Genesis · chapter 44 · verse 7
Genesis 44:7 in Kannada
ಆಗ ಅವರು ಅವನಿಗೆ--ನಮ್ಮ ಒಡೆಯನು ಯಾಕೆ ಇಂಥಾ ಮಾತುಗಳನ್ನಾಡುತ್ತಾನೆ? ಈ ಪ್ರಕಾರ ಮಾಡುವದು ನಿನ್ನ ದಾಸರಿಗೆ ದೂರವಾಗಿರಲಿ.
Aaga avaru avanige--namma odeyanu yaake inthaa maatugalannaaduttaane? Ee prakaara maaduvadu ninna daasarige dooravaagirali.
Genesis 44:7 in English
- King James Version (KJV)
- And they said unto him, Wherefore saith my lord these words? God forbid that thy servants should do according to this thing:
- World English Bible (WEB)
- They said to him, “Why does my lord speak such words as these? Far be it from your servants that they should do such a thing!
- American Standard Version (ASV)
- And they said unto him, Wherefore speaketh my lord such words as these? Far be it from thy servants that they should do such a thing.
- Bible in Basic English (BBE)
- And they said to him, Why does my lord say such words as these? far be it from your servants to do such a thing:
- Darby Translation (DBY)
- And they said to him, Why does my lord speak such words as these? Far be it from thy servants to do such a thing!
- Webster's Bible (WBS)
- And they said to him, Why saith my lord these words? Far be it from us that thy servants should do according to this thing:
- Young's Literal Translation (YLT)
- and they say unto him, 'Why doth my lord speak according to these words? far be it from thy servants to do according to this word;
Read in context
- 5ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾ ಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ ಎಂದು ಅವರಿಗೆ ಹೇಳು ಅಂದನು.
- 6ಅವನು ಅವರನ್ನು ಸಂಧಿಸಿ ಈ ಮಾತುಗಳನ್ನು ಅವರಿಗೆ ಹೇಳಿದನು.
- 7ಆಗ ಅವರು ಅವನಿಗೆ--ನಮ್ಮ ಒಡೆಯನು ಯಾಕೆ ಇಂಥಾ ಮಾತುಗಳನ್ನಾಡುತ್ತಾನೆ? ಈ ಪ್ರಕಾರ ಮಾಡುವದು ನಿನ್ನ ದಾಸರಿಗೆ ದೂರವಾಗಿರಲಿ.
- 8ಇಗೋ, ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಿಮಗೆ ಕೊಡುವದಕ್ಕೆ ಕಾನಾನ್ ದೇಶದಿಂದ ತಂದೆವು. ಹೀಗಿರಲು ನಿನ್ನ ಯಜಮಾನನ ಮನೆಯೊಳಗಿಂದ ಬೆಳ್ಳಿ ಬಂಗಾರವನ್ನು ಹೇಗೆ ಕದ್ದುಕೊಂಡೇವು?
- 9ಅದು ನಿನ್ನ ದಾಸರಲ್ಲಿ ಯಾರ ಹತ್ತಿರ ಸಿಕ್ಕುವದೋ ಅವನು ಸಾಯಲಿ ಮತ್ತು ನಾವು ಸಹ ನಮ್ಮ ಒಡೆಯನಿಗೆ ದಾಸರಾಗುವೆವು ಅಂದರು.
Cross references
- Genesis 38:16–18 ಆದಿಕಾಂಡ 38:16–18ಮಾರ್ಗ ದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು--ನನ್ನನ್ನು ನಿನ್ನ ಬಳಿಗೆ ಬರಗೊಡಿಸು ಅಂದನು. (ಯಾಕಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ). ಅವಳು--ನೀನು ನನ್ನ ಬಳಿಗೆ ಬಂದರೆ ನನಗೆ ಏನು ಕೊಡುವಿ ಅಂದಳು. ಅವನು--ಮಂದೆಯಿಂದ ನಿನಗೆ ಮೇಕೆಯ ಮರಿಯನ್ನು ಕಳುಹಿ ಸುತ್ತೇನೆ ಅಂದನು. ಅವಳು--ನೀನು ಅದನ್ನು ಕಳುಹಿಸುವವರೆಗೆ ಈಡುಕೊಡುವಿಯೋ ಅಂದಳು. ಅದಕ್ಕೆ ಅವನು--ನಿನಗೆ ಕೊಡತಕ್ಕ ಈಡು ಏನು ಅಂದಾಗ ಅವಳು--ನಿನ್ನ ಮುದ್ರೆಯೂ ನಿನ್ನ ಕಡಗ ಗಳೂ ನಿನ್ನ ಕೈಯಲ್ಲಿರುವ ಕೋಲು ಅಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು ಆಕೆಯ ಬಳಿಗೆ ಹೋದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು.
- Genesis 35:22 ಆದಿಕಾಂಡ 35:22ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.
- Ecclesiastes 7:1 ಪ್ರಸಂಗಿ 7:1ಅಮೂಲ್ಯವಾದ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಒಬ್ಬನ ಜನ್ಮದಿನಕ್ಕಿಂತ ಮರಣದ ದಿನವೇ ಮೇಲು.
