Psalms · chapter 55 · verse 18
Psalm 55:18 in Kannada
ನನಗೆ ವಿರೋಧ ವಾಗಿದ್ದ ಕಾಳಗದಿಂದ ಆತನು ನನ್ನ ಪ್ರಾಣವನ್ನು ಸಮಾಧಾನದಲ್ಲಿ ವಿಮೋಚಿಸಿದ್ದಾನೆ; ಹೇಗಂದರೆ ಅನೇಕರು ನನ್ನ ಸಂಗಡ ಇದ್ದರು.
Nanage virodha vaagidda kaalagadinda aatanu nanna praanavannu samaadhaanadalli vimochisiddaane; hegandare anekaru nanna sangada iddaru.
Psalm 55:18 in English
- King James Version (KJV)
- He hath delivered my soul in peace from the battle [that was] against me: for there were many with me.
- World English Bible (WEB)
- He has redeemed my soul in peace from the battle that was against me, although there are many who oppose me.
- American Standard Version (ASV)
- He hath redeemed my soul in peace from the battle that was against me; For they were many [that strove] with me.
- Bible in Basic English (BBE)
- He has taken my soul away from the attack which was made against me, and given it peace; for great numbers were against me.
- Darby Translation (DBY)
- He hath redeemed my soul in peace from the battle against me: for there were many about me.
- Webster's Bible (WBS)
- He hath delivered my soul in peace from the battle [that was] against me: for there were many with me.
- Young's Literal Translation (YLT)
- He hath ransomed in peace my soul From him who is near to me, For with the multitude they were with me.
Read in context
- 16ನಾನಾದರೋ ದೇವರನ್ನು ಕರೆಯುವೆನು; ಕರ್ತ ನು ನನ್ನನ್ನು ರಕ್ಷಿಸುವನು.
- 17ಸಂಜೆಯಲ್ಲಿ ಮುಂಜಾನೆ ಯಲ್ಲಿ ಮಧ್ಯಾಹ್ನದಲ್ಲಿ ಪ್ರಾರ್ಥಿಸಿ ಕೂಗುವೆನು;ಆತನು ನನ್ನ ಸ್ವರವನ್ನು ಕೇಳುವನು.
- 18ನನಗೆ ವಿರೋಧ ವಾಗಿದ್ದ ಕಾಳಗದಿಂದ ಆತನು ನನ್ನ ಪ್ರಾಣವನ್ನು ಸಮಾಧಾನದಲ್ಲಿ ವಿಮೋಚಿಸಿದ್ದಾನೆ; ಹೇಗಂದರೆ ಅನೇಕರು ನನ್ನ ಸಂಗಡ ಇದ್ದರು.
- 19ಅನಾದಿಯಿಂದ ಇರುವ ದೇವರು ಲಕ್ಷ್ಯವಿಟ್ಟು ಅವರನ್ನು ಕುಗ್ಗಿಸುವನು. ಸೆಲಾ. ಅವರಲ್ಲಿ ಮಾರ್ಪಾಡುವಿಕೆಗಳು ಇಲ್ಲ; ಆದಕಾರಣ ದೇವರಿಗೆ ಅವರು ಭಯಪಡುವದಿಲ್ಲ.
- 20ಅವನು ತನ್ನ ಸಂಗಡ ಸಮಾಧಾನವುಳ್ಳವರಿಗೆ ವಿರೋಧವಾಗಿ ತನ್ನ ಕೈಗಳನ್ನು ಹಾಕಿದ್ದಾನೆ; ತನ್ನ ಒಡಂಬಡಿಕೆಯನ್ನು ಮುರಿದಿದ್ದಾನೆ.
Cross references
- Psalm 3:6–7 ಕೀರ್ತನೆಗಳು 3:6–7ನನಗೆ ವಿರೋಧವಾಗಿ ಸುತ್ತಲೂ ಮುತ್ತಿದ ಹತ್ತು ಸಾವಿರ ಜನರಿಗೆ ಭಯಪಡೆನು. ಓ ಕರ್ತನೇ, ಏಳು; ಓ ನನ್ನ ದೇವರೇ, ನನ್ನನ್ನು ರಕ್ಷಿಸು. ನೀನು ನನ್ನ ಶತ್ರುಗಳೆಲ್ಲರ ದವಡೆಯ ಮೇಲೆ ಹೊಡೆದು ಭಕ್ತಿಹೀನರ ಹಲ್ಲುಗಳನ್ನು ಮುರಿದಿದ್ದೀ.ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು. ಸೆಲಾ.
- Psalm 57:3 ಕೀರ್ತನೆಗಳು 57:3ಆತನು ಪರಲೋಕದಿಂದ ಕಳುಹಿಸಿ ನುಂಗಲಿರುವ ವನ ನಿಂದೆಯಿಂದ ನನ್ನನ್ನು ರಕ್ಷಿಸುವನು. ಸೆಲಾ. ದೇವರು ಕೃಪೆಯನ್ನೂ ತನ್ನ ಸತ್ಯವನ್ನೂ ಕಳುಹಿಸುವನು.
- Matthew 26:53 ಮತ್ತಾಯನು 26:53ನಾನು ಈಗ ನನ್ನ ತಂದೆಗೆ ಪ್ರಾರ್ಥಿಸಲಾರನೆಂದೂ ಆತನು ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚಾದ ದೂತರನ್ನು ನನಗೆ ಕೊಡ ಲಾರನೆಂದೂ ನೀನು ನೆನಸುತ್ತಿಯೋ?
- 1 John 4:4 1 ಯೋಹಾನನು 4:4ಚಿಕ್ಕಮಕ್ಕಳೇ, ನೀವು ದೇವರಿಗೆ ಸಂಬಂಧಪಟ್ಟವರಾ ಗಿದ್ದೀರಿ. ಅವರನ್ನು ಜಯಿಸಿದ್ದೀರಿ. ನಿಮ್ಮಲ್ಲಿರುವಾತನು ಲೋಕದಲ್ಲಿ ಇರುವವನಿಗಿಂತ ದೊಡ್ಡವನಾಗಿದ್ದಾನೆ.
- 2 Samuel 22:1 2 ಸಮುವೇಲನು 22:1ಕರ್ತನು ದಾವೀದನನ್ನು ಅವನ ಎಲ್ಲಾ ಶತ್ರುಗಳ ಕೈಯೊಳಗಿಂದಲೂ ಸೌಲನ ಕೈಯೊಳಗಿಂದಲೂ ಬಿಡಿಸಿದ ದಿವಸದಲ್ಲಿ ಅವನು ಕರ್ತನನ್ನು ಕುರಿತು ಈ ಹಾಡಿನ ಮಾತುಗಳನ್ನು ಹೇಳಿದನು. ಏನಂದರೆ--
- Psalm 27:1–3 ಕೀರ್ತನೆಗಳು 27:1–3ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು? ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು. ನನಗೆ ವಿರೋಧವಾಗಿ ದಂಡು ಇಳಿದರೂ ನನ್ನ ಹೃದಯವು ಭಯಪಡದು; ಯುದ್ಧವು ನನ್ನ ಮೇಲೆ ಎದ್ದರೂ ಇದರಲ್ಲಿಯೂ ನಾನು ಭರವಸವಾಗಿರುವೆನು.
- 2 Chronicles 32:7–8 2 ಪೂರ್ವಕಾಲವೃತ್ತಾಂತ 32:7–8ಬಲಗೊಳ್ಳಿರಿ; ಧೈರ್ಯ ವಾಗಿರ್ರಿ; ಅಶ್ಶೂರಿನ ಅರಸನ ನಿಮಿತ್ತವೂ ಅವನ ಸಂಗಡ ಕೂಡಿರುವ ಮಹಾಗುಂಪಿನ ನಿಮಿತ್ತವೂ ಭಯ ಪಡಬೇಡಿರಿ; ಹೆದರಬೇಡಿರಿ. ಯಾಕಂದರೆ ಅವನ ಸಂಗಡ ಇರುವವರಿಗಿಂತ ನಮ್ಮ ಸಂಗಡ ಅನೇಕರು ಇದ್ದಾರೆ. ಅವನ ಸಂಗಡ ಮಾಂಸದ ತೋಳು; ಆದರೆ ನಮ್ಮ ಸಂಗಡ ನಮಗೆ ಸಹಾಯ ಕೊಡುವದಕ್ಕೂ ನಮ್ಮ ಯುದ್ಧಗಳನ್ನು ನಡಿಸುವದಕ್ಕೂ ನಮ್ಮ ದೇವರಾದ ಕರ್ತನು ತಾನೇ ಇದ್ದಾನೆ ಎಂದು ಹೇಳಿದನು. ಆದ ದರಿಂದ ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳಲ್ಲಿ ಆತುಕೊಂಡರು.
- 2 Samuel 18:28 2 ಸಮುವೇಲನು 18:28ಆಗ ಅಹೀಮಾಚನು ಕೂಗಿ ಅರಸನಿಗೆಎಲ್ಲವೂ ಕ್ಷೇಮ ಎಂದು ಹೇಳಿ ಅರಸನ ಮುಂದೆಅರಸನಾದ ನನ್ನ ಒಡೆಯನಿಗೆ ವಿರೋಧವಾಗಿ ತಮ್ಮ ಕೈಗಳನ್ನೆತ್ತಿದ ಜನರನ್ನು ಒಪ್ಪಿಸಿಕೊಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ ಅಂದನು.
- Acts 2:33–36 ಅಪೊಸ್ತಲರ ಕೃತ್ಯಗಳು 2:33–36ದೇವರ ಬಲಗೈಯಿಂದ ಆತನು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ಪವಿತ್ರಾತ್ಮನ ವಾಗ್ದಾನವನ್ನು ಹೊಂದಿ ನೀವು ಈಗ ನೋಡಿ ಕೇಳುವದನ್ನು ಆತನು ಸುರಿಸಿದ್ದಾನೆ. ಯಾಕಂದರೆ ದಾವೀದನು ಆಕಾಶಗಳಿಗೆ ಏರಿಹೋಗಲಿಲ್ಲ; ಆದರೆ ಕರ್ತನು ನನ್ನ ಕರ್ತನಿಗೆ-- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ. ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು.
- Psalm 118:10–12 ಕೀರ್ತನೆಗಳು 118:10–12ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು. ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು. ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
- 2 Kings 6:16 2 ಅರಸುಗಳು 6:16ಅದಕ್ಕವನು--ಭಯಪಡಬೇಡ; ಅವರ ಸಂಗಡ ಇರುವವರಿಗಿಂತ ನಮ್ಮ ಸಂಗಡ ಇರುವ ವರು ಹೆಚ್ಚಾಗಿದ್ದಾರೆ ಅಂದನು.
- Psalm 56:2 ಕೀರ್ತನೆಗಳು 56:2ಓ ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ.