2 Corinthians · chapter 13 · verse 8
2 Corinthians 13:8 in Kannada
ಸತ್ಯಕ್ಕೆ ವಿರುದ್ಧವಾಗಿ ನಾವೇನು ಮಾಡದೆ ಸತ್ಯಕ್ಕಾಗಿಯೇ ಮಾಡುತ್ತೇವೆ.
Satyakke viruddhavaagi naavenu maadade satyakkaagiye maadutteve.
2 Corinthians 13:8 in English
- King James Version (KJV)
- For we can do nothing against the truth, but for the truth.
- World English Bible (WEB)
- For we can do nothing against the truth, but for the truth.
- American Standard Version (ASV)
- For we can do nothing against the truth, but for the truth.
- Bible in Basic English (BBE)
- Because we are able to do nothing against what is true, but only for it.
- Darby Translation (DBY)
- For we can do nothing against the truth, but for the truth.
- Webster's Bible (WBS)
- For we can do nothing against the truth, but for the truth.
- Young's Literal Translation (YLT)
- for we are not able to do anything against the truth, but for the truth;
Read in context
- 6ಆದರೆ ನಾವಂತೂ ಭ್ರಷ್ಠರಲ್ಲವೆಂದು ನಿಮಗೆ ಗೊತ್ತಾಗುವದೆಂದು ನಾನು ಭರವಸವುಳ್ಳ ವನಾಗಿದ್ದೇನೆ.
- 7ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ; ಇದರಲ್ಲಿ ನಾವೇ ಯೋಗ್ಯರಾಗಿ ತೋರಿಬರಬೇಕೆಂದಲ್ಲ, ನಾವು ಭ್ರಷ್ಠರೆನಿಸಿಕೊಂಡರೂ ನೀವು ಒಳ್ಳೇದನ್ನು ಮಾಡುವವ ರಾಗ ಬೇಕೆಂಬದೇ.
- 8ಸತ್ಯಕ್ಕೆ ವಿರುದ್ಧವಾಗಿ ನಾವೇನು ಮಾಡದೆ ಸತ್ಯಕ್ಕಾಗಿಯೇ ಮಾಡುತ್ತೇವೆ.
- 9ನಾವು ಬಲಹೀನರಾಗಿದ್ದರೂ ನೀವು ಬಲಿಷ್ಠರಾಗಿದ್ದ ಪಕ್ಷಕ್ಕೆ ಸಂತೋಷಪಡುತ್ತೇವೆ. ಇದಲ್ಲದೆ ನೀವು ಪರಿ ಪೂರ್ಣತೆಗೆ ಬರಬೇಕೆಂಬದೇ ನಮ್ಮ ಇಷ್ಟ.
- 10ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ ಈ ಮಾತುಗಳನ್ನು ಬರೆದಿದ್ದೇನೆ; ನಿಮ್ಮನ್ನು ಕೆಡವಿ ಹಾಕುವದಕ್ಕಲ್ಲ, ಕಟ್ಟುವದಕ್ಕಾಗಿ ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವದಕ್ಕೆ ಅವಕಾಶವಿರ ಬಾರದೆಂದು ಅಪೇಕ್ಷಿಸುತ್ತೇನೆ.
Cross references
- Proverbs 21:30 ಜ್ಞಾನೋಕ್ತಿಗಳು 21:30ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.
- Mark 9:39 ಮಾರ್ಕನು 9:39ಆದರೆ ಯೇಸು--ಅವನಿಗೆ ಅಡ್ಡಿಮಾಡಬೇಡಿರಿ; ಯಾಕಂದರೆ ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿ ನನ್ನ ವಿಷಯದಲ್ಲಿ ಹಗುರಾಗಿ ಕೆಟ್ಟದ್ದನ್ನು ಮಾತನಾಡುವ ಒಬ್ಬನಾದರೂ ಇಲ್ಲ.
- Acts 4:28–30 ಅಪೊಸ್ತಲರ ಕೃತ್ಯಗಳು 4:28–30ನಿನ್ನ ಹಸ್ತವು ಮತ್ತು ನಿನ್ನ ಸಂಕಲ್ಪವು ಮೊದಲೇ ನಿಶ್ಚಯಿಸಿದ್ದನ್ನು ಮಾಡಿದರು. ಈಗ ಕರ್ತನೇ, ಅವರ ಬೆದರಿಕೆಗಳನ್ನು ನೋಡು; ನಿನ್ನ ಸೇವಕರು ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಹೇಳುವ ಹಾಗೆ ನಿನ್ನ ಕೈಗಳನ್ನು ಚಾಚುವದರಿಂದ ಸ್ವಸ್ಥತೆಯನ್ನುಂಟು ಮಾಡುವಂತೆಯೂ ಸೂಚಕ ಕಾರ್ಯ ಗಳು ಅದ್ಭುತಕಾರ್ಯಗಳು ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನಲ್ಲಿ ನಡೆಯುವಂತೆಯೂ ಅನು ಗ್ರಹಿಸು ಎಂದು ಗಟ್ಟಿಯಾದ ಸ್ವರದಿಂದ ಪ್ರಾರ್ಥಿಸಿ ದರು.
- Numbers 16:28–35 ಅರಣ್ಯಕಾಂಡ 16:28–35ಆಗ ಮೋಶೆಯು--ಈ ಕಾರ್ಯಗಳನ್ನೆಲ್ಲಾ ಮಾಡುವದಕ್ಕೆ ಕರ್ತನು ನನ್ನನ್ನು ಕಳುಹಿಸಿದ್ದಾನೆ; ಅವು ಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲವೆಂದು ನೀವು ಇದರಿಂದ ತಿಳುಕೊಳ್ಳುವಿರಿ. ಇವರು ಎಲ್ಲಾ ಮನುಷ್ಯರ ಹಾಗೆ ಸತ್ತರೆ ಇಲ್ಲವೆ ಎಲ್ಲಾ ಮನುಷ್ಯರ ಹಾಗೆ ಶಿಕ್ಷೆ ಇವರಿಗೆ ಪ್ರಾಪ್ತವಾದರೆ ಕರ್ತನು ನನ್ನನ್ನು ಕಳುಹಿಸಲಿಲ್ಲ. ಆದರೆ ಕರ್ತನು ಹೊಸದನ್ನು ಮಾಡಿ ಭೂಮಿಯು ತನ್ನ ಬಾಯಿತೆರೆದು ಇವರನ್ನೂ ಇವರಿಗಿರು ವದೆಲ್ಲವನ್ನೂ ನುಂಗಿ ಅವರು ತೀವ್ರವಾಗಿ ಪಾತಾಳಕ್ಕೆ ಇಳಿಯುವವರಾದರೆ ಈ ಮನುಷ್ಯರು ಕರ್ತನನ್ನು ರೇಗಿಸಿದ್ದಾರೆಂದು ನೀವು ತಿಳುಕೊಳ್ಳುವಿರಿ ಅಂದನು. ಇದಾದ ಮೇಲೆ ಅವನು ಹೇಳಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ ಅವರ ಕೆಳಗಿರುವ ನೆಲವು ಸೀಳಿ ಭೂಮಿಯು ತನ್ನ ಬಾಯಿ ತೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸಂಬಂಧಪಟ್ಟ ಸಕಲ ಮನುಷ್ಯರನ್ನೂ ಅವರಿಗಿದ್ದದ್ದನ್ನೆಲ್ಲಾ ನುಂಗಿ ಬಿಟ್ಟಿತು. ಅವರು ತಮಗೆ ಸಂಬಂಧಪಟ್ಟವುಗಳೆ ಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು; ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು. ಆಗ ಅವರ ಸುತ್ತಲಿದ್ದ ಇಸ್ರಾಯೇಲ್ಯರೆಲ್ಲರು ಅವರ ಕೂಗಿಗೆ ಓಡಿಹೋದರು; ಅವರು--ಭೂಮಿಯು ನಮ್ಮನ್ನು ಸಹ ನುಂಗಿತೆಂದು ಹೇಳಿದರು. ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
- Hebrews 2:3–4 ಇಬ್ರಿಯರಿಗೆ 2:3–4ಎಷ್ಟೋ ದೊಡ್ಡ ಈ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿ ಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲಾರಂಭಿಸಿತು. ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು. ದೇವರು ಸಹ ಅವರ ಕೈಯಿಂದ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯ ಗಳನ್ನೂ ನಾನಾವಿಧವಾದ ಮಹತ್ಕಾರ್ಯಗಳನ್ನೂ ನಡಿಸಿ ತನ್ನ ಸ್ವಂತ ಚಿತ್ತಾನುಸಾರವಾಗಿ ಪವಿತ್ರಾತ್ಮ ದಾನಗಳಿಂದ ಅವರಿಗೆ ಸಾಕ್ಷಿ ಕೊಡುತ್ತಿದ್ದನು.
