Psalms · chapter 68 · verse 21
Psalm 68:21 in Kannada
ದೇವರು ತನ್ನ ಶತ್ರುಗಳ ತಲೆ ಯನ್ನೂ ತನ್ನ ಅಪರಾಧಗಳಲ್ಲಿ ಮುಂದುವರಿಯುವ ತುಂಬು ಗೂದಲಿನ ತಲೆಯನ್ನೂ ಗಾಯಪಡಿಸುತ್ತಾನೆ.
Devaru tanna shatrugala tale yannoo tanna aparaadhagalalli munduvariyuva tumbu goodalina taleyannoo gaayapadisuttaane.
Psalm 68:21 in English
- King James Version (KJV)
- But God shall wound the head of his enemies, [and] the hairy scalp of such an one as goeth on still in his trespasses.
- World English Bible (WEB)
- But God will strike through the head of his enemies, the hairy scalp of such a one as still continues in his guiltiness.
- American Standard Version (ASV)
- But God will smite through the head of his enemies, The hairy scalp of such a one as goeth on still in his guiltiness.
- Bible in Basic English (BBE)
- The heads of the haters of God will be crushed; even the head of him who still goes on in his evil ways.
- Darby Translation (DBY)
- Verily God will smite the head of his enemies, the hairy scalp of him that goeth on still in his trespasses.
- Webster's Bible (WBS)
- But God will wound the head of his enemies, [and] the hairy scalp of such one as goeth on still in his trespasses.
- Young's Literal Translation (YLT)
- Only — God doth smite The head of His enemies, The hairy crown of a habitual walker in his guilt.
Read in context
- 19ಪ್ರತಿ ದಿನವೂ ನಮ್ಮನ್ನು ಮೇಲುಗಳಿಂದ ತುಂಬಿಸು,ಕರ್ತನು ಅಂದರೆ ನಮ್ಮ ರಕ್ಷಣೆಯ ದೇವರು ಸ್ತುತಿ ಹೊಂದಲಿ. ಸೆಲಾ.
- 20ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾನೆ; ನಮ್ಮ ಕರ್ತನಾದ ದೇವರು ಮರಣದಿಂದ ತಪ್ಪಿಸಲು ಶಕ್ತನಾಗಿದ್ದಾನೆ.
- 21ದೇವರು ತನ್ನ ಶತ್ರುಗಳ ತಲೆ ಯನ್ನೂ ತನ್ನ ಅಪರಾಧಗಳಲ್ಲಿ ಮುಂದುವರಿಯುವ ತುಂಬು ಗೂದಲಿನ ತಲೆಯನ್ನೂ ಗಾಯಪಡಿಸುತ್ತಾನೆ.
- 22ಬಾಷಾನಿನಿಂದ ತಿರಿಗಿ ಬರಮಾಡುವೆನು, ಸಮು ದ್ರದ ಅಗಾಧಗಳಿಂದ ನನ್ನ ಜನರನ್ನು ತಿರಿಗಿ ಬರ ಮಾಡುವೆನು ಎಂದು ಕರ್ತನು ಹೇಳಿದ್ದಾನೆ.
- 23ನಿನ್ನ ಪಾದವೂ ನಿನ್ನ ಶತ್ರುಗಳ ರಕ್ತದಲ್ಲಿ ಕಲಕುವ ಹಾಗೆ ಮಾಡುವೆನು. ನಿನ್ನ ನಾಯಿಗಳ ನಾಲಿಗೆಯೂ ಸಹ ಹಾಗೆಯೇ ಮಾಡುವದು.
Cross references
- Habakkuk 3:13 ಹಬಕ್ಕೂಕ 3:13ನಿನ್ನ ಜನರ ರಕ್ಷಣೆಗೋಸ್ಕರವೂ ನಿನ್ನ ಅಭಿಷಿಕ್ತರ ರಕ್ಷಣೆಗೊಸ್ಕರವೂ ನೀನು ಹೊರಟು ಹೋಗಿ ಕುತ್ತಿಗೆಯ ವರೆಗೂ ಆಸ್ತಿವಾರವನ್ನು ಬರಿದು ಮಾಡಿದ ಹಾಗೆ ದುಷ್ಟರ ಮನೆಯ ತಲೆಯನ್ನು ಗಾಯ ಮಾಡಿಬಿಟ್ಟಿದ್ದೀ. ಸೆಲಾ.
- Luke 13:5 ಲೂಕನು 13:5ಆದರೆ--ಹಾಗಲ್ಲ ವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನ ಸಾಂತರಪಡದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ ಅಂದನು.
