Psalms · chapter 104 · verse 14
Psalm 104:14 in Kannada
ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ.
Aatanu pashugaligoskara hullannoo manushyana seve goskara palyagalannoo molisuttaane; heege bhoomiyolaginda aahaaravannu baramaaduttaane.
Psalm 104:14 in English
- King James Version (KJV)
- He causeth the grass to grow for the cattle, and herb for the service of man: that he may bring forth food out of the earth;
- World English Bible (WEB)
- He causes the grass to grow for the livestock, and plants for man to cultivate, that he may produce food out of the earth:
- American Standard Version (ASV)
- He causeth the grass to grow for the cattle, And herb for the service of man; That he may bring forth food out of the earth,
- Bible in Basic English (BBE)
- He makes the grass come up for the cattle, and plants for the use of man; so that bread may come out of the earth;
- Darby Translation (DBY)
- He maketh the grass to grow for the cattle, and herb for the service of man; bringing forth bread out of the earth,
- Webster's Bible (WBS)
- He causeth the grass to grow for the cattle, and herb for the service of man: that he may bring forth food out of the earth;
- Young's Literal Translation (YLT)
- Causing grass to spring up for cattle, And herb for the service of man, To bring forth bread from the earth,
Read in context
- 12ಆಕಾಶದ ಪಕ್ಷಿಗಳು ಅವುಗಳ ಹತ್ತಿರ ವಾಸವಾಗಿದ್ದು ಕೊಂಬೆಗಳ ಮಧ್ಯ ದಲ್ಲಿಂದ ಹಾಡುತ್ತವೆ.
- 13ಬೆಟ್ಟಗಳಿಗೆ ತನ್ನ ಉಪ್ಪರಿಗೆ ಗಳೊಳಗಿಂದ ನೀರು ಹಾಕುತ್ತಾನೆ; ತನ್ನ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
- 14ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ.
- 15ದ್ರಾಕ್ಷಾರಸವು ಮನುಷ್ಯನ ಹೃದಯವನ್ನು ಸಂತೋಷ ಪಡಿಸುತ್ತದೆ; ಎಣ್ಣೆಯು ಅವನ ಮುಖವನ್ನು ಪ್ರಕಾ ಶಿಸುವಂತೆ ಮಾಡುತ್ತದೆ; ರೊಟ್ಟಿಯು ಮನುಷ್ಯನ ಹೃದಯವನ್ನು ಬಲಪಡಿಸುತ್ತದೆ.
- 16ಆತನು ನೆಟ್ಟ ಕರ್ತನ ಮರಗಳಾದ ಲೆಬನೋನಿನ ದೇವದಾರುಗಳು ತೃಪ್ತಿ ಯಾಗುತ್ತವೆ.
Cross references
- Psalm 136:25 ಕೀರ್ತನೆಗಳು 136:25ಮನುಷ್ಯರಿಗೆಲ್ಲಾ ಆಹಾರ ಕೊಡುವಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.ಪರಲೋಕದ ದೇವರನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
- Psalm 147:8–9 ಕೀರ್ತನೆಗಳು 147:8–9ಆತನು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾನೆ; ಭೂಮಿಗೆ ಮಳೆ ಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ. ಆತನು ಪಶುಗಳಿಗೂ ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾನೆ.
- Psalm 145:15–16 ಕೀರ್ತನೆಗಳು 145:15–16ಎಲ್ಲರ ಕಣ್ಣುಗಳು ನಿನಗೆ ಕಾದುಕೊಳ್ಳುತ್ತವೆ; ನೀನು ಅವರಿಗೆ ಅವರ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀ. ನಿನ್ನ ಕೈ ತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ತೃಪ್ತಿಪಡಿ ಸುತ್ತೀ.
- 1 Corinthians 3:7 1 ಕೊರಿಂಥದವರಿಗೆ 3:7ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು.
- Job 28:5 ಯೋಬನು 28:5ಭೂಮಿ ಯಿಂದ ರೊಟ್ಟಿಯು ಬರುತ್ತದೆ; ಆದರೆ ಅದರ ಕೆಳಗಿ ನದು ಬೆಂಕಿ ಬಿದ್ದಂತೆ ಹಾಳಾಗಿರುವದು.
