Psalms · chapter 35 · verse 17
Psalm 35:17 in Kannada
ಕರ್ತನೇ, ಎಷ್ಟರ ವರೆಗೆ ನೀನು ನೋಡುವಿ? ಅವರ ನಾಶನಗಳಿಂದಲೂ ಸಿಂಹಗಳಿಂದಲೂ ನನ್ನ ಪ್ರಿಯವಾದ ಪ್ರಾಣವನ್ನು ತಪ್ಪಿಸು.
Kartane, eshtara varege neenu noduvi? Avara naashanagalindaloo sinhagalindaloo nanna priyavaada praanavannu tappisu.
Psalm 35:17 in English
- King James Version (KJV)
- Lord, how long wilt thou look on? rescue my soul from their destructions, my darling from the lions.
- World English Bible (WEB)
- Lord, how long will you look on? Rescue my soul from their destruction, my precious life from the lions.
- American Standard Version (ASV)
- Lord, how long wilt thou look on? Rescue my soul from their destructions, My darling from the lions.
- Bible in Basic English (BBE)
- Lord, how long will you be looking on? take my soul from their destruction, my life from the lions.
- Darby Translation (DBY)
- Lord, how long wilt thou look on? Rescue my soul from their destructions, my only one from the young lions.
- Webster's Bible (WBS)
- LORD, how long wilt thou look on? rescue my soul from their destructions, my darling from the lions.
- Young's Literal Translation (YLT)
- Lord, how long dost thou behold? Keep back my soul from their desolations, From young lions my only one.
Read in context
- 15ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
- 16ಔತಣಗಳಲ್ಲಿ ಗೇಲಿಮಾಡುವ ಕಪಟಿಗಳ ಸಂಗಡ ನನ್ನ ಮೇಲೆ ತಮ್ಮ ಹಲ್ಲುಗಳನ್ನು ಕಡಿಯುತ್ತಾರೆ.
- 17ಕರ್ತನೇ, ಎಷ್ಟರ ವರೆಗೆ ನೀನು ನೋಡುವಿ? ಅವರ ನಾಶನಗಳಿಂದಲೂ ಸಿಂಹಗಳಿಂದಲೂ ನನ್ನ ಪ್ರಿಯವಾದ ಪ್ರಾಣವನ್ನು ತಪ್ಪಿಸು.
- 18ಮಹಾಸಭೆ ಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರಲ್ಲಿ ನಿನ್ನನ್ನು ಸ್ತುತಿಸುವೆನು.
- 19ನನ್ನ ಶತ್ರುಗಳು ನನ್ನ ವಿಷ ಯದಲ್ಲಿ ಸುಳ್ಳಾಗಿ ಸಂತೋಷಪಡದೆ ಇರಲಿ; ಇಲ್ಲವೆ ನನ್ನನ್ನು ಕಾರಣವಿಲ್ಲದೆ ಹಗೆಮಾಡುವವರು ಕಣ್ಣು ಸನ್ನೆಮಾಡದೆ ಇರಲಿ.
Cross references
- Habakkuk 1:13 ಹಬಕ್ಕೂಕ 1:13ನೀನು ಕೆಟ್ಟದ್ದನ್ನು ನೋಡಕೂಡದ ಹಾಗೆ ಶುದ್ಧ ಕಣ್ಣುಗಳುಳ್ಳವನು; ನೀನು ಅನ್ಯಾಯವನ್ನು ದೃಷ್ಟಿಸಲಾರಿ; ವಂಚಿಸುವವರನ್ನು ಯಾಕೆ ದೃಷ್ಟಿಸುತ್ತೀ? ದುಷ್ಟನು ತನಗಿಂತ ನೀತಿವಂತ ನನ್ನು ನುಂಗಿಬಿಡುವ ವೇಳೆಯಲ್ಲಿ ಯಾಕೆ ಸುಮ್ಮನಿ ರುತ್ತೀ?
- Psalm 22:20–21 ಕೀರ್ತನೆಗಳು 22:20–21ನನ್ನ ಪ್ರಾಣವನ್ನು ಕತ್ತಿಯಿಂದಲೂ ನನಗೆ ಪ್ರಿಯವಾದದ್ದನ್ನು ನಾಯಿಯ ಬಲದಿಂದಲೂ ಬಿಡಿಸು. ನನ್ನನ್ನು ಸಿಂಹದ ಬಾಯಿಂದ ರಕ್ಷಿಸು; ನನ್ನನ್ನು ಕಾಡುಕೋಣಗಳ ಕೊಂಬುಗಳಿಂದ ತಪ್ಪಿಸಿ ಉತ್ತರ ಕೊಟ್ಟೆಯಲ್ಲಾ.
- Psalm 57:4 ಕೀರ್ತನೆಗಳು 57:4ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.
- Psalm 74:9–10 ಕೀರ್ತನೆಗಳು 74:9–10ನಮ್ಮ ಗುರುತುಗಳನ್ನು ನೋಡದೆ ಇದ್ದೇವೆ; ಇನ್ನು ಮೇಲೆ ಯಾವ ಪ್ರವಾದಿಯೂ ಇರುವದಿಲ್ಲ ಇಲ್ಲವೆ ಇದು ಎಷ್ಟರವರೆಗೆ ಎಂದು ತಿಳಿದವನು ನಮ್ಮಲ್ಲಿ ಯಾರೂ ಇಲ್ಲ. ಓ ದೇವರೇ, ವೈರಿಯು ನಿಂದಿಸುವದು ಎಷ್ಟರ ವರೆಗೆ? ಶತ್ರುವು ನಿನ್ನ ಹೆಸರನ್ನು ಎಂದೆಂದಿಗೂ ದೂಷಿ ಸುವನೋ?
- Psalm 94:3–4 ಕೀರ್ತನೆಗಳು 94:3–4ಕರ್ತನೇ, ದುಷ್ಟರು ಎಷ್ಟರ ವರೆಗೆ ದುಷ್ಟರು ಎಷ್ಟರ ವರೆಗೆ ಜಯಿಸುವರು? ಎಷ್ಟುಕಾಲ ಕಠಿಣ ವಾದವುಗಳನ್ನು ನುಡಿದು ಮಾತಾಡುತ್ತಾರೆ? ದುಷ್ಟತನ ಮಾಡುವವರೆಲ್ಲರು ಹೆಚ್ಚಿಸಿಕೊಳ್ಳುತ್ತಾರೆ;
- Psalm 89:46 ಕೀರ್ತನೆಗಳು 89:46ಕರ್ತನೇ, ಎಷ್ಟರ ವರೆಗೆ? ಸದಾಕಾಲಕ್ಕೆ ನೀನು ಮರೆಯಾಗಿರುವಿ? ನಿನ್ನ ಸಿಟ್ಟು ಬೆಂಕಿಯ ಹಾಗೆ ಉರಿಯುವದೋ?
- Psalm 10:14 ಕೀರ್ತನೆಗಳು 10:14ನೀನು ಅದನ್ನು ನೋಡಿದ್ದೀ; ನಿನ್ನ ಕೈಯಿಂದ ಪ್ರತಿಫಲಕೊಡು ವದಕ್ಕೆ ಅವನ ಕುಯುಕ್ತಿಯನ್ನೂ ಹಗೆತನವನ್ನೂ ದೃಷ್ಟಿ ಸುತ್ತೀ. ಗತಿಯಿಲ್ಲದವನು ನಿನಗೆ ತನ್ನನ್ನು ಒಪ್ಪಿಸುತ್ತಾನೆ; ದಿಕ್ಕಿಲ್ಲದವನಿಗೆ ಸಹಾಯಕನು ನೀನೇ.
