Esther · chapter 9 · verse 27
Esther 9:27 in Kannada
ಆದದರಿಂದ ಈ ಪತ್ರದ ಸಮಸ್ತ ವಾರ್ತೆಗಳಿಗೋಸ್ಕರವೂ ಅವರು ಈ ಕಾರ್ಯ ವನ್ನು ಕುರಿತು ನೋಡಿದ್ದಕ್ಕೋಸ್ಕರವೂ ತಮಗೆ ಸಂಭ ವಿಸಿದ್ದಕ್ಕೊಸ್ಕರವೂ ಯೆಹೂದ್ಯರು, ತಾವೂ ತಮ್ಮ ಸಂತಾನದವರೂ ತಮಗೆ ಸೇರಿದವರೆಲ್ಲರೂ ತಪ್ಪದೇ ಪ್ರತಿ ವರುಷ ನೇಮಕದ ಕಾಲದಲ್ಲಿ ಬರೆದಿರುವ ಪ್ರಕಾರ ಈ ಎರಡು ದಿವಸಗಳನ್ನು ಆಚರಿಸಲು ಒಪ್ಪಿ ಕೊಂಡು ಸ್ಥಿರಮಾಡಿದರು.
Aadadarinda ee patrada samasta vaartegaligoskaravoo avaru ee kaarya vannu kuritu nodiddakkoskaravoo tamage sambha visiddakkoskaravoo yehoodyaru, taavoo tamma santaanadavaroo tamage seridavarellaroo tappade prati varusha nemakada kaaladalli barediruva prakaara ee eradu divasagalannu aacharisalu oppi kondu sthiramaadidaru.
Esther 9:27 in English
- King James Version (KJV)
- The Jews ordained, and took upon them, and upon their seed, and upon all such as joined themselves unto them, so as it should not fail, that they would keep these two days according to their writing, and according to their [appointed] time every year;
- World English Bible (WEB)
- the Jews established and imposed on themselves, on their descendants, and on all those who joined themselves to them, so that it should not fail that they would keep these two days according to what was written and according to its appointed time every year;
- American Standard Version (ASV)
- the Jews ordained, and took upon them, and upon their seed, and upon all such as joined themselves unto them, so that it should not fail, that they would keep these two days according to the writing thereof, and according to the appointed time thereof, every year;
- Bible in Basic English (BBE)
- The Jews made a rule and gave an undertaking, causing their seed and all those who were joined to them to do the same, so that it might be in force for ever, that they would keep those two days, as ordered in the letter, at the fixed time every year;
- Darby Translation (DBY)
- the Jews ordained and took upon them, and upon their seed, and upon all such as joined themselves to them, so that it should not fail, that they would observe these two days according to their writing and according to their fixed time, every year;
- Webster's Bible (WBS)
- The Jews ordained, and took upon them, and upon their seed, and upon all such as joined themselves to them, so as it should not fail, that they would keep these two days according to their writing, and according to their [appointed] time every year;
- Young's Literal Translation (YLT)
- the Jews have established and received upon them, and upon their seed, and upon all those joined unto them, and it doth not pass away, to be keeping these two days according to their writing, and according to their season, in every year and year;
Read in context
- 25ಎಸ್ತೇರಳು ಅರಸನ ಮುಂದೆ ಬಂದಾಗ ಹಾಮಾನನು ಯೆಹೂದ್ಯರಿಗೆ ವಿರೋಧವಾಗಿ ಯೋಚಿಸಿದ ದುರಾಲೋಚನೆಯು ಅವನ ತಲೆಯ ಮೇಲೆ ಬರುವ ಹಾಗೆಯೂ ಅವನೂ ಅವನ ಮಕ್ಕಳೂ ಗಲ್ಲಿಗೆ ಹಾಕಲ್ಪಡುವ ಹಾಗೆಯೂ ಅರಸನು ಪತ್ರ ಗಳಿಂದ ಆಜ್ಞಾಪಿಸಿದನು;
- 26ಆದದರಿಂದ ಅವರು ಈ ದಿವಸಗಳನ್ನು ಪೂರೆಂಬ ನಾಮದಿಂದ ಪೂರೀಮ್ ದಿವಸಗಳೆಂದು ಕರೆದರು.