- Psalm 110:6 ಕೀರ್ತನೆಗಳು 110:6ಆತನು ಅನ್ಯಜನರಲ್ಲಿ ನ್ಯಾಯತೀರಿಸಿ ಹೆಣಗಳಿಂದ ತುಂಬಿಸುವನು; ಬಹು ದೇಶಗಳ ಮೇಲಿರುವ ತಲೆ ಗಳನ್ನು ಗಾಯಮಾಡುವನು.ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.
- Psalm 7:12 ಕೀರ್ತನೆಗಳು 7:12ಅವನು ತಿರಿಗಿಕೊಳ್ಳದಿದ್ದರೆ ಆತನು ತನ್ನ ಕತ್ತಿ ಮಸೆಯುವನು: ತನ್ನ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡಿದ್ದಾನೆ.
- Revelation 2:14–16 ಪ್ರಕಟನೆ 2:14–16ಆದರೂ ನಿನಗೆ ವಿರೋಧವಾದ ಕೆಲವು ವಿಷಯಗಳು ನನಗಿವೆ. ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ ಪದಾರ್ಥಗಳನ್ನು ತಿನ್ನುವ ದಕ್ಕೂ ಜಾರತ್ವ ಮಾಡುವದಕ್ಕೂ ಇಸ್ರಾಯೇಲಿನ ಮಕ್ಕಳ ಮುಂದೆ ಮುಗ್ಗರಿಸುವ ಬಂಡೆಯನ್ನು ಹಾಕ ಬೇಕೆಂದು ಬಿಳಾಮನು ಬಾಲಾಕನಿಗೆ ಹೇಳಿದ ಬೋಧನೆಯನ್ನು ಅದರಂತೆ ನಾನು ಹಗೆ ಮಾಡುವ ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರೂ ನಿನ್ನಲ್ಲಿದ್ದಾರೆ. ಆದದರಿಂದ ಮಾನಸಾಂತರಪಡು, ಇಲ್ಲದಿದ್ದರೆ ನಾನು ನಿನ್ನ ಬಳಿಗೆ ಬೇಗನೆ ಬಂದು ನನ್ನ ಬಾಯಿ ಕತ್ತಿಯಿಂದ ಅವರ ಮೇಲೆ ಯುದ್ಧ ಮಾಡುವೆನು.
- Ezekiel 18:27–30 ಯೆಹೆಜ್ಕೇಲನು 18:27–30ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನ್ಯಾಯವನ್ನೂ ನೀತಿಯನ್ನೂ ಅನುಸರಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಂಡು ಬದುಕುವನು. ತಾನು ಆಲೋಚಿಸಿ ತಾನು ಮಾಡುವ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ತಿರುಗಿ ಕೊಳ್ಳುವದರಿಂದ ಸಾಯದೆ ನಿಶ್ಚಯವಾಗಿ ಬದುಕು ವನು. ಆದರೆ ಇಸ್ರಾಯೇಲಿನ ಮನೆತನದವರು ಕರ್ತನ ಮಾರ್ಗ ಸಮವಲ್ಲ ಎನ್ನುತ್ತಾರೆ. ಇಸ್ರಾಯೇಲಿನ ಮನೆತನದವರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವುಗಳೇ. ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ.
- Hebrews 12:25 ಇಬ್ರಿಯರಿಗೆ 12:25ನೀವು ಮಾತನಾಡು ತ್ತಿರುವಾತನನ್ನು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಯಾಕಂದರೆ ಭೂಮಿಯ ಮೇಲೆ ಮಾತನಾಡಿದವನನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ ಪರ ಲೋಕದಿಂದ ಮಾತನಾಡುವಾತನಿಂದ ನಾವು ತೊಲಗಿ ದರೆ ಎಷ್ಟೋ ಹೆಚ್ಚಾಗಿ ನಾವು ತಪ್ಪಿಸಿಕೊಳ್ಳಲಾರೆವು.
