Genesis · chapter 3 · verse 18
Genesis 3:18 in Kannada
ಇದಲ್ಲದೆ ಭೂಮಿಯು ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗಾಗಿ ಬೆಳೆಯುವದು. ನೀನು ಹೊಲದ ಪಲ್ಯವನ್ನು ತಿನ್ನುವಿ.
Idallade bhoomiyu mullugalannoo dattoorigalannoo ninagaagi beleyuvadu. Neenu holada palyavannu tinnuvi.
Genesis 3:18 in English
- King James Version (KJV)
- Thorns also and thistles shall it bring forth to thee; and thou shalt eat the herb of the field;
- World English Bible (WEB)
- It will yield thorns and thistles to you; and you will eat the herb of the field.
- American Standard Version (ASV)
- thorns also and thistles shall it bring forth to thee; and thou shalt eat the herb of the field;
- Bible in Basic English (BBE)
- Thorns and waste plants will come up, and the plants of the field will be your food;
- Darby Translation (DBY)
- and thorns and thistles shall it yield thee; and thou shalt eat the herb of the field.
- Webster's Bible (WBS)
- Thorns also and thistles shall it bring forth to thee; and thou shalt eat the herb of the field;
- Young's Literal Translation (YLT)
- and thorn and bramble it doth bring forth to thee, and thou hast eaten the herb of the field;
Read in context
- 16ಸ್ತ್ರೀಗೆ ಆತನು--ನಾನು ನಿನ್ನ ದುಃಖವನ್ನೂ ಗರ್ಭವೇದನೆಯನ್ನೂ ಅಧಿಕವಾಗಿ ಹೆಚ್ಚಿಸುವೆನು, ನೀನು ಕಷ್ಟದಿಂದ ಮಕ್ಕಳನ್ನು ಹೆರುವಿ, ನಿನ್ನ ಗಂಡನ ಮೇಲೆ ನಿನಗೆ ಆಶೆ ಇರುವದು; ಅವನು ನಿನ್ನನ್ನು ಆಳುವನು ಅಂದನು.
- 17ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ.
- 18ಇದಲ್ಲದೆ ಭೂಮಿಯು ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗಾಗಿ ಬೆಳೆಯುವದು. ನೀನು ಹೊಲದ ಪಲ್ಯವನ್ನು ತಿನ್ನುವಿ.
- 19ನೀನು ಮಣ್ಣಿಗೆ ತಿರುಗುವ ವರೆಗೆ ನಿನ್ನ ಹಣೆಯ ಬೆವರನ್ನು ಸುರಿಸಿ ರೊಟ್ಟಿಯನ್ನು ತಿನ್ನುವಿ. ಯಾಕಂದರೆ ನೀನು ಅದ ರೊಳಗಿಂದ ಅಂದರೆ (ಮಣ್ಣಿನೊಳಗಿಂದ) ತೆಗೆಯ ಲ್ಪಟ್ಟೆ; ನೀನು ಮಣ್ಣಾಗಿದ್ದಿ, ಮಣ್ಣಿಗೆ ತಿರುಗಿಕೊಳ್ಳುವಿ ಅಂದನು.
- 20ಆದಾಮನು ತನ್ನ ಹೆಂಡತಿಯ ಹೆಸರನ್ನು ಹವ್ವ ಎಂದು ಕರೆದನು. ಯಾಕಂದರೆ ಆಕೆಯು ಜೀವವುಳ್ಳ ವರಿಗೆಲ್ಲಾ ತಾಯಿಯಾಗಿದ್ದಾಳೆ.
Cross references
- Job 5:5 ಯೋಬನು 5:5ಹಸಿದವನು ಅವನ ಪೈರನ್ನು ತಿನ್ನುವನು, ಮುಳ್ಳುಗಳೊಳಗಿಂದಲೂ ಅದನ್ನು ತೆಗೆದುಕೊಳ್ಳು ವನು; ಕೊಳ್ಳೆಗಾರನು ಅವರ ಆಸ್ತಿಯನ್ನು ನುಂಗಿಬಿಡು ವನು.
- Matthew 13:7 ಮತ್ತಾಯನು 13:7ಮತ್ತು ಕೆಲವು ಮುಳ್ಳುಗಳಲ್ಲಿ ಬಿದ್ದವು; ಆಗ ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
- Psalm 104:14–15 ಕೀರ್ತನೆಗಳು 104:14–15ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ. ದ್ರಾಕ್ಷಾರಸವು ಮನುಷ್ಯನ ಹೃದಯವನ್ನು ಸಂತೋಷ ಪಡಿಸುತ್ತದೆ; ಎಣ್ಣೆಯು ಅವನ ಮುಖವನ್ನು ಪ್ರಕಾ ಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಹೃದಯವನ್ನು ಬಲಪಡಿಸುತ್ತದೆ.
- Isaiah 7:23 ಯೆಶಾಯ 7:23ಆ ದಿನದಲ್ಲಿ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷೆಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿ ಗಳಿಂದ ತುಂಬಿರುವದು.
- Joshua 23:13 ಯೆಹೋಶುವ 23:13ನಿಮ್ಮ ದೇವರಾದ ಕರ್ತನು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿ ಬಿಡುವದಿಲ್ಲ. ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದೊಳಗಿಂದ ನೀವು ನಾಶವಾಗುವ ವರೆಗೂ ಅವರು ನಿಮಗೆ ಉರುಲಾಗಿಯೂ ಬೋನಾ ಗಿಯೂ ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯ ವಾಗಿ ತಿಳಿದುಕೊಳ್ಳುವಿರಿ.
- Hebrews 6:8 ಇಬ್ರಿಯರಿಗೆ 6:8ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ತಿರಸ್ಕರಿಸಲ್ಪಟ್ಟು ಶಾಪಕ್ಕೆ ಗುರಿಯಾಗುತ್ತದೆ. ಅದರ ಅಂತ್ಯವು ಸುಡಲ್ಪಡುವದೇ.
- Job 31:40 ಯೋಬನು 31:40ಗೋಧಿಗೆ ಬದಲಾಗಿ ಮುಳ್ಳೂ ಜವೆಗೋಧಿಗೆ ಬದಲಾಗಿ ಕಳೆಯೂ ಬೆಳೆಯಲಿ. ಯೋಬನ ನುಡಿಗಳು ಮುಗಿದವು.
- Proverbs 22:5 ಜ್ಞಾನೋಕ್ತಿಗಳು 22:5ಮೂಢರ ದಾರಿಯಲ್ಲಿ ಮುಳ್ಳು ಗಳೂ ಉರುಲುಗಳೂ ಇವೆ; ತನ್ನ ಪ್ರಾಣವನ್ನು ಕಾಪಾ ಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು.
- Jeremiah 4:3 ಯೆರೆಮೀಯ 4:3ಕರ್ತನು ಯೆಹೂದದವರಿಗೂ ಯೆರೂಸಲೇಮಿ ನವರಿಗೂ ಹೀಗೆ ಹೇಳುತ್ತಾನೆ--ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನಿಮ್ಮ ಬಂಜರು ಭೂಮಿಯನ್ನು ಉಳಿರಿ; ಮುಳ್ಳುಗಳಲ್ಲಿ ಬೀಜ ಬಿತ್ತಬೇಡಿರಿ.
- Isaiah 5:6 ಯೆಶಾಯ 5:6ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.
- Isaiah 32:13 ಯೆಶಾಯ 32:13ನನ್ನ ಜನರ ಭೂಮಿಯ ಮೇಲೂ ಹೌದು, ಉತ್ಸಾಹ ಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆ ಗಳ ಮೇಲೂ ಮುಳ್ಳು ಮತ್ತು ದತ್ತೂರಿ ಬೆಳೆಯುವವು.
- Psalm 104:2 ಕೀರ್ತನೆಗಳು 104:2ಆತನು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುವಾತನೂ ಆಕಾಶ ವನ್ನು ಪರದೆ ಹಾಗೆ ಹಾಸುವಾತನೂ ಆಗಿದ್ದಾನೆ.