Revelation · chapter 11 · verse 4
Revelation 11:4 in Kannada
ಭೂಲೋಕದ ದೇವರ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಎರಡು ದೀಪಸ್ತಂಭಗಳೂ ಇವರೇ.
Bhoolokada devara munde nintiruva eradu enneya maragaloo eradu deepastambhagaloo ivare.
Revelation 11:4 in English
- King James Version (KJV)
- These are the two olive trees, and the two candlesticks standing before the God of the earth.
- World English Bible (WEB)
- These are the two olive trees and the two lamp stands, standing before the Lord of the earth.
- American Standard Version (ASV)
- These are the two olive trees and the two candlesticks, standing before the Lord of the earth.
- Bible in Basic English (BBE)
- These are the two olive-trees and the two lights, which are before the Lord of the earth.
- Darby Translation (DBY)
- These are the two olive trees and the two lamps which stand before the Lord of the earth;
- Webster's Bible (WBS)
- These are the two olive-trees, and the two candlesticks standing before the God of the earth.
- Young's Literal Translation (YLT)
- these are the two olive [trees], and the two lamp-stands that before the God of the earth do stand;
Read in context
- 2ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು; ಯಾಕಂದರೆ ಅದು ಅನ್ಯ ಜನರಿಗೆ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಾಲ್ವತ್ತೆರಡು ತಿಂಗಳು ತುಳಿದಾಡುವರು.
- 3ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.
- 4ಭೂಲೋಕದ ದೇವರ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಎರಡು ದೀಪಸ್ತಂಭಗಳೂ ಇವರೇ.
- 5ಇವರಿಗೆ ಯಾವ ನಾದರೂ ಕೇಡನ್ನು ಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ನುಂಗಿ ಬಿಡುವದು; ಇವರಿಗೆ ಯಾವನಾದರೂ ಕೇಡನ್ನು ಉಂಟು ಮಾಡಬೇಕೆಂದಿದ್ದರೆ ಅವನು ಈ ರೀತಿಯಾಗಿ ಕೊಲೆಯಾಗಬೇಕು.
- 6ಅವರ ಪ್ರವಾದನೆಯ ದಿನ ಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು. ಇದಲ್ಲದೆ ಇವರಿಗೆ ಇಷ್ಟ ಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹೊಡೆಯುವದಕ್ಕೂ ಅಧಿಕಾರ ಉಂಟು.
Cross references
- Zechariah 4:11–14 ಜೆಕರ್ಯ 4:11–14ಆಗ ನಾನು ಉತ್ತರ ಕೊಟ್ಟು ಅವನಿಗೆ--ದೀಪಸ್ತಂಭದ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ಇರುವ ಈ ಎರಡು ಇಪ್ಪೇಮರಗಳು ಏನು ಅಂದೆನು. ನಾನು ಎರಡನೇ ಸಾರಿ ಉತ್ತರ ಕೊಟ್ಟು ಅವನಿಗೆ--ಎರಡು ಚಿನ್ನದ ನಾಳಗಳಿಂದ ಚಿನ್ನದಂಥಹ ಎಣ್ಣೆಯನ್ನು ತಮ್ಮೊಳ ಗಿಂದ ಸುರಿಯುವ ಈ ಎರಡು ಇಪ್ಪೇ ಕೊಂಬೆಗಳು ಏನು ಅಂದೆನು. ಅವನು ನನಗೆ--ಇವು ಏನೆಂದು ಅರಿಯು ವದಿಲ್ಲವೋ ಅಂದನು.ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು--ಸಮಸ್ತ ಭೂಮಿಯ ಕರ್ತನ ಬಳಿಯಲ್ಲಿ ನಿಲ್ಲುವ ಇಬ್ಬರು ಅಭಿಷೇಕಿಸಲ್ಪಟ್ಟವರು ಇವರೇ ಅಂದನು. ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು--ಸಮಸ್ತ ಭೂಮಿಯ ಕರ್ತನ ಬಳಿಯಲ್ಲಿ ನಿಲ್ಲುವ ಇಬ್ಬರು ಅಭಿಷೇಕಿಸಲ್ಪಟ್ಟವರು ಇವರೇ ಅಂದನು.
- Zechariah 4:2–3 ಜೆಕರ್ಯ 4:2–3ಒಬ್ಬನನ್ನು ನಿದ್ರೆಯಿಂದ ಎಬ್ಬಿಸುವಂತೆ ನನ್ನನ್ನು ಎಬ್ಬಿಸಿದನು. ಆಗ ಅವನು ನನಗೆ--ನೀನು ಏನು ನೋಡುತ್ತೀ ಅಂದನು. ಅದಕ್ಕೆ--ನಾನು ನೋಡಿದ್ದೇನೆ; ಇಗೋ, ಒಂದು ದೀಪಸ್ತಂಭವು, ಅದು ಎಲ್ಲಾ ಬಂಗಾರದ್ದೇ; ಅದರ ತಲೆಯ ಮೇಲೆ ಪಾತ್ರೆ ಉಂಟು; ಅದರ ಮೇಲೆ ಅದರ ಏಳು ದೀಪಗಳುಂಟು. ಅದರ ತಲೆಯ ಮೇಲಿರುವ ಏಳು ದೀಪಗಳಿಗೆ ಏಳು ಕೊಳವೆಗಳುಂಟು, ಅದರ ಬಳಿಯಲ್ಲಿ ಎರಡು ಇಪ್ಪೇಮರಗಳು, ಪಾತ್ರೆಯ ಬಲಗಡೆಯಲ್ಲಿ ಒಂದೂ ಪಾತ್ರೆಯ ಎಡಗಡೆಯಲ್ಲಿ ಒಂದೂ ಉಂಟು ಅಂದೆನು.
