Daniel · chapter 4 · verse 9
Daniel 4:9 in Kannada
ಓ ಮಂತ್ರ ಗಾರರ ಯಜಮಾನನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರ ಆತ್ಮವಿರುವದೆಂದೂ ಯಾವ ರಹ ಸ್ಯವೂ ನಿನ್ನನ್ನು ಕಳವಳಪಡಿಸದೆಂದೂ ನಾನು ಬಲ್ಲೆನು; ನಾನು ಕಂಡ ಕನಸಿನ ದರ್ಶನವನ್ನೂ ಅದರ ಅರ್ಥ ವನ್ನೂ ನೀನು ನನಗೆ ಹೇಳು.
O mantra gaarara yajamaananaada belteshachcharane, ninnalli parishuddha devara aatmaviruvadendoo yaava raha syavoo ninnannu kalavalapadisadendoo naanu ballenu; naanu kanda kanasina darshanavannoo adara artha vannoo neenu nanage helu.
Daniel 4:9 in English
- King James Version (KJV)
- O Belteshazzar, master of the magicians, because I know that the spirit of the holy gods [is] in thee, and no secret troubleth thee, tell me the visions of my dream that I have seen, and the interpretation thereof.
- World English Bible (WEB)
- “Belteshazzar, master of the magicians, because I know that the spirit of the holy gods is in you and no secret troubles you, tell me the visions of my dream that I have seen, and its interpretation.
- American Standard Version (ASV)
- O Belteshazzar, master of the magicians, because I know that the spirit of the holy gods is in thee, and no secret troubleth thee, tell me the visions of my dream that I have seen, and the interpretation thereof.
- Bible in Basic English (BBE)
- O Belteshazzar, master of the wonder-workers, because I am certain that the spirit of the holy gods is in you, and you are troubled by no secret; this is the dream which I saw: make clear to me its sense.
- Darby Translation (DBY)
- O Belteshazzar, master of the scribes, because I know that the spirit of the holy gods is in thee, and no secret is too hard for thee, tell me the visions of my dream which I have seen, and the interpretation of it.
- Webster's Bible (WBS)
- O Belteshazzar, master of the magicians, because I know that the spirit of the holy gods [is] in thee, and no secret troubleth thee, tell me the visions of my dream that I have seen, and the interpretation of it.
- Young's Literal Translation (YLT)
- 'O Belteshazzar, master of the scribes, as I have known that the spirit of the holy gods [is] in thee, and no secret doth press thee, the visions of my dream that I have seen, and its interpretation, tell.
Read in context
- 7ಆಗ ಮಂತ್ರಗಾರರು, ಜೋತಿಷ್ಯರು, ಕಸ್ದೀಯರು, ಶಕುನಗಾರರು ಒಳಗೆ ಬಂದರು; ನಾನು ಕನಸನ್ನು ಅವರಿಗೆ ತಿಳಿಸಿದೆನು; ಆದರೆ ಅವರು ಅದರ ಅರ್ಥವನ್ನು ನನಗೆ ತಿಳಿಸಲಿಲ್ಲ.
- 8ಕಡೆಯಲ್ಲಿ ನನ್ನ ದೇವರ ಹೆಸರಿನ ಹಾಗೆಯೂ ಬೇಲ್ತೆಶಚ್ಚರನೆಂಬ ಹೆಸರುಳ್ಳವನಾಗಿಯೂ ಪರಿಶುದ್ಧ ದೇವರ ಆತ್ಮವನ್ನು ಹೊಂದಿದವನಾಗಿಯೂ ಇರುವ ದಾನಿಯೇಲನು ನನ್ನ ಮುಂದೆ ಬಂದನು; ಅವನಿಗೆ ನಾನು ಕನಸನ್ನು ತಿಳಿಸಿ ಹೇಳಿದ್ದೇನಂದರೆ--
- 9ಓ ಮಂತ್ರ ಗಾರರ ಯಜಮಾನನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರ ಆತ್ಮವಿರುವದೆಂದೂ ಯಾವ ರಹ ಸ್ಯವೂ ನಿನ್ನನ್ನು ಕಳವಳಪಡಿಸದೆಂದೂ ನಾನು ಬಲ್ಲೆನು; ನಾನು ಕಂಡ ಕನಸಿನ ದರ್ಶನವನ್ನೂ ಅದರ ಅರ್ಥ ವನ್ನೂ ನೀನು ನನಗೆ ಹೇಳು.
- 10ನನ್ನ ಹಾಸಿಗೆಯಲ್ಲಿ ಉಂಟಾದ ನನ್ನ ಮನಸ್ಸಿನ ದರ್ಶನಗಳು--ನಾನು ನೋಡಲಾಗಿ ಇಗೋ, ಭೂಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು.
- 11ಆ ಮರವು ಬೆಳೆದು ಬಲವಾಯಿತು; ಅದರ ಎತ್ತರವು ಆಕಾಶಕ್ಕೂ ಅದು ಭೂಲೋಕದ ಕಟ್ಟಕಡೆಯವರೆಗೂ ಕಾಣಿಸುತ್ತಿತ್ತು.
Cross references
- Daniel 2:48 ದಾನಿಯೇಲನು 2:48ಆಗ ಅರಸನು ದಾನಿಯೇಲನನ್ನು ಒಬ್ಬ ಮಹಾ ವ್ಯಕ್ತಿಯನ್ನಾಗಿ ಮಾಡಿ ಅವನಿಗೆ ಅನೇಕ ದೊಡ್ಡ ಬಹುಮಾನಗಳನ್ನು ಕೊಟ್ಟು ಸಮಸ್ತ ಬಾಬೆಲಿನ ಪ್ರಾಂತ್ಯಗಳಿಗೆ ಅಧಿಕಾರಿಯನ್ನಾ ಗಿಯೂ ಬಾಬೆಲಿನ ಸಮಸ್ತ ಜ್ಞಾನಿಗಳಿಗೆ ಮುಖ್ಯಾಧಿ ಪತಿಯನ್ನಾಗಿಯೂ ನೇಮಿಸಿದನು.ಆ ಮೇಲೆ ದಾನಿ ಯೇಲನು ಅರಸನನ್ನು ಬೇಡಿಕೊಂಡದ್ದರಿಂದ ಅರಸನು ಶದ್ರಕ್ ಮೇಷಕ್ ಮತ್ತು ಅಬೇದ್ನೆಗೋ ಎಂಬವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನಾದರೋ ಅರಸನ ಅರಮನೆಯಲ್ಲೇ ಇದ್ದನು.
- Daniel 5:11 ದಾನಿಯೇಲನು 5:11ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು.
- Daniel 4:8 ದಾನಿಯೇಲನು 4:8ಕಡೆಯಲ್ಲಿ ನನ್ನ ದೇವರ ಹೆಸರಿನ ಹಾಗೆಯೂ ಬೇಲ್ತೆಶಚ್ಚರನೆಂಬ ಹೆಸರುಳ್ಳವನಾಗಿಯೂ ಪರಿಶುದ್ಧ ದೇವರ ಆತ್ಮವನ್ನು ಹೊಂದಿದವನಾಗಿಯೂ ಇರುವ ದಾನಿಯೇಲನು ನನ್ನ ಮುಂದೆ ಬಂದನು; ಅವನಿಗೆ ನಾನು ಕನಸನ್ನು ತಿಳಿಸಿ ಹೇಳಿದ್ದೇನಂದರೆ--
- Ezekiel 28:3 ಯೆಹೆಜ್ಕೇಲನು 28:3ಇಗೋ, ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆ; ರಹಸ್ಯವಾದದ್ದು ಏನಿದ್ದರೂ ನಿನಗೆ ಮರೆಯಾಗಿರುವದಿಲ್ಲ.
- Daniel 1:20 ದಾನಿಯೇಲನು 1:20ಅರಸನು ಅವರ ಹತ್ತಿರ ವಿಚಾರಿಸಿದ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರ ರಿಗಿಂತಲೂ ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡರು.ದಾನಿಯೇಲನು ರಾಜ ನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.
- Daniel 4:5 ದಾನಿಯೇಲನು 4:5ನನ್ನನ್ನು ಭಯಪಡಿಸುವಂತೆ ನಾನು ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಆದ ಯೋಚನೆಗಳು ನನ್ನ ಮನಸ್ಸಿನ ದರ್ಶನ ಗಳು ನನ್ನನ್ನು ಕಳವಳಪಡಿಸಿದವು.
- Judges 7:13–15 ನ್ಯಾಯಸ್ಥಾಪಕರು 7:13–15ಗಿದ್ಯೋನನು ಬಂದಾಗ ಇಗೋ, ಒಬ್ಬನು ತನ್ನ ಜೊತೆಗಾರನಿಗೆ ತನಗಾದ ಸ್ವಪ್ನವನ್ನು ವಿವರಿಸಿ ಹೇಳಿದ್ದೇ ನಂದರೆ--ಇಗೋ, ನಾನು ಒಂದು ಕನಸನ್ನು ಕಂಡೆನು. ಇಗೋ, ಒಂದು ಜವೆಗೋಧಿಯ ರೊಟ್ಟಿಯು ಮಿದ್ಯಾ ನ್ಯರ ದಂಡಿನ ಮೇಲೆ ಹೊರಳಿ ಒಂದು ಡೇರೆಯಮೇಲೆ ಬಂದು ಅದು ಬೀಳುವ ಹಾಗೆ ಅದನ್ನು ಹೊಡೆದು ಕೆಡವಿಹಾಕಿತು; ಆಗ ಡೇರೆಯು ಬಿದ್ದುಹೋಯಿತು ಅಂದನು. ಅವನ ಜೊತೆಗಾರನು ಪ್ರತ್ಯುತ್ತರ ಕೊಟ್ಟು --ಇದು ಯೋವಾಷನ ಮಗನಾದ ಗಿದ್ಯೋನನೆಂಬ ಇಸ್ರಾಯೇಲ್ನ ಮನುಷ್ಯನ ಕತ್ತಿಯೇ ಹೊರತು ಬೇರೆ ಯಲ್ಲ. ದೇವರು ಮಿದ್ಯಾನ್ಯರನ್ನೂ ಈ ಸಮಸ್ತ ದಂಡನ್ನೂ ಅವನ ಕೈಯಲ್ಲಿ ಒಪ್ಪಿಸಿಕೊಟ್ಟನು ಅಂದನು. ಗಿದ್ಯೋನನು ಆ ಕನಸಿನ ವಿವರವನ್ನೂ ಅದರ ಅರ್ಥವನ್ನೂ ಕೇಳಿದಾಗ ಅವನು ಆರಾಧಿಸಿ ಇಸ್ರಾ ಯೇಲ್ ದಂಡಿಗೆ ತಿರುಗಿ ಬಂದು--ಏಳಿರಿ, ಯಾಕಂದರೆ ಕರ್ತನು ಮಿದ್ಯಾನ್ಯರ ದಂಡನ್ನು ನಿಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ ಎಂದು ಹೇಳಿದನು.
- Genesis 41:38 ಆದಿಕಾಂಡ 41:38ಫರೋಹನು ತನ್ನ ಸೇವಕರಿಗೆಯೋಸೇಫನಂತೆ ದೇವರಾತ್ಮವುಳ್ಳ ಮನುಷ್ಯನು ಸಿಕ್ಕಾನೋ ಅಂದನು.
- Isaiah 33:18 ಯೆಶಾಯ 33:18ಆಗ ಭಯವನ್ನು ಮನಸ್ಸಿಗೆ ತಂದುಕೊಳ್ಳುತ್ತಾ ಬರೆಯು ವವನು ಎಲ್ಲಿ? ಅಂಗೀಕರಿಸುವವನು ಎಲ್ಲಿ? ಬುರುಜು ಗಳನ್ನು (ಗೋಪುರಗಳನ್ನು) ಲೆಕ್ಕಮಾಡಿದವನು ಎಲ್ಲಿ ಎಂದು ಅಂದುಕೊಳ್ಳುವಿರಿ.
- Isaiah 54:14 ಯೆಶಾಯ 54:14ನೀನು ನೀತಿಯಲ್ಲಿ ನೆಲೆಗೊಂಡಿರುವಿ; ಹಿಂಸೆ ಯಿಂದ ದೂರವಾಗಿರುವಿ; ನೀನು ಭೀತಿಯಿಂದ ಭಯ ಪಡುವದಿಲ್ಲ; ಅದು ನಿನ್ನ ಸವಿಾಪಕ್ಕೆ ಬಾರದು.
- 1 Samuel 4:8 1 ಸಮುವೇಲನು 4:8ನಮಗೆ ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವನಾರು ಐಗುಪ್ತ್ಯರನ್ನು ಅರಣ್ಯದಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ.
- Genesis 11:6–8 ಆದಿಕಾಂಡ 11:6–8ಕರ್ತನು--ಇಗೋ, ಜನವು ಒಂದೇ; ಅವರೆಲ್ಲರಿಗೆ ಭಾಷೆಯೂ ಒಂದೇ. ಈಗ ಅವರು ಇದನ್ನು ಮಾಡಲಾರಂಭಿಸಿದ್ದಾರೆ; ಇನ್ನು ಮುಂದೆ ಅವರು ಮಾಡುವದಕ್ಕೂ ಊಹಿಸುವದಕ್ಕೂ ಅಡ್ಡಿ ಯಾಗದು. ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು. ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು.
Original words (Hebrew)
- Belteshazzar · H1096בֵּלְטְשַׁאצַּר Bêlṭᵉshaʼtstsar
- master · H7229רַב rab
- magicians · H2749חַרְטֹם charṭôm
- I · H576אֲנָא ʼănâʼ
- know · H3046יְדַע yᵉdaʻ
- spirit · H7308רוּחַ rûwach
- holy · H6922קַדִּישׁ qaddîysh
- gods · H426אֱלָהּ ʼĕlâhh
- no · H3606כֹּל kôl
- secret · H7328רָז râz
- troubleth · H598אֲנַס ʼănaç
- tell · H560אֲמַר ʼămar
- visions · H2376חֵזֵו chêzêv
- dream · H2493חֵלֶם chêlem
- seen · H2370חֲזָא chăzâʼ
- interpretation · H6591פְּשַׁר pᵉshar