- 27ಆದದರಿಂದ ಈ ಪತ್ರದ ಸಮಸ್ತ ವಾರ್ತೆಗಳಿಗೋಸ್ಕರವೂ ಅವರು ಈ ಕಾರ್ಯ ವನ್ನು ಕುರಿತು ನೋಡಿದ್ದಕ್ಕೋಸ್ಕರವೂ ತಮಗೆ ಸಂಭ ವಿಸಿದ್ದಕ್ಕೊಸ್ಕರವೂ ಯೆಹೂದ್ಯರು, ತಾವೂ ತಮ್ಮ ಸಂತಾನದವರೂ ತಮಗೆ ಸೇರಿದವರೆಲ್ಲರೂ ತಪ್ಪದೇ ಪ್ರತಿ ವರುಷ ನೇಮಕದ ಕಾಲದಲ್ಲಿ ಬರೆದಿರುವ ಪ್ರಕಾರ ಈ ಎರಡು ದಿವಸಗಳನ್ನು ಆಚರಿಸಲು ಒಪ್ಪಿ ಕೊಂಡು ಸ್ಥಿರಮಾಡಿದರು.
- 28ಇದಲ್ಲದೆ ಈ ದಿವಸ ಗಳು ಜ್ಞಾಪಕಮಾಡಲ್ಪಡುವವು; ಇದು ಪ್ರತಿ ವಂಶದ ಲ್ಲಿಯೂ ಪ್ರತಿ ಕುಟುಂಬದಲ್ಲಿಯೂ ಪ್ರತಿ ಪ್ರಾಂತ್ಯ ದಲ್ಲಿಯೂ ಪ್ರತಿ ಪಟ್ಟಣದಲ್ಲಿಯೂ ಆಚರಿಸಲ್ಪಡ ಬೇಕು; ಈ ಪೂರೀಮೆಂಬ ದಿವಸಗಳು ಯೆಹೂದ್ಯ ರೊಳಗಿಂದ ನಿಂತುಹೋಗಬಾರದು; ಅವರ ಸಂತಾನ ದವರಲ್ಲಿ ಅವುಗಳ ಜ್ಞಾಪಕವು ಇಲ್ಲದೆ ಹೋಗಬಾರದು ಎಂದು ನೇಮಕ ಮಾಡಿದರು.
- 29ಆಗ ಅಬೀಹೈಲನ ಮಗಳಾದ ಎಸ್ತೇರ ರಾಣಿಯೂ ಯೆಹೂದ್ಯನಾದ ಮೊರ್ದೆಕೈಯೂ ಈ ಪೂರೀಮೆಂಬ ದಿವಸಗಳನ್ನು ಕುರಿತು ಎರಡನೇ ಪತ್ರವನ್ನು ಸ್ಥಿರಪಡಿ ಸಲು ಸಮಸ್ತ ಅಧಿಕಾರದಿಂದ ಬರೆಸಿದರು.
Cross references
- Zechariah 2:11 ಜೆಕರ್ಯ 2:11ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.
- Isaiah 56:6 ಯೆಶಾಯ 56:6ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ
- Isaiah 56:3 ಯೆಶಾಯ 56:3ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.
- Esther 8:17 ಎಸ್ತೇರಳು 8:17ಪ್ರತಿ ಪ್ರಾಂತ್ಯದಲ್ಲಿಯೂ ಪ್ರತಿ ಪಟ್ಟಣ ದಲ್ಲಿಯೂ ಅರಸನ ಮಾತೂ ಅವನ ಆಜ್ಞೆಯೂ ಎಲ್ಲಿಗೆ ಬಂತೋ ಅಲ್ಲಿ ಯೆಹೂದ್ಯರಿಗೆ ಸಂತೋಷವೂ ಆನಂದವೂ ಹಬ್ಬವೂ ಸುದಿನವೂ ಉಂಟಾಗಿದ್ದವು. ಇದಲ್ಲದೆ ಆ ದೇಶದ ಅನೇಕ ಜನರು ಯೆಹೂದ್ಯ ರಾದರು. ಯಾಕಂದರೆ ಯೆಹೂದ್ಯರ ಭಯವು ಅವರ ಮೇಲೆ ಇತ್ತು.
- 1 Samuel 30:25 1 ಸಮುವೇಲನು 30:25ಹಾಗೆಯೇ ಅವನು ಆ ದಿವಸ ಮೊದಲ್ಗೊಂಡು ಇಂದಿನ ವರೆಗೂ ಇರುವ ಹಾಗೆ ಇಸ್ರಾಯೇಲಿಗೆ ಅದನ್ನು ನಿಯಮವಾಗಿಯೂ ಕಟ್ಟಳೆಯಾಗಿಯೂ ಮಾಡಿದನು.
- Zechariah 8:23 ಜೆಕರ್ಯ 8:23ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
- Joshua 9:15 ಯೆಹೋಶುವ 9:15ಯೆಹೋಶುವನು ಅವರ ಸಂಗಡ ಸಮಾಧಾನ ಮಾಡಿಕೊಂಡು ಅವರನ್ನು ಜೀವದಿಂದ ಇರಿಸುವದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಪ್ರಮಾಣಮಾಡಿದರು.
- Deuteronomy 29:14–15 ಧರ್ಮೋಪದೇಶಕಾಂಡ 29:14–15ಇದಲ್ಲದೆ ನಿಮ್ಮ ಸಂಗಡ ಮಾತ್ರ ಈ ಒಡಂಬಡಿಕೆ ಯನ್ನೂ ಈ ಆಣೆಯನ್ನೂ ನಾನು ಮಾಡುವದಿಲ್ಲ; ಈಹೊತ್ತು ಇಲ್ಲಿ ನಮ್ಮ ಸಂಗಡ ನಮ್ಮ ದೇವರಾದ ಕರ್ತನ ಮುಂದೆ ನಿಂತವನ ಸಂಗಡವೂ ಈಹೊತ್ತು ಇಲ್ಲಿ ನಮ್ಮ ಸಂಗಡ ಇರದವನ ಸಂಗಡವೂ ಮಾಡು ತ್ತೇನೆ.
- 2 Samuel 21:1–2 2 ಸಮುವೇಲನು 21:1–2ದಾವೀದನ ದಿವಸಗಳಲ್ಲಿ ವರುಷದಿಂದ ವರುಷಕ್ಕೆ ಮೂರು ವರುಷ ಬರ ಉಂಟಾ ಗಿತ್ತು. ಆಗ ದಾವೀದನು ಕರ್ತನನ್ನು ವಿಚಾರಿಸಿದನು. ಕರ್ತನು--ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿ ದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಇದಾಗಿದೆ ಎಂದು ಹೇಳಿದನು. ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)
- Esther 9:21 ಎಸ್ತೇರಳು 9:21ಮೊರ್ದೆಕೈಯು ಈ ವರ್ತಮಾನಗಳನ್ನು ಬರೆದು ಅಹಷ್ವೇರೋಷನ ಸಕಲ ಪ್ರಾಂತ್ಯಗಳಲ್ಲಿ ಸವಿಾಪ ವಾಗಿಯೂ ದೂರವಾಗಿಯೂ ಇರುವ ಸಕಲ ಯೆಹೂ ದ್ಯರಿಗೆ ಪತ್ರಗಳನ್ನು ಕಳುಹಿಸಿದನು.
- Deuteronomy 5:3 ಧರ್ಮೋಪದೇಶಕಾಂಡ 5:3ಕರ್ತನು ಆ ಒಡಂಬಡಿಕೆಯನ್ನು ನಮ್ಮ ಪಿತೃಗಳ ಸಂಗಡ ಅಲ್ಲ, ನಮ್ಮ ಸಂಗಡವೇ ಮಾಡಿದನು. ನಾವೆಲ್ಲರೂ ಈಹೊತ್ತು ಇಲ್ಲಿ ಜೀವಿತರಾಗಿದ್ದೇವೆ.