Genesis · chapter 16 · verse 15
Genesis 16:15 in Kannada
ತರು ವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳು ಅಬ್ರಾಮನಿಗೆ ಹೆತ್ತ ಮಗನಿಗೆ ಅವನು ಇಷ್ಮಾಯೇಲ ಎಂದು ಹೆಸರಿಟ್ಟನು.ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.
Taru vaaya haagaralu abraamanige maganannu hettalu. Haagaralu abraamanige hetta maganige avanu ishmaayela endu hesarittanu.haagaralu abraamanige ishmaayelanannu hettaaga abraamanu embhattaaru varushadavanaagiddanu.
Genesis 16:15 in English
- King James Version (KJV)
- And Hagar bare Abram a son: and Abram called his son’s name, which Hagar bare, Ishmael.
- World English Bible (WEB)
- Hagar bore a son for Abram. Abram called the name of his son, whom Hagar bore, Ishmael.
- American Standard Version (ASV)
- And Hagar bare Abram a son: and Abram called the name of his son, whom Hagar bare, Ishmael.
- Bible in Basic English (BBE)
- And Hagar gave birth to a child, the son of Abram, to whom Abram gave the name of Ishmael.
- Darby Translation (DBY)
- And Hagar bore Abram a son; and Abram called the name of his son whom Hagar bore, Ishmael.
- Webster's Bible (WBS)
- And Hagar bore Abram a son: and Abram called his son's name, which Hagar bore, Ishmael.
- Young's Literal Translation (YLT)
- And Hagar beareth to Abram a son; and Abram calleth the name of his son, whom Hagar hath borne, Ishmael;
Read in context
- 13ಹಾಗರಳು ತನ್ನ ಸಂಗಡ ಮಾತನಾಡಿದ ಕರ್ತನಿಗೆ--ನೀನು ನನ್ನನ್ನು ನೋಡುವ ದೇವರು ಎಂದು ಹೆಸರಿಟ್ಟಳು. ಯಾಕಂದರೆ ನನ್ನನ್ನು ನೋಡುವಾ ತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ ಎಂದು ಅಂದುಕೊಂಡಳು.
- 14ಆದದರಿಂದ ಆ ಬಾವಿಗೆ ಬೆರ್ ಲಹೈರೋಯಿ ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.
- 15ತರು ವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳು ಅಬ್ರಾಮನಿಗೆ ಹೆತ್ತ ಮಗನಿಗೆ ಅವನು ಇಷ್ಮಾಯೇಲ ಎಂದು ಹೆಸರಿಟ್ಟನು.ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.
- 16ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.
Cross references
- Genesis 25:12 ಆದಿಕಾಂಡ 25:12ಸಾರಳ ದಾಸಿಯಾದ ಐಗುಪ್ತ್ಯದ ಹಾಗರಳು ಅಬ್ರಹಾಮನಿಗೆ ಹೆತ್ತ ಅಬ್ರಹಾಮನ ಮಗನಾದ ಇಷ್ಮಾಯೇಲನ ವಂಶಾವಳಿಗಳು.
- Genesis 28:9 ಆದಿಕಾಂಡ 28:9ಅವನು ಇಷ್ಮಾಯೇಲನ ಬಳಿಗೆ ಹೋಗಿ ತನಗಿದ್ದ ಹೆಂಡತಿಯರಲ್ಲದೆ ಅಬ್ರಹಾಮನ ಮಗನಾದ ಇಷ್ಮಾ ಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿರುವ ಮಹಲತ್ಳನ್ನು ತನ್ನ ಹೆಂಡತಿಯಾಗಿ ತಕ್ಕೊಂಡನು.
- 1 Chronicles 1:28 1 ಪೂರ್ವಕಾಲವೃತ್ತಾಂತ 1:28ಅಬ್ರಹಾಮನ ಮಕ್ಕಳು -- ಇಸಾಕನು, ಇಷ್ಮಾಯೇಲನು.
- Genesis 17:25–26 ಆದಿಕಾಂಡ 17:25–26ಅವನ ಮಗನಾದ ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನು ಹದಿಮೂರು ವರುಷದವನಾಗಿದ್ದನು. ಅಬ್ರಹಾ ಮನೂ ಅವನ ಮಗನಾದ ಇಷ್ಮಾಯೇಲನೂ ಅದೇ ದಿನದಲ್ಲಿ ಸುನ್ನತಿಮಾಡಿಸಿಕೊಂಡರು.ಅವನ ಮನೆಯ ಗಂಡಸರೆಲ್ಲರಿಗೂ ಮನೆಯಲ್ಲಿ ಹುಟ್ಟಿದ ವರಿಗೂ ಪರರಿಂದ ಹಣಕೊಟ್ಟು ಕೊಂಡುಕೊಂಡ ವರಿಗೂ ಅವನ ಸಂಗಡವೇ ಸುನ್ನತಿ ಆಯಿತು.
- Genesis 21:9–21 ಆದಿಕಾಂಡ 21:9–21ಇದಲ್ಲದೆ ಐಗುಪ್ತ್ಯ ಳಾದ ಹಾಗರಳು ಅಬ್ರಹಾಮನಿಗೆ ಹೆತ್ತಿದ್ದ ಮಗನು ಹಾಸ್ಯಮಾಡುವದನ್ನು ಸಾರಳು ನೋಡಿ ಅಬ್ರ ಹಾಮನಿಗೆ--ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನ ಸಂಗಡ ಬಾಧ್ಯನಾಗಬಾರದು ಅಂದಳು. ಈ ಮಾತು ಅಬ್ರಹಾಮನಿಗೆ ಅವನ ಮಗನ ದೆಸೆಯಿಂದ ಬಹು ದುಃಖಕರವಾಗಿ ತೋಚಿತು. ಆಗ ದೇವರು ಅಬ್ರಹಾಮನಿಗೆ--ಹುಡುಗನ ಮತ್ತು ದಾಸಿಯ ದೆಸೆಯಿಂದ ನಿನಗೆ ವ್ಯಥೆಯಾಗದೆ ಇರಲಿ; ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು; ಯಾಕಂದರೆ ಇಸಾಕನಲ್ಲಿ ನಿನ್ನ ಸಂತತಿಯು ಕರೆಯಲ್ಪ ಡುವದು. ದಾಸಿಯ ಮಗನು ಸಹ ನಿನ್ನ ಸಂತಾನವಾಗಿರುವದರಿಂದ ಅವನನ್ನು ನಾನು ಜನಾಂಗ ವಾಗ ಮಾಡುವೆನು ಅಂದನು. ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಕಾಡಿನಲ್ಲಿ ಅಲೆದಾಡುವವ ಳಾದಳು. ತಿತ್ತಿಯೊಳಗಿನ ನೀರು ಮುಗಿದಾಗ ಆಕೆಯು ಮಗುವನ್ನು ಗಿಡಗಳಲ್ಲಿ ಒಂದರ ಕೆಳಗೆ ಮಲಗಿಸಿ ಬಿಲ್ಲೆಸೆಯುವಷ್ಟು ದೂರ ಹೋಗಿ ಅವನಿಗೆ ಎದುರಾಗಿ ಕೂತುಕೊಂಡು--ಮಗುವಿನ ಸಾವನ್ನು ನಾನು ನೋಡಲಾರೆನು ಎಂದು ಹೇಳಿ ಆಕೆಯು ತನ್ನ ಸ್ವರವೆತ್ತಿ ಅತ್ತಳು. ಆಗ ದೇವರು ಆ ಹುಡುಗನ ಸ್ವರವನ್ನು ಕೇಳಿದನು. ಆಗ ದೇವದೂತನು ಆಕಾಶದೊಳಗಿಂದ ಹಾಗರಳನ್ನು ಕರೆದು ಆಕೆಗೆ--ಹಾಗರಳೇ, ನಿನ್ನ ವ್ಯಥೆಯೇನು? ಅಂಜಬೇಡ; ದೇವರು ಹುಡುಗನ ಸ್ವರವನ್ನು ಅವನು ಇದ್ದಲ್ಲಿಂದ ಕೇಳಿದ್ದಾನೆ. ಎದ್ದು ಹುಡುಗನನ್ನು ಎತ್ತಿಕೊಂಡು ಅವನನ್ನು ನಿನ್ನ ಕೈಯಲ್ಲಿ ತಕ್ಕೋ; ನಾನು ಅವನನ್ನು ದೊಡ್ಡ ಜನಾಂಗವಾಗ ಮಾಡುವೆನು ಅಂದನು. ಆಗ ದೇವರು ಆಕೆಯ ಕಣ್ಣುಗಳನ್ನು ತೆರೆದನು; ಆಕೆಯು ನೀರಿನ ಬಾವಿಯನ್ನು ನೋಡಿ ತಿತ್ತಿಯಲ್ಲಿ ನೀರನ್ನು ತುಂಬಿಸಿ ಹುಡುಗನಿಗೆ ಕುಡಿಯಲು ಕೊಟ್ಟಳು. ದೇವರು ಆ ಹುಡುಗನ ಸಂಗಡ ಇದ್ದನು. ಅವನು ಬೆಳೆದು ಅರಣ್ಯದಲ್ಲಿ ವಾಸಮಾಡಿ ಬಿಲ್ಲುಗಾರ ನಾದನು. ಅವನು ಪಾರಾನಿನ ಅರಣ್ಯದಲ್ಲಿ ವಾಸಮಾಡಿದನು. ಅವನ ತಾಯಿಯು ಅವನಿಗೋಸ್ಕರ ಐಗುಪ್ತದೇಶದಿಂದ ಹೆಂಡತಿಯನ್ನು ತಕ್ಕೊಂಡಳು.
