- Psalm 32:8 ಕೀರ್ತನೆಗಳು 32:8ನಾನು -- ನಿನಗೆ ಬುದ್ದಿ ಹೇಳುವೆನು; ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಕಣ್ಣಿನಿಂದ ನಿನ್ನನ್ನು ನಡಿಸುವೆನು.
- John 6:44–45 ಯೋಹಾನನು 6:44–45ನನ್ನನ್ನು ಕಳುಹಿಸಿದ ತಂದೆಯು ಎಳೆಯದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಅವರೆಲ್ಲರು ದೇವರಿಂದ ಬೋಧಿಸಲ್ಪಡುವರೆಂದು ಪ್ರವಾದನೆಗಳಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬ ಮನುಷ್ಯನು ನನ್ನ ಬಳಿಗೆ ಬರುತ್ತಾನೆ.
- Psalm 92:15 ಕೀರ್ತನೆಗಳು 92:15ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ.
- Matthew 9:13 ಮತ್ತಾಯನು 9:13ನೀವು ಹೋಗಿ--ನಾನು ಯಜ್ಞವನ್ನಲ್ಲ; ಕರುಣೆಯನ್ನೇ ಅಪೇಕ್ಷಿಸುತ್ತೇನೆ ಎಂಬದರ ಅರ್ಥವನ್ನು ಕಲಿಯಿರಿ; ಯಾಕಂದರೆ ನಾನು ನೀತಿ ವಂತರನ್ನಲ್ಲ, ಪಾಪಿಗಳನ್ನು ಮಾನಸಾಂತರಪಡು ವದಕ್ಕಾಗಿ ಕರೆಯಲು ಬಂದೆನು ಎಂದು ಹೇಳಿದನು.
- Isaiah 26:7 ಯೆಶಾಯ 26:7ನೀತಿವಂತನ ಮಾರ್ಗವು ಯಥಾರ್ಥವಾಗಿದೆ. ನೀನು ಅತ್ಯಧಿಕ ವಾದ ಯಥಾರ್ಥವಂತನು; ನೀತಿವಂತನ ದಾರಿಯನ್ನು ತೂಗಿ ನೋಡುತ್ತೀ;
- Matthew 11:29–30 ಮತ್ತಾಯನು 11:29–30ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು. ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.
- Proverbs 9:4–6 ಜ್ಞಾನೋಕ್ತಿಗಳು 9:4–6ಮೂರ್ಖನು ಯಾವನೋ ಅವನು ಇಲ್ಲಿಗೆ ತಿರುಗಲಿ ಎಂದು ಕೂಗುತ್ತಾಳೆ. ತಿಳುವಳಿಕೆ ಇಲ್ಲದೆ ಇರುವವನಿಗೆ ಆಕೆಯು-- ಬಾ, ನನ್ನ ರೊಟ್ಟಿಯನ್ನು ತಿಂದು ನಾನು ಬೆರಸಿದ ದ್ರಾಕ್ಷಾ ರಸವನ್ನು ಕುಡಿ ಎಂದೂ ಮೂಢರನ್ನು ಬಿಟ್ಟು ಬಾಳು ಮತ್ತು ವಿವೇಕದ ಮಾರ್ಗದಲ್ಲಿ ಹೋಗು ಎಂದೂ ಕೂಗುತ್ತಾಳೆ.
- Proverbs 1:20–23 ಜ್ಞಾನೋಕ್ತಿಗಳು 1:20–23ಹೊರಗೆ ಜ್ಞಾನವೆಂಬಾಕೆಯು ಕೂಗುತ್ತಾಳೆ. ಬೀದಿಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ. ಸಮೂಹದ ಮುಖ್ಯ ಸ್ಥಳದಲ್ಲಿಯೂ ದ್ವಾರಗಳ ಬಳಿಯಲ್ಲಿಯೂ ಅವಳು ಕೂಗುತ್ತಾಳೆ, ಪಟ್ಟಣದಲ್ಲಿ ಅವಳು ತನ್ನ ಮಾತುಗಳನ್ನು ಉಚ್ಚರಿಸುತ್ತಾ-- ಜ್ಞಾನ ಹೀನರೇ, ನೀವು ಎಷ್ಟು ಕಾಲ ಅಜ್ಞಾನವನ್ನು ಪ್ರೀತಿಸುವಿರಿ? ತಿರಸ್ಕರಿಸುವವರು ತಮ್ಮ ತಿರಸ್ಕರಿಸು ವಿಕೆಯಲ್ಲಿ ಎಷ್ಟುಕಾಲ ಆನಂದಿಸುವರು? ಜ್ಞಾನ ಹೀನರು ಎಷ್ಟು ಕಾಲ ತಿಳುವಳಿಕೆಯನ್ನು ಹಗೆ ಮಾಡುವರು? ನನ್ನ ಗದರಿಕೆಗೆ ನೀವು ತಿರುಗಿ ಕೊಳ್ಳಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ ನಿಮಗೆ ನನ್ನ ಮಾತುಗಳು ತಿಳಿಯುವಂತೆ ಮಾಡುವೆನು.
- Proverbs 2:1–6 ಜ್ಞಾನೋಕ್ತಿಗಳು 2:1–6ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ. ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
- Micah 4:2 ಮೀಕ 4:2ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು.