Ruth · chapter 1 · verse 15
Ruth 1:15 in Kannada
ಆಗ ಆಕೆಯು ಇಗೋ, ನಿನ್ನ ಓರಗಿತ್ತಿಯು ತನ್ನ ಜನರ ಬಳಿಗೂ ತನ್ನ ದೇವರುಗಳ ಬಳಿಗೂ ತಿರಿಗಿ ಹೋದಳು; ನೀನೂ ನಿನ್ನ ಓರಗಿತ್ತಿಯ ಹಿಂದೆ ಹೋಗು ಅಂದಳು.
Aaga aakeyu igo, ninna oragittiyu tanna janara baligoo tanna devarugala baligoo tirigi hodalu; neenoo ninna oragittiya hinde hogu andalu.
Ruth 1:15 in English
- King James Version (KJV)
- And she said, Behold, thy sister in law is gone back unto her people, and unto her gods: return thou after thy sister in law.
- World English Bible (WEB)
- She said, “Behold, your sister-in-law has gone back to her people and to her god. Follow your sister-in-law.”
- American Standard Version (ASV)
- And she said, Behold, thy sister-in-law is gone back unto her people, and unto her god: return thou after thy sister-in-law.
- Bible in Basic English (BBE)
- And Naomi said, See, your sister-in-law has gone back to her people and to her gods: go back after your sister-in-law.
- Darby Translation (DBY)
- And she said, Behold, thy sister-in-law is gone back to her people and to her gods: return after thy sister-in-law.
- Webster's Bible (WBS)
- And she said, Behold, thy sister-in-law hath gone back to her people, and to her gods: return thou after thy sister-in-law.
- Young's Literal Translation (YLT)
- And she saith, 'Lo, thy sister-in-law hath turned back unto her people, and unto her god, turn thou back after thy sister-in-law.'
Read in context
- 13ಅವರು ದೊಡ್ಡವ ರಾಗುವ ವರೆಗೂ ಕಾದುಕೊಳ್ಳುವಿರೋ? ಗಂಡನಿಲ್ಲದೆ ನೀವು ತಾಳಿಕೊಂಡಿರುವಿರೋ? ಬೇಡ, ನನ್ನ ಕುಮಾ ರ್ತೆಯರೇ; ಕರ್ತನ ಹಸ್ತವು ನನಗೆ ವಿರೋಧವಾಗಿ ರುವದರಿಂದ ನಿಮಗಿಂತ ನನಗೆ ಬಹು ದುಃಖವಾಗಿದೆ ಅಂದಳು.
- 14ಆಗ ಅವರು ತಿರಿಗಿ ಗಟ್ಟಿಯಾದ ಸ್ವರದಿಂದ ಅತ್ತರು. ಒರ್ಫಳು ತನ್ನ ಅತ್ತೆಯನ್ನು ಮುದ್ದಿಟ್ಟಳು: ಆದರೆ ರೂತಳು ಆಕೆಯನ್ನು ಅಂಟಿಕೊಂಡಳು.
- 15ಆಗ ಆಕೆಯು ಇಗೋ, ನಿನ್ನ ಓರಗಿತ್ತಿಯು ತನ್ನ ಜನರ ಬಳಿಗೂ ತನ್ನ ದೇವರುಗಳ ಬಳಿಗೂ ತಿರಿಗಿ ಹೋದಳು; ನೀನೂ ನಿನ್ನ ಓರಗಿತ್ತಿಯ ಹಿಂದೆ ಹೋಗು ಅಂದಳು.
- 16ಅದಕ್ಕೆ ರೂತಳು ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ನೀನು ಎಲ್ಲಿ ಹೋಗುವಿಯೋ ನಾನು ಅಲ್ಲಿಗೆ ಬರುವೆನು; ನೀನು ಎಲ್ಲಿ ಇಳುಕೊಳ್ಳುವಿಯೋ ನಾನು ಅಲ್ಲಿ ಇಳು ಕೊಳ್ಳುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.
- 17ನೀನು ಎಲ್ಲಿ ಸಾಯುತ್ತೀಯೋ ಅಲ್ಲಿಯೇ ನಾನು ಸತ್ತುಹೂಣಲ್ಪಡುವೆನು. ಮರಣವು ಮಾತ್ರ ನಮ್ಮನ್ನು ಅಗಲಿಸದ ಹೊರತು ನಾನು ಅಗಲಿದರೆ ಕರ್ತನು ನನಗೆ ಬೇಕಾದದ್ದನ್ನು ಮಾಡಲಿ ಅಂದಳು.
