Psalms · chapter 89 · verse 41
Psalm 89:41 in Kannada
ಮಾರ್ಗಸ್ಥರೆಲ್ಲರು ಅವನನ್ನು ಕೊಳ್ಳೇ ಹೊಡೆಯುತ್ತಾರೆ; ತನ್ನ ನೆರೆಯವರಿಗೆ ಅವನು ನಿಂದೆ ಯಾಗಿದ್ದಾನೆ.
Maargastharellaru avanannu kolle hodeyuttaare; tanna nereyavarige avanu ninde yaagiddaane.
Psalm 89:41 in English
- King James Version (KJV)
- All that pass by the way spoil him: he is a reproach to his neighbours.
- World English Bible (WEB)
- All who pass by the way rob him. He has become a reproach to his neighbors.
- American Standard Version (ASV)
- All that pass by the way rob him: He is become a reproach to his neighbors.
- Bible in Basic English (BBE)
- All those who come by take away his goods; he is laughed at by his neighbours.
- Darby Translation (DBY)
- All that pass by the way plunder him; he is become a reproach to his neighbours.
- Webster's Bible (WBS)
- All that pass by the way plunder him: he is a reproach to his neighbors.
- Young's Literal Translation (YLT)
- Spoiled him have all passing by the way, He hath been a reproach to his neighbours,
Read in context
- 39ನಿನ್ನ ಸೇವಕನ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಹೊಲೆ ಮಾಡಿದ್ದೀ.
- 40ಅವನ ಬೇಲಿಗಳ ನ್ನೆಲ್ಲಾ ಮುರಿದು ಅವನ ಕೋಟೆಗಳನ್ನು ಹಾಳು ಮಾಡಿದ್ದೀ.
- 41ಮಾರ್ಗಸ್ಥರೆಲ್ಲರು ಅವನನ್ನು ಕೊಳ್ಳೇ ಹೊಡೆಯುತ್ತಾರೆ; ತನ್ನ ನೆರೆಯವರಿಗೆ ಅವನು ನಿಂದೆ ಯಾಗಿದ್ದಾನೆ.
- 42ಅವನ ವೈರಿಗಳ ಬಲಗೈಯನ್ನು ಉನ್ನತ ಮಾಡಿದ್ದೀ; ಶತ್ರುಗಳೆಲ್ಲರನ್ನು ಸಂತೋಷಪಡಿಸಿದ್ದೀ.
- 43ಅವನ ಕತ್ತಿಯ ಬಾಯನ್ನು ಹಿಂದಿರುಗಿಸಿ, ಯುದ್ಧ ದಲ್ಲಿ ಅವನನ್ನು ನಿಲ್ಲುವಂತೆ ಮಾಡಲಿಲ್ಲ.
Cross references
- Psalm 79:4 ಕೀರ್ತನೆಗಳು 79:4ನಮ್ಮ ನೆರೆಯವರಿಗೆ ನಿಂದೆಯೂ ನಮ್ಮ ಸುತ್ತಲಿರುವವರಿಗೆ ಗೇಲಿಯೂ ಹಾಸ್ಯವೂ ಆಗಿದ್ದೇವೆ.
- Jeremiah 50:17 ಯೆರೆಮೀಯ 50:17ಇಸ್ರಾಯೇಲನು ಚದರಿಹೋದ ಕುರಿಯಾಗಿ ದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಶ್ಶೂರಿನ ಅರಸನು ಅವನನ್ನು ನುಂಗಿಬಿಟ್ಟನು. ಕಡೆಯಲ್ಲಿ ಬಾಬೆಲಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.
- Isaiah 10:6 ಯೆಶಾಯ 10:6ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು.
- Ezekiel 5:14–15 ಯೆಹೆಜ್ಕೇಲನು 5:14–15ಇದಲ್ಲದೆ ನಾನು ಹಾದು ಹೋಗುವವರೆ ಲ್ಲರ ಕಣ್ಣುಗಳ ಮುಂದೆ ನಿನ್ನ ಸುತ್ತಲಿರುವ ಎಲ್ಲಾ ಜನಾಂಗಗಳ ನಿಂದೆಗೆ ಗುರಿಮಾಡಿ ನೀನು ಹಾಳಾಗುವ ಹಾಗೆ ಮಾಡುತ್ತೇನೆ. ಹೀಗೆ ನಾನು ಕೋಪ ದಿಂದಲೂ ಉಗ್ರತ್ವದಿಂದಲೂ ಉಗ್ರತ್ವದ ಗದರಿಕೆಗ ಳಿಂದಲೂ ನಿನ್ನಲ್ಲಿ ನ್ಯಾಯತೀರ್ಪುಗಳನ್ನು ನಡಿಸು ವಾಗ ನಿನ್ನ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ ದೂಷಣೆಯೂ ಶಿಕ್ಷೆಯೂ ವಿಸ್ಮಯವೂ ಆಗುವದು, ಕರ್ತನಾದ ನಾನೇ ಇದನ್ನು ಹೇಳಿದ್ದೇನೆ.
- Jeremiah 24:9 ಯೆರೆಮೀಯ 24:9ನಾನು ಅವರನ್ನು ಓಡಿಸಿಬಿಡುವ ಎಲ್ಲಾ ಸ್ಥಳಗಳಲ್ಲಿ ನಿಂದೆಗೂ ಗಾದೆಗೂ ಹಾಸ್ಯಕ್ಕೂ ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.ನಾನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶದೊಳ ಗಿಂದ ಅವರು ನಾಶವಾಗುವ ವರೆಗೂ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಅವರಲ್ಲಿ ಕಳುಹಿಸುವೆನು.
- Jeremiah 29:18 ಯೆರೆಮೀಯ 29:18ಕತ್ತಿಯಿಂದಲೂ ಕ್ಷಾಮ ದಿಂದಲೂ ಜಾಡ್ಯದಿಂದಲೂ ಅವರನ್ನು ಹಿಂಸಿಸಿ ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು.
- Jeremiah 42:18 ಯೆರೆಮೀಯ 42:18ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕೋಪವೂ ನನ್ನ ಉರಿಯೂ ಹೇಗೆ ಯೆರೂಸಲೇಮಿನ ನಿವಾಸಿಗಳ ಮೇಲೆ ಹೊಯ್ಯಲ್ಪಟ್ಟಿತೋ ಹಾಗೆಯೇ ನೀವು ಐಗುಪ್ತಕ್ಕೆ ಹೋದರೆ ನನ್ನ ಉರಿಯು ನಿಮ್ಮ ಮೇಲೆ ಹೊಯ್ಯಲ್ಪ ಡುವದು; ನೀವು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವಿರಿ; ಈ ಸ್ಥಳವನ್ನು ನೀವು ತಿರುಗಿ ನೋಡುವದಿಲ್ಲ.
- Psalm 80:13 ಕೀರ್ತನೆಗಳು 80:13ಅಡವಿಯಿಂದ ಬಂದ ಹಂದಿಯು ಅದನ್ನು ಹಾಳುಮಾಡುತ್ತದೆ ಕಾಡಿನ ಮೃಗವು ಅದನ್ನು ಮೇಯ್ದು ಬಿಡುತ್ತದೆ.
- Psalm 74:10 ಕೀರ್ತನೆಗಳು 74:10ಓ ದೇವರೇ, ವೈರಿಯು ನಿಂದಿಸುವದು ಎಷ್ಟರ ವರೆಗೆ? ಶತ್ರುವು ನಿನ್ನ ಹೆಸರನ್ನು ಎಂದೆಂದಿಗೂ ದೂಷಿ ಸುವನೋ?
- Nehemiah 5:9 ನೆಹೆಮೀಯ 5:9ನಾನು ಅವರಿಗೆನೀವು ಮಾಡುವುದು ಒಳ್ಳೇದಲ್ಲ; ನಮ್ಮ ಶತ್ರುಗಳಾದ ಅನ್ಯರ ನಿಂದೆಯ ನಿಮಿತ್ತ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲಾ.
- Daniel 9:16 ದಾನಿಯೇಲನು 9:16ಓ ಕರ್ತನೇ, ನಿನ್ನ ಎಲ್ಲಾ ನೀತಿಗಳ ಪ್ರಕಾರ ನಾನು ನಿನ್ನನ್ನು ಬೇಡುತ್ತೇನೆ. ನಿನ್ನ ಕೋಪವು ನಿನ್ನ ಉಗ್ರತೆಯೂ ನಿನ್ನ ಪಟ್ಟಣವಾದ ಯೆರೂಸಲೇಮಿನಿಂದಲೂ ನಿನ್ನ ಪರಿಶುದ್ಧ ಪರ್ವತ ದಿಂದಲೂ ತಿರುಗಿಸಲ್ಪಡಲಿ. ಯಾಕಂದರೆ ನಮ್ಮ ಪಾಪ ಗಳ ನಿಮಿತ್ತದಿಂದಲೂ ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮೂ ಮತ್ತು ನಿನ್ನ ಜನರೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿರು ವೆವಲ್ಲಾ.
- Jeremiah 44:8 ಯೆರೆಮೀಯ 44:8ಯಾಕೆ ನೀವು ನೀವೇ ನಿರ್ಮೂಲರಾಗುವ ಹಾಗೆಯೂ ನೀವು ಭೂಮಿಯ ಎಲ್ಲಾ ಜನಾಂಗಗಳಲ್ಲಿ ಶಾಪವೂ ನಿಂದೆಯೂ ಆಗುವ ಹಾಗೆಯೂ ನೀವು ತಂಗುವದಕ್ಕೆ ಹೋಗಿರುವ ಐಗುಪ್ತದೇಶದಲ್ಲಿ ಬೇರೆ ದೇವರುಗಳಿಗೆ ಧೂಪಸುಟ್ಟು, ನನಗೆ ಕೋಪವನ್ನು ಎಬ್ಬಿಸುತ್ತೀರಿ?