Psalms · chapter 29 · verse 3
Psalm 29:3 in Kannada
ಕರ್ತನ ಧ್ವನಿಯು ನೀರುಗಳ ಮೇಲೆ ಅದೆ. ಮಹಿ ಮೆಯ ದೇವರು ಗುಡುಗುತ್ತಾನೆ. ಕರ್ತನು ಬಹಳ ನೀರುಗಳ ಮೇಲೆ ಇದ್ದಾನೆ.
Kartana dhvaniyu neerugala mele ade. Mahi meya devaru guduguttaane. Kartanu bahala neerugala mele iddaane.
Psalm 29:3 in English
- King James Version (KJV)
- The voice of the LORD [is] upon the waters: the God of glory thundereth: the LORD [is] upon many waters.
- World English Bible (WEB)
- The LORD’s voice is on the waters. The God of glory thunders, even the LORD on many waters.
- American Standard Version (ASV)
- The voice of Jehovah is upon the waters: The God of glory thundereth, Even Jehovah upon many waters.
- Bible in Basic English (BBE)
- The voice of the Lord is on the waters: the God of glory is thundering, the Lord is on the great waters.
- Darby Translation (DBY)
- The voice of Jehovah is upon the waters: the God of glory thundereth, — Jehovah upon great waters.
- Webster's Bible (WBS)
- The voice of the LORD [is] upon the waters: the God of glory thundereth: the LORD [is] upon many waters.
- Young's Literal Translation (YLT)
- The voice of Jehovah [is] on the waters, The God of glory hath thundered, Jehovah [is] on many waters.
Read in context
- 1ಓ ಪರಾಕ್ರಮಶಾಲಿಗಳೇ, ಕರ್ತನಿಗೆ ಘನವನ್ನೂ ಬಲವನ್ನೂ ಸಲ್ಲಿಸಿರಿ;
- 2ಕರ್ತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕರ್ತನಿಗೆ ಪರಿಶುದ್ಧತ್ವದ ಸೌಂದರ್ಯದಲ್ಲಿ ಆರಾಧಿಸಿರಿ.
- 3ಕರ್ತನ ಧ್ವನಿಯು ನೀರುಗಳ ಮೇಲೆ ಅದೆ. ಮಹಿ ಮೆಯ ದೇವರು ಗುಡುಗುತ್ತಾನೆ. ಕರ್ತನು ಬಹಳ ನೀರುಗಳ ಮೇಲೆ ಇದ್ದಾನೆ.
- 4ಕರ್ತನ ಧನ್ವಿಯು ಶಕ್ತಿ ಯುಳ್ಳದ್ದು; ಪ್ರಭೆಯುಳ್ಳದ್ದು.
- 5ಕರ್ತನ ಸ್ವರವು ದೇವ ದಾರುಗಳನ್ನು ಮುರಿಯುತ್ತದೆ; ಹೌದು, ಕರ್ತನು ಲೆಬನೋನಿನ ದೇವದಾರುಗಳನ್ನು ಮುರಿಯುತ್ತಾನೆ.
Cross references
- Job 37:2–5 ಯೋಬನು 37:2–5ಆತನ ಬಾಯಿಂದ ಹೊರಡುವ ಧ್ವನಿಯ ಶಬ್ದದ ಸ್ವರವನ್ನು ಲಕ್ಷ್ಯಕೊಟ್ಟು ಕೇಳಿರಿ. ಎಲ್ಲಾ ಆಕಾಶದ ಕೆಳಗೆ ಆತನು ಅದನ್ನು ನಡಿಸುತ್ತಾನೆ. ತನ್ನ ಮಿಂಚನ್ನು ಭೂಮಿಯ ಅಂಚುಗಳ ವರೆಗೆ ನಡಿಸುತ್ತಾನೆ. ಅದರ ತರುವಾಯ ಶಬ್ದವು ಗರ್ಜಿಸುತ್ತದೆ; ತನ್ನ ಮಹತ್ತಿನ ಶಬ್ದದಿಂದ ಗುಡುಗುತ್ತಾನೆ. ಆತನ ಶಬ್ದ ಕೇಳಲ್ಪಡುವಾಗ ಅವು ಗಳನ್ನು ಹಿಂದೆಗೆಯುವದಿಲ್ಲ. ದೇವರು ಆಶ್ಚರ್ಯವಾಗಿ ತನ್ನ ಶಬ್ದದಿಂದ ಗುಡುಗುತ್ತಾನೆ; ನಾವು ಗ್ರಹಿಸದ ಮಹತ್ತುಗಳನ್ನು ಆತನು ಮಾಡುತ್ತಾನೆ.
- Psalm 93:3–4 ಕೀರ್ತನೆಗಳು 93:3–4ಕರ್ತನೇ, ಪ್ರವಾಹಗಳು ಎತ್ತಲ್ಪಟ್ಟಿವೆ; ಪ್ರವಾಹಗಳು ತಮ್ಮ ಶಬ್ದವನ್ನು ಎತ್ತಿವೆ; ಪ್ರವಾಹ ಗಳು ತಮ್ಮ ತೆರೆಗಳನ್ನು ಎತ್ತುತ್ತವೆ. ಬಹಳ ನೀರುಗಳ ಶಬ್ದಕ್ಕಿಂತಲೂ ಹೌದು, ಸಮುದ್ರದ ಬಲವಾದ ಅಲೆ ಗಳಿಗಿಂತಲೂ ಉನ್ನತದಲ್ಲಿ ಕರ್ತನು ಬಲಿಷ್ಠನಾಗಿ ದ್ದಾನೆ.ನಿನ್ನ ಸಾಕ್ಷಿಗಳು ಬಹಳ ನಿಶ್ಚಯವಾದವುಗಳು; ಓ ಕರ್ತನೇ, ಸದಾ ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧತ್ವವೇ.
- Exodus 9:33 ವಿಮೋಚನಕಾಂಡ 9:33ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದು ತನ್ನ ಕೈಗಳನ್ನು ಕರ್ತನ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.
- Psalm 77:16–19 ಕೀರ್ತನೆಗಳು 77:16–19ನೀರು ಗಳು ನಿನ್ನನ್ನು ನೋಡಿದವು; ಓ ದೇವರೇ, ನೀರುಗಳು ನಿನ್ನನ್ನು ನೋಡಿ ಭ್ರಮೆಗೊಂಡವು; ಅಗಾಧಗಳು ನಡುಗಿದವು. ಮೋಡಗಳು ನೀರನ್ನು ಸುರಿಸಿದವು; ಆಕಾಶಗಳು ಶಬ್ದ ಮಾಡಿದವು; ನಿನ್ನ ಬಾಣಗಳು ಸಹ ಹಾರಿ ಬಂದವು. ನಿನ್ನ ಗುಡುಗಿನ ಶಬ್ದವು ಆಕಾಶ ಮಂಡಲದಲ್ಲಿ ಇತ್ತು; ಮಿಂಚುಗಳು ಜಗತ್ತನ್ನು ಬೆಳಗ ಮಾಡಿದವು; ಭೂಮಿಯು ನಡುಗಿ ಕದಲಿತು. ನಿನ್ನ ಮಾರ್ಗವು ಸಮುದ್ರದಲ್ಲಿ ಅದೆ; ನಿನ್ನ ಹಾದಿಯು ಬಹಳ ನೀರುಗಳಲ್ಲಿ ಅವೆ; ನಿನ್ನ ಹೆಜ್ಜೆಗಳು ತಿಳಿಯ ಲ್ಪಡಲಿಲ್ಲ.ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.
- Psalm 18:13–15 ಕೀರ್ತನೆಗಳು 18:13–15ಕರ್ತನು ಆಕಾಶಗಳಲ್ಲಿ ಗುಡುಗಿದನು; ಮಹೋನ್ನತನು ಕಲ್ಮಳೆಯಿಂದಲೂ ಉರಿಗೆಂಡಗಳಿಂದಲೂ ತನ್ನ ಶಬ್ದವನ್ನು ಕೊಟ್ಟನು ಹೌದು, ತನ್ನ ಬಾಣಗಳನ್ನು ಕಳುಹಿಸಿ ಅವರನ್ನು ಚದುರಿಸಿದನು; ಮಿಂಚುಗಳನ್ನೆಸೆದು ಅವರನ್ನು ಗಲಿಬಿಲಿ ಮಾಡಿದನು. ಓ ಕರ್ತನೇ, ನಿನ್ನ ಗದರಿಕೆಯಿಂದಲೂ ನಿನ್ನ ಮೂಗಿನ ಶ್ವಾಸದ ಗಾಳಿಯಿಂದಲೂ ನೀರಿನ ಕಾಲುವೆಗಳ ನೆಲೆಯು ಕಾಣಬಂದು ಭೂಮಿಯ ಅಸ್ತಿವಾರಗಳು ಬೈಲಾದವು.
- Exodus 19:16 ವಿಮೋಚನಕಾಂಡ 19:16ಮೂರನೆಯ ದಿನದಲ್ಲಿ ಉದಯವಾದಾಗ ಬೆಟ್ಟದ ಮೇಲೆ ಗುಡುಗುಗಳೂ ಮಿಂಚುಗಳೂ ಮಂದವಾದ ಮೇಘವೂ ಉಂಟಾಗಿ ಬಹು ಬಲವಾದ ತುತೂರಿಯ ಶಬ್ದವಾಯಿತು. ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿ ದರು.
- Exodus 9:28 ವಿಮೋಚನಕಾಂಡ 9:28ಆದದರಿಂದ (ಈಗ ಇದು ಸಾಕು.) ಇನ್ನು ಬಲವಾದ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋಗುವಂತೆ ಕರ್ತನನ್ನು ಬೇಡಿ ಕೊಳ್ಳಿರಿ, ನೀವು ಇಲ್ಲಿ ಇನ್ನು ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು ಅಂದನು.
- Matthew 8:26–27 ಮತ್ತಾಯನು 8:26–27ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು. ಆದರೆ ಅವರು ಆಶ್ಚರ್ಯದಿಂದ--ಈತನು ಎಂಥಾ ಮನುಷ್ಯ ನಾಗಿರಬಹುದು! ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ಅಂದರು.
- Revelation 8:5 ಪ್ರಕಟನೆ 8:5ತರುವಾಯ ಆ ದೇವದೂತನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಯಜ್ಞವೇದಿಯ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಗೆ ಬಿಸಾಡಿದನು. ಆಗ ವಾಣಿಗಳೂ ಗುಡುಗುಗಳೂ ಮಿಂಚುಗಳೂ ಭೂ ಕಂಪವೂ ಉಂಟಾದವು.
- Revelation 19:6 ಪ್ರಕಟನೆ 19:6ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಬಹಳ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು; ಅದು--ಹಲ್ಲೆಲೂಯಾ, ಸರ್ವಶಕ್ತನಾಗಿರುವ ದೇವರಾದ ಕರ್ತನು ಆಳುತ್ತಾನೆ.
- Revelation 16:18 ಪ್ರಕಟನೆ 16:18ಆಗ ವಾಣಿಗಳೂ ಗುಡುಗುಗಳೂ ಮಿಂಚುಗಳೂ ಉಂಟಾದವು; ಇದಲ್ಲದೆ ಮಹಾ ಭೂಕಂಪವುಂಟಾಯಿತು; ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ಬಲವಾದ ಮತ್ತು ದೊಡ್ಡ ದಾದ ಭೂಕಂಪವಾಗಿರಲಿಲ್ಲ.
- Revelation 11:19 ಪ್ರಕಟನೆ 11:19ಆಗ ಪರಲೋಕದಲ್ಲಿ ದೇವಾಲಯವು ತೆರೆಯ ಲ್ಪಟ್ಟಿತು; ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು; ಇದಲ್ಲದೆ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆನೆಕಲ್ಲಿನ ಮಳೆಯೂ ಉಂಟಾದವು.