- Jeremiah 11:16 ಯೆರೆಮೀಯ 11:16ಸೌಂದರ್ಯವಾದ ಒಳ್ಳೇ ಹಣ್ಣುಗಳುಳ್ಳ ಹಸುರಾದ ಇಪ್ಪೇ ಗಿಡವೆಂದು ಕರ್ತನು ನಿನಗೆ ಹೆಸ ರಿಟ್ಟನು; ದೊಡ್ಡ ಗದ್ದಲದಿಂದ ಅದರ ಮೇಲೆ ಬೆಂಕಿ ಹತ್ತಿಸಿದ್ದಾನೆ ಅದರ ಕೊಂಬೆಗಳು ಮುರಿದು ಹೋಗಿವೆ.
- Psalm 52:8 ಕೀರ್ತನೆಗಳು 52:8ಆದರೆ ನಾನು ದೇವರ ಆಲಯದಲ್ಲಿರುವ ಹಸು ರಾದ ಇಪ್ಪೇ ಮರದಹಾಗೆ ಇದ್ದೇನೆ. ದೇವರ ಕರು ಣೆಯಲ್ಲಿ ಯುಗಯುಗಾಂತರಗಳಲ್ಲಿಯೂ ನಾನು ಭರವಸವಿಟ್ಟಿದ್ದೇನೆ.ನಾನು ಎಂದೆಂದಿಗೂ ನಿನ್ನನ್ನು ಕೊಂಡಾಡುವೆನು; ನೀನು ಅದನ್ನು ಮಾಡಿದಿ; ನಿನ್ನ ಹೆಸರನ್ನು ನಿರೀಕ್ಷಿಸುವೆನು; ನಿನ್ನ ಪರಿಶುದ್ಧರ ಮುಂದೆ ಅದು ಒಳ್ಳೇದಾಗಿದೆ.
- Isaiah 54:5 ಯೆಶಾಯ 54:5ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು; ನಿನ್ನ ವಿಮೋಚಕನು ಇಸ್ರಾ ಯೇಲಿನ ಪರಿಶುದ್ಧನೇ; ಸಮಸ್ತ ಭೂಮಿಯ ದೇವರು ಎಂದು ಆತನು ಕರೆಯಲ್ಪಡುವನು.
- Revelation 1:20 ಪ್ರಕಟನೆ 1:20ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಮರ್ಮವನ್ನು ಬರೆ. ಆ ಏಳು ನಕ್ಷತ್ರಗಳು ಆ ಏಳು ಸಭೆಗಳ ದೂತರು; ನೀನು ಕಂಡ ಆ ಏಳು ದೀಪಸ್ತಂಭಗಳು ಆ ಏಳು ಸಭೆಗಳು ಎಂದು ಹೇಳಿದನು.
- Romans 11:17 ರೋಮಾಪುರದವರಿಗೆ 11:17ಆದರೆ ಕೆಲವು ಕೊಂಬೆಗಳು ಮುರಿದು ಹಾಕಲ್ಪಟ್ಟ ದ್ದರಿಂದ ಕಾಡೆಣ್ಣೇ ಮರದಂತಿರುವ ನೀನು ಅವುಗಳ ತಾವಿನಲ್ಲಿ ಕಸಿಕಟ್ಟಿಸಿಕೊಂಡವನಾಗಿ ಊರೆಣ್ಣೇ ಮರದ ರಸವತ್ತಾದ ಬೇರಿನಲ್ಲಿ ಪಾಲು ಹೊಂದಿದವನಾಗಿದ್ದೀ.
- Luke 11:33 ಲೂಕನು 11:33ಯಾರೂ ದೀಪವನ್ನು ಹಚ್ಚಿ ಗುಪ್ತ ಸ್ಥಳದಲ್ಲಾಗಲಿ ಇಲ್ಲವೆ ಕೊಳಗದೊಳಗಾಗಲಿ ಇಡುವದಿಲ್ಲ; ಆದರೆ ಒಳಗೆ ಬರುವವರು ಬೆಳಕನ್ನು ನೋಡುವಂತೆ ಅದನ್ನು ದೀಪಸ್ತಂಭದ ಮೇಲೆ ಇಡು ತ್ತಾರಷ್ಟೆ.
- Matthew 5:14–16 ಮತ್ತಾಯನು 5:14–16ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಇರುವ ಪಟ್ಟಣವು ಮರೆಯಾಗಿರಲಾರದು. ಇಲ್ಲವೆ ಮನುಷ್ಯರು ದೀಪವನ್ನು ಹೊತ್ತಿಸಿ ಕೊಳಗದೊಳಗೆ ಇಡದೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವದು. ಅದರಂತೆಯೇ ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.
- Exodus 8:22 ವಿಮೋಚನಕಾಂಡ 8:22ಆದರೆ ಆ ದಿವಸದಲ್ಲಿ ನಾನೇ ಭೂಲೋಕದಲ್ಲಿ ಕರ್ತನೆಂದು ನೀನು ತಿಳಿದುಕೊಳ್ಳುವಂತೆ ನನ್ನ ಜನರು ವಾಸಿಸುವ ಗೋಷೆನ್ ಸೀಮೆಯಲ್ಲಿ ನೊಣಗಳು ಇರದ ಹಾಗೆ ಅದನ್ನು ನಾನು ಪ್ರತ್ಯೇಕಿಸುವೆನು.