Acts · chapter 12 · verse 3
Acts 12:3 in Kannada
ಇದು ಯೆಹೂದ್ಯರಿಗೆ ಮೆಚ್ಚಿಗೆಯಾಗಿರುವದನ್ನು ಅವನು ನೋಡಿದ್ದರಿಂದ ಪೇತ್ರನನ್ನು ಹಿಡಿಯುವದಕ್ಕಾಗಿ ಮುಂಗೊಂಡನು. (ಆಗ ಅವು ಹುಳಿಯಿಲ್ಲದ ರೊಟ್ಟಿಯ ದಿವಸಗಳಾಗಿದ್ದವು).
Idu yehoodyarige mechchigeyaagiruvadannu avanu nodiddarinda petranannu hidiyuvadakkaagi mungondanu. (aaga avu huliyillada rottiya divasagalaagiddavu).
Acts 12:3 in English
- King James Version (KJV)
- And because he saw it pleased the Jews, he proceeded further to take Peter also. (Then were the days of unleavened bread.)
- World English Bible (WEB)
- When he saw that it pleased the Jews, he proceeded to seize Peter also. This was during the days of unleavened bread.
- American Standard Version (ASV)
- And when he saw that it pleased the Jews, he proceeded to seize Peter also. And [those] were the days of unleavened bread.
- Bible in Basic English (BBE)
- And when he saw that this was pleasing to the Jews he went on to take Peter in addition. This was at the time of the feast of unleavened bread.
- Darby Translation (DBY)
- And seeing that it was pleasing to the Jews, he went on to take Peter also: (and they were the days of unleavened bread:)
- Webster's Bible (WBS)
- And because he saw it pleased the Jews, he proceeded further to take Peter also. Then were the days of unleavened bread.
- Young's Literal Translation (YLT)
- and having seen that it is pleasing to the Jews, he added to lay hold of Peter also — and they were the days of the unleavened food —
Read in context
- 1ಆ ಕಾಲದಲ್ಲಿ ಅರಸನಾದ ಹೆರೋದನು ಸಭೆಯಲ್ಲಿ ಕೆಲವರನ್ನು ಬಾಧಿಸುವದಕ್ಕಾಗಿ ತನ್ನ ಕೈ ಎತ್ತಿ
- 2ಯೋಹಾನನ ಸಹೋದರನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.
- 3ಇದು ಯೆಹೂದ್ಯರಿಗೆ ಮೆಚ್ಚಿಗೆಯಾಗಿರುವದನ್ನು ಅವನು ನೋಡಿದ್ದರಿಂದ ಪೇತ್ರನನ್ನು ಹಿಡಿಯುವದಕ್ಕಾಗಿ ಮುಂಗೊಂಡನು. (ಆಗ ಅವು ಹುಳಿಯಿಲ್ಲದ ರೊಟ್ಟಿಯ ದಿವಸಗಳಾಗಿದ್ದವು).
- 4ಹೀಗೆ ಪಸ್ಕದ ತರುವಾಯ ಜನರ ಮುಂದೆ ತರಬೇಕೆಂಬ ಉದ್ದೇಶ ದಿಂದ ಅವನನ್ನು ಬಂಧಿಸಿ ಸೆರೆಯಲ್ಲಿ ಹಾಕಿಸಿದನು.ಅವನನ್ನು ಕಾಯುವದಕ್ಕಾಗಿ ನಾಲ್ಕು ಚತುಷ್ಟದ ಸೈನಿಕರಿಗೆ ಒಪ್ಪಿಸಿದನು.
- 5ಪೇತ್ರನು ಸೆರೆಯಲ್ಲಿದ್ದಾಗ ಸಭೆಯವರು ಅವನಿಗಾಗಿ ದೇವರಿಗೆ ಎಡೆಬಿಡದೆ ಪ್ರಾರ್ಥಿಸುತ್ತಿದ್ದರು.