- Genesis 9:3 ಆದಿಕಾಂಡ 9:3ಚಲಿಸುವ ಜೀವಜಂತುಗಳೆಲ್ಲಾ ನಿಮಗೆ ಆಹಾರವಾಗಿ ಇರಲಿ, ಹಸುರು ಪಲ್ಯಗಳ ಹಾಗೆಯೇ ಅವುಗಳನ್ನೆಲ್ಲಾ ನಾನು ನಿಮಗೆ ಕೊಟ್ಟಿದ್ದೇನೆ.
- Genesis 1:11–12 ಆದಿಕಾಂಡ 1:11–12ತರುವಾಯ ದೇವರು--ಭೂಮಿಯು ಹುಲ್ಲನ್ನೂ ಬೀಜಕೊಡುವ ಪಲ್ಯವನ್ನೂ ತನ್ನೊಳಗೆ ಬೀಜವಿದ್ದು ತನ್ನ ಜಾತಿಯ ಪ್ರಕಾರ ಫಲಫಲಿಸುವ ಹಣ್ಣಿನ ಮರವನ್ನೂ ಭೂಮಿಯ ಮೇಲೆ ಮೊಳೆಯಿಸಲಿ ಎಂದು ಹೇಳಿದನು; ಅದು ಹಾಗೆಯೇ ಆಯಿತು. ಭೂಮಿಯು ಹುಲ್ಲನ್ನೂ ತನ್ನ ಜಾತಿಯ ಪ್ರಕಾರ ಬೀಜಕೊಡುವ ಪಲ್ಯವನ್ನೂ ತನ್ನ ಜಾತಿಯ ಪ್ರಕಾರ ತನ್ನೊಳಗೆ ಬೀಜವಿರುವ ಹಣ್ಣಿನ ಮರವನ್ನೂ ಮೊಳೆ ಯಿಸಿತು. ದೇವರು ಅದನ್ನು ಒಳ್ಳೆಯದೆಂದು ನೋಡಿ ದನು.
- Genesis 3:18 ಆದಿಕಾಂಡ 3:18ಇದಲ್ಲದೆ ಭೂಮಿಯು ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗಾಗಿ ಬೆಳೆಯುವದು. ನೀನು ಹೊಲದ ಪಲ್ಯವನ್ನು ತಿನ್ನುವಿ.
- Genesis 1:29–30 ಆದಿಕಾಂಡ 1:29–30ದೇವರು--ಇಗೋ, ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ. ಅದು ನಿಮಗೆ ಆಹಾರಕ್ಕಾಗಿ ರುವದು. ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು; ಅದು ಹಾಗೆಯೇ ಆಯಿತು.ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ, ಅದು ಬಹಳ ಒಳ್ಳೆಯದಾಗಿತ್ತು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.
- Job 38:27 ಯೋಬನು 38:27ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು.
- Joel 2:22 ಯೋವೇಲ 2:22ಹೊಲದ ಮೃಗಗಳೇ, ಭಯಪಡಬೇಡಿರಿ; ಅಡ ವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ; ಮರಗಳು ತಮ್ಮ ಫಲವನ್ನು ಫಲಿಸುತ್ತವೆ; ಅಂಜೂರದ ಗಿಡವೂ ದ್ರಾಕ್ಷೇ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ.
- Jeremiah 14:5–6 ಯೆರೆಮೀಯ 14:5–6ಹೌದು, ಜಿಂಕೆಯು ಸಹ ಹೊಲದಲ್ಲಿ ಈದು ಹುಲ್ಲು ಇಲ್ಲದ ಕಾರಣ ಅದನ್ನು ಬಿಟ್ಟುಬಿಡುತ್ತದೆ; ಕಾಡು ಕತ್ತೆಗಳು ಉನ್ನತ ಸ್ಥಳಗಳಲ್ಲಿ ನಿಂತು ನರಿಗಳ ಹಾಗೆ ಗಾಳಿಯನ್ನು ಹೀರಿಕೊಳ್ಳುತ್ತವೆ; ಹುಲ್ಲು ಇಲ್ಲದ ಕಾರಣ ಅವುಗಳ ಕಣ್ಣುಗಳು ಕ್ಷೀಣವಾಗುತ್ತವೆ.