1 Chronicles · chapter 8 · verse 6
1 Chronicles 8:6 in Kannada
ಇವರೇ ಗೆಬದ ನಿವಾಸಿಗಳ ಪಿತೃಗಳಲ್ಲಿ ಯಜ ಮಾನರಾಗಿದ್ದರು. ಆದರೆ ಅವರನ್ನು ಮಾನಾಹತಿಗೆ ತಕ್ಕೊಂಡು ಹೋದರು.
Ivare gebada nivaasigala pitrugalalli yaja maanaraagiddaru. Aadare avarannu maanaahatige takkondu hodaru.
1 Chronicles 8:6 in English
- King James Version (KJV)
- And these [are] the sons of Ehud: these are the heads of the fathers of the inhabitants of Geba, and they removed them to Manahath:
- World English Bible (WEB)
- These are the sons of Ehud. These are the heads of fathers’ households of the inhabitants of Geba, who were carried captive to Manahath:
- American Standard Version (ASV)
- And these are the sons of Ehud: these are the heads of fathers’ [houses] of the inhabitants of Geba, and they carried them captive to Manahath:
- Bible in Basic English (BBE)
- And these are the sons of Ehud, heads of families of those living in Geba: Iglaam and Alemeth
- Darby Translation (DBY)
- — And these are the sons of Ehud (these were the chief fathers of the inhabitants of Geba; and they carried them away to Manahath;
- Webster's Bible (WBS)
- And these [are] the sons of Ehud: these are the heads of the fathers of the inhabitants of Geba, and they removed them to Manahath:
- Young's Literal Translation (YLT)
- And these [are] sons of Ehud: they are heads of fathers to the inhabitants of Geba, and they remove them unto Manahath;
Read in context
- 4ನಾಮಾ ನನು ಅಹೋಹನು ಗೇರನು ಶೆಪೂಫಾನನು ಹೂರಾ ಮನು.
- 5ಏಹೂದನ ಕುಮಾರರು--ನಾಮಾನನು, ಅಹೀಯನು, ಗೇರನು.
- 6ಇವರೇ ಗೆಬದ ನಿವಾಸಿಗಳ ಪಿತೃಗಳಲ್ಲಿ ಯಜ ಮಾನರಾಗಿದ್ದರು. ಆದರೆ ಅವರನ್ನು ಮಾನಾಹತಿಗೆ ತಕ್ಕೊಂಡು ಹೋದರು.
- 7ಅವರನ್ನು ತಕ್ಕೊಂಡು ಹೋದ ತರುವಾಯ ಉಚ್ಚನನ್ನೂ ಅಹೀಹುದನನ್ನೂ ಪಡೆದನು.
- 8ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹೂಷೀಮಳೂ ಬಾರಳೂ ಅವನಿಗೆ ಪತ್ನಿಯರಾಗಿದ್ದರು.
Cross references
- 1 Chronicles 2:54 1 ಪೂರ್ವಕಾಲವೃತ್ತಾಂತ 2:54ಸಲ್ಮನ ಮಕ್ಕಳು -- ಬೇತ್ಲೆಹೇಮ್ಯರು, ನೆಟೋಫಾದವರು, ಅಟರೋತರು, ಬೇತ್ಯೋವಾಬ್ ಮನೆಯವರುಮಾನಹತಿಯರಲ್ಲಿ ಅರ್ಧಜನರೂ ಚೊರಾತ್ಯರೂ.ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.
- Judges 3:20–30 ನ್ಯಾಯಸ್ಥಾಪಕರು 3:20–30ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ ಏಹೂದನು ಅವನ ಬಳಿಗೆ ಪ್ರವೇಶಿಸಿ--ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗದೆ ಅಂದನು. ಅವನು ತನ್ನ ಗದ್ದುಗೆಯಿಂದ ಎದ್ದನು. ಏಹೂದನು ತನ್ನ ಎಡಗೈ ಯನ್ನು ಚಾಚಿ ತನ್ನ ಬಲಗಡೆ ತೊಡೆಯಲ್ಲಿದ್ದ ಕಠಾರಿ ಯನ್ನು ತಕ್ಕೊಂಡು ಅವನ ಹೊಟ್ಟೆಯಲ್ಲಿ ತಿವಿದನು. ಅದು ಅಲಗೂ ಹಿಡಿಯೂ ಅವನ ಹೊಟ್ಟೆಯಲ್ಲಿ ಹೊಕ್ಕು ಕಿತ್ತು ತೆಗೆಯ ಕೂಡದ ಹಾಗೆ ಕೊಬ್ಬು ಅಲಗನ್ನು ಸುತ್ತಿಕೊಂಡಿತು. ಆದದರಿಂದ ಮಲವು ಹೊರಟಿತು. ಆಗ ಏಹೂದನು ಕೊಠಡಿಯ ಬಾಗಲನ್ನು ತನ್ನ ಹಿಂಭಾಗವಾಗಿ ಮುಚ್ಚಿ ಬೀಗವನ್ನುಹಾಕಿ ದ್ವಾರಾಂಗಳ ದಿಂದ ಹೊರಟುಹೋದನು. ಅವನು ಹೋದ ತರುವಾಯ ಸೇವಕರು ಕೊಠಡಿಯ ಬಾಗಲು ಮುಚ್ಚಲ್ಪ ಟ್ಟಿರುವದನ್ನು ಕಂಡಾಗ--ಅರಸನು ನಿಶ್ಚಯವಾಗಿ ತನ್ನ ಬೇಸಿಗೆಯ ಕೊಠಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳು ತ್ತಿದ್ದಾನೆಂದು ಅಂದುಕೊಂಡು ಅವರು ತಮಗೆ ನಾಚಿಕೆ ಯಾಗುವ ಮಟ್ಟಿಗೂ ಕಾದಿದ್ದರು. ಆದರೆ ಇಗೋ, ಅವನು ಕೊಠಡಿಯ ಬಾಗಿಲನ್ನು ತೆರೆಯದೆ ಇದ್ದದರಿಂದ ಅವರು ಬೀಗದ ಕೈಯನ್ನು ತೆಗೆದುಕೊಂಡು ಬಾಗಲನ್ನು ತೆರೆದರು, ಇಗೋ, ಅವರ ಪ್ರಭುವು ನೆಲದ ಮೇಲೆ ಸತ್ತು ಬಿದ್ದಿದ್ದನು. ಆದರೆ ಅವರು ಆಲಸ್ಯಮಾಡುತ್ತಿರು ವಾಗ ಏಹೂದನು ತಪ್ಪಿಸಿಕೊಂಡು ಕಲ್ಲುಗಣಿಗಳನ್ನು ದಾಟಿ ಸೆಯಾರಾವನ್ನು ಸೇರಿ ತಪ್ಪಿಸಿಕೊಂಡನು. ಅವನು ಅಲ್ಲಿ ಬಂದಾಗ ಎಫ್ರಾಯಾಮಿನ ಬೆಟ್ಟದಲ್ಲಿ ತುತೂರಿಯನ್ನು ಊದಿದನು. ಆಗ ಇಸ್ರಾಯೇಲ್ ಮಕ್ಕಳು ಅವನ ಸಂಗಡ ಬೆಟ್ಟದಿಂದ ಇಳಿದರು; ಅವನು ಇವರ ಮುಂದೆ ನಡೆದು ಅವರ ಸಂಗಡ--ನೀವು ನನ್ನ ಹಿಂದೆ ಬನ್ನಿರಿ; ಕರ್ತನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನು ಎಂದು ಅಂದನು. ಅವರು ಅವನ ಹಿಂದೆ ಬಂದು ಮೋವಾಬ್ಯ ರಿಗೆ ಎದುರಾದ ಯೊರ್ದನಿನ ರೇವುಗಳನ್ನು ಹಿಡಿದು ಒಬ್ಬರನ್ನಾದರೂ ದಾಟಗೊಡದೆ ಮೋವಾಬ್ಯರಲ್ಲಿ ಹೆಚ್ಚು ಕಡಿಮೆ ಹತ್ತು ಸಾವಿರ ಜನರನ್ನು ಹತಮಾಡಿದರು. ಅವರೆಲ್ಲರು ಕೊಬ್ಬಿನವರೂ ಪರಾಕ್ರಮಿಗಳೂ ಆಗಿ ದ್ದರು. ಅವರಲ್ಲಿ ಒಬ್ಬನಾದರೂ ತಪ್ಪಿಹೋದದ್ದಿಲ್ಲ. ಹೀಗೆ ಆ ದಿನದಲ್ಲಿ ಮೋವಾಬ್ ಇಸ್ರಾಯೇಲಿನ ಕೈಕೆಳಗೆ ತಗ್ಗಿಸಲ್ಪಟ್ಟಿತು; ದೇಶವು ಎಂಭತ್ತು ವರುಷ ವಿಶ್ರಾಂತಿಗೊಂಡಿತು.ಅವನ ತರುವಾಯ ಅನಾತನ ಮಗನಾದ ಶಮ್ಗರನು ಎದ್ದನು. ಅವನು ಫಿಲಿಷ್ಟಿಯರಲ್ಲಿ ಆರು ನೂರು ಮನುಷ್ಯರನ್ನು ಎತ್ತಿನ ಮುಳ್ಳುಗೋಲಿನಿಂದ ಹತಮಾಡಿದನು. ಅವನು ಸಹ ಇಸ್ರಾಯೇಲ್ಯರನ್ನು ರಕ್ಷಿಸಿದನು.
- 1 Chronicles 6:60 1 ಪೂರ್ವಕಾಲವೃತ್ತಾಂತ 6:60ಬೆನ್ಯಾವಿಾನನ ಗೋತ್ರ ದಿಂದ ಕೊಟ್ಟವುಗಳು--ಗೆಬವೂ ಅದರ ಉಪನಗರ ಗಳೂ, ಆಲೆಮೆತೂ ಅದರ ಉಪನಗರಗಳೂ, ಅನಾ ತೋತೂ ಅದರ ಉಪನಗರಗಳೂ ಇವರ ಕುಟುಂಬ ಗಳಿಗೆ ಉಂಟಾದ ಎಲ್ಲಾ ಪಟ್ಟಣಗಳು ಹದಿಮೂರು.
- 1 Chronicles 7:10 1 ಪೂರ್ವಕಾಲವೃತ್ತಾಂತ 7:10ಯೆದೀಯಯೇಲನ ಕುಮಾರನು ಬಿಲ್ಹಾ ನನು. ಬಿಲ್ಹಾನನ ಕುಮಾರರು--ಯೆಯೂಷನು, ಬೆನ್ಯಾವಿಾನನು, ಏಹೂದನು, ಕೆನಾನನು, ಜೇತಾ ನನು, ತಾರ್ಷೀಷನು, ಅಹೀಷೆಹರನು.
- Genesis 46:21 ಆದಿಕಾಂಡ 46:21ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್ ಅಶ್ಬೇಲ್ ಗೇರಾ ನಾಮಾನ್ ಏಹೀರೋಷ್ ಮುಪ್ಪೀಮ್ ಹುಪ್ಪೀಮ್ ಆರ್ದ ಎಂಬವರು.
- Judges 4:1 ನ್ಯಾಯಸ್ಥಾಪಕರು 4:1ಆದರೆ ಏಹೂದನು ಸತ್ತತರುವಾಯ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ದೃಷ್ಟಿಯಲ್ಲಿ ಕೆಟ್ಟತನಮಾಡಿದರು.
- 1 Chronicles 2:25 1 ಪೂರ್ವಕಾಲವೃತ್ತಾಂತ 2:25ಹೆಚ್ರೋನನ ಚೊಚ್ಚಲ ಮಗನಾದ ಯೆರಹ್ಮೇ ಲನ ಮಕ್ಕಳು--ಚೊಚ್ಚಲ ಮಗನಾದ ರಾಮನು, ಬೂನನು, ಓರೆನನು, ಓಚೆಮನು, ಅಹೀಯನು.
- 1 Chronicles 2:52 1 ಪೂರ್ವಕಾಲವೃತ್ತಾಂತ 2:52ಇದಲ್ಲದೆ ಕಿರ್ಯತ್ಯಾರೀಮನ ತಂದೆಯಾದ ಶೋಬಾಲನಿಗೆ ಮಕ್ಕ ಳಿದ್ದರು; ಅವರು ಯಾರಂದರೆ ಹಾರೋಯೆನು, ಮಾನ ಹತಿಯರ ಅರ್ಧಜನರು.