Deuteronomy · chapter 32 · verse 31
Deuteronomy 32:31 in Kannada
ನಮ್ಮ ಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
Namma bandeya haage avara bande alla. Idakke namma shatrugale saakshi.
Deuteronomy 32:31 in English
- King James Version (KJV)
- For their rock [is] not as our Rock, even our enemies themselves [being] judges.
- World English Bible (WEB)
- For their rock is not as our Rock, even our enemies themselves concede.
- American Standard Version (ASV)
- For their rock is not as our Rock, Even our enemies themselves being judges.
- Bible in Basic English (BBE)
- For their rock is not like our Rock, even our haters themselves being judges.
- Darby Translation (DBY)
- For their rock is not as our Rock: Let our enemies themselves be judges.
- Webster's Bible (WBS)
- For their rock [is] not as our Rock, even our enemies themselves [being] judges:
- Young's Literal Translation (YLT)
- For not as our Rock [is] their rock, (And our enemies [are] judges!)
Read in context
- 29ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!
- 30ಅವರ ಬಂಡೆ ಅವರನ್ನು ಮಾರಿ ಕರ್ತನು ಅವರನ್ನು ಅಟ್ಟಿಬಿಟ್ಟರೆ ಒಬ್ಬನು ಹೇಗೆ ಸಾವಿರ ಮಂದಿ ಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
- 31ನಮ್ಮ ಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
- 32ಅವರ ದ್ರಾಕ್ಷೇಗಿಡ ಸೊದೋಮಿನ ದ್ರಾಕ್ಷೇಗಿಡ ದಿಂದಲೂ ಗೊಮೋರದ ಹೊಲಗಳೊಳಗಿಂದಲೂ ಅವೆ; ಅವರ ಹಣ್ಣುಗಳು ವಿಷದ ಹಣ್ಣುಗಳು; ಅವರ ಗೊಂಚಲುಗಳು ಕಹಿಯಾಗಿವೆ.
- 33ಅವರ ದ್ರಾಕ್ಷಾರಸವು ಘಟಸರ್ಪಗಳ ವಿಷವೂ ಹಾವುಗಳ ಕ್ರೂರ ವಿಷವೂ ಆಗಿದೆ.
Cross references
- Exodus 14:25 ವಿಮೋಚನಕಾಂಡ 14:25ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ--ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು.
- 1 Samuel 4:8 1 ಸಮುವೇಲನು 4:8ನಮಗೆ ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವನಾರು ಐಗುಪ್ತ್ಯರನ್ನು ಅರಣ್ಯದಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ.
- 1 Samuel 2:2 1 ಸಮುವೇಲನು 2:2ಕರ್ತನ ಹಾಗೆ ಪರಿಶುದ್ಧನಾದವನಿಲ್ಲ; ನಿಶ್ಚಯವಾಗಿ ನಿನ್ನ ಹೊರತು ಮತ್ತೊಬ್ಬನಿಲ್ಲ. ನಮ್ಮ ದೇವರ ಹಾಗೆ ಯಾವ ಬಂಡೆಯೂ ಇಲ್ಲ.
- Jeremiah 40:3 ಯೆರೆಮೀಯ 40:3ನೀವು ಕರ್ತನಿಗೆ ವಿರೋಧವಾಗಿ ಪಾಪಮಾಡಿ ಆತನ ಶಬ್ದವನ್ನು ಕೇಳದೆ ಹೋದದರಿಂದಲೇ ಈ ಕಾರ್ಯವು ನಿಮಗೆ ಸಂಭವಿ ಸಿದೆ.
- Daniel 2:47 ದಾನಿಯೇಲನು 2:47ಅರಸನು ದಾನಿಯೇಲನಿಗೆ ಉತ್ತರವಾಗಿ--ನೀನು ಈ ರಹಸ್ಯವನ್ನು ಪ್ರಕಟ ಮಾಡಲು ಸಮರ್ಥನಾದದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ ಅರಸುಗಳ ಕರ್ತನಾಗಿಯೂ ರಹಸ್ಯಗಳನ್ನು ಪ್ರಕಟಮಾಡುವಾತ ನಾಗಿಯೂ ಆಗಿದ್ದಾನೆ ಅಂದನು.
- Ezra 7:20–21 ಎಜ್ರನು 7:20–21ಇನ್ನು ಏನಾದರೂ ನಿನ್ನ ದೇವರ ಆಲಯಕ್ಕೋಸ್ಕರ ಅಗತ್ಯವಿದ್ದು ನೀನು ಕೊಡಬೇಕಾಗಿ ಬಂದರೆ ಅದನ್ನು ಅರಸನ ಬೊಕ್ಕಸದಿಂದ ತಕ್ಕೊಂಡುಕೊಡು. ಇದಲ್ಲದೆ ಅರಸನಾಗಿರುವ ಆರ್ತಷಸ್ತನಾದ ನಾನು ನದಿಯ ಆಚೆಯಲ್ಲಿರುವ ಎಲ್ಲಾ ಬೊಕ್ಕಸದವ ರಿಗೆ ಕೊಡುವ ಅಪ್ಪಣೆ ಏನಂದರೆ--
- Ezra 1:3 ಎಜ್ರನು 1:3ಆತನ ಸಮಸ್ತ ಜನರಾದ ನಿಮ್ಮೊಳಗೆ ಯಾರಿದ್ದೀರಿ? ಅವನ ಸಂಗಡ ಅವನ ದೇವರು ಇರಲಿ. ಅವನು ಯೆಹೂದದಲ್ಲಿ ರುವ ಯೆರೂಸಲೇಮಿಗೆ ಹೋಗಲಿ. ಯೆರೂಸಲೇಮಿನಲ್ಲಿರುವ ಇಸ್ರಾಯೇಲಿನ ದೇವರಾದ ಕರ್ತನ ಆಲಯವನ್ನು ಕಟ್ಟಲಿ (ಆತನೇ ದೇವರು).
- Numbers 23:23 ಅರಣ್ಯಕಾಂಡ 23:23ನಿಶ್ಚಯ ವಾಗಿ ಯಾಕೋಬನಿಗೆ ವಿರೋಧವಾಗಿ ಶಕುನವಿಲ್ಲ; ಇಸ್ರಾಯೇಲನಿಗೆ ವಿರೋಧವಾಗಿ ಯಾವ ಕಣಿ ಇಲ್ಲ; ತತ್ಕಾಲದಲ್ಲಿ ದೇವರು ಏನು ಮಾಡಿದನೆಂದು ಯಾಕೋಬನ ವಿಷಯವಾಗಿಯೂ ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.
- Daniel 6:26–27 ದಾನಿಯೇಲನು 6:26–27ನಾನು ಮಾಡುವ ತೀರ್ಮಾನವೇನಂದರೆ, ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯರು ದಾನಿಯೇಲನ ದೇವರಿಗೆ ಭಯಭಕ್ತಿ ಯಿಂದ ನಡೆದುಕೊಳ್ಳಬೇಕು. ಯಾಕಂದರೆ ಜೀವವುಳ್ಳ ದೇವರಾಗಿದ್ದು ಎಂದೆಂದಿಗೂ ಸ್ಥಿರವಾದವನು ಆತನೇ. ಆತನ ರಾಜ್ಯವು ನಾಶವಾಗದೆ ಆತನ ಆಳಿಕೆಯು ಶಾಶ್ವತವಾಗಿ ಕೊನೆಯವರೆಗೂ ನಿಲ್ಲುವದು. ಆತನೇ ಉದ್ಧರಿಸುವವನೂ ರಕ್ಷಿಸುವವನೂ ಆಗಿದ್ದು ಪರ ಲೋಕದಲ್ಲಿಯೂ ಭೂಲೋಕದಲ್ಲಿಯೂ ಅದ್ಭುತ ಮಹತ್ವಗಳನ್ನು ನಡೆಸುತ್ತಾನೆ; ದಾನಿಯೇಲನನ್ನು ಸಿಂಹ ಗಳ ಸಾಮರ್ಥ್ಯದಿಂದ ಬಿಡಿಸಿದಾತನು ಆತನೇ.ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು.
- Daniel 3:29 ದಾನಿಯೇಲನು 3:29ಆದದರಿಂದ ನಾನು ನಿರ್ಣಯಮಾಡುವದರಿಂದ ಸಕಲ ಪ್ರಜೆ, ಜನಾಂಗ ಮತ್ತು ಭಾಷೆಗಳಲ್ಲಿ ಯಾರು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರ ದೇವ ರಿಗೆ ವಿರೋಧವಾಗಿ ದೂಷಣೆ ಮಾಡುವರೋ ಅವರು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಅವರ ಮನೆಗಳು ತಿಪ್ಪೆಗುಂಡಿಗಳಾಗಿ ಮಾಡಲ್ಪಡುವದು. ಈ ವಿಧವಾಗಿ ರಕ್ಷಿಸುವ ದೇವರು ಇನ್ಯಾರು ಇರುವದಿಲ್ಲ.ಆಗ ಅರಸನು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.
- Ezra 6:9–12 ಎಜ್ರನು 6:9–12ಇದಲ್ಲದೆ ಅವರು ಪರ ಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ ಅರಸನ ಪ್ರಾಣಕ್ಕೋಸ್ಕರವೂ ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡುವ ಹಾಗೆಯೂ ಪರಲೋಕದ ದೇವರಿಗೆ ದಹನಬಲಿಗಳ ನಿಮಿತ್ತ ಅವರಿಗೆ ಬೇಕಾದ ಹೋರಿ ಗಳೂ ಟಗರುಗಳೂ ಕುರಿಮರಿಗಳೂ ಗೋಧಿಯೂ ಉಪ್ಪೂ ದ್ರಾಕ್ಷಾರಸವೂ ಎಣ್ಣೆಯೂ ಪ್ರತಿದಿನ ತಪ್ಪದೆ ಯೆರೂಸಲೇಮಿನಲ್ಲಿರುವ ಯಾಜಕರ ನೇಮಕದ ಪ್ರಕಾರ ಅವರಿಗೆ ಕೊಡಲ್ಪಡಲಿ. ನಾನು ಕೊಡುವ ಅಪ್ಪಣೆ ಏನಂದರೆ--ಯಾವನಾದರೂ ಈ ಮಾತನ್ನು ಬದಲು ಮಾಡಿದರೆ ಅವನ ಮನೆಯಿಂದ ಮರ ಕಿತ್ತು ನೆಡಲ್ಪಡಲಿ; ಅವನು ಅದರಲ್ಲಿ ಗಲ್ಲಿಗೆ ಹಾಕಲ್ಪಡಲಿ; ಅವನ ಮನೆಯು ಇದರ ನಿಮಿತ್ತ ತಿಪ್ಪೆ ಮಾಡಲ್ಪಡಲಿ. ಇದಲ್ಲದೆ ತನ್ನ ನಾಮವನ್ನು ಇರಿಸಲು ಮಾಡಿದ ದೇವರು ಯೆರೂಸಲೇಮಿನಲ್ಲಿರುವ ದೇವರ ಈ ಆಲಯವನ್ನು ಬದಲು ಮಾಡುವದಕ್ಕೂ ಕೆಡಿಸು ವದಕ್ಕೂ ತಮ್ಮ ಕೈಯನ್ನು ಚಾಚುವ ಎಲ್ಲಾ ಅರಸುಗ ಳನ್ನೂ ಜನರನ್ನೂ ಆತನು ಕೆಡಿಸಲಿ. ದಾರ್ಯಾ ವೆಷನಾದ ನಾನು ಅಪ್ಪಣೆಕೊಟ್ಟಿದ್ದೇನೆ; ಅದು ತ್ವರೆ ಯಾಗಿ ಮಾಡಲ್ಪಡಲಿ ಎಂಬದು.
- Numbers 23:8 ಅರಣ್ಯಕಾಂಡ 23:8ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಕರ್ತನು ಎದುರಿಸದವನನ್ನು ನಾನು ಹೇಗೆ ಎದುರಿ ಸಲಿ?