Psalms · chapter 59 · verse 15
Psalm 59:15 in Kannada
ಅವರು ಊಟಕ್ಕಾಗಿ ಅಲೆದಾಡಲಿ; ತೃಪ್ತಿ ಯಾಗದೆ ಗುಣಗುಟ್ಟಲಿ.
Avaru ootakkaagi aledaadali; trupti yaagade gunaguttali.
Psalm 59:15 in English
- King James Version (KJV)
- Let them wander up and down for meat, and grudge if they be not satisfied.
- World English Bible (WEB)
- They shall wander up and down for food, and wait all night if they aren’t satisfied.
- American Standard Version (ASV)
- They shall wander up and down for food, And tarry all night if they be not satisfied.
- Bible in Basic English (BBE)
- Let them go wandering up and down in search of food, and be there all night if they have not enough.
- Darby Translation (DBY)
- They shall wander about for meat, and stay all night if they be not satisfied.
- Webster's Bible (WBS)
- Let them wander up and down for food, and grudge if they are not satisfied.
- Young's Literal Translation (YLT)
- They — they wander for food, If they are not satisfied — then they murmur.
Read in context
- 13ಕೋಪದಿಂದ ಅವ ರನ್ನು ದಹಿಸಿಬಿಡು, ಅವರು ಇಲ್ಲದಂತೆ ಸಂಹರಿಸು; ಆಗ ದೇವರು ಯಾಕೋಬನಲ್ಲಿ ಭೂಮಿಯ ಕೊನೆ ಗಳವರೆಗೆ ಆಳುವಾತನಾಗಿದ್ದಾನೆಂದು ತಿಳುಕೊಳ್ಳು ವರು. ಸೆಲಾ.
- 14ಸಂಜೆಗೆ ಅವರು ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತು ವರು.
- 15ಅವರು ಊಟಕ್ಕಾಗಿ ಅಲೆದಾಡಲಿ; ತೃಪ್ತಿ ಯಾಗದೆ ಗುಣಗುಟ್ಟಲಿ.
- 16ಆದರೆ ನಾನು ನಿನ್ನ ಬಲದ ವಿಷಯವಾಗಿ ಹಾಡುವೆನು; ಹೌದು, ಹೊತ್ತಾರೆ ನಿನ್ನ ಕೃಪೆಗಾಗಿ ಉತ್ಸಾಹಪಡುವೆನು; ನೀನು ನನಗೆ ದುರ್ಗ ವಾಗಿಯೂ ನನ್ನ ಇಕ್ಕಟ್ಟಿನ ದಿವಸದಲ್ಲಿ ಆಶ್ರಯ ವಾಗಿಯೂ ಇದ್ದೀ.ಓ ನನ್ನ ಬಲವೇ, ನಿನ್ನನ್ನು ಕೀರ್ತಿಸುವೆನು; ದೇವರು ನನ್ನ ದುರ್ಗವೂ ಕರುಣೆ ಯುಳ್ಳ ನನ್ನ ದೇವರೂ ಆಗಿದ್ದಾನೆ.
- 17ಓ ನನ್ನ ಬಲವೇ, ನಿನ್ನನ್ನು ಕೀರ್ತಿಸುವೆನು; ದೇವರು ನನ್ನ ದುರ್ಗವೂ ಕರುಣೆ ಯುಳ್ಳ ನನ್ನ ದೇವರೂ ಆಗಿದ್ದಾನೆ.
Cross references
- Job 15:23 ಯೋಬನು 15:23ಅವನು ರೊಟ್ಟಿಗೊಸ್ಕರ ಅದು ಎಲ್ಲಿ ಎಂದು ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ.
- Psalm 109:10 ಕೀರ್ತನೆಗಳು 109:10ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಿ ತಮ್ಮ ಹಾಳು ಸ್ಥಳಗಳೊಳಗಿಂದ ರೊಟ್ಟಿಯನ್ನು ಹುಡುಕಲಿ.
- Job 30:1–7 ಯೋಬನು 30:1–7ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು ನನ್ನನ್ನು ನೋಡಿ ಪರಿಹಾಸ್ಯಮಾಡುತ್ತಾರೆ; ಅವರ ತಂದೆಗಳನ್ನು ನನ್ನ ಕುರಿಮಂದೆಯ ನಾಯಿಗಳ ಸಂಗಡ ಸೇರಿಸುವದಕ್ಕೂ ಅಯೋಗ್ಯರೆಂದೆನು ಹೌದು, ಅವರ ಕೈಗಳ ಶಕ್ತಿಯ ಲಾಭ ನನಗೆ ಯಾಕೆ? ಅವರಲ್ಲಿ ಮುದಿಪ್ರಾಯವು ನಾಶವಾಯಿತು. ಕೊರತೆ ಯಿಂದಲೂ ಬರದಿಂದಲೂ ಒಂಟಿಗರಾಗಿ ಪೂರ್ವ ದಲ್ಲಿ ಹಾಳೂ ಬೈಲೂ ಆದ ಅರಣ್ಯಕ್ಕೆ ಓಡುತ್ತಾರೆ; ಪೊದೆಯ ಹತ್ತಿರ ಉಪ್ಪಿನಸೊಪ್ಪು ಕೀಳುವವರಿಗೆ ಜಾಲಿಯ ಬೇರುಗಳೇ ಅವರ ರೊಟ್ಟಿ. ಜನರಿಂದ ಅವರನ್ನು ಹೊರಗೆ ಹಾಕುತ್ತಾರೆ; (ಕಳ್ಳರ ಹಿಂಡಿನಂತೆ ಅವರ ಹಿಂದೆ ಕೂಗುತ್ತಾರೆ). ಭಯಂಕರವಾದ ತಗ್ಗು ಗಳ ಸಂದುಗಳಲ್ಲಿಯೂ ಭೂಮಿಯ ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸವಾಗಿರಬೇಕು. ಪೊದೆಗಳ ನಡುವೆ ಕೂಗುತ್ತಾರೆ; ತುರಿಚಿಗಳ ಕೆಳಗೆ ಕೂಡುತ್ತಾರೆ.
- Lamentations 5:9 ಪ್ರಲಾಪಗಳು 5:9ಅಡವಿ ಕತ್ತಿಯ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
- Isaiah 56:11 ಯೆಶಾಯ 56:11ಹೌದು, ಎಂದಿಗೂ ಸಾಕೆನ್ನದ ಹೊಟ್ಟೇಬಾಕ ನಾಯಿಗಳು, ಅವರು ಗ್ರಹಿಕೆಯಿಲ್ಲದ ಕುರುಬರು; ಅವರೆಲ್ಲರು ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ ಪ್ರತಿಯೊಬ್ಬನು ತನಗೆ ಲಾಭ ಸಿಕ್ಕುವ ಕಡೆಗೂ ತಿರುಗಿ ಕೊಳ್ಳುವನು.ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು.
- Lamentations 4:9–10 ಪ್ರಲಾಪಗಳು 4:9–10ಕತ್ತಿಯಿಂದ ಹತರಾದವರು ಹಸಿವೆ ಯಿಂದ ಹತರಾದವರಿಗಿಂತ ಲೇಸು, ಇವರು ಭೂಫಲ ಗಳಿಲ್ಲದೆ ಕ್ಷಾಮದಿಂದ ತಿವಿಯಲ್ಪಟ್ಟು ಕ್ಷೀಣಿಸಿ ಹೋಗುತ್ತಾರೆ. ಕನಿಕರ ತುಂಬಿದ ಹೆಂಗಸರ ಕೈಗಳು ಅವರ ಸ್ವಂತ ಮಕ್ಕಳನ್ನೇ ಬೇಯಿಸಿದವು; ಇವರು ನನ್ನ ಜನರ ಮಗಳ ನಾಶದಲ್ಲಿ ಅವರಿಗೆ ಆಹಾರ ವಾದರು.
- Isaiah 8:21 ಯೆಶಾಯ 8:21ಅವರು ಘೋರ ಕಷ್ಟಕ್ಕೊಳಗಾಗಿ ಹಸಿದು ದೇಶದಲ್ಲಿ ಅಲೆಯು ವರು; ಅವರು ಹಸಿದಾಗ ರೇಗಿಕೊಂಡು ತಮ್ಮ ರಾಜ ನನ್ನೂ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.ಅವರು ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವದು; ಅವರು ಕಾರ್ಗತ್ತಲೆಗೆ ತಳ್ಳಲ್ಪ ಡುವರು.
- Micah 3:5 ಮೀಕ 3:5ತನ್ನ ಜನರು ತಪ್ಪುವಂತೆ ಮಾಡುವ ಪ್ರವಾದಿಗಳ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಅವರಿಗೆ ತಿನ್ನುವದಕ್ಕೆ ಕೊಡುವಂತವರಿಗೆ--ನಿಮಗೆ ಸಮಾಧಾನವಾಗಲಿ ಎಂದು ಹೇಳುತ್ತಾರೆ; ಆದರೆ ತಮ್ಮ ಬಾಯಿಗೆ ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು.
- Deuteronomy 28:48 ಧರ್ಮೋಪದೇಶಕಾಂಡ 28:48ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು.
- 2 Kings 6:25–29 2 ಅರಸುಗಳು 6:25–29ಆಗ ಸಮಾರ್ಯದಲ್ಲಿ ದೊಡ್ಡ ಬರ ಉಂಟಾಯಿತು. ಇಗೋ, ಒಂದು ಕತ್ತೆಯ ತಲೆಯು ಎಂಭತ್ತು ರೂಪಾಯಿಗಳಿಗೂ ಒಂದು ಪಾರಿವಾಳದ ಮಲವು ಐದು ರೂಪಾಯಿಗಳಿಗೂ ಮಾರಲ್ಪಡುವ ವರೆಗೂ ಅದನ್ನು ಮುತ್ತಿಗೆ ಹಾಕಿದನು. ಇಸ್ರಾ ಯೇಲಿನ ಅರಸನು ಗೋಡೆಯ ಮೇಲೆ ಹಾದು ಹೋಗುತ್ತಿರುವಾಗ ಒಬ್ಬ ಸ್ತ್ರೀಯು ಅವನನ್ನು ಬೇಡುವ ವಳಾಗಿ--ನನ್ನ ಯಜಮಾನನೇ, ಅರಸನೇ, ಸಹಾಯ ಮಾಡು ಅಂದಳು. ಅದಕ್ಕವನು--ಕರ್ತನು ನಿನ್ನನ್ನು ಸಂರಕ್ಷಿಸದೆ ಹೋದರೆ ನಾನು ಎಲ್ಲಿಂದ ನಿನ್ನನ್ನು ರಕ್ಷಿ ಸಲಿ? ಕಣದಿಂದಲೋ ಇಲ್ಲವೆ ದ್ರಾಕ್ಷೇ ಅಲೆಯಿಂದ ಲೋ ಅಂದನು. ಅರಸನು ಅವಳಿಗೆ--ನಿನ್ನ ದುಃಖ ವೇನು ಅಂದನು. ಅದಕ್ಕವಳು--ಈ ಸ್ತ್ರೀಯು ನನಗೆ ಹೇಳಿದ್ದೇನಂದರೆ--ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವ ಹಾಗೆ ಅವನನ್ನು ಕೊಡು; ನಾಳೆ ನನ್ನ ಮಗನನ್ನು ತಿನ್ನೋಣ ಅಂದಳು. ಹಾಗೆಯೇ ನಾನು ನನ್ನ ಮಗನನ್ನು ಬೇಯಿಸಿ ತಿಂದೆವು. ಮಾರನೇ ದಿವಸದಲ್ಲಿ ನಾನು ಅವಳಿಗೆ--ನಾವು ನಿನ್ನ ಮಗನನ್ನು ತಿನ್ನುವ ಹಾಗೆ ಅವನನ್ನು ಕೊಡು ಅಂದೆನು. ಆದರೆ ಅವಳು ತನ್ನ ಮಗನನ್ನು ಬಚ್ಚಿಟ್ಟಿದ್ದಾಳೆ ಅಂದಳು.
- Matthew 24:7–8 ಮತ್ತಾಯನು 24:7–8ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಅಲ್ಲಲ್ಲಿ ಬರಗಳು, ಘೋರವ್ಯಾಧಿಗಳು ಮತ್ತು ಭೂಕಂಪಗಳು ಆಗುವವು. ಇವೆಲ್ಲವುಗಳು ಸಂಕಟಗಳ ಆರಂಭವು.
- Deuteronomy 28:53–58 ಧರ್ಮೋಪದೇಶಕಾಂಡ 28:53–58ಆಗ ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ನಿನ್ನ ಗರ್ಭದ ಫಲವನ್ನೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಕುಮಾರ ಕುಮಾರ್ತೆಯರ ಮಾಂಸವನ್ನೂ ತಿನ್ನುವಿ. ನಿನ್ನಲ್ಲಿ ಮೃದುವಾದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಯಾವನೋ ಅವನ ಕಣ್ಣು ತನ್ನ ಸಹೋದರನ ಕಡೆಗೂ ತನ್ನ ಮಗ್ಗುಲಲ್ಲಿರುವ ತನ್ನ ಹೆಂಡತಿಯ ಕಡೆಗೂ ಅವನು ಉಳಿಸಿಕೊಳ್ಳುವ ಮಕ್ಕಳ ಕಡೆಗೂ ಕಠಿಣವಾಗುವದು. ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ತನಗೆ ಸಾಕಾಗುವದಿಲ್ಲ ಅಂದುಕೊಂಡು ಅವನು ತಿನ್ನುವ ತನ್ನ ಮಕ್ಕಳ ಮಾಂಸದಲ್ಲಿ ಅವರೊಳಗೆ ಒಬ್ಬನಿಗಾದರೂ ಏನೂ ಕೊಡುವದಿಲ್ಲ. ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ ತನ್ನ ಕಾಲುಗಳ ನಡುವೆಯಿಂದ ಬರುವ ಶಿಶುವಿನ ಕಡೆಗೂ ತಾನು ಹೆತ್ತಮಕ್ಕಳ ಕಡೆಗೂ ಕಠಿಣ ಕಣ್ಣುಳ್ಳವಳಾಗಿರುವಳು; ಯಾಕಂದರೆ ಎಲ್ಲಾದರ ಕೊರತೆಯಲ್ಲಿಯೂ ಮುತ್ತಿಗೆಯಲ್ಲಿಯೂ ನಿನ್ನ ಶತ್ರು ನಿನಗೆ ನಿನ್ನ ಬಾಗಲುಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ ಅವರನ್ನು ಗುಪ್ತವಾಗಿ ತಿಂದು ಬಿಡುವಳು. ನಿನ್ನ ದೇವರಾದ ಕರ್ತನೆಂಬ ಈ ಘನವುಳ್ಳ ಭಯಂಕರವಾದ ಹೆಸರಿಗೆ ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನ್ಯಾಯಪ್ರಮಾಣದ ಮಾತುಗಳನ್ನು ಕಾಪಾಡದೆ, ಕೈಕೊಳ್ಳದೆ ಹೋದರೆ