Psalms · chapter 67 · verse 6
Psalm 67:6 in Kannada
ಆಗ ಭೂಮಿಯು ತನ್ನ ಸಮೃದ್ಧಿಯಾದ ಬೆಳೆಯನ್ನು ಕೊಡುವದು; ದೇವರೇ, ಹೌದು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವನು.ದೇವರು ನಮ್ಮನ್ನು ಆಶೀರ್ವದಿಸುವನು; ಭೂಮಿಯ ಕೊನೆಯ ಭಾಗಗಳು ಆತನಿಗೆ ಭಯಪಡುವವು.
Aaga bhoomiyu tanna samruddhiyaada beleyannu koduvadu; devare, haudu, namma devare nammannu aasheervadisuvanu.devaru nammannu aasheervadisuvanu; bhoomiya koneya bhaagagalu aatanige bhayapaduvavu.
Psalm 67:6 in English
- King James Version (KJV)
- [Then] shall the earth yield her increase; [and] God, [even] our own God, shall bless us.
- World English Bible (WEB)
- The earth has yielded its increase. God, even our own God, will bless us.
- American Standard Version (ASV)
- The earth hath yielded its increase: God, even our own God, will bless us.
- Bible in Basic English (BBE)
- The earth has given her increase; and God, even our God, will give us his blessing.
- Darby Translation (DBY)
- The earth will yield her increase; God, our God, will bless us:
- Webster's Bible (WBS)
- [Then] shall the earth yield her increase; [and] God, [even] our own God, will bless us.
- Young's Literal Translation (YLT)
- Earth hath given her increase, God doth bless us — our God,
Read in context
- 4ಜನಾಂಗಗಳು ಸಂತೋಷಪಟ್ಟು ಉತ್ಸಾಹಕ್ಕಾಗಿ ಹಾಡಲಿ; ನೀನು ಜನರನ್ನು ನೀತಿಯಿಂದ ನ್ಯಾಯತೀರಿಸಿ ಜನಾಂಗಗಳನ್ನು ಭೂಮಿಯಲ್ಲಿ ಪರಿಪಾಲಿಸುತ್ತೀ. ಸೆಲಾ.
- 5ಓ ದೇವರೇ, ಜನರು ನಿನ್ನನ್ನು ಕೊಂಡಾಡಲಿ; ಜನರೆಲ್ಲಾ ನಿನ್ನನ್ನು ಕೊಂಡಾಡಲಿ.
- 6ಆಗ ಭೂಮಿಯು ತನ್ನ ಸಮೃದ್ಧಿಯಾದ ಬೆಳೆಯನ್ನು ಕೊಡುವದು; ದೇವರೇ, ಹೌದು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವನು.ದೇವರು ನಮ್ಮನ್ನು ಆಶೀರ್ವದಿಸುವನು; ಭೂಮಿಯ ಕೊನೆಯ ಭಾಗಗಳು ಆತನಿಗೆ ಭಯಪಡುವವು.
- 7ದೇವರು ನಮ್ಮನ್ನು ಆಶೀರ್ವದಿಸುವನು; ಭೂಮಿಯ ಕೊನೆಯ ಭಾಗಗಳು ಆತನಿಗೆ ಭಯಪಡುವವು.
Cross references
- Leviticus 26:4 ಯಾಜಕಕಾಂಡ 26:4ನಿಮಗೆ ಮಳೆಯನ್ನು ತಕ್ಕಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವದು. ಹೊಲದ ಮರಗಳು ಅವುಗಳ ಫಲವನ್ನು ಕೊಡುವವು.
- Exodus 3:15 ವಿಮೋಚನಕಾಂಡ 3:15ದೇವರು ಮೋಶೆಗೆ--ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿ ದ್ದಾನೆಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು; ಇದೇ ಯುಗ ಯುಗಕ್ಕೆ ನನ್ನ ಹೆಸರೂ ತಲತಲಾಂತರಕ್ಕೆ ನನ್ನ ಸ್ಮರಣೆಯೂ ಆಗಿದೆ ಎಂದು ಹೇಳಿದನು.
- Jeremiah 31:33 ಯೆರೆಮೀಯ 31:33ಆದರೆ ನಾನು ಇಸ್ರಾಯೇಲಿನ ಮನೆತನದವರ ಸಂಗಡ ಮಾಡುವ ಒಡಂಬಡಿಕೆ ಇದೇ. ಆ ದಿನಗಳಾದ ಮೇಲೆ ನಾನು ನನ್ನ ನ್ಯಾಯಪ್ರಮಾಣವನ್ನು ಅವರೊಳಗೆ ಇಟ್ಟು ಅವರ ಹೃದಯದಲ್ಲಿ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆ ಯಾಗಿರುವರು ಎಂದು ಕರ್ತನು ಅನ್ನುತ್ತಾನೆ.
- Psalm 85:9–12 ಕೀರ್ತನೆಗಳು 85:9–12ನಿಶ್ಚ ಯವಾಗಿ ಘನವು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ಆತನಿಗೆ ಭಯಪಡುವವರಿಗೆ ಆತನ ರಕ್ಷಣೆಯು ಸವಿಾಪವಾಗಿದೆ. ಕೃಪೆಯೂ ಸತ್ಯವೂ ಸಂಧಿಸಿ ಕೊಳ್ಳುತ್ತವೆ; ನೀತಿಯೂ ಸಮಾಧಾನವೂ ಮುದ್ದಿಟ್ಟು ಕೊಳ್ಳುತ್ತವೆ. ಸತ್ಯವು ಭೂಮಿಯಿಂದ ಮೊಳೆಯು ವದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು. ಹೌದು, ಕರ್ತನು ಒಳ್ಳೇದನ್ನು ಮಾಡುವನು. ನಮ್ಮ ಭೂಮಿಯು ಅದರ ಬೆಳೆಯನ್ನು ಕೊಡುವದು.ನೀತಿಯು ಆತನ ಮುಂದೆ ಹೋಗುತ್ತಾ ನಾವು ಆತನ ಹೆಜ್ಜೆಗಳಲ್ಲಿ ನಡೆಯುವಂತೆ ಮಾರ್ಗವನ್ನು ಮಾಡುವದು.
- Ezekiel 34:26–27 ಯೆಹೆಜ್ಕೇಲನು 34:26–27ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿ ಸುವೆನು, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯಾಗುವದು; ಬಯಲಿನ ಮರವು ಅದರ ಫಲವನ್ನು ಕೊಡುವದು, ಭೂಮಿಯು ಅದರ ಆದಾಯವನ್ನು ಕೊಡುವದು, ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು; ನಾನೇ ಅದರ ನೊಗದ ಬಂಧನಗಳನ್ನು ಬಿಡಿಸಿ ಅವರಿಂದ ಸೇವೆ ಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಕರ್ತನೆಂದು ಅವರು ತಿಳಿಯುವರು;
- Genesis 17:7 ಆದಿಕಾಂಡ 17:7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.
- Isaiah 30:23–24 ಯೆಶಾಯ 30:23–24ಆಗ ನೀವು ಹೊಲದಲ್ಲಿ ಬೀಜ ಬಿತ್ತುವದಕ್ಕೆ ಬಿತ್ತನೆಯ ಮಳೆಯನ್ನು ದಯಪಾಲಿಸು ವೆನು. ಭೂಮಿಯ ಬೆಳೆಯಿಂದ ಸಾರವಾದ ಆಹಾರ ವನ್ನು ಸಮೃದ್ಧಿಯಾಗಿ ಒದಗಿಸುವೆನು. ಆ ದಿನದಲ್ಲಿ ನಿನ್ನ ದನಗಳು ವಿಸ್ತಾರವಾದ ಸ್ಥಳದಲ್ಲಿ ಮೇಯುವವು. ಹೊಲ ಉಳುವ ಎತ್ತುಗಳು, ಪ್ರಾಯದ ಕತ್ತೆಗಳು, ಮರದಿಂದಲೂ ಕವೇ ಕೋಲಿನಿಂದಲೂ ತೂರಿದ ಮೇವನ್ನು ತಿನ್ನುವವು.
- Hosea 2:21–22 ಹೋಶೇಯ 2:21–22ಆ ದಿನಗಳಲ್ಲಿ ಆಗುವದೇನಂದರೆ--ನಾನು ಕೇಳು ವೆನೆಂದು ಕರ್ತನು ಹೇಳುತ್ತಾನೆ; ನಾನು ಆಕಾಶಗ ಳನ್ನು ಕೇಳುವೆನು; ಅವು ಭೂಮಿಯನ್ನು ಕೇಳು ವವು. ಭೂಮಿಯು ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಕೇಳುವವು. ಅವು ಇಜ್ರೇಲನ್ನು ಕೇಳುವವು.ತರುವಾಯ ಇಜ್ರೇಲನ್ನು ನನಗಾಗಿ ದೇಶದಲ್ಲಿ ಬಿತ್ತುವೆನು; ಕರುಣೆ ಹೊಂದ ದವಳ ಮೇಲೆಯೇ ನಾನು ಕರುಣೆಯನ್ನು ತೋರಿ ಸುವೆನು. ನನ್ನ ಜನವಲ್ಲದ್ದಕ್ಕೆ--ನೀನು ನನ್ನ ಜನ ವೆಂದು ಹೇಳುವೆನು; ಅವರು--ನನ್ನ ದೇವರೇ ಎಂದು ಭಜಿಸುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
- Jeremiah 31:1 ಯೆರೆಮೀಯ 31:1ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಮಸ್ತ ಕುಟುಂಬಗಳಿಗೆ ದೇವರಾಗಿರು ವೆನು; ಅವರು ನನಗೆ ಜನರಾಗಿರುವರು ಎಂದು ಕರ್ತನು ಅನ್ನುತ್ತಾನೆ.
- Psalm 48:14 ಕೀರ್ತನೆಗಳು 48:14ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು.
- 1 Corinthians 3:6–9 1 ಕೊರಿಂಥದವರಿಗೆ 3:6–9ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು. ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು. ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ; ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು. ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
- Isaiah 1:19 ಯೆಶಾಯ 1:19ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ;