Genesis · chapter 22 · verse 4
Genesis 22:4 in Kannada
ಮೂರನೆಯ ದಿನದಲ್ಲಿ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ಆ ಸ್ಥಳವನ್ನು ದೂರದಿಂದ ನೋಡಿದನು.
Mooraneya dinadalli abrahaamanu tanna kannugalannetti aa sthalavannu dooradinda nodidanu.
Genesis 22:4 in English
- King James Version (KJV)
- Then on the third day Abraham lifted up his eyes, and saw the place afar off.
- World English Bible (WEB)
- On the third day Abraham lifted up his eyes, and saw the place far off.
- American Standard Version (ASV)
- On the third day Abraham lifted up his eyes, and saw the place afar off.
- Bible in Basic English (BBE)
- And on the third day, Abraham, lifting up his eyes, saw the place a long way off.
- Darby Translation (DBY)
- On the third day Abraham lifted up his eyes and saw the place from afar.
- Webster's Bible (WBS)
- Then on the third day Abraham lifted up his eyes, and saw the place afar off.
- Young's Literal Translation (YLT)
- On the third day — Abraham lifteth up his eyes, and seeth the place from afar;
Read in context
- 2ಆಗ ಆತನು --ನೀನು ಪ್ರೀತಿಮಾಡುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಈಗ ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು ಅಂದನು.
- 3ಅಬ್ರಹಾಮನು ಬೆಳಿಗ್ಗೆ ಎದ್ದು ತನ್ನ ಕತ್ತೆಗೆ ತಡಿಹಾಕಿಸಿ ತನ್ನ ಯುವಕರಲ್ಲಿ ಇಬ್ಬರನ್ನೂ ತನ್ನ ಮಗನಾದ ಇಸಾಕನನ್ನೂ ಕರೆದು ಕೊಂಡು ದಹನಬಲಿಗಾಗಿ ಕಟ್ಟಿಗೆಗಳನ್ನು ಒಡಿಸಿ ಎದ್ದು ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು.
- 4ಮೂರನೆಯ ದಿನದಲ್ಲಿ ಅಬ್ರಹಾಮನು ತನ್ನ ಕಣ್ಣುಗಳನ್ನೆತ್ತಿ ಆ ಸ್ಥಳವನ್ನು ದೂರದಿಂದ ನೋಡಿದನು.
- 5ಅಬ್ರಹಾಮನು ತನ್ನ ಯುವಕರಿಗೆ--ಕತ್ತೆಯ ಸಂಗಡ ಇಲ್ಲಿಯೇ ಇರ್ರಿ. ನಾನೂ ಹುಡುಗನೂ ಅಲ್ಲಿಗೆ ಹೋಗಿ ಆರಾಧನೆ ಮಾಡಿ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇವೆ ಅಂದನು.
- 6ಅಬ್ರಹಾಮನು ದಹನಬಲಿಯ ಕಟ್ಟಿಗೆಗಳನ್ನು ತಕ್ಕೊಂಡು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ಬೆಂಕಿಯನ್ನೂ ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡು ಅವರಿಬ್ಬರೂ ಕೂಡಿಕೊಂಡು ಹೋದರು.
Cross references
- Matthew 17:23 ಮತ್ತಾಯನು 17:23ಅವರು ಆತನನ್ನು ಕೊಲ್ಲುವರು; ಇದಲ್ಲದೆ ಮೂರನೇ ದಿನದಲ್ಲಿ ಆತನು ತಿರಿಗಿ ಎಬ್ಬಿಸಲ್ಪಡುವನು ಎಂದು ಹೇಳಿದನು. ಅದಕ್ಕೆ ಅವರು ಬಹಳ ದುಃಖಪಟ್ಟರು.
- Luke 13:32 ಲೂಕನು 13:32ಅದಕ್ಕೆ ಆತನು ಅವರಿಗೆ--ಇಗೋ, ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಬಿಡಿಸಿ ಸ್ವಸ್ಥಮಾಡುತ್ತೇನೆ; ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
- 1 Corinthians 15:4 1 ಕೊರಿಂಥದವರಿಗೆ 15:4ಹೂಣಲ್ಪಟ್ಟನು; ಬರಹದ ಪ್ರಕಾರವೇ ಆತನು ಮೂರನೆಯ ದಿನದಲ್ಲಿ ತಿರಿಗಿ ಎದ್ದುಬಂದನು.
- Hosea 6:2 ಹೋಶೇಯ 6:2ಆತನು ಎರಡು ದಿನಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು; ಮೂರನೆಯ ದಿನದಲ್ಲಿ ಆತನೇ ನಮ್ಮನ್ನು ಎಬ್ಬಿಸುವನು; ನಾವು ಆತನ ದೃಷ್ಟಿಯಲ್ಲಿ ಜೀವಿಸುವೆವು.
- Esther 5:1 ಎಸ್ತೇರಳು 5:1ಮೂರನೇ ದಿನದಲ್ಲಿ ಏನಾಯಿತಂದರೆ, ಎಸ್ತೇರಳು ರಾಜ ಭೂಷಣಗಳನ್ನು ಧರಿಸಿ ಕೊಂಡು ಅರಮನೆಗೆ ಎದುರಾಗಿರುವ ಅರಸನ ಮನೆಯ ಅಂಗಳದಲ್ಲಿ ಹೋಗಿ ನಿಂತಳು. ಅರಸನು ರಾಜ ಮನೆ ಯಲ್ಲಿ ಬಾಗಲಿಗೆದುರಾಗಿ ತನ್ನ ರಾಜ ಸಿಂಹಾಸನದ ಮೇಲೆ ಕುಳಿತಿದ್ದನು.
- 2 Kings 20:5 2 ಅರಸುಗಳು 20:5ನೀನು ತಿರುಗಿಕೊಂಡು ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇ ನಂದರೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ; ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ; ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವಿ.
- 1 Samuel 26:13 1 ಸಮುವೇಲನು 26:13ದಾವೀದನು ದಾಟಿ ಆ ಕಡೆಗೆ ಹೋಗಿ ತಮಗೂ ಅವರಿಗೂ ಮಧ್ಯದಲ್ಲಿ ಬಹಳ ಸ್ಥಳ ಇರುವ ಹಾಗೆ ದೂರವಾಗಿರುವ ಒಂದು ಬೆಟ್ಟದ ಕೊನೆಯಲ್ಲಿ ನಿಂತು ಜನರಿಗೂ ನೇರನ ಮಗನಾದ ಅಬ್ನೇರನಿಗೂ ಎದು ರಾಗಿ ಕೂಗಿ ಹೇಳಿದ್ದೇನಂದರೆ--
- Joshua 1:11 ಯೆಹೋಶುವ 1:11ನೀವು ದಂಡಿನ ಮಧ್ಯದಲ್ಲಿ ಹೋಗಿ ಜನರಿಗೆ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ನಿಮ ಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ; ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನನ್ನು ದಾಟಿ ಹೋಗ ಬೇಕು ಅಂದನು.
- Numbers 19:12 ಅರಣ್ಯಕಾಂಡ 19:12ಅವನು ಇದ ರಿಂದ ಮೂರನೇ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿ ಕೊಂಡು ಏಳನೇ ದಿವಸದಲ್ಲಿ ಶುದ್ಧನಾಗಬೇಕು; ಆದರೆ ಅವನು ಮೂರನೇ ದಿವಸದಲ್ಲಿ ತನ್ನನ್ನು ಶುದ್ಧಮಾಡಿ ಕೊಳ್ಳದಿದ್ದರೆ ಏಳನೇ ದಿವಸದಲ್ಲಿ ಶುದ್ಧನಾಗಲಾರನು.
- Exodus 19:11 ವಿಮೋಚನಕಾಂಡ 19:11ಮೂರ ನೆಯ ದಿನದಲ್ಲಿ ಅವರು ಸಿದ್ಧವಾಗಿರಲಿ; ಯಾಕಂದರೆ ಮೂರನೆಯ ದಿನದಲ್ಲಿ ಕರ್ತನು ಸಮಸ್ತ ಜನರ ಕಣ್ಣೆದುರಿನಲ್ಲಿ ಸೀನಾಯಿ ಪರ್ವತಕ್ಕೆ ಇಳಿದು ಬರುವನು.
- Exodus 19:15 ವಿಮೋಚನಕಾಂಡ 19:15ಅವನು ಜನರಿಗೆ--ಮೂರನೆಯ ದಿನ ಕ್ಕಾಗಿ ಸಿದ್ಧರಾಗಿರ್ರಿ, ನೀವು ನಿಮ್ಮ ಹೆಂಡತಿಯರ ಬಳಿಗೆ ಸೇರದೆ ಇರ್ರಿ ಅಂದನು.
- Numbers 19:19 ಅರಣ್ಯಕಾಂಡ 19:19ಪವಿತ್ರನಾ ದವನು ಅಪವಿತ್ರನಾದವನ ಮೇಲೆ ಮೂರನೇ ದಿವಸ ದಲ್ಲಿಯೂ ಏಳನೇ ದಿವಸದಲ್ಲಿಯೂ ಚಿಮುಕಿಸಲಿ. ಏಳನೇ ದಿವಸದಲ್ಲಿ ಅವನು ತನ್ನನ್ನು ಪವಿತ್ರಮಾಡಿ ಕೊಂಡು ತನ್ನ ವಸ್ತ್ರಗಳನ್ನು ಒಗೆದುಕೊಂಡು ಅವನು ಸ್ನಾನಮಾಡಿ ಸಾಯಂಕಾಲದಲ್ಲಿ ಪವಿತ್ರನಾಗುವನು.