- Acts 5:1–11 ಅಪೊಸ್ತಲರ ಕೃತ್ಯಗಳು 5:1–11ಆದರೆ ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿಯಾದ ಸಪ್ಫೈರಳೊಂದಿಗೆ ತನ್ನ ಒಂದು ಆಸ್ತಿಯನ್ನು ಮಾರಿ ಅದರ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಟ್ಟು ಇನ್ನೊಂದು ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು; ಇದು ಅವನ ಹೆಂಡತಿಗೂ ತಿಳಿದಿತ್ತು. ಆಗ ಪೇತ್ರನು--ಅನನೀಯನೇ, ಪವಿತ್ರಾತ್ಮನಿಗೆ ಸುಳ್ಳು ಹೇಳಿ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಡುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿ ಕೊಂಡದ್ದು ಯಾಕೆ? ಆ ಆಸ್ತಿಯು ಇದ್ದಾಗ ಅದು ನಿನ್ನ ಸ್ವಂತದ್ದಾಗಿತ್ತಲ್ಲವೇ? ಅದನ್ನು ಮಾರಿದ ಮೇಲೆಯೂ ನಿನ್ನ ಅಧೀನದಲ್ಲಿಯೇ ಇತ್ತಲ್ಲವೇ? ನಿನ್ನ ಹೃದಯದಲ್ಲಿ ಅದನ್ನು ಯಾಕೆ ಯೋಚಿಸಿದ್ದೀ? ನೀನು ಮನುಷ್ಯರಿಗಲ್ಲ, ದೇವರಿಗೇ ಸುಳ್ಳಾಡಿದ್ದೀ ಅಂದನು. ಅನನೀಯನು ಈ ಮಾತುಗಳನ್ನು ಕೇಳಿ ಕೆಳಗೆ ಬಿದ್ದು ಪ್ರಾಣಬಿಟ್ಟನು; ಇವುಗಳನ್ನು ಕೇಳಿದವರೆಲ್ಲರಿಗೂ ಮಹಾಭಯ ಉಂಟಾ ಯಿತು. ಆಗ ಯೌವನಸ್ಥರು ಎದ್ದು ಅವನನ್ನು ಸುತ್ತಿ ಹೊತ್ತುಕೊಂಡು ಹೋಗಿ ಹೂಣಿಟ್ಟರು. ಸುಮಾರು ಮೂರು ತಾಸುಗಳಾದ ಮೇಲೆ ಅವನ ಹೆಂಡತಿಯು ನಡೆದ ಸಂಗತಿಯನ್ನು ತಿಳಿಯದೆ ಒಳಗೆ ಬಂದಳು. ಆಗ ಪೇತ್ರನು ಆಕೆಗೆ--ನೀವು ಆ ಹೊಲವನ್ನು ಇಷ್ಟೇ ಹಣಕ್ಕೆ ಮಾರಿದಿರೋ? ನನಗೆ ಹೇಳು ಎಂದು ಕೇಳಿದನು. ಅದಕ್ಕೆ ಆಕೆಯು--ಹೌದು, ಅಷ್ಟಕ್ಕೇ ಅಂದಳು. ಆಗ ಪೇತ್ರನು ಆಕೆಗೆ--ಕರ್ತನ ಆತ್ಮನನ್ನು ಶೋಧಿಸುವದಕ್ಕಾಗಿ ನೀವು ಹೇಗೆ ಒಟ್ಟಾಗಿ ಸಮ್ಮತಿಸಿ ದ್ದೀರಿ? ಇಗೋ, ನಿನ್ನ ಗಂಡನನ್ನು ಹೂಣಿಟ್ಟವರ ಪಾದಗಳು ಬಾಗಿಲಲ್ಲಿ ಇವೆ, ಅವರು ನಿನ್ನನ್ನೂ ಹೊತ್ತು ಕೊಂಡು ಹೋಗುವರು ಅಂದನು. ಕೂಡಲೆ ಆಕೆಯು ಅವನ ಪಾದಗಳ ಮುಂದೆ ಬಿದ್ದು ಪ್ರಾಣ ಬಿಟ್ಟಳು. ಆಗ ಆ ಯೌವನಸ್ಥರು ಒಳಗೆ ಬಂದು ಆಕೆಯು ಸತ್ತಿದ್ದನ್ನು ಕಂಡು ಹೊತ್ತುಕೊಂಡು ಹೋಗಿ ಆಕೆಯ ಗಂಡನ ಪಕ್ಕದಲ್ಲಿ ಹೂಣಿಟ್ಟರು. ಸರ್ವ ಸಭೆಗೂ ಇವುಗಳನ್ನು ಕೇಳಿದವರೆಲ್ಲರಿಗೂ ಮಹಾಭಯ ಉಂಟಾಯಿತು.
- 1 Timothy 1:20 1 ತಿಮೊಥೆಯನಿಗೆ 1:20ಹುಮೆನಾಯನೂ ಅಲೆಕ್ಸಾಂದ ರನೂ ಅವರಲ್ಲಿದ್ದಾರೆ. ಇವರು ದೇವದೂಷಣೆ ಮಾಡ ಬಾರದೆಂಬದನ್ನು ಕಲಿತುಕೊಳ್ಳುವಂತೆ ನಾನು ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.
- Acts 19:11–17 ಅಪೊಸ್ತಲರ ಕೃತ್ಯಗಳು 19:11–17ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದದರಿಂದ ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ ಉಡಿವಸ್ತ್ರಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರವರ ರೋಗಗಳು ವಾಸಿಯಾದವು, ದೆವ್ವಗಳೂ ಬಿಟ್ಟುಹೋದವು. ಆಗ ದೆವ್ವ ಬಿಡಿಸುವವರಾಗಿ ದೇಶಸಂಚಾರ ಮಾಡುತ್ತಿದ್ದ ಯೆಹೂದ್ಯರಲ್ಲಿ ಕೆಲವರು ದುರಾತ್ಮ ಹಿಡಿದವ ರಿಗೆ--ಪೌಲನು ಸಾರುವ ಯೇಸುವಿನ ಆಣೆ ಎಂದು ನಾವು ನಿಮಗೆ ಹೇಳುತ್ತೇವೆ ಎಂದು ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗ ಮಾಡುವದಕ್ಕೆ ತೊಡಗಿದರು. ಯಾಜಕರಲ್ಲಿ ಮುಖ್ಯನಾದ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಕುಮಾರರು ಹಾಗೆ ಮಾಡಿದರು. ಆದರೆ ದುರಾತ್ಮವು ಪ್ರತ್ಯುತ್ತರವಾಗಿ--ನಾನು ಯೇಸುವನ್ನು ಬಲ್ಲೆನು, ಪೌಲನನ್ನೂ ಬಲ್ಲೆನು; ನೀವಾದರೆ ಯಾರು ಎಂದು ಕೇಳಿತು. ದುರಾತ್ಮಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿಬಿದ್ದು ಅವರನ್ನು ಸೋಲಿಸಿ ಬಲಾತ್ಕರಿ ಸಿದ್ದರಿಂದ ಅವರು ಬೆತ್ತಲೆಯಾಗಿ ಗಾಯಗೊಂಡು ಆ ಮನೆಯೊಳಗಿಂದ ಓಡಿ ಹೋದರು. ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರಿಗೆ ಭಯಹಿಡಿಯಿತು. ಕರ್ತನಾದ ಯೇಸು ವಿನ ಹೆಸರು ಘನಹೊಂದಿತು.
- Mark 16:17–19 ಮಾರ್ಕನು 16:17–19ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು; ಅವರು ಸರ್ಪಗಳನ್ನು ಎತ್ತುವರು; ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು. ಹೀಗೆ ಕರ್ತನು ಅವರೊಂದಿಗೆ ಮಾತನಾಡಿದ ನಂತರ ಆತನು ಮೇಲಕ್ಕೆ ಪರಲೋಕದಲ್ಲಿ ಸ್ವೀಕರಿ ಸಲ್ಪಟ್ಟು ದೇವರ ಬಲಪಾರ್ಶ್ವದಲ್ಲಿ ಕೂತುಕೊಂಡನು.ಮತ್ತು ಅವರು ಹೊರಟುಹೋಗಿ ಎಲ್ಲಾ ಕಡೆಯಲ್ಲಿ ಸಾರಿದರು. ಇದಲ್ಲದೆ ಕರ್ತನು ಅವರ ಜೊತೆಯಲ್ಲಿ ಕೆಲಸಮಾಡುತ್ತಾ ನಡೆದ ಸೂಚಕ ಕಾರ್ಯಗಳಿಂದ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದನು. ಆಮೆನ್.
- 1 Corinthians 5:4–5 1 ಕೊರಿಂಥದವರಿಗೆ 5:4–5ನೀವೂ ನನ್ನಾತ್ಮವೂ ಕರ್ತನಾದ ಯೇಸುವಿನ ಸಾಮರ್ಥ್ಯ ಸಹಿತ ಒಟ್ಟುಗೂಡಿ ಬಂದಿರಲಾಗಿ ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವದಕ್ಕಾಗಿ ಅವನ ಶರೀರವು ನಾಶವಾಗ ಬೇಕೆಂದು ನಮ್ಮ ಕರ್ತನಾದ ಯೇಸುವಿನ ಹೆಸರಿನಲ್ಲಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಬೇಕೆಂಬದೇ.
- 2 Kings 2:23–25 2 ಅರಸುಗಳು 2:23–25ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿ ರುವಾಗ ಚಿಕ್ಕ ಹುಡುಗರು ಪಟ್ಟಣದಿಂದ ಹೊರಟು ಬಂದು ಅವನನ್ನು ಹಾಸ್ಯಮಾಡಿ ಅವನಿಗೆ--ಬೋಳ ತಲೆಯವನೇ, ಏರಿ ಹೋಗು; ಬೋಳ ತಲೆಯವನೇ, ಏರಿ ಹೋಗು ಅಂದರು. ಅವನು ಹಿಂದಿರುಗಿ ಅವರನ್ನು ನೋಡಿ--ಕರ್ತನ ಹೆಸರಿನಲ್ಲಿ ಅವರನ್ನು ಶಪಿಸಿದನು. ಆಗ ಅಡವಿಯೊಳಗಿಂದ ಎರಡು ಹೆಣ್ಣು ಕರಡಿಗಳು ಹೊರಟು ಅವರಲ್ಲಿ ನಾಲ್ವತ್ತೆರಡು ಹುಡುಗ ರನ್ನು ಸೀಳಿಬಿಟ್ಟವು.ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲು ಬೆಟ್ಟಕ್ಕೆ ಹೋದನು; ಅಲ್ಲಿಂದ ಸಮಾರ್ಯಕ್ಕೆ ಹಿಂತಿರುಗಿದನು. ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲು ಬೆಟ್ಟಕ್ಕೆ ಹೋದನು; ಅಲ್ಲಿಂದ ಸಮಾರ್ಯಕ್ಕೆ ಹಿಂತಿರುಗಿದನು.
- Proverbs 26:2 ಜ್ಞಾನೋಕ್ತಿಗಳು 26:2ಅಲೆದಾಡುವ ಪಕ್ಷಿಯಂತೆಯೂ ಹಾರಾ ಡುವ ಬಾನಕ್ಕಿಯಂತೆಯೂ ಕಾರಣವಿಲ್ಲದ ನಾಶವು ಬರುವದಿಲ್ಲ.