Psalms · chapter 35 · verse 16
Psalm 35:16 in Kannada
ಔತಣಗಳಲ್ಲಿ ಗೇಲಿಮಾಡುವ ಕಪಟಿಗಳ ಸಂಗಡ ನನ್ನ ಮೇಲೆ ತಮ್ಮ ಹಲ್ಲುಗಳನ್ನು ಕಡಿಯುತ್ತಾರೆ.
Autanagalalli gelimaaduva kapatigala sangada nanna mele tamma hallugalannu kadiyuttaare.
Psalm 35:16 in English
- King James Version (KJV)
- With hypocritical mockers in feasts, they gnashed upon me with their teeth.
- World English Bible (WEB)
- Like the profane mockers in feasts, they gnashed their teeth at me.
- American Standard Version (ASV)
- Like the profane mockers in feasts, They gnashed upon me with their teeth.
- Bible in Basic English (BBE)
- Like men of deceit they put me to shame; the voice of their wrath was loud against me.
- Darby Translation (DBY)
- With profane jesters for bread, they have gnashed their teeth against me.
- Webster's Bible (WBS)
- With hypocritical mockers in feasts, they gnashed upon me with their teeth.
- Young's Literal Translation (YLT)
- With profane ones, mockers in feasts, Gnashing against me their teeth.
Read in context
- 14ಅವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಆದ ಹಾಗೆ ನಡೆದುಕೊಂಡೆನು; ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವ ನಾಗಿ ಬೊಗ್ಗಿಕೊಂಡೆನು.
- 15ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
- 16ಔತಣಗಳಲ್ಲಿ ಗೇಲಿಮಾಡುವ ಕಪಟಿಗಳ ಸಂಗಡ ನನ್ನ ಮೇಲೆ ತಮ್ಮ ಹಲ್ಲುಗಳನ್ನು ಕಡಿಯುತ್ತಾರೆ.
- 17ಕರ್ತನೇ, ಎಷ್ಟರ ವರೆಗೆ ನೀನು ನೋಡುವಿ? ಅವರ ನಾಶನಗಳಿಂದಲೂ ಸಿಂಹಗಳಿಂದಲೂ ನನ್ನ ಪ್ರಿಯವಾದ ಪ್ರಾಣವನ್ನು ತಪ್ಪಿಸು.
- 18ಮಹಾಸಭೆ ಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರಲ್ಲಿ ನಿನ್ನನ್ನು ಸ್ತುತಿಸುವೆನು.
Cross references
- Lamentations 2:16 ಪ್ರಲಾಪಗಳು 2:16ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿ ತೆರೆದಿದ್ದಾರೆ; ಅವರು ಸಿಳ್ಳು ಹಾಕಿ ಹಲ್ಲು ಕಡಿಯುತ್ತಾ--ನಾವು ಅವಳನ್ನು ನುಂಗಿ ಬಿಟ್ಟಿದ್ದೇವೆ; ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ; ಅದನ್ನು ನಾವು ಕಂಡಿದ್ದೇವೆ; ನೋಡಿ ದ್ದೇವೆ ಎಂದು ಅವರು ಹೇಳುತ್ತಾರೆ.
- Psalm 37:12 ಕೀರ್ತನೆಗಳು 37:12ದುಷ್ಟನು ನೀತಿವಂತನಿಗಾಗಿ ಹೊಂಚುಹಾಕು ವನು, ಅವನ ಮೇಲೆ ತನ್ನ ಹಲ್ಲುಗಳನ್ನು ಕಡಿಯುತ್ತಾನೆ.
- Job 16:9 ಯೋಬನು 16:9ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ.
- John 18:28 ಯೋಹಾನನು 18:28ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ನ್ಯಾಯಾಲಯಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಮೈಲಿಗೆಯಾಗಿ ಪಸ್ಕದ ಊಟ ಮಾಡುವದಕ್ಕೆ ಅಡ್ಡಿಯಾದೀತೆಂದು ಅವರು ನ್ಯಾಯಾಲಯದ ಒಳಗೆ ಹೋಗಲಿಲ್ಲ.
- Acts 7:54 ಅಪೊಸ್ತಲರ ಕೃತ್ಯಗಳು 7:54ಈ ಮಾತುಗಳನ್ನು ಕೇಳಿ ಅವರು ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಅವನ ಮೇಲೆ ಹಲ್ಲುಕಡಿದರು.
