Ecclesiastes · chapter 5 · verse 17
Ecclesiastes 5:17 in Kannada
ತನ್ನ ಜೀವಮಾನದಲ್ಲೆಲ್ಲಾ ಅವನು ಕತ್ತಲೆಯಲ್ಲಿ ತಿನ್ನುತ್ತಾನೆ; ತನ್ನ ವ್ಯಾಧಿಯೊಂದಿಗೆ ಅವನಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.
Tanna jeevamaanadallellaa avanu kattaleyalli tinnuttaane; tanna vyaadhiyondige avanige bahala vyatheyoo krodhavoo iruttade.
Ecclesiastes 5:17 in English
- King James Version (KJV)
- All his days also he eateth in darkness, and [he hath] much sorrow and wrath with his sickness.
- World English Bible (WEB)
- All his days he also eats in darkness, he is frustrated, and has sickness and wrath.
- American Standard Version (ASV)
- All his days also he eateth in darkness, and he is sore vexed, and hath sickness and wrath.
- Bible in Basic English (BBE)
- All his days are in the dark, and he has much sorrow, pain, disease, and trouble.
- Darby Translation (DBY)
- All his days also he eateth in darkness, and hath much vexation, and sickness, and irritation.
- Webster's Bible (WBS)
- All his days also he eateth in darkness, and [he hath] much sorrow and wrath with his sickness.
- Young's Literal Translation (YLT)
- Also all his days in darkness he consumeth, and sadness, and wrath, and sickness abound.
Read in context
- 15ತನ್ನ ತಾಯಿಯ ಗರ್ಭದಿಂದ ಅವನು ಹೇಗೆ ಬಂದನೋ ಅವನು ಬಂದ ಹಾಗೆ ಬೆತ್ತಲೆಯಾಗಿ ತಿರುಗಿ ಹೋಗುವನು; ತನ್ನ ಕೈಯಲ್ಲಿ ತಕ್ಕೊಂಡು ಹೋಗುವದಕ್ಕೆ ತನ್ನ ಪ್ರಯಾಸದಲ್ಲಿ ಯಾವದನ್ನು ತೆಗೆದುಕೊಂಡು ಹೋಗುವದಿಲ್ಲ.
- 16ಇದೂ ಕೂಡ ವ್ಯಥೆಯಿಂದ ಕೂಡಿದ ಕೆಟ್ಟತನವೇ. ಅದು ಯಾವ ದಂದರೆ ಎಲ್ಲಾ ವಿಷಯಗಳಲ್ಲಿ ತಾನು ಹೇಗೆ ಬಂದನೋ ಹಾಗೆಯೇ ಹೋಗುವನು; ಗಾಳಿಗಾಗಿ ಪ್ರಯಾಸಪಟ್ಟ ವನಿಗೆ ಲಾಭವೇನಿದೆ?
- 17ತನ್ನ ಜೀವಮಾನದಲ್ಲೆಲ್ಲಾ ಅವನು ಕತ್ತಲೆಯಲ್ಲಿ ತಿನ್ನುತ್ತಾನೆ; ತನ್ನ ವ್ಯಾಧಿಯೊಂದಿಗೆ ಅವನಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.
- 18ನಾನು ಕಂಡದ್ದನ್ನು ನೋಡು; ದೇವರು ತನಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ತಾನು ಕೈಕೊಂಡ ಪ್ರಯಾಸದ ಸುಖವನ್ನು ಅನುಭವಿಸಿ ತಿಂದು ಕುಡಿ ಯುವದು ಮನುಷ್ಯನಿಗೆ ಒಳ್ಳೆಯದೂ ಉಚಿತವಾದದ್ದೂ ಆಗಿದೆ; ಅದು ಅವನ ಪಾಲು.
- 19ಪ್ರತಿ ಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಆಸ್ತಿಪಾಸ್ತಿಗ ಳನ್ನೂ ಅವುಗಳನ್ನು ಅನುಭವಿಸುವದಕ್ಕೆ ಆತನು ಕೊಟ್ಟ ಸಾಮರ್ಥ್ಯವನ್ನೂ ಅವನು ತನ್ನ ಪಾಲನ್ನು ತೆಗೆದು ಕೊಂಡು ತನ್ನ ಪ್ರಯಾಸದಲ್ಲಿ ಆನಂದಿಸುವದೂ ದೇವರ ದಾನದಿಂದಲೇ.ತನ್ನ ಜೀವಿತದ ದಿನಗಳನ್ನು ಅವನು ಹೆಚ್ಚಾಗಿ ಗಣನೆಗೆ ತಾರನು; ತನ್ನ ಹೃದಯದ ಸಂತೋಷ ದಲ್ಲಿ ದೇವರು ಅವನಿಗೆ ಉತ್ತರಕೊಡುತ್ತಾನೆ.
Cross references
- Psalm 127:2 ಕೀರ್ತನೆಗಳು 127:2ರೊಟ್ಟಿಗಾಗಿ ವ್ಯಥೆಪಟ್ಟು ಬೆಳಿಗ್ಗೆ ಬೇಗ ಏಳುವದೂ ರಾತ್ರಿ ತಡವಾಗಿ ಮಲಗುವದೂ ವ್ಯರ್ಥವೇ. ಆತನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಅದನ್ನು ಕೊಡುತ್ತಾನೆ.
- Job 21:25 ಯೋಬನು 21:25ಮತ್ತೊಬ್ಬನು ಕಹಿಯಾದ ಪ್ರಾಣದಿಂದ ಸಾಯುತ್ತಾನೆ; ಅವನು ಸಂತೋಷದಲ್ಲಿ ಏನೂ ಉಣ್ಣು ವದಿಲ್ಲ.
- 2 Kings 5:27 2 ಅರಸುಗಳು 5:27ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು.
- 2 Chronicles 24:24–25 2 ಪೂರ್ವಕಾಲವೃತ್ತಾಂತ 24:24–25ಅವರು ತಮ್ಮ ಪಿತೃಗಳ ದೇವರಾದ ಕರ್ತನನ್ನು ಬಿಟ್ಟದ್ದರಿಂದ ಅರಾಮ್ಯರು ಅಲ್ಪಜನವಾದ ಸೈನ್ಯದ ಸಂಗಡ ಬಂದಾಗ ಕರ್ತನು ಬಹು ಅಧಿಕ ವಾದ ಸೈನ್ಯವನ್ನು ಅವರ ಕೈಯಲ್ಲಿ ಒಪ್ಪಿಸಿದನು. ಹೀಗೆ ಅವರು ಯೆಹೋವಾಷನಿಗೆ ವಿರೋಧವಾಗಿ ನ್ಯಾಯ ತೀರ್ವಿಕೆ ಮಾಡಿದರು. ಅವನು ಕಠಿಣ ರೋಗದಲ್ಲಿ ಬಿದ್ದಿರುವಾಗ ಅವನನ್ನು ಬಿಟ್ಟುಹೋದರು. ಅವರು ಅವನನ್ನು ಬಿಟ್ಟತರುವಾಯ ಯಾಜಕನಾದ ಯೆಹೋ ಯಾದನ ಮಕ್ಕಳ ರಕ್ತಾಪರಾಧದ ನಿಮಿತ್ತವಾಗಿ ಅವನ ಸ್ವಂತ ಸೇವಕರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಅವನು ಸಾಯುವ ಹಾಗೆ ಅವನ ಮಂಚದ ಮೇಲೆ ಅವನನ್ನು ಕೊಂದುಹಾಕಿದರು. ಅವರು ಅವ ನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಅರಸುಗಳ ಸಮಾಧಿಗಳ ಬಳಿಯಲ್ಲಿ ಅವನನ್ನು ಹೂಣಿ ಡಲಿಲ್ಲ.
- 1 Corinthians 11:30–32 1 ಕೊರಿಂಥದವರಿಗೆ 11:30–32ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರೂ ರೋಗಿಗಳೂ ಆಗಿದ್ದಾರೆ; ಅನೇಕರು ನಿದ್ರಿಸುತ್ತಾರೆ. ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ. ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.
- Psalm 78:33 ಕೀರ್ತನೆಗಳು 78:33ಆಗ ಆತನು ಅವರ ದಿವಸಗಳನ್ನು ಉಸಿರಿ ನಂತೆಯೂ ಅವರ ವರುಷಗಳನ್ನು ಕಳವಳದಲ್ಲಿಯೂ ಮುಗಿಸಿದನು.
- 2 Kings 1:2 2 ಅರಸುಗಳು 1:2ಇದಲ್ಲದೆ ಅಹಜ್ಯನು ಸಮಾರ್ಯ ದಲ್ಲಿರುವ ತನ್ನ ಮೇಲು ಮಾಳಿಗೆಯ ಜಾಲರು ಕಿಟಿಕಿ ಯಿಂದ ಬಿದ್ದು ರೋಗಿಷ್ಟನಾದದರಿಂದ ಸೇವಕರನ್ನು ಕರೆದು--ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿಗೆ ಹೋಗಿ--ನಾನು ಈ ರೋಗದಿಂದ ವಾಸಿಯಾ ಗುವೇನೋ ಇಲ್ಲವೋ ಎಂದು ವಿಚಾರಿಸಲು ಅವರನ್ನು ಕಳುಹಿಸಿದನು.
- Proverbs 1:27–29 ಜ್ಞಾನೋಕ್ತಿಗಳು 1:27–29ನಿಮ್ಮ ಭಯವು ತೀವ್ರ ದುಃಖದಂತೆಯೂ ನಿಮ್ಮ ನಾಶನವು ತುಫಾನಿನಂತೆಯೂ ಬರುವಾಗ ಅಪಾಯ ಮತ್ತು ಆಪತ್ತು ನಿಮ್ಮ ಮೇಲೆ ಬರುವಾಗ ನಾನು ಸಹ ನಕ್ಕು ಪರಿಹಾಸ್ಯಮಾಡುವೆನು. ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ. ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ
- Psalm 90:7–11 ಕೀರ್ತನೆಗಳು 90:7–11ನಾವು ನಿನ್ನ ಕೋಪದಿಂದ ತೀರಿಹೋಗಿ, ನಿನ್ನ ರೌದ್ರದಿಂದ ತಲ್ಲಣಿಸುತ್ತೇವೆ. ನಮ್ಮ ಅಕ್ರಮಗಳನ್ನು ನಿನ್ನ ಮುಂದೆಯೂ ನಮ್ಮ ಮರೆಯಾದ ಪಾಪಗಳನ್ನು ನಿನ್ನ ಮುಖದ ಬೆಳಕಿನಲ್ಲಿಯೂ ಇಟ್ಟಿದ್ದೀ. ನಮ್ಮ ದಿವಸಗಳೆಲ್ಲಾ ನಿನ್ನ ಕೋಪದಿಂದ ದಾಟಿಹೋದವು. ನಮ್ಮ ವರುಷಗಳನ್ನು ಕೇಳಿದ ಕಥೆಯ ಹಾಗೆ ಕಳೆ ಯುತ್ತೇವೆ. ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ, ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವು ಗಳ ಬಲವು ಪ್ರಯಾಸವೂ ದುಃಖವೂ ಆಗಿವೆ; ಅದು ಬೇಗ ಕೊಯಿದು ಹಾಕಲ್ಪಡುತ್ತದೆ; ನಾವು ಹಾರಿ ಹೋಗುತ್ತೇವೆ. ನಿನ್ನ ಕೋಪದ ಬಲವನ್ನು ತಿಳಿದ ವನಾರು? ನಿನ್ನ ಭಯದ ಪ್ರಕಾರವೇ ನಿನ್ನ ಉಗ್ರತೆ ಇದೆ.
- 1 Kings 17:12 1 ಅರಸುಗಳು 17:12ಅದಕ್ಕೆ ಅವಳು--ನಿನ್ನ ದೇವರಾದ ಕರ್ತನ ಜೀವದಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ ತಂಬಿಗೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ಇಗೋ, ನಾನೂ ನನ್ನ ಕುಮಾರನೂ ಅದನ್ನು ತಿಂದು ಸತ್ತುಹೋಗುವ ಹಾಗೆ ಅದನ್ನು ನನಗೂ ಅವನಿಗೂ ಸಿದ್ಧ ಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ ಅಂದಳು.
- 2 Kings 1:6 2 ಅರಸುಗಳು 1:6ಅವರು ಅವನಿಗೆ ಹೇಳಿದ್ದೇನಂದರೆ--ಒಬ್ಬ ಮನು ಷ್ಯನು ಎದುರಾಗಿ ಬಂದು ನಮಗೆ--ನೀವು ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ತಿರುಗಿ ಹೋಗಿ-- ಇಸ್ರಾ ಯೇಲ್ಯರಲ್ಲಿ ದೇವರು ಇಲ್ಲದೆ ಇರುವದರಿಂದಲೋ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವದಕ್ಕೆ ಕಳುಹಿಸುವದೇನು? ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವಿ ಎಂದು ಕರ್ತನು ಹೇಳುತ್ತಾನೆಂಬದಾಗಿ ಅವನಿಗೆ ಹೇಳಿರಿ ಅಂದನು.
- 2 Chronicles 16:10–12 2 ಪೂರ್ವಕಾಲವೃತ್ತಾಂತ 16:10–12ಆಗ ಆಸನು ಪ್ರವಾದಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಅವನ ಮಾತು ಗಳ ನಿಮಿತ್ತ ಅವನ ಮೆಲೆ ರೌದ್ರವುಳ್ಳವನಾಗಿದ್ದನು. ಇದಲ್ಲದೆ ಅದೇ ಕಾಲದಲ್ಲಿ ಆಸನು ಜನರಲ್ಲಿ ಕೆಲವ ರನ್ನು ಬಾಧಿಸಿದನು. ಇಗೋ, ಆಸನ ಕಾರ್ಯಗಳು ಮೊದಲನೆಯವುಗಳೂ ಕಡೆಯವುಗಳೂ ಯೆಹೂ ದದ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ಬರೆದಿವೆ. ಆಸನು ತನ್ನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ತನ್ನ ಕಾಲುಗಳಲ್ಲಿ ರೋಗವುಳ್ಳವನಾ ಗಿದ್ದನು. ಅವನ ರೋಗವು ಅತಿಘೋರವಾಯಿತು. ಅವನು ತನ್ನ ರೋಗದಲ್ಲಿ ಕರ್ತನನ್ನು ಹುಡುಕದೆ ವೈದ್ಯರನ್ನು ಹುಡುಕಿದನು.