Cross references
- Zephaniah 1:6 ಚೆಫನ್ಯ 1:6ಕರ್ತನ ಕಡೆಯಿಂದ ಹಿಂತಿ ರುಗಿದವರನ್ನೂ ಕರ್ತನನ್ನು ಹುಡುಕದೆಯೂ ವಿಚಾರಿಸ ದೆಯೂ ಇರುವವರನ್ನೂ ಕಡಿದುಬಿಡುವೆನು.
- Judges 11:24 ನ್ಯಾಯಸ್ಥಾಪಕರು 11:24ನಿನ್ನ ದೇವರಾದ ಕೆಮೋಷನು ಸ್ವತಂತ್ರಿ ಸಿಕೊಳ್ಳಲು ನಿನಗೆ ಕೊಡುವ ದೇಶವನ್ನು ನೀನು ಸ್ವತಂತ್ರಿಸಿಕೊಳ್ಳುವದಿಲ್ಲವೋ? ಹಾಗೆಯೇ ನಮ್ಮ ದೇವರಾದ ಕರ್ತನು ಯಾರನ್ನು ನಮ್ಮ ಮುಂದೆ ಹೊರಡಿಸುವನೋ ಅವರನ್ನು ನಾವು ಸ್ವಾಧೀನಮಾಡಿ ಕೊಳ್ಳುವೆವು.
- 2 Kings 2:2 2 ಅರಸುಗಳು 2:2ಆಗ ಎಲೀಯನು ಎಲೀಷನಿಗೆ--ನೀನು ದಯಮಾಡಿ ಇಲ್ಲಿ ಇರು; ಕರ್ತನು ನನ್ನನ್ನು ಬೇತೇಲಿಗೆ ಕಳುಹಿಸು ತ್ತಾನೆ ಅಂದನು. ಅದಕ್ಕೆ ಎಲೀಷನು--ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವದಿಲ್ಲ ಅಂದನು. ಹಾಗೆಯೇ ಅವರು ಬೇತೇಲಿಗೆ ಹೋದರು.
- Joshua 24:15 ಯೆಹೋಶುವ 24:15ಕರ್ತನನ್ನು ಸೇವಿಸುವದು ನಿಮಗೆ ಕೆಟ್ಟದ್ದಾಗಿ ಕಂಡರೆ ಈಹೊತ್ತು ನೀವು ಯಾರನ್ನು ಸೇವಿಸುವಿರಿ? ನಿಮ್ಮ ತಂದೆಗಳು ನದಿಯ ಆಚೆ ಸೇವಿ ಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆರಿಸಿ ಕೊಳ್ಳಿರಿ; ಆದರೆ ನಾನೂ ನನ್ನ ಮನೆಯವರೂ ಕರ್ತನನ್ನೇ ಸೇವಿಸುವೆವು ಅಂದನು.
- Psalm 125:5 ಕೀರ್ತನೆಗಳು 125:5ಆದರೆ ತಮ್ಮ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು ದುಷ್ಟತನ ಮಾಡುವವರ ಸಂಗಡ ಕರ್ತನು ಹೋಗ ಮಾಡುವನು. ಇಸ್ರಾಯೇಲಿನ ಮೇಲೆ ಸಮಾಧಾನ ವಿರುವದು.
- Hebrews 10:38 ಇಬ್ರಿಯರಿಗೆ 10:38ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವು ಸಂತೊಷಿಸುವದಿಲ್ಲ.ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ.
- 2 Samuel 15:19–20 2 ಸಮುವೇಲನು 15:19–20ಆಗ ಅರಸನು ಗಿತ್ತೀಯನಾದ ಇತ್ತೈಯನ್ನು ನೋಡಿ--ನೀನು ನಮ್ಮ ಸಂಗಡ ಬರುವದು ಯಾಕೆ? ನಿನ್ನ ಸ್ಥಳಕ್ಕೆ ಹಿಂದಿರುಗಿ ಹೋಗಿ ಅರಸನ ಸಂಗಡ ಇರು. ಯಾಕಂದರೆ ನೀನು ಸೆರೆಹಿಡಿಯಲ್ಪಟ್ಟವನಾದ ಅನ್ಯದೇಶದವನು. ನೀನು ನಿನ್ನೆ ಬಂದವನಾದದ ರಿಂದ ನಮ್ಮ ಸಂಗಡ ಹೋಗುವದಕ್ಕೆ ನಾನು ನಿನ್ನನ್ನು ತಿರುಗಾಡಿಸುವದು ಯಾಕೆ? ನಾನು ಎಲ್ಲಿಗೆ ಹೋಗ ಬೇಕಾದರೂ ಅಲ್ಲಿಗೆ ಹೋಗುವೆನು. ನಿನ್ನ ಸಹೋದರ ರನ್ನು ಕರಕೊಂಡು ಹಿಂದಕ್ಕೆ ಹೋಗು; ಕೃಪೆಯೂ ಸತ್ಯವೂ ನಿನ್ನ ಸಂಗಡ ಇರಲಿ ಅಂದನು.
- Matthew 13:20–21 ಮತ್ತಾಯನು 13:20–21ಮತ್ತು ಬಂಡೆಯ ಸ್ಥಳಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸುತ್ತಾನೆ; ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು.
- Luke 14:26–33 ಲೂಕನು 14:26–33ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ಹೌದು, ತನ್ನ ಸ್ವಂತ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರ ಲಾರನು. ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆಬಾರದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. ನಿಮ್ಮಲ್ಲಿ ಯಾವನಾದರೂ ಗೋಪುರವನ್ನು ಕಟ್ಟುವದಕ್ಕೆ ಉದ್ದೇಶವುಳ್ಳವನಾದರೆ ಅವನು ಮೊದಲು ಕೂತುಕೊಂಡು ಅದನ್ನು ಪೂರೈಸು ವದಕ್ಕೆ ಬೇಕಾದ ಖರ್ಚು ತನ್ನಲ್ಲಿ ಉಂಟೋ ಎಂದು ಲೆಕ್ಕ ಮಾಡುವದಿಲ್ಲವೋ? ಒಂದು ವೇಳೆ ಹಾಗೆ ಲೆಕ್ಕ ಮಾಡದೆ ಅವನು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಅದನ್ನು ಪೂರೈಸದಿದ್ದರೆ ನೋಡುವವರೆಲ್ಲರೂ ಅವನಿಗೆ ಹಾಸ್ಯ ಮಾಡುವದಕ್ಕೆ ಆರಂಭಿಸಿ-- ಈ ಮನುಷ್ಯನು ಕಟ್ಟುವದಕ್ಕೆ ಆರಂಭಿಸಿ ಪೂರ್ತಿಮಾಡ ಲಾರದೆ ಹೋದನು ಎಂದು ಅನ್ನುವರು. ಇಲ್ಲವೆ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧ ವಾಗಿ ಯುದ್ಧಮಾಡುವದಕ್ಕೆ ಹೋಗುವಾಗ ಮೊದಲು ಕೂತುಕೊಂಡು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ (ಸೈನ್ಯ)ದೊಂದಿಗೆ ಬರುವ ಆ ಅರಸನನ್ನು ತನ್ನ ಹತು ಸಾವಿರ (ಸೈನ್ಯ)ದೊಂದಿಗೆ ಎದುರಿಸಲು ಸಮರ್ಥನೋ ಎಂದು ವಿಚಾರಿಸುವದಿಲ್ಲವೋ? ಇಲ್ಲವೆ ಅವನು ಇನ್ನು ದೂರದಲ್ಲಿರುವಾಗಲೇ ತನ್ನ ರಾಯಭಾರಿಗಳನ್ನು ಕಳುಹಿಸಿ ಸಮಾಧಾನದ ಶರತ್ತುಗಳಿಗಾಗಿ ಕೋರುವ ದಿಲ್ಲವೋ? ಅದರಂತೆಯೇ ನಿಮ್ಮಲ್ಲಿ ಯಾವನಾ ದರೂ ತನಗಿರುವವುಗಳನ್ನೆಲ್ಲಾ ಬಿಟ್ಟುಬಿಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
- Luke 24:28 ಲೂಕನು 24:28ಅವರು ಹೋಗಬೇಕಾಗಿದ್ದ ಹಳ್ಳಿಯನ್ನು ಸವಿಾಪಿಸು ತ್ತಿರುವಾಗ ಆತನು ಮುಂದೆ ಹೋಗುವವನಂತೆ ತೋರಿಸಿಕೊಂಡನು.
- Joshua 24:19 ಯೆಹೋಶುವ 24:19ಅದಕ್ಕೆ ಯೆಹೋ ಶುವನು ಜನರಿಗೆ--ನೀವು ಕರ್ತನನ್ನು ಸೇವಿಸಲಾರಿರಿ; ಯಾಕಂದರೆ ಆತನು ಪರಿಶುದ್ಧನಾದ ದೇವರು, ರೋಷ ವುಳ್ಳ ದೇವರು; ಆತನು ನಿಮ್ಮ ದ್ರೋಹಗಳನ್ನೂ ಪಾಪಗಳನ್ನೂ ಮನ್ನಿಸನು.
- Psalm 36:3 ಕೀರ್ತನೆಗಳು 36:3ಅವನ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿವೆ; ಬುದ್ಧಿ ಯಿಂದ ನಡೆಯುವದನ್ನೂ ಒಳ್ಳೇದು ಮಾಡುವದನ್ನೂ ಬಿಟ್ಟಿದ್ದಾನೆ.