Ecclesiastes · chapter 2 · verse 14
Ecclesiastes 2:14 in Kannada
ಜ್ಞಾನಿಯ ಕಣ್ಣುಗಳು ಅವನ ತಲೆಯಲ್ಲಿರುತ್ತವೆ. ಬುದ್ಧಿಹೀನನು ಕತ್ತಲೆಯಲ್ಲಿ ನಡೆಯುತ್ತಾನೆ; ಅವರೆಲ್ಲರಿಗೂ ಒಂದೇ ಗತಿಯು ಸಂಭವಿಸುವದೆಂದು ನನ್ನಷ್ಟಕ್ಕೆ ನಾನೇ ಗ್ರಹಿಸಿ ಕೊಂಡೆನು.
Jnyaaniya kannugalu avana taleyalliruttave. Buddhiheenanu kattaleyalli nadeyuttaane; avarellarigoo onde gatiyu sambhavisuvadendu nannashtakke naane grahisi kondenu.
Ecclesiastes 2:14 in English
- King James Version (KJV)
- The wise man’s eyes [are] in his head; but the fool walketh in darkness: and I myself perceived also that one event happeneth to them all.
- World English Bible (WEB)
- The wise man’s eyes are in his head, and the fool walks in darkness—and yet I perceived that one event happens to them all.
- American Standard Version (ASV)
- The wise man’s eyes are in his head, and the fool walketh in darkness: and yet I perceived that one event happeneth to them all.
- Bible in Basic English (BBE)
- The wise man's eyes are in his head, but the foolish man goes walking in the dark; but still I saw that the same event comes to them all.
- Darby Translation (DBY)
- The wise man's eyes are in his head, and the fool walketh in darkness; but I myself also perceived that one event happeneth to them all.
- Webster's Bible (WBS)
- The wise man's eyes [are] in his head; but the fool walketh in darkness: and I myself perceived also that one event happeneth to them all.
- Young's Literal Translation (YLT)
- The wise! — his eyes [are] in his head, and the fool in darkness is walking, and I also knew that one event happeneth with them all;
Read in context
- 12ಜ್ಞಾನವನ್ನೂ ಹುಚ್ಚುತನವನ್ನೂ ಮೂಢತೆಯನ್ನೂ ನೋಡುವದಕ್ಕೆ ನಾನು ತಿರುಗಿಕೊಂಡೆನು; ಅರಸನ ತರುವಾಯ ಬರುವ ಮನುಷ್ಯನು ಏನು ಮಾಡಾನು? ಮೊದಲಿದ್ದದ್ದು ಆಗಲೇ ನಡೆಯಿತು.
- 13ಆಗ ಕತ್ತಲೆಗಿಂತ ಬೆಳಕು ಶ್ರೇಷ್ಠವಾಗಿರುವಂತೆ ಮೂಢತನಕ್ಕಿಂತ ಜ್ಞಾನವು ಶ್ರೇಷ್ಠವಾಗಿದೆ ಎಂದು ನಾನು ಕಂಡೆನು.
- 14ಜ್ಞಾನಿಯ ಕಣ್ಣುಗಳು ಅವನ ತಲೆಯಲ್ಲಿರುತ್ತವೆ. ಬುದ್ಧಿಹೀನನು ಕತ್ತಲೆಯಲ್ಲಿ ನಡೆಯುತ್ತಾನೆ; ಅವರೆಲ್ಲರಿಗೂ ಒಂದೇ ಗತಿಯು ಸಂಭವಿಸುವದೆಂದು ನನ್ನಷ್ಟಕ್ಕೆ ನಾನೇ ಗ್ರಹಿಸಿ ಕೊಂಡೆನು.
- 15ಆಗ ನಾನು ನನ್ನ ಹೃದಯದಲ್ಲಿ --ಮೂಢನಿಗೆ ಸಂಭವಿಸುವಂತೆ ನನಗೂ ಸಂಭವಿಸು ತ್ತದೆ. ಇದರಿಂದ ಯಾಕೆ ನಾನು ಹೆಚ್ಚು ಜ್ಞಾನದಿಂದ ಇದ್ದೇನೆ ಎಂದು ಅಂದುಕೊಂಡೆನು. ಆಗ ನಾನು ಇದೂ ವ್ಯರ್ಥವೆಂದು ನನ್ನ ಹೃದಯದಲ್ಲಿ ಅಂದು ಕೊಂಡೆನು.
- 16ಮೂಢನಿಗಿಂತ ಜ್ಞಾನವಂತನ ಜ್ಞಾಪ ಕವು ಎಂದಿಗೂ ಇರುವದಿಲ್ಲ; ಈಗ ಇರುವದು ಬರುವ ದಿವಸಗಳಲ್ಲಿ ಮರೆಯಲ್ಪಡುತ್ತದೆ. ಮೂಢನಂತೆ ಜ್ಞಾನಿಯೂ ಸಾಯುವದು ಹೇಗೆ?
Cross references
- Psalm 49:10 ಕೀರ್ತನೆಗಳು 49:10ಜ್ಞಾನಿಗಳು ಸಾಯುವರು; ಹುಚ್ಚನು ಪಶುಪ್ರಾಯನು ಕೂಡ ನಾಶವಾಗಿ ಬೇರೆಯವರಿಗೆ ತಮ್ಮ ಆಸ್ತಿಯನ್ನು ಬಿಡುವದನ್ನು ಅವನು ನೋಡುತ್ತಾನೆ.
- Proverbs 17:24 ಜ್ಞಾನೋಕ್ತಿಗಳು 17:24ವಿವೇಕಿಯ ಮುಂದೆ ಜ್ಞಾನವಿದೆ; ಬುದ್ಧಿಹೀನನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಇರುವವು.
- Ecclesiastes 9:11 ಪ್ರಸಂಗಿ 9:11ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನೋಡಿದ್ದೇನಂದರೆ, ವೇಗಿಗಳಿಗೆ ಓಟವೂ ಪರಾಕ್ರಮ ಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ರೊಟ್ಟಿಯೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವದಿಲ್ಲ. ಕಾಲವೂ ಗತಿಯೂ ಅವರೆಲ್ಲರಿಗೆ ಸಂಭವಿ ಸುತ್ತವೆ.
- Ecclesiastes 3:19 ಪ್ರಸಂಗಿ 3:19ಮೃಗಗಳಿಗೆ ಸಂಭವಿಸುವದು ಮನುಷ್ಯರ ಪುತ್ರರಿಗೂ ಸಂಭವಿಸುತ್ತದೆ; ಅವರಿಗೆ ಒಂದೇ ಸಂಗತಿ ಸಂಭವಿಸು ತ್ತದೆ; ಒಂದು ಸಾಯುವ ಹಾಗೆ ಮತ್ತೊಂದು ಸಾಯು ತ್ತದೆ; ಹೌದು, ಅವರೆಲ್ಲರಿಗೂ ಒಂದೇ ಒಂದು ಉಸಿ ರಾಟ ಇದೆ; ಆದಕಾರಣ ಮೃಗಕ್ಕಿಂತ ಮನುಷ್ಯನಿಗೆ ಯಾವ ಶ್ರೇಷ್ಠತೆಯೂ ಇಲ್ಲ; ಎಲ್ಲವೂ ವ್ಯರ್ಥ.
- 1 John 2:11 1 ಯೋಹಾನನು 2:11ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿ ದ್ದಾನೆ ಮತ್ತು ಕತ್ತಲೆಯಲ್ಲಿ ನಡೆದುಕೊಳ್ಳುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡು ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಎಂದು ಅವನಿಗೆ ತಿಳಿಯದು.
- Ecclesiastes 9:1–3 ಪ್ರಸಂಗಿ 9:1–3ನಾನು ಇವೆಲ್ಲವುಗಳ ಮೇಲೆ ಮನಸ್ಸಿಟ್ಟು ಇವೆಲ್ಲವುಗಳಲ್ಲಿ ನಾನು ತೀರ್ಮಾನಿಸಿ ದ್ದೇನಂದರೆ--ನೀತಿವಂತನು ಮತ್ತು ಜ್ಞಾನಿ ಇವರ ಕೆಲಸಗಳು ದೇವರ ಕೈಯಲ್ಲಿವೆ; ಯಾವ ಮನುಷ್ಯನೂ ಅವರ ಮುಂದಿರುವ ಎಲ್ಲವುಗಳನ್ನು, ಅಂದರೆ ಪ್ರೀತಿ ಯನ್ನು ಅಥವಾ ದ್ವೇಷವನ್ನು ತಿಳಿಯಲಾರನು. ಎಲ್ಲವು ಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವವು. ನೀತಿವಂತನಿಗೂ ದುಷ್ಟನಿಗೂ ಸಂಗತಿ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವದು. ಒಳ್ಳೆಯ ವನ ಹಾಗೆಯೇ ಪಾಪಿಯೂ ಇರುವನು; ಆಣೆಯಿಡು ವವನಿಗೆ ಹೇಗೋ ಹಾಗೆಯೇ ಆಣೆಗೆ ಭಯಪಡುವ ವನೂ ಇರುವನು. ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ಕೆಟ್ಟದ್ದು; ಇದಕ್ಕೆಲ್ಲಾ ಒಂದು ಗತಿಯಿದೆ; ಹೌದು, ಮನುಷ್ಯ ಕುಮಾರರ ಹೃದಯಗಳು ಸಹ ಕೆಟ್ಟತನದಿಂದ ತುಂಬಿವೆ; ಅವರು ಜೀವಿಸುವಾಗ ಅವರ ಹೃದಯಗಳಲ್ಲಿ ಹುಚ್ಚು ತನವಿದೆ. ಅನಂತರ ಅವರು ಸಾಯುತ್ತಾರೆ (ಸತ್ತವರ ಬಳಿಗೆ ಹೋಗುತ್ತಾರೆ.)
- Ecclesiastes 9:16 ಪ್ರಸಂಗಿ 9:16ಆ ಮೇಲೆ ನಾನು--ಜ್ಞಾನವು ಬಲಕ್ಕಿಂತ ಉತ್ತಮವಾದದ್ದಾಗಿ ದ್ದಾಗ್ಯೂ ಬಡವನ ಜ್ಞಾನವು ತಿರಸ್ಕರಿಸಲ್ಪಟ್ಟದ್ದಾಗಿದ್ದು ಅವನ ಮಾತುಗಳನ್ನು ಯಾರೂ ಲಕ್ಷಿಸುವದಿಲ್ಲ ಎಂದು ಅಂದುಕೊಂಡೆನು.
- Proverbs 14:8 ಜ್ಞಾನೋಕ್ತಿಗಳು 14:8ಜಾಣನ ಜ್ಞಾನವು ತನ್ನ ಮಾರ್ಗವನ್ನು ಗ್ರಹಿಸುವಂತ ದ್ದಾಗಿದೆ; ಮೂಢರ ಬುದ್ಧಿಹೀನತೆಯು ಮೋಸಕರ.
- Ecclesiastes 8:1 ಪ್ರಸಂಗಿ 8:1ಜ್ಞಾನಿಯ ಹಾಗೆ ಇರುವವನು ಯಾರು? ಈ ಸಂಗತಿಯ ಅರ್ಥವನ್ನು ಬಲ್ಲವನು ಯಾರು? ಒಬ್ಬ ಮನುಷ್ಯನ ಜ್ಞಾನವು ಅವನ ಮುಖ ವನ್ನು ಬೆಳಗಿಸುತ್ತದೆ, ಅವನ ಧೈರ್ಯದ ಮುಖವು ಬದಲಾಗುವದು.
- Ecclesiastes 10:2–3 ಪ್ರಸಂಗಿ 10:2–3ಒಬ್ಬ ಜ್ಞಾನಿಯಾದ ಮನು ಷ್ಯನ ಹೃದಯವು ಅವನ ಬಲಗೈಯಲ್ಲಿರುತ್ತದೆ; ಆದರೆ ಒಬ್ಬ ಮೂರ್ಖನ ಹೃದಯವು ಅವನ ಎಡಗಡೆಯಿ ರುತ್ತದೆ. ಹೌದು, ಮೂರ್ಖನು ಮಾರ್ಗದಲ್ಲಿ ನಡೆ ಯುವಾಗಲೂ ಸಹ ಅವನ ಜ್ಞಾನವು ಅವನನ್ನು ತಪ್ಪಿಸುತ್ತದೆ; ಅವನು ತಾನು ಮೂರ್ಖನೆಂದು ಪ್ರತಿಯೊಬ್ಬನಿಗೂ ಹೇಳುತ್ತಾನೆ.
- Ecclesiastes 6:6 ಪ್ರಸಂಗಿ 6:6ಹೌದು, ಎರಡು ಸಾವಿರ ದಷ್ಟು ವರುಷಗಳು ಅವನು ಬದುಕಿದರೂ ಅವನು ಸುಖವನ್ನು ಅನುಭವಿಸಲಿಲ್ಲ; ಎಲ್ಲರೂ ಒಂದೇ ಸ್ಥಳಕ್ಕೆ ಹೋಗುತ್ತಾರಲ್ಲವೇ?
- Psalm 19:10 ಕೀರ್ತನೆಗಳು 19:10ಅವು ಬಂಗಾರಕ್ಕಿಂತಲೂ ಬಹಳ ಅಪರಂಜಿ ಗಿಂತಲೂ ಅಪೇಕ್ಷಿಸತಕ್ಕವುಗಳು; ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾದವು ಗಳು.