- 1 Samuel 20:24–42 1 ಸಮುವೇಲನು 20:24–42ಹಾಗೆಯೇ ದಾವೀದನು ಹೊಲದಲ್ಲಿ ಬಚ್ಚಿಟ್ಟು ಕೊಂಡಿದ್ದನು. ಅಮಾವಾಸ್ಯೆ ಆದಾಗ ಅರಸನು ಭೋಜನವನ್ನು ಮಾಡಲು ಕುಳಿತನು. ಅರಸನು ಎಂದಿನಂತೆ ಗೋಡೆಯ ಬಳಿಯಲ್ಲಿ ಇರುವ ತನ್ನ ಆಸನದ ಮೇಲೆ ಕುಳಿತಾಗ ಯೋನಾತಾನನು ಎದ್ದನು; ಆದರೆ ಅಬ್ನೇರನು ಸೌಲನ ಬಳಿಯಲ್ಲಿ ಕುಳಿತನು. ದಾವೀದನು ಇರುವ ಸ್ಥಳವು ಬರಿದಾಗಿತ್ತು. ಆದಾಗ್ಯೂ ಸೌಲನು ಆ ದಿವಸದಲ್ಲಿ ಅವನನ್ನು ಕುರಿತು ಏನೂ ಹೇಳದೆ ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಅಶುಚಿಯಾಗಿದ್ದಾನೆ, ನಿಶ್ಚಯವಾಗಿ ಅಶುಚಿಯಾಗಿದ್ದಾನೆ ಎಂದು ಅಂದುಕೊಂಡನು. ಅಮಾವಾ ಸ್ಯೆಯ ಮಾರನೆಯ ದಿವಸದಲ್ಲಿ ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿ ದಾವೀದನು ಕೂಡ್ರುವ ಸ್ಥಳವು ಹಾಗೆಯೇ ಬರಿದಾಗಿತ್ತು; ಆದದರಿಂದ ಸೌಲನುಇಷಯನ ಮಗನು ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಯಾಕೆ ಬರಲಿಲ್ಲ ಎಂದು ತನ್ನ ಕುಮಾರನಾದ ಯೋನಾ ತಾನನನ್ನು ಕೇಳಿದನು. ಯೋನಾತಾನನು ಸೌಲನಿಗೆ ಪ್ರತ್ಯುತ್ತರವಾಗಿ--ಬೇತ್ಲೆಹೇಮಿನ ವರೆಗೂ ಹೋಗಿ ಬರಲು ದಾವೀದನು ನನ್ನನ್ನು ಬಹಳವಾಗಿ ಬೇಡಿ ಕೊಂಡನು. ನನಗೆ ಅವನು--ದಯಮಾಡಿ ನನಗೆ ಅಪ್ಪಣೆಕೊಡು; ಯಾಕಂದರೆ ಊರೊಳಗೆ ನಮ್ಮ ಕುಟುಂಬದವರು ಯಜ್ಞ ಮಾಡುತ್ತಾರೆ; ನನ್ನ ಸಹೋ ದರನು ನನ್ನನ್ನು ಬರಲು ಹೇಳಿ ಕಳುಹಿಸಿದನು. ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ನನ್ನ ಸಹೋದರರನ್ನು ನೋಡುವದಕ್ಕೆ ಹೋಗುತ್ತೇನೆ ಅಂದನು. ಆದದರಿಂದ ಅವನು ಅರಸನ ಮೇಜಿಗೆ ಬರಲಿಲ್ಲ ಅಂದನು. ಆಗ ಸೌಲನು ಯೋನಾತಾನನ ಮೇಲೆ ಕೋಪಗೊಂಡು ಅವನಿಗೆ--ವಕ್ರವಾಗಿ ಎದುರು ಬೀಳುವ ಸ್ತ್ರೀಯ ಮಗನೇ, ನಿನಗೆ ನಾಚಿಕೆಯಾಗುವ ಹಾಗೆಯೂ ನಿನ್ನ ತಾಯಿಯ ಬೆತ್ತಲೆತನಕ್ಕೆ ನಾಚಿಕೆ ಯಾಗುವ ಹಾಗೆಯೂ ಇಷಯನ ಮಗನನ್ನು ನೀನು ಆದುಕೊಂಡಿದ್ದೀ ಎಂದು ನಾನರಿಯೆನೋ? ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು. ಅದಕ್ಕೆ ಯೋನಾತಾನನು ತನ್ನ ತಂದೆಯಾದ ಸೌಲನಿಗೆ ಪ್ರತ್ಯು ತ್ತರವಾಗಿ--ಅವನನ್ನು ಯಾಕೆ ಕೊಲೆ ಮಾಡಬೇಕು? ಅವನು ಏನು ಮಾಡಿದನು ಅಂದನು. ಆಗ ಸೌಲನು ಅವನನ್ನು ಹೊಡೆಯಲು ಈಟಿಯನ್ನು ಅವನ ಮೇಲೆ ಎಸೆದನು. ಆದದರಿಂದ ತನ್ನ ತಂದೆಯು ದಾವೀದನನ್ನು ಕೊಂದುಹಾಕಲು ದೃಢಮಾಡಿದ್ದಾನೆಂದು ಯೋನಾತಾ ನನು ತಿಳುಕೊಂಡನು. ಕೋಪದ ಉರಿಯಿಂದ ಆಗ ಯೋನಾತಾನನು ಮೇಜಿನಿಂದ ಎದ್ದುಹೋಗಿ ತಿಂಗಳಿನ ಎರಡನೇ ದಿವಸದಲ್ಲಿ ಊಟಮಾಡಲಿಲ್ಲ. ತನ್ನ ತಂದೆಯು ದಾವೀದನಿಗೆ ಅವಮಾನ ಮಾಡಿದ್ದ ರಿಂದ ಅವನಿಗೋಸ್ಕರ ವ್ಯಥೆಪಟ್ಟನು. ಉದಯದಲ್ಲಿ ಯೋನಾತಾನನು ದಾವೀದನಿಗೆ ನೇಮಿಸಿದ ವೇಳೆಯ ಪ್ರಕಾರವೇ ಒಬ್ಬ ಚಿಕ್ಕ ಹುಡುಗ ನನ್ನು ಕರಕೊಂಡು ಹೊಲಕ್ಕೆ ಹೋಗಿ ಹುಡುಗನಿಗೆ--ನೀನು ಓಡಿಹೋಗಿ ನಾನು ಹಾಕುವ ಬಾಣ ಗಳನ್ನು ಹುಡುಕಿಕೊಂಡು ಬಾ ಎಂದು ಹೇಳಿ, ಆ ಹುಡುಗನು ಓಡುವಾಗ ಅವನಿಗೆ ಆಚೆ ಹೋಗುವ ಹಾಗೆ ಬಾಣವನ್ನು ಎಸೆದನು. ಯೋನಾತಾನನು ಹಾಕಿದ ಬಾಣಬಿದ್ದ ಸ್ಥಳದ ವರೆಗೆ ಹುಡುಗನು ಹೋದಾಗ--ಬಾಣವು ನಿನಗೆ ಆಚೆ ಇಲ್ಲವೋ ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿದನು. ನೀನು ಆಲಸ್ಯವಿಲ್ಲದೆ ತ್ವರೆಯಾಗಿ ಹೋಗು ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು ತನ್ನ ಯಜಮಾನನ ಬಳಿಗೆ ಬಂದನು. ಆ ಹುಡುಗನು ಏನೂ ತಿಳಿಯದೆ ಇದ್ದನು. ಯೋನಾತಾನನೂ ದಾವೀದನೂ ಮಾತ್ರ ಆ ಸಂಗತಿ ಯನ್ನು ತಿಳುಕೊಂಡಿದ್ದರು. ಆಗ ಯೋನಾತಾನನು ಆಯುಧಗಳನ್ನು ತನ್ನ ಹುಡುಗನಿಗೆ ಕೊಟ್ಟು ಅವನಿಗೆ--ಅವುಗಳನ್ನು ಪಟ್ಟಣ ದೊಳಕ್ಕೆ ತೆಗೆದುಕೊಂಡು ಹೋಗು ಅಂದನು. ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದುಬಂದು ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊ ಬ್ಬರು ಮುದ್ದಿಟ್ಟುಕೊಂಡು ಒಬ್ಬರನ್ನೊಬ್ಬರು ನೋಡಿ ಅತ್ತರು; ದಾವೀದನು ಬಹಳವಾಗಿ ಅತ್ತನು;ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದನು. ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದನು.
- Isaiah 1:14–15 ಯೆಶಾಯ 1:14–15ನಿಮ್ಮ ಹುಣ್ಣಿಮೆಗಳನ್ನೂ ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ಹಗೆಮಾಡುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ. ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
- 1 Corinthians 5:8 1 ಕೊರಿಂಥದವರಿಗೆ 5:8ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ.