1 Samuel · chapter 22 · verse 16
1 Samuel 22:16 in Kannada
ಅದಕ್ಕೆ ಅರಸನುಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯವ ರೆಲ್ಲರೂ ನಿಶ್ಚಯವಾಗಿ ಸಾಯಲೇಬೇಕು ಅಂದನು.
Adakke arasanuaheemelekane, neenoo ninna tandeya maneyava rellaroo nishchayavaagi saayalebeku andanu.
1 Samuel 22:16 in English
- King James Version (KJV)
- And the king said, Thou shalt surely die, Ahimelech, thou, and all thy father’s house.
- World English Bible (WEB)
- The king said, “You shall surely die, Ahimelech, you and all your father’s house.”
- American Standard Version (ASV)
- And the king said, Thou shalt surely die, Ahimelech, thou, and all thy father’s house.
- Bible in Basic English (BBE)
- And the king said, You will certainly be put to death, Ahimelech, you and all your father's family.
- Darby Translation (DBY)
- And the king said, Thou shalt certainly die, Ahimelech, thou, and all thy father's house.
- Webster's Bible (WBS)
- And the king said, Thou shalt surely die, Ahimelech, thou, and all thy father's house.
- Young's Literal Translation (YLT)
- And the king saith, 'Thou dost surely die, Ahimelech, thou, and all the house of thy father.'
Read in context
- 14ಅಹೀಮೆಲೆಕನು ಅರಸನಿಗೆ ಪ್ರತ್ಯುತ್ತರವಾಗಿ--ನಿನ್ನ ಎಲ್ಲಾ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾವನಿ ದ್ದಾನೆ? ಅವನು ಅರಸನಿಗೆ ಅಳಿಯನೂ ನಿನ್ನ ಆಜ್ಞೆಗಳ ಹಾಗೆ ಮಾಡಿಕೊಂಡು ಬರುವವನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ.
- 15ನಾನು ಅವನಿಗೋಸ್ಕರ ದೇವರನ್ನು ಕೇಳಲು ಪ್ರಾರಂಭಿಸಿದ್ದೆನೋ? ಅದು ನನಗೆ ದೂರವಾಗಿರಲಿ. ಅರಸನು ತನ್ನ ಸೇವಕನ ಮೇಲಾ ದರೂ ನನ್ನ ತಂದೆಯ ಮನೆಯವರಲ್ಲಿ ಯಾರ ಮೇಲಾ ದರೂ ಅಪರಾಧ ಹೊರಿಸಬಾರದು; ನಿನ್ನ ಸೇವಕನು ಇದರಲ್ಲಿ ಹೆಚ್ಚಾದದ್ದನ್ನಾದರೂ ಕಡಿಮೆಯಾದದ್ದನ್ನಾ ದರೂ ತಿಳಿದವನಲ್ಲ ಅಂದನು.
- 16ಅದಕ್ಕೆ ಅರಸನುಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯವ ರೆಲ್ಲರೂ ನಿಶ್ಚಯವಾಗಿ ಸಾಯಲೇಬೇಕು ಅಂದನು.
- 17ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆನೀವು ತಿರುಗಿಕೊಂಡು ಕರ್ತನ ಯಾಜಕರನ್ನು ಕೊಂದು ಹಾಕಿರಿ. ಅವರ ಕೈ ದಾವೀದನ ಸಂಗಡ ಸಹಾಯ ವಾಗಿದೆ. ಅವನು ಓಡಿಹೋಗುವದನ್ನು ಅವರು ತಿಳಿದಿದ್ದು ಅದನ್ನು ನನಗೆ ತಿಳಿಸದೆ ಹೋದರು ಅಂದನು. ಆದರೆ ಅರಸನ ಸೇವಕರು ಕರ್ತನ ಯಾಜಕರ ಮೇಲೆ ಬೀಳಲು ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು.
- 18ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು.
Cross references
- Proverbs 28:15 ಜ್ಞಾನೋಕ್ತಿಗಳು 28:15ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ ಬಡವರಾದ ಜನರನ್ನು ಆಳುವ ದುಷ್ಟನು ಇರುತ್ತಾನೆ.
- Esther 3:6 ಎಸ್ತೇರಳು 3:6ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು. ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು. ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು.
- 1 Kings 18:4 1 ಅರಸುಗಳು 18:4ಈಜೆಬೆ ಲಳು ಕರ್ತನ ಪ್ರವಾದಿಗಳನ್ನು ಕೊಲ್ಲುವಾಗ ಓಬ ದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು ಐವತ್ತು ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು ಅವರಿಗೆ ಆಹಾರವನ್ನೂ ನೀರನ್ನೂ ಕೊಟ್ಟು ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು.)
- 1 Samuel 14:44 1 ಸಮುವೇಲನು 14:44ಅದಕ್ಕೆ ಸೌಲನು--ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ ಅಂದನು.
- 1 Kings 19:2 1 ಅರಸುಗಳು 19:2ಈಜೆಬೆಲಳು ಎಲೀಯನ ಬಳಿಗೆ ದೂತ ನನ್ನು ಕಳುಹಿಸಿ--ನಾನು ನಾಳೆ ಇಷ್ಟು ಹೊತ್ತಿಗೆ ಅವ ರಲ್ಲಿರುವ ಒಬ್ಬೊಬ್ಬನ ಪ್ರಾಣದ ಹಾಗೆ ನಿನ್ನ ಪ್ರಾಣಕ್ಕೂ ಮಾಡದೆ ಹೋದರೆ ದೇವರುಗಳು ನನಗೆ ಹೀಗೆಯೂ ಹೆಚ್ಚಾಗಿಯೂ ಮಾಡಲಿ ಎಂದು ಹೇಳಿದಳು.
- Acts 12:19 ಅಪೊಸ್ತಲರ ಕೃತ್ಯಗಳು 12:19ಹೆರೋದನು ಅವನನ್ನು ಹುಡುಕಿಸಿ ಅವನು ಸಿಕ್ಕಲಿಲ್ಲವಾದದರಿಂದ ಕಾವಲುಗಾರರನ್ನು ವಿಚಾರಣೆ ಮಾಡಿ ಅವರಿಗೆ ಮರಣ ದಂಡನೆಯನ್ನು ವಿಧಿಸಿದನು. ಬಳಿಕ ಅವನು ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಇದ್ದನು.
- Daniel 2:5 ದಾನಿಯೇಲನು 2:5ಅರಸನು ಕಸ್ದೀ ಯರಿಗೆ ಪ್ರತ್ಯುತ್ತರವಾಗಿ--ಆ ಕನಸಿನ ಸಂಗತಿಯು ನನ್ನನ್ನು ಬಿಟ್ಟು ಹೋಯಿತು; ನೀವು ಕನಸನ್ನು ಅದರ ಅರ್ಥದೊಂದಿಗೆ ನನಗೆ ತಿಳಿಸದಿದ್ದರೆ ನೀವು ತುಂಡು ತುಂಡಾಗಿ ಕತ್ತರಿಸಲ್ಪಡುವಿರಿ; ನಿಮ್ಮ ಮನೆಗಳು ತಿಪ್ಪೆ ಗುಂಡಿಗಳನ್ನಾಗಿ ಮಾಡಿಸುವೆನು.
- 1 Samuel 20:31 1 ಸಮುವೇಲನು 20:31ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
- Daniel 2:12 ದಾನಿಯೇಲನು 2:12ಇದರಿಂದ ಅರಸನು ಕೋಪವುಳ್ಳವನಾಗಿ ಮಹಾರೌದ್ರದಿಂದ ಬಾಬೆಲಿನಲ್ಲಿ ರುವ ಎಲ್ಲಾ ಜ್ಞಾನಿಗಳನ್ನು ನಾಶಮಾಡಬೇಕೆಂದು ಆಜ್ಞಾ ಪಿಸಿದನು.
- Deuteronomy 24:16 ಧರ್ಮೋಪದೇಶಕಾಂಡ 24:16ತಂದೆಗಳು ಮಕ್ಕಳ ನಿಮಿತ್ತವೂ ಮಕ್ಕಳು ತಂದೆಗಳ ನಿಮಿತ್ತವೂ ಕೊಲ್ಲಲ್ಪಡಬಾರದು; ಒಬ್ಬೊಬ್ಬನು ತನ್ನ ಪಾಪದ ನಿಮಿತ್ತ ಕೊಲ್ಲಲ್ಪಡಬೇಕು.
- Matthew 2:16 ಮತ್ತಾಯನು 2:16ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ
- Daniel 3:19–20 ದಾನಿಯೇಲನು 3:19–20ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ ಅವನ ಮುಖದ ರೂಪವು ಶದ್ರಕ್ ಮೇಷಕ್ಅಬೇದ್ ನೇಗೋ ಎಂಬ ವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿ ಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿ ಸಿದನು. ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾ ದವರು ಶದ್ರಕ್, ಮೇಷಕ್, ಅಬೇದ್ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು.