Zechariah · chapter 1 · verse 5
Zechariah 1:5 in Kannada
ನಿಮ್ಮ ಪಿತೃ ಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ?
Nimma pitru galo, avaru elli? Pravaadigalu, avaru nityavaagi badukuttaaro?
Zechariah 1:5 in English
- King James Version (KJV)
- Your fathers, where [are] they? and the prophets, do they live for ever?
- World English Bible (WEB)
- Your fathers, where are they? And the prophets, do they live forever?
- American Standard Version (ASV)
- Your fathers, where are they? and the prophets, do they live for ever?
- Bible in Basic English (BBE)
- Your fathers, where are they? and the prophets, do they go on living for ever?
- Darby Translation (DBY)
- Your fathers, where are they? and the prophets, do they live for ever?
- Webster's Bible (WBS)
- Your fathers, where [are] they? and the prophets, do they live for ever?
- Young's Literal Translation (YLT)
- Your fathers — where [are] they? And the prophets — to the age do they live?
Read in context
- 3ಆದದರಿಂದ ನೀನು ಅವರಿಗೆ ಹೇಳತಕ್ಕದ್ದೇ ನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕಡೆಗೆ ತಿರುಗಿ ಕೊಳ್ಳಿರಿ, ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 4ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ.
- 5ನಿಮ್ಮ ಪಿತೃ ಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ?
- 6ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.
- 7ದಾರ್ಯಾವೆಷನ ಎರಡನೆಯ ವರುಷದ ಹನ್ನೊಂ ದನೆ ತಿಂಗಳಾದ ಶೆಬಾಟ್ ಎಂಬ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ವಾಕ್ಯವು ಇದ್ದೋನಿನ ಮಗನಾದ ಬೆರೆಕ್ಯನ ಮಗನಾದ ಪ್ರವಾದಿಯಾದ ಜೆಕರ್ಯನಿಗೆ ಉಂಟಾಯಿತು. ಹೇಗೆಂದರೆ,
Cross references
- 2 Peter 3:2–4 2 ಪೇತ್ರನು 3:2–4ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ಅಪೊಸ್ತಲರಾದ ನಮ್ಮ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕ ಮಾಡಿಕೊಳ್ಳಬೇಕು. ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು-- ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆ ಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳ ಬೇಕು.
- Ecclesiastes 12:5 ಪ್ರಸಂಗಿ 12:5ಅಲ್ಲದೆ ಅವರು ದಿನ್ನೆಗೆ ಹೆದರುವರು; ದಾರಿಯಲ್ಲಿ ಹೆದರಿಕೆಗಳಿರುವವು. ಬಾದಾಮಿಯ ಮರ ಹೂವು ಬಿಡುವದು; ಮಿಡತೆಯು ಭಾರವಾಗಿರುವದು. ಆಶೆ ಬಿದ್ದುಹೋಗುವದು. ಮನು ಷ್ಯನು ತನ್ನ ನಿತ್ಯ ಗೃಹಕ್ಕೆ ಹೋಗುವನು. ಗೋಳಾಡು ವವರು ಬೀದಿಯಲ್ಲಿ ತಿರುಗಾಡುವರು.
- Ecclesiastes 12:7 ಪ್ರಸಂಗಿ 12:7ಆಮೇಲೆ ಧೂಳು ಅದು ಇದ್ದ ಹಾಗೆಯೇ ಭೂಮಿಗೆ ಹಿಂತಿರುಗುವದು; ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂತಿರುಗು ವದು.
- Psalm 90:10 ಕೀರ್ತನೆಗಳು 90:10ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ, ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವು ಗಳ ಬಲವು ಪ್ರಯಾಸವೂ ದುಃಖವೂ ಆಗಿವೆ; ಅದು ಬೇಗ ಕೊಯಿದು ಹಾಕಲ್ಪಡುತ್ತದೆ; ನಾವು ಹಾರಿ ಹೋಗುತ್ತೇವೆ.
- Hebrews 9:27 ಇಬ್ರಿಯರಿಗೆ 9:27ಒಂದೇ ಸಾರಿ ಸಾಯುವದೂ ತರುವಾಯ ನ್ಯಾಯತೀರ್ಪೂ ಮನುಷ್ಯರಿಗೆ ನೇಮಕವಾಗಿದೆ.ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
- Job 14:10–12 ಯೋಬನು 14:10–12ಆದರೆ ಮನುಷ್ಯನು ಸತ್ತು ಕ್ಷಯಿಸಿ ಹೋಗುತ್ತಾನೆ; ಮನುಷ್ಯನು ಪ್ರಾಣ ಬಿಟ್ಟ ಬಳಿಕ ಅವನೆಲ್ಲಿರುವನು? ಹೇಗೆ ನೀರು ಸಮುದ್ರ ದಿಂದ ಮುಗಿದು ಹೋಗುತ್ತದೋ ಪ್ರವಾಹವು ಆರಿ ಬತ್ತಿಹೋಗುತ್ತದೆ ಹಾಗೆ ಮನುಷ್ಯನು ಮಲಗುತ್ತಾನೆ, ಏಳುವದೇ ಇಲ್ಲ; ಆಕಾಶಗಳು ಇಲ್ಲದೆ ಹೋಗುವ ವರೆಗೆ ಅವರು ಎಚ್ಚರಗೊಳ್ಳುವದಿಲ್ಲ. ನಿದ್ರೆಯಿಂದ ಎಬ್ಬಿಸಲ್ಪಡುವದೂ ಇಲ್ಲ.
- John 8:52 ಯೋಹಾನನು 8:52ಆಗ ಯೆಹೂದ್ಯರು ಆತನಿಗೆ--ನಿನಗೆ ದೆವ್ವ ಹಿಡಿದದೆ ಎಂದು ನಮಗೆ ಈಗ ತಿಳಿಯಿತು; ಅಬ್ರಹಾಮನು ಮತ್ತು ಪ್ರವಾದಿಗಳು ಸತ್ತರು; ಆದರೆ--ಯಾವನಾದರೂ ನನ್ನ ಮಾತನ್ನು ಕೈಕೊಂಡರೆ ಅವನು ಎಂದಿಗೂ ಮರಣವನ್ನು ಅನುಭವಿಸುವದಿಲ್ಲವೆಂದು ನೀನು ಹೇಳುತ್ತೀಯಲ್ಲಾ;
- Hebrews 7:23–24 ಇಬ್ರಿಯರಿಗೆ 7:23–24ಅವರು (ಲೇವಿಯರು) ಶಾಶ್ವತವಾಗಿ ಉದ್ಯೋಗ ನಡಿಸುವದಕ್ಕೆ ಮರಣ ಕಾರಣದಿಂದ ನಿಜವಾಗಿಯೂ ಅವರಲ್ಲಿ ಯಾಜಕರಾದವರು ಅನೇಕರು; ಈತನಾ ದರೋ ಸದಾಕಾಲವಿರುವದರಿಂದ ಬದಲಾವಣೆಯಾ ಗದ ಯಾಜಕತ್ವವನ್ನು ಹೊಂದಿದ್ದಾನೆ.
- Ecclesiastes 1:4 ಪ್ರಸಂಗಿ 1:4ಒಂದು ಸಂತಾನವು ಗತಿಸುತ್ತದೆ, ಮತ್ತೊಂದು ಸಂತಾನವು ಬರುತ್ತದೆ; ಆದರೆ ಭೂಮಿಯು ಎಂದಿಗೂ ನಿಲ್ಲುತ್ತದೆ.
- Ecclesiastes 9:1–3 ಪ್ರಸಂಗಿ 9:1–3ನಾನು ಇವೆಲ್ಲವುಗಳ ಮೇಲೆ ಮನಸ್ಸಿಟ್ಟು ಇವೆಲ್ಲವುಗಳಲ್ಲಿ ನಾನು ತೀರ್ಮಾನಿಸಿ ದ್ದೇನಂದರೆ--ನೀತಿವಂತನು ಮತ್ತು ಜ್ಞಾನಿ ಇವರ ಕೆಲಸಗಳು ದೇವರ ಕೈಯಲ್ಲಿವೆ; ಯಾವ ಮನುಷ್ಯನೂ ಅವರ ಮುಂದಿರುವ ಎಲ್ಲವುಗಳನ್ನು, ಅಂದರೆ ಪ್ರೀತಿ ಯನ್ನು ಅಥವಾ ದ್ವೇಷವನ್ನು ತಿಳಿಯಲಾರನು. ಎಲ್ಲವು ಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವವು. ನೀತಿವಂತನಿಗೂ ದುಷ್ಟನಿಗೂ ಸಂಗತಿ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವದು. ಒಳ್ಳೆಯ ವನ ಹಾಗೆಯೇ ಪಾಪಿಯೂ ಇರುವನು; ಆಣೆಯಿಡು ವವನಿಗೆ ಹೇಗೋ ಹಾಗೆಯೇ ಆಣೆಗೆ ಭಯಪಡುವ ವನೂ ಇರುವನು. ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ಕೆಟ್ಟದ್ದು; ಇದಕ್ಕೆಲ್ಲಾ ಒಂದು ಗತಿಯಿದೆ; ಹೌದು, ಮನುಷ್ಯ ಕುಮಾರರ ಹೃದಯಗಳು ಸಹ ಕೆಟ್ಟತನದಿಂದ ತುಂಬಿವೆ; ಅವರು ಜೀವಿಸುವಾಗ ಅವರ ಹೃದಯಗಳಲ್ಲಿ ಹುಚ್ಚು ತನವಿದೆ. ಅನಂತರ ಅವರು ಸಾಯುತ್ತಾರೆ (ಸತ್ತವರ ಬಳಿಗೆ ಹೋಗುತ್ತಾರೆ.)
- Acts 13:36 ಅಪೊಸ್ತಲರ ಕೃತ್ಯಗಳು 13:36ದಾವೀದನು ದೇವರ ಚಿತ್ತಕ್ಕನು ಸಾರವಾಗಿ ತನ್ನ ಸ್ವಂತ ಸಂತತಿಯವರಿಗೆ ಸೇವೆ ಮಾಡಿದ ನಂತರ ಅವನು ನಿದ್ರೆಹೋಗಿ ತನ್ನ ಪಿತೃಗಳ ಬಳಿಯಲಿ ಸೇರಿ ಕೊಳೆಯುವ ಅವಸ್ಥೆಯನ್ನು ನೋಡಿದನು.