Psalms · chapter 145 · verse 5
Psalm 145:5 in Kannada
ನಿನ್ನ ಮಹಿಮೆಯ ಘನದ ಪ್ರಭೆಯ ವಿಷಯ ವಾಗಿಯೂ ನಿನ್ನ ಅದ್ಭುತಕಾರ್ಯಗಳ ವಿಷಯ ವಾಗಿಯೂ
Ninna mahimeya ghanada prabheya vishaya vaagiyoo ninna adbhutakaaryagala vishaya vaagiyoo
Psalm 145:5 in English
- King James Version (KJV)
- I will speak of the glorious honour of thy majesty, and of thy wondrous works.
- World English Bible (WEB)
- I will meditate on the glorious majesty of your honor, on your wondrous works.
- American Standard Version (ASV)
- Of the glorious majesty of thine honor, And of thy wondrous works, will I meditate.
- Bible in Basic English (BBE)
- My thoughts will be of the honour and glory of your rule, and of the wonder of your works.
- Darby Translation (DBY)
- I will speak of the glorious splendour of thy majesty, and of thy wondrous works.
- Webster's Bible (WBS)
- I will speak of the glorious honor of thy majesty, and of thy wondrous works.
- Young's Literal Translation (YLT)
- The honour — the glory of Thy majesty, And the matters of Thy wonders I declare.
Read in context
- 3ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ ಆಗಿದ್ದಾನೆ; ಆತನ ದೊಡ್ಡಸ್ತಿಕೆಯು ಅಶೋಧ್ಯವಾದದ್ದು.
- 4ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ.
- 5ನಿನ್ನ ಮಹಿಮೆಯ ಘನದ ಪ್ರಭೆಯ ವಿಷಯ ವಾಗಿಯೂ ನಿನ್ನ ಅದ್ಭುತಕಾರ್ಯಗಳ ವಿಷಯ ವಾಗಿಯೂ
- 6ನಿನ್ನ ಭಯಂಕರವಾದ ತ್ರಾಣದ ವಿಷಯ ವಾಗಿಯೂ ಅವರು ಹೇಳುವರು; ನಿನ್ನ ಮಹತ್ವವನ್ನು ನಾನು ಸಾರುವೆನು.
- 7ನಿನ್ನ ಬಹು ಒಳ್ಳೇತನದ ಜ್ಞಾಪಕವನ್ನು ಅವರು ನುಡಿಯುವರು; ನಿನ್ನ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
Cross references
- Isaiah 12:4 ಯೆಶಾಯ 12:4ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ.
- Psalm 119:27 ಕೀರ್ತನೆಗಳು 119:27ನಿನ್ನ ಕಟ್ಟಳೆಗಳ ಮಾರ್ಗವನ್ನು ನಾನು ಗ್ರಹಿಸಮಾಡು; ಆಗ ನಿನ್ನ ಅದ್ಭುತಗಳ ವಿಷಯವಾಗಿ ಮಾತನಾಡುವೆನು.
- Psalm 72:18 ಕೀರ್ತನೆಗಳು 72:18ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ.
- Psalm 40:9–10 ಕೀರ್ತನೆಗಳು 40:9–10ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ. ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Psalm 105:2 ಕೀರ್ತನೆಗಳು 105:2ಆತನಿಗೆ ಹಾಡಿರಿ, ಆತನಿಗೆ ಕೀರ್ತನೆ ಹಾಡಿರಿ; ಆತನ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
- Daniel 4:1–3 ದಾನಿಯೇಲನು 4:1–3ಅರಸನಾದ ನೆಬೂಕದ್ನೆಚ್ಚರನು, ಭೂಲೋಕದಲ್ಲೆಲ್ಲಾ ವಾಸಮಾಡುವ ಎಲ್ಲಾ ಪ್ರಜೆಗಳಿಗೂ ಜನಾಂಗಗಳಿಗೂ ಭಾಷೆಯವರಿಗೂ--ನಿಮಗೆ ಶಾಂತಿಯು ಹೆಚ್ಚಾಗಲಿ. ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ. ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು.
- Psalm 104:1–2 ಕೀರ್ತನೆಗಳು 104:1–2ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ನನ್ನ ದೇವರಾದ ಓ ಕರ್ತನೇ, ನೀನು ಬಹಳ ದೊಡ್ಡವನಾಗಿದ್ದು ಗೌರವ ವನ್ನೂ ಪ್ರಭೆಯನ್ನೂ ಹೊದ್ದುಕೊಂಡಿದ್ದೀ. ಆತನು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುವಾತನೂ ಆಕಾಶ ವನ್ನು ಪರದೆ ಹಾಗೆ ಹಾಸುವಾತನೂ ಆಗಿದ್ದಾನೆ.
- Psalm 71:24 ಕೀರ್ತನೆಗಳು 71:24ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.
- Psalm 71:17–19 ಕೀರ್ತನೆಗಳು 71:17–19ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು. ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ. ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!
- Psalm 66:3–4 ಕೀರ್ತನೆಗಳು 66:3–4ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು; ಭೂನಿವಾಸಿಗಳೆಲ್ಲ ನಿನ್ನನ್ನು ಹಾಡಿ ಆರಾಧಿಸಿ ನಿನ್ನ ನಾಮವನ್ನು ಕೀರ್ತಿಸುವರು. ಸೆಲಾ.
- Psalm 96:3 ಕೀರ್ತನೆಗಳು 96:3ಅನ್ಯಜನಾಂಗದಲ್ಲಿ ಆತನ ಘನವನ್ನೂ ಎಲ್ಲಾ ಜನಾಂಗಗಳಲ್ಲಿ ಆತನ ಅದ್ಭುತಗಳನ್ನೂ ವಿವ ರಿಸಿರಿ.