Psalms · chapter 68 · verse 2
Psalm 68:2 in Kannada
ಹೊಗೆ ಹಾರಿಹೋಗುವ ಮೇರೆಗೆ ಅವರನ್ನು ಓಡಿಸಿಬಿಡು; ಮೇಣವು ಬೆಂಕಿಯ ಮುಂದೆ ಕರಗುವ ಹಾಗೆ ದುಷ್ಟರು ದೇವರ ಮುಂದೆ ನಾಶ ವಾಗಲಿ.
Hoge haarihoguva merege avarannu odisibidu; menavu benkiya munde karaguva haage dushtaru devara munde naasha vaagali.
Psalm 68:2 in English
- King James Version (KJV)
- As smoke is driven away, [so] drive [them] away: as wax melteth before the fire, [so] let the wicked perish at the presence of God.
- World English Bible (WEB)
- As smoke is driven away, so drive them away. As wax melts before the fire, so let the wicked perish at the presence of God.
- American Standard Version (ASV)
- As smoke is driven away, so drive them away: As wax melteth before the fire, So let the wicked perish at the presence of God.
- Bible in Basic English (BBE)
- Let them be like smoke before the driving wind; as wax turning soft before the fire, so let them come to an end before the power of God.
- Darby Translation (DBY)
- As smoke is driven, thou wilt drive them away; as wax melteth before the fire, the wicked shall perish at the presence of God.
- Webster's Bible (WBS)
- As smoke is driven away, [so] drive [them] away: as wax melteth before the fire, [so] let the wicked perish at the presence of God.
- Young's Literal Translation (YLT)
- As the driving away of smoke Thou drivest away, As the melting of wax before fire, The wicked perish at the presence of God.
Read in context
- 1ದೇವರು ಎದ್ದೇಳುವಾಗ, ಆತನನ್ನು ಹಗೆ ಮಾಡುವವರು ಚದುರಿಸಲ್ಪಡಲಿ; ಆತ ನನ್ನು ವಿರೋಧಿಸುವವರು ಆತನ ಸಮ್ಮುಖದಿಂದ ಓಡಿ ಹೋಗುತ್ತಾರೆ.
- 2ಹೊಗೆ ಹಾರಿಹೋಗುವ ಮೇರೆಗೆ ಅವರನ್ನು ಓಡಿಸಿಬಿಡು; ಮೇಣವು ಬೆಂಕಿಯ ಮುಂದೆ ಕರಗುವ ಹಾಗೆ ದುಷ್ಟರು ದೇವರ ಮುಂದೆ ನಾಶ ವಾಗಲಿ.
- 3ಆದರೆ ನೀತಿವಂತರು ಸಂತೋಷಿಸಲಿ; ದೇವರ ಮುಂದೆ ಉತ್ಸಾಹಪಡಲಿ; ಹೌದು, ಅವರು ಅತಿಸಂತೋಷದಿಂದ ಹರ್ಷಿಸುವವರಾಗಲಿ.
- 4ದೇವರಿಗೆ ಹಾಡಿರಿ; ಆತನ ನಾಮಕ್ಕೆ ಸ್ತುತಿಗಳನ್ನು ಹಾಡಿರಿ; ಆಕಾಶಗಳ ಮೇಲೆ ಯಾಹು ಎಂಬ ತನ್ನ ಹೆಸರಿನ ಮೇಲೆ ಸವಾರಿಮಾಡುವಾತನನ್ನು ಕೊಂಡಾಡಿ ಆತನ ಮುಂದೆ ಉತ್ಸಾಹಪಡಿರಿ.
Cross references
- Micah 1:4 ಮೀಕ 1:4ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.
- Psalm 37:20 ಕೀರ್ತನೆಗಳು 37:20ದುಷ್ಟರು ನಾಶವಾಗುವರು; ಕರ್ತನ ಶತ್ರುಗಳು ಕುರಿಮರಿಗಳ ಕೊಬ್ಬಿನ ಹಾಗೆ ಇದ್ದು ಕರಗಿಹೋಗು ವರು; ಹೊಗೆಯಲ್ಲಿ ಕರಗಿಹೋಗುವರು.
- Hosea 13:3 ಹೋಶೇಯ 13:3ಆದದರಿಂದ ಅವರು ಪ್ರಾತಃ ಕಾಲದ ಮೇಘದ ಹಾಗೆಯೂ ಬೇಗನೆ ಮಾಯ ವಾಗುವ ಇಬ್ಬನಿ ಹಾಗೆಯೂ ಸುಳಿಗಾಳಿಯು ನೆಲದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ ಚಿಮಿಣಿಗೆಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.
- Revelation 6:16–17 ಪ್ರಕಟನೆ 6:16–17ಪರ್ವತಗಳಿಗೂ ಬಂಡೆಗಳಿಗೂ--ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿದ್ದಾತನ ಮುಖಕ್ಕೂ ಕುರಿಮರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು. ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.
- Isaiah 9:18 ಯೆಶಾಯ 9:18ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ ಮುಳ್ಳುಗಳನ್ನು ನುಂಗಿಬಿಟ್ಟು ಅಡವಿಯ ಪೊದೆಗ ಳನ್ನು ಹತ್ತಿಕೊಳ್ಳಲು ಅದು ಹೊಗೆಹೊಗೆಯಾಗಿ ಸುತ್ತಿ ಕೊಂಡು ಮೇಲಕ್ಕೆ ಏರುತ್ತದೆ.
- Psalm 97:5 ಕೀರ್ತನೆಗಳು 97:5ಕರ್ತನ ಸನ್ನಿಧಿಯಲ್ಲಿ ಸಮಸ್ತ ಭೂಮಿಯು ಕರ್ತನ ಮುಂದೆ ಬೆಟ್ಟಗಳು ಮೇಣದ ಹಾಗೆ ಕರಗುತ್ತವೆ.
- Psalm 80:16 ಕೀರ್ತನೆಗಳು 80:16ಅದು ಈಗ ಕೊಯ್ಯಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿದೆ; ನಿನ್ನ ಬಾಯಿ ಗದರಿಕೆಯಿಂದ ಅವರು ನಾಶವಾಗುತ್ತಾರೆ.
- Nahum 1:5–6 ನಹೂಮ 1:5–6ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು. ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
- 2 Thessalonians 1:8–9 2 ಥೆಸಲೊನೀಕದವರಿಗೆ 1:8–9ಆತನು (ಕರ್ತನಾದ ಯೇಸು) ದೇವರನ್ನರಿಯ ದವರಿಗೆ ಮತ್ತು ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಗೆ ವಿಧೇಯರಾಗದವರಿಗೆ ಉರಿಯುವ ಬೆಂಕಿಯ ಮೂಲಕ ಪ್ರತೀಕಾರ ಮಾಡುವದೂ ದೇವರಿಗೆ ನ್ಯಾಯವಾಗಿದೆ; ಅಂಥವರು ಕರ್ತನ ಸಾನಿಧ್ಯದಿಂದಲೂ ಬಲವುಳ್ಳ ಆತನ ಮಹಿಮೆಯಿಂದಲೂ ನಿತ್ಯ ನಾಶನವೆಂಬ ಶಿಕ್ಷೆ ಯನ್ನು ಹೊಂದುವರು.
- Psalm 76:7 ಕೀರ್ತನೆಗಳು 76:7ನೀನು, ನೀನೇ, ಭಯಹುಟ್ಟಿಸುತ್ತೀ; ನೀನು ಒಂದು ಸಾರಿ ಕೋಪಿಸಿಕೊಂಡರೆ ನಿನ್ನ ಮುಂದೆ ನಿಲ್ಲುವವನಾರು?
- Psalm 22:14 ಕೀರ್ತನೆಗಳು 22:14ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ.
- Isaiah 64:2 ಯೆಶಾಯ 64:2ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ ಬೆಂಕಿ ನೀರನ್ನು ಉಕ್ಕಿಸುವಂತೆಯೂ ನಿನ್ನ ಹೆಸರು ನಿನ್ನ ವೈರಿಗಳಿಗೆ ತಿಳಿಯುವಂತೆಯೂ ಮಾಡು!