- Proverbs 1:24–33 ಜ್ಞಾನೋಕ್ತಿಗಳು 1:24–33ನಾನು ಕರೆದಾಗ ನೀವು ತಿರಸ್ಕರಿಸಿದ್ದಕ್ಕಾಗಿಯೂ ನಾನು ನನ್ನ ಕೈಚಾಚಿದಾಗ ಯಾವ ಮನುಷ್ಯನು ಗಮನಿಸದೆ ಇದ್ದದ್ದಕ್ಕಾಗಿಯೂ ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ ನನ್ನ ಗದರಿಕೆ ಯನ್ನು ನೀವು ಬೇಡವೆಂದು ತಳ್ಳಿಬಿಟ್ಟದ್ದರಿಂದಲೂ ನಿಮ್ಮ ಆಪತ್ತಿನಲ್ಲಿ ನಿಮಗೆ ಹೆದರಿಕೆ ಬರುವಾಗ ನಿಮ್ಮ ಭಯವು ತೀವ್ರ ದುಃಖದಂತೆಯೂ ನಿಮ್ಮ ನಾಶನವು ತುಫಾನಿನಂತೆಯೂ ಬರುವಾಗ ಅಪಾಯ ಮತ್ತು ಆಪತ್ತು ನಿಮ್ಮ ಮೇಲೆ ಬರುವಾಗ ನಾನು ಸಹ ನಕ್ಕು ಪರಿಹಾಸ್ಯಮಾಡುವೆನು. ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ. ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ ನನ್ನ ಆಲೋಚನೆಯನ್ನು ಗಮನಿಸದೆ ಇದ್ದದಕ್ಕಾಗಿಯೂ ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದ್ದಕ್ಕಾಗಿಯೂ ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ ತಮ್ಮ ಸ್ವಂತ ಕುಯುಕ್ತಿಗಳಿಂದಲೇ ತುಂಬಿಕೊಳ್ಳುವರು. ಅಜ್ಞಾನಿ ಗಳ ವಿಮುಖವು ಅವರನ್ನು ಕೊಲ್ಲುವದು, ಜ್ಞಾನ ಹೀನರ ಏಳಿಗೆ ಅವರನ್ನು ನಾಶಪಡಿಸುವದು.ನನಗೆ ಕಿವಿಗೊಡುವವನಾದರೋ ಜೀವಿಸಿ ಯಾವ ಕೇಡಿನ ಭಯವಿಲ್ಲದೆ ನೆಮ್ಮದಿಯಲ್ಲಿರುವನು. ನನಗೆ ಕಿವಿಗೊಡುವವನಾದರೋ ಜೀವಿಸಿ ಯಾವ ಕೇಡಿನ ಭಯವಿಲ್ಲದೆ ನೆಮ್ಮದಿಯಲ್ಲಿರುವನು.
- Psalm 55:23 ಕೀರ್ತನೆಗಳು 55:23ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.
- Hebrews 2:1–3 ಇಬ್ರಿಯರಿಗೆ 2:1–3ಆದದರಿಂದ ನಾವು ಕೇಳಿದ ಸಂಗತಿಗಳಿಗೆ ಯಾವಾಗಲಾದರೂ ಜಾರಿ ಹೋದೇ ವೆಂದು ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿ ರತಕ್ಕದ್ದು. ಯಾಕಂದರೆ ದೂತರ ಮೂಲಕ ಹೇಳಲ್ಪಟ್ಟ ವಾಕ್ಯವು ಸ್ಥಿರವಾಗಿದ್ದು ಅದನ್ನು ವಿಾರಿ ಮಾಡಿದ ಪ್ರತಿಯೊಂದು ತಪ್ಪಿಗೂ ಅವಿಧೇಯತ್ವಕ್ಕೂ ನ್ಯಾಯ ವಾದ ಪ್ರತಿಫಲ ಹೊಂದಿದ ಮೇಲೆ ಎಷ್ಟೋ ದೊಡ್ಡ ಈ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿ ಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲಾರಂಭಿಸಿತು. ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು.
- Psalm 68:18 ಕೀರ್ತನೆಗಳು 68:18ನೀನು ಉನ್ನತಕ್ಕೆ ಏರಿಹೋಗಿ ಸೆರೆಯವರನ್ನು ಸೆರೆಯಾಗಿ ನಡೆಸಿದಿ, ಕರ್ತನಾದ ದೇವರು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಮನುಷ್ಯರಿಗಾಗಿಯೂ ಹೌದು, ತಿರುಗಿ ಬಿದ್ದವರಿಗಾಗಿಯೂ ಸ್ವೀಕರಿಸಿದಿ.
- Mark 12:4 ಮಾರ್ಕನು 12:4ತಿರಿಗಿ ಅವನು ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ಮೇಲೆ ಕಲ್ಲುಗಳನ್ನು ಎಸೆದು ತಲೆಯನ್ನು ಗಾಯಪಡಿಸಿ ಅವಮಾನದಿಂದ ವರ್ತಿಸಿ ಅವನನ್ನು ಕಳುಹಿಸಿಬಿಟ್ಟರು.