Cross references
- Exodus 23:15 ವಿಮೋಚನಕಾಂಡ 23:15ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು; (ಅಬೀಬ್ ತಿಂಗಳಿನ ನೇಮಕವಾದ ಸಮಯದಲ್ಲಿ ಏಳು ದಿನಗಳ ವರೆಗೆ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಯಾಕಂದರೆ ನೀನು ಆ ತಿಂಗಳಲ್ಲೇ ಐಗುಪ್ತ ದಿಂದ ಹೊರಗೆ ಬಂದಿದ್ದಿ. ಒಬ್ಬರೂ ಬರೀಗೈಯಿಂದ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.)
- Acts 24:27 ಅಪೊಸ್ತಲರ ಕೃತ್ಯಗಳು 24:27ಎರಡು ವರುಷಗಳಾದ ಮೇಲೆ ಫೇಲಿಕ್ಸನ ಸ್ಥಳಕ್ಕೆ ಪೋರ್ಕಿಯ ಫೆಸ್ತನು ಬಂದನು. ಆಗ ಫೇಲಿಕ್ಸನು ಯೆಹೂದ್ಯರನ್ನು ಸಂತೋಷಪಡಿಸುವ ಮನಸ್ಸುಳ್ಳವನಾಗಿ ಪೌಲನನ್ನು ಬಂಧನದಲ್ಲಿಯೇ ಬಿಟ್ಟನು.
- John 12:43 ಯೋಹಾನನು 12:43ಯಾಕಂದರೆ ಅವರು ದೇವರ ಹೊಗಳಿ ಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
- Leviticus 23:6–14 ಯಾಜಕಕಾಂಡ 23:6–14ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಕರ್ತನಿಗೆ ಹುಳಿ ಯಿಲ್ಲದ ರೊಟ್ಟಿಯ ಹಬ್ಬವಿರುವದು; ಏಳು ದಿವಸಗಳ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನತಕ್ಕದ್ದು. ಮೊದಲನೆಯ ದಿನದಲ್ಲಿ ನಿಮಗೆ ಪವಿತ್ರ ಸಭಾಕೂಟವಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು. ಆದರೆ ಏಳು ದಿವಸ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ಬಲಿಯನ್ನು ಸಮರ್ಪಿಸಬೇಕು; ಏಳನೆಯ ದಿನದಲ್ಲಿ ಪರಿಶುದ್ಧ ಸಭಾ ಕೂಟವಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು. ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ-- ಇಸ್ರಾಯೇಲ್ ಮಕ್ಕಳೊಂದಿಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿ (ಬೆಳೆ)ಯನ್ನು ಕೊಯಿದರೆ ನಿಮ್ಮ ಸುಗ್ಗಿಯ ಮೊದಲನೆಯ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು. ಅದು ನಿಮಗೋಸ್ಕರ ಅಂಗೀಕಾರವಾಗುವಂತೆ ಅದನ್ನು ಕರ್ತನ ಸನ್ನಿಧಿಯಲ್ಲಿ ಆಡಿಸಬೇಕು; ಸಬ್ಬತ್ತಿನ ಮಾರನೆಯ ದಿನ ಯಾಜಕನು ಅದನ್ನು ಆಡಿಸಬೇಕು. ನೀವು ಸಿವುಡನ್ನು ಆಡಿಸುವ ದಿನದಲ್ಲಿ ಕರ್ತನಿಗೆ ದಹನಬಲಿಯಾಗಿ ಸಮರ್ಪಿಸು ವಂತೆ ಒಂದು ವರುಷದ ಮತ್ತು ದೋಷವಿಲ್ಲದ ಕುರಿ ಮರಿಯನ್ನು ಅರ್ಪಿಸಬೇಕು. ಕರ್ತನಿಗೆ ಸುಗಂಧ ವಾಸನೆಯಾಗುವಂತೆ ಬೆಂಕಿಯಿಂದ ಮಾಡುವ ಆಹಾರ ಸಮರ್ಪಣೆಯು ಎಣ್ಣೇ ಮಿಶ್ರಿತವಾದ ನಯವಾದ ಹಿಟ್ಟಿನ ಹತ್ತರಲ್ಲಿ ಎರಡು ಪಾಲು ಇರಬೇಕು. ಪಾನ ಸಮರ್ಪಣೆಯು ಒಂದು ಹಿನ್ನಿನ ನಾಲ್ಕನೆಯ ಪಾಲು ದ್ರಾಕ್ಷಾರಸವಾಗಿರಬೇಕು. ಅದೇ ದಿನದಲ್ಲಿ ನೀವು ನಿಮ್ಮ ದೇವರಿಗೆ ಸಮರ್ಪಣೆಯನ್ನು ತರುವ ವರೆಗೆ ರೊಟ್ಟಿಯನ್ನಾಗಲಿ ಹುರಿದ ಕಾಳನ್ನಾಗಲಿ ಇಲ್ಲವೆ ಹಸಿರಾದ ತೆನೆಗಳನ್ನಾಗಲಿ ತಿನ್ನಬಾರದು. ಇದು ನಿಮಗೆ ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು.
- Exodus 12:14–20 ವಿಮೋಚನಕಾಂಡ 12:14–20ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು; ನೀವು ಇದನ್ನು ಕರ್ತನಿಗೆ ಹಬ್ಬವಾಗಿ ತಲತಲಾಂತರ ಗಳಲ್ಲಿ ಆಚರಿಸಬೇಕು; ಇದನ್ನು ನಿತ್ಯ ಶಾಸನದಂತೆ ಎಂದೆಂದಿಗೂ ಆಚರಿಸಬೇಕು. ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು. ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ಸಭೆಯೂ ಏಳನೆಯ ದಿನದಲ್ಲಿ ಪರಿಶುದ್ಧ ಸಭೆಯೂ ನಿಮಗೆ ಇರಬೇಕು. ಊಟಮಾಡುವದನ್ನು ಬಿಟ್ಟು ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡ ಬಾರದು. ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬ ವನ್ನು ಆಚರಿಸಬೇಕು. ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ್ದೇನೆ; ಆದಕಾರಣ ನಿಮ್ಮ ಸಂತತಿಗಳಲ್ಲಿ ಸದಾ ಕಾಲಕ್ಕೂ ಒಂದು ಶಾಸನವಾಗಿ ಈ ದಿನವನ್ನು ನೀವು ಆಚರಿಸಬೇಕು. ಮೊದಲನೆಯ ತಿಂಗಳಿನಲ್ಲಿ ಅದೇ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲದಿಂದ ಆ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳು ದಿನಗಳ ವರೆಗೆ ಹುಳಿಹಿಟ್ಟು ನಿಮ್ಮ ಮನೆಗಳಲ್ಲಿ ಇರಬಾರದು; ಹುಳಿಕಲಸಿದ್ದನ್ನು ಯಾರು ತಿನ್ನುವರೋ ಆ ವ್ಯಕ್ತಿಯು ಪರದೇಶದವನಾಗಲಿ ಸ್ವದೇಶದವ ನಾಗಲಿ ಅವನನ್ನು ಇಸ್ರಾಯೇಲ್ ಸಭೆಯೊಳಗಿಂದ ತೆಗೆದು ಹಾಕಬೇಕು. ಹುಳಿಕಲಸಿದ್ದು ಯಾವದೇ ಆಗಿರಲಿ ನೀವು ತಿನ್ನಬಾರದು; ನಿಮ್ಮ ಎಲ್ಲಾ ನಿವಾಸ ಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು ಎಂದು ಹೇಳಿದನು.
- Acts 25:9 ಅಪೊಸ್ತಲರ ಕೃತ್ಯಗಳು 25:9ಆದರೆ ಯೆಹೂದ್ಯರನ್ನು ಸಂತೋಷ ಪಡಿಸುವದಕ್ಕಾಗಿ ಫೆಸ್ತನು ಪೌಲನಿಗೆ--ನೀನು ಯೆರೂಸಲೇಮಿಗೆ ಬಂದು ನನ್ನ ಮುಂದೆ ಇವುಗಳ ವಿಷಯವಾಗಿ ವಿಚಾರಿಸಲ್ಪಡುವದಕ್ಕೆ ನಿನಗೆ ಇಷ್ಟ ವಿದೆಯೋ ಎಂದು ಕೇಳಿದನು.
- 1 Corinthians 5:7–8 1 ಕೊರಿಂಥದವರಿಗೆ 5:7–8ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ.
- Exodus 13:3–7 ವಿಮೋಚನಕಾಂಡ 13:3–7ಆಗ ಮೋಶೆಯು ಜನರಿಗೆ--ನೀವು ಐಗುಪ್ತದ ದಾಸತ್ವದ ಮನೆಯಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಿಮ್ಮನ್ನು ಅಲ್ಲಿಂದ ಹೊರಗೆ ಬರಮಾಡಿದ್ದಾನೆ. ಹೀಗಿರುವದರಿಂದ ಅಂದು ನೀವು ಹುಳಿ ರೊಟ್ಟಿಯನ್ನು ತಿನ್ನಬಾರದು. ಅಬೀಬ್ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ. ಆದದ ರಿಂದ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶಕ್ಕೆ ಅಂದರೆ ಕಾನಾನ್ಯರ ಹಿತ್ತಿಯರ ಅಮೋರಿಯರ ಹಿವ್ವಿಯರ ಯೆಬೂಸಿಯರ ಹಾಲೂ ಜೇನೂ ಹರಿಯುವ ದೇಶಕ್ಕೆ ನಿನ್ನನ್ನು ಕರೆ ತಂದಾಗ ಈ ಆಚರಣೆಯನ್ನು ಈ ತಿಂಗಳಲ್ಲಿ ಆಚರಿಸ ಬೇಕು. ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಕರ್ತನಿಗೆ ಹಬ್ಬವನ್ನಾಚ ರಿಸಬೇಕು. ಹುಳಿಯಿಲ್ಲದ ರೊಟ್ಟಿಯನ್ನು ಆ ಏಳು ದಿನಗಳಲ್ಲಿ ತಿನ್ನಬೇಕು, ನಿನ್ನ ಬಳಿಯಲ್ಲಿ ಹುಳಿ ರೊಟ್ಟಿಯು ಕಾಣಿಸಬಾರದು. ಇಲ್ಲವೆ ಹುಳಿ ಹಿಟ್ಟು ನಿನ್ನ ಯಾವ ಮೇರೆಯಲ್ಲೂ ಕಾಣಬಾರದು.
- Acts 20:6 ಅಪೊಸ್ತಲರ ಕೃತ್ಯಗಳು 20:6ಹುಳಿಯಿಲ್ಲದ ರೊಟ್ಟಿಯ ದಿವಸ ಗಳಾದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿವಸಗಳಲ್ಲಿ ತ್ರೋವಕ್ಕೆ ಅವರ ಬಳಿಗೆ ಬಂದೆವು. ಅಲ್ಲಿ ಏಳು ದಿವಸಗಳಿದ್ದೆವು.
- Galatians 1:10 ಗಲಾತ್ಯದವರಿಗೆ 1:10ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯ ರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.
- 1 Thessalonians 2:4 1 ಥೆಸಲೊನೀಕದವರಿಗೆ 2:4ದೇವರು ನಮ್ಮನ್ನು ನಂಬಿ ನಮ್ಮ ವಶಕ್ಕೆ ಸುವಾರ್ತೆಯನ್ನು ಒಪ್ಪಿಸಿದನಲ್ಲಾ. ಆದದರಿಂದ ನಾವು ಮನುಷ್ಯರನ್ನು ಮೆಚ್ಚಿಸಬೇಕೆನ್ನದೆ ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತೇವೆ.
- Matthew 26:17 ಮತ್ತಾಯನು 26:17ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು--ಪಸ್ಕದ ಊಟಮಾಡುವದಕ್ಕೆ ನಾವು ನಿನಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ನೀನು ಕೋರುತ್ತೀ ಎಂದು ಆತನನ್ನು ಕೇಳಿದರು.
Original words (Greek)
- And · G2532καί kaí
- because · G3754ὅτι hóti
- saw · G1492εἴδω eídō
- pleased · G701ἀρεστός arestós
- Jews · G2453Ἰουδαῖος Ioudaîos
- further · G4369προστίθημι prostíthēmi
- take · G4815συλλαμβάνω syllambánō
- Peter · G4074Πέτρος Pétros
- also · G2532καί kaí
- Then · G1161δέ dé
- were · G2258ἦν ēn
- days · G2250ἡμέρα hēméra
- bread · G106ἄζυμος ázymos