- Psalm 6:3 ಕೀರ್ತನೆಗಳು 6:3ನನ್ನ ಪ್ರಾಣವು ಸಹ ಬಹಳವಾಗಿ ತಲ್ಲಣಿಸುತ್ತದೆ; ಆದರೆ ಓ ಕರ್ತನೇ, ಇದು ಎಲ್ಲಿಯ ವರೆಗೆ?
- Psalm 142:6–7 ಕೀರ್ತನೆಗಳು 142:6–7ನನ್ನ ಕೂಗನ್ನು ಆಲೈಸು; ನಾನು ಬಹಳ ಕುಂದಿ ಹೋಗಿದ್ದೇನೆ. ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸು; ಅವರು ನನಗಿಂತ ಬಲವುಳ್ಳವರಾಗಿದ್ದಾರೆ.ನಿನ್ನ ಹೆಸರನ್ನು ಕೊಂಡಾಡುವ ಹಾಗೆ ನನ್ನ ಪ್ರಾಣ ವನ್ನು ಸೆರೆಯಿಂದ ಹೊರಗೆ ಬರಮಾಡು; ನೀತಿವಂತರು ನನ್ನನ್ನು ಮುತ್ತಿಕೊಳ್ಳುವರು; ನನಗೆ ನೀನು ಉಪಕಾರ ಮಾಡುವಿ. ನಿನ್ನ ಹೆಸರನ್ನು ಕೊಂಡಾಡುವ ಹಾಗೆ ನನ್ನ ಪ್ರಾಣ ವನ್ನು ಸೆರೆಯಿಂದ ಹೊರಗೆ ಬರಮಾಡು; ನೀತಿವಂತರು ನನ್ನನ್ನು ಮುತ್ತಿಕೊಳ್ಳುವರು; ನನಗೆ ನೀನು ಉಪಕಾರ ಮಾಡುವಿ.
- Psalm 69:14–15 ಕೀರ್ತನೆಗಳು 69:14–15ನಾನು ಮುಳುಗದಂತೆ ನನ್ನನ್ನು ಕೆಸರಿನೊಳಗಿಂದ ಬಿಡಿಸು; ಹಗೆಮಾಡುವವರಿಂದ ನನ್ನನ್ನು ತಪ್ಪಿಸು, ನೀರಿನ ಅಗಾಧಗಳೊಳಗಿಂದಲೂ ನನಗೆ ಬಿಡುಗಡೆ ಯಾಗಲಿ ನೀರಿನ ಪ್ರವಾಹವು ನನ್ನ ಮೇಲೆ ಹಾದು ಹೋಗದೇ ಇರಲಿ; ಅಗಾಧವು ನನ್ನನ್ನು ನುಂಗದೆ ಇರಲಿ; ಕುಣಿಯು ನನಗಾಗಿ ತನ್ನ ಬಾಯನ್ನು ಮುಟ್ಟ ದಿರಲಿ.
- Psalm 13:1–2 ಕೀರ್ತನೆಗಳು 13:1–2ಓ ಕರ್ತನೇ, ಎಷ್ಟರ ವರೆಗೆ ನನ್ನನ್ನು ಮರೆಯುವಿ? ಎಂದೆಂದಿಗೂ ಮರೆಯು ವಿಯೋ? ಎಷ್ಟರ ವರೆಗೆ ನಿನ್ನ ಮುಖವನ್ನು ನನ್ನಿಂದ ಮರೆಮಾಡುವಿ? ಎಷ್ಟರ ವರೆಗೆ ನನ್ನ ಪ್ರಾಣದಲ್ಲಿ ಆಲೋಚನೆಗಳನ್ನೂ ಪ್ರತಿದಿನ ನನ್ನ ಹೃದಯದಲ್ಲಿ ದುಃಖವನ್ನೂ ಇಟ್ಟುಕೊಳ್ಳಬೇಕು? ಎಷ್ಟರ ವರೆಗೆ ನನ್ನ ಶತ್ರುವು ನನ್ನ ಮೇಲೆ ಹೆಚ್ಚಿಸಿಕೊಳ್ಳುವನು?