- Genesis 17:20 ಆದಿಕಾಂಡ 17:20ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ಇಗೋ, ನಾನು ಅವನನ್ನು ಆಶೀರ್ವದಿ ಸಿದೆನು. ಅವನನ್ನು ಅಭಿವೃದ್ಧಿಮಾಡಿ ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನನ್ನು ದೊಡ್ಡ ಜನಾಂಗವಾಗ ಮಾಡುವೆನು.
- Genesis 17:18 ಆದಿಕಾಂಡ 17:18ಅಬ್ರಹಾ ಮನು ದೇವರಿಗೆ--ಇಷ್ಮಾಯೇಲನು ನಿನ್ನ ಎದುರಿನಲ್ಲಿ ಬದುಕಲಿ ಅಂದನು.
- Genesis 37:27 ಆದಿಕಾಂಡ 37:27ಬನ್ನಿರಿ, ಇಷ್ಮಾಯೇಲ್ಯರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಯಾಕಂದರೆ ಅವನು ನಮ್ಮ ಸಹೋದರನೂ ನಮ್ಮ ಮಾಂಸವೂ ಆಗಿದ್ದಾನೆ ಅಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು.
- Genesis 16:11 ಆದಿಕಾಂಡ 16:11ಕರ್ತನ ದೂತನು ಅವಳಿಗೆ--ಇಗೋ, ನೀನು ಗರ್ಭಿಣಿ ಯಾಗಿದ್ದೀ, ನೀನು ಒಬ್ಬ ಮಗನನ್ನು ಹೆರುವಿ; ಅವನಿಗೆ ಇಷ್ಮಾಯೇಲ ಎಂದು ಹೆಸರಿಡಬೇಕು. ಯಾಕಂದರೆ ಕರ್ತನು ನಿನ್ನ ವ್ಯಥೆಯನ್ನು ಕೇಳಿದ್ದಾನೆ.
- Genesis 25:9 ಆದಿಕಾಂಡ 25:9ಅವನ ಕುಮಾರರಾದ ಇಸಾಕನೂ ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯ ನಾದ ಚೋಹರನ ಮಗನಾದ ಎಫ್ರೋನನ ಹೊಲ ದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಣಿಟ್ಟರು.
- Galatians 4:22–23 ಗಲಾತ್ಯದವರಿಗೆ 4:22–23ಯಾಕಂದರೆ ದಾಸಿಯಿಂದ ಒಬ್ಬನು, ಸ್ವತಂತ್ರಳಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಬರೆಯಲ್ಪಟ್ಟಿದೆ. ದಾಸಿಯಿಂದ ಹುಟ್ಟಿದವನು ಶರೀರಕ್ಕನಸುಸಾರವಾಗಿ ಹುಟ್ಟಿದನು. ಆದರೆ ಸ್ವತಂತ್ರಳಿಂದ ಹುಟ್ಟಿದವನು ವಾಗ್ದಾನದ ಮೂಲಕ ಹುಟ್ಟಿದನು.