- Joshua 22:22–29 ಯೆಹೋಶುವ 22:22–29ದೇವಾದಿ ದೇವರಾದ ಕರ್ತನೇ, ದೇವಾದಿ ದೇವರಾದ ಕರ್ತನೇ ತಿಳಿದಿದ್ದಾನೆ. ಇಸ್ರಾಯೇಲ್ಯರಿಗೂ ತಿಳಿಯುವದು. ಇದು ತಿರುಗಿ ಬೀಳುವದರಿಂದಲಾದರೂ ಕರ್ತನಿಗೆ ವಿರೋಧವಾಗಿ ಅಪರಾಧಮಾಡುವದರಿಂದಲಾದರೂ ಆಗಿದ್ದರೆ ನಮ್ಮನ್ನು ಈಹೊತ್ತು ರಕ್ಷಿಸಬಾರದು. ನಾವು ಕರ್ತನ ಕಡೆಗೆ ತಿರುಗಿಕೊಂಡು ದಹನಬಲಿಗಳ ನ್ನಾದರೂ ಆಹಾರ ಸಮರ್ಪಣೆಯನ್ನಾದರೂ ಸಮಾ ಧಾನದ ಬಲಿಗಳನ್ನಾದರೂ ಅದರ ಮೇಲೆ ಅರ್ಪಿಸುವ ದಕ್ಕೋಸ್ಕರ ಯಜ್ಞವೇದಿಯನ್ನು ನಮಗಾಗಿ ಕಟ್ಟಿದ್ದರೆ ಕರ್ತನು ಅದನ್ನು ವಿಚಾರಿಸಲಿ. ಆದರೆ ಬರುವ ಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ--ಇಸ್ರಾಯೇಲಿನ ದೇವರಾದ ಕರ್ತನಿಗೂ ನಿಮಗೂ ಏನು? ರೂಬೇನನ ಮಕ್ಕಳೇ, ಗಾದನ ಮಕ್ಕಳೇ, ಕರ್ತನು ನಿಮಗೂ ನಮಗೂ ಯೊರ್ದನನ್ನು ಮೇರೆ ಮಾಡಿದ್ದರಿಂದ ಕರ್ತನ ಕಾರ್ಯಗಳಲ್ಲಿ ನಿಮಗೆ ಭಾಗವು ಇಲ್ಲವೆಂದು ಹೇಳಿ ನಮ್ಮಲ್ಲಿ ನಿಮಗೆ ಭಾಗವು ಇಲ್ಲ ವೆಂದು ಹೇಳಿ ನಮ್ಮ ಮಕ್ಕಳನ್ನು ಕರ್ತನಿಗೆ ಭಯಪಡದ ಹಾಗೆ ಮಾಡುವರೆಂದು ಅಂಜಿಕೊಂಡು ಇದನ್ನು ಮಾಡಿದೆವು; ಆದದರಿಂದ ನಾವು ದಹನಬಲಿ ಗೋಸ್ಕರವಾದರೂ ಬಲಿಗೋಸ್ಕರವಾದರೂ ಅಲ್ಲ, ಬರುವಕಾಲದಲ್ಲಿ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆಕರ್ತನಲ್ಲಿ ನಿಮಗೆ ಭಾಗವಿಲ್ಲವೆಂದು ಹೇಳದೆ ಇರುವ ಹಾಗೆಯೂ ನಾವು ಕರ್ತನ ಸನ್ನಿಧಿಯಲ್ಲಿ ದಹನ ಬಲಿಗಳಿಂದಲೂ ಯಜ್ಞಗಳಿಂದಲೂ ಸಮಾಧಾನದ ಬಲಿಗಳಿಂದಲೂ ಆತನನ್ನು ಸೇವಿಸುವ ಹಾಗೆಯೂ ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿ ಯವರಿಗೂ ಮಧ್ಯದಲ್ಲಿ ಸಾಕ್ಷಿ ಉಂಟಾಗುವ ಹಾಗೆ ಯಜ್ಞವೇದಿಯನ್ನು ಕಟ್ಟಿಕೊಳ್ಳುವದಕ್ಕೆ ಮಾಡಿದೆವು. ನಾವು ಅಂದುಕೊಂಡದ್ದೇನಂದರೆ--ಮುಂದೆ ನಮ ಗಾದರೂ ನಮ್ಮ ಸಂತತಿಯವರಿಗಾದರೂ ಹಾಗೆ ಹೇಳಿದರೆ ಆಗ ದಹನಬಲಿಗಳಿಗಾದರೂ ಬಲಿ ಗಳಿಗಾದರೂ ಅಲ್ಲ, ನಮಗೂ ನಿಮಗೂ ನಡುವೆ ಸಾಕ್ಷಿಗೋಸ್ಕರ ನಮ್ಮ ತಂದೆಗಳು ಮಾಡಿದ ಕರ್ತನ ಬಲಿಪೀಠದ ಹೋಲಿಕೆಯಾದ ಯಜ್ಞವೇದಿಯನ್ನು ನೋಡಿರಿ ಎಂದು ಹೇಳುವರು. ನಮ್ಮ ದೇವರಾದ ಕರ್ತನ ಗುಡಾರದ ಮುಂದೆ ಇರುವ ಆತನ ಯಜ್ಞ ವೇದಿಯನ್ನು ಹೊರತಾಗಿ ನಾವು ದಹನಬಲಿಗಳಿ ಗೋಸ್ಕರವಾಗಿಯೂ ಆಹಾರ ಸಮರ್ಪಣೆಗಳಿ ಗೋಸ್ಕರವಾಗಿಯೂ ಬಲಿಗಳಿಗೋಸ್ಕರವಾಗಿಯೂ ಮತ್ತೊಂದು ಯಜ್ಞವೇದಿಯನ್ನು ಕಟ್ಟಿ ಕರ್ತನಿಗೆ ವಿರೋಧವಾಗಿ ತಿರುಗಿ ಬೀಳುವದೂ ಆತನ ಕಡೆ ಯಿಂದ ಹಿಂತಿರುಗಿ ಹೋಗುವದೂ ನಮಗೆ ದೂರ ವಾಗಿರಲಿ ಅಂದರು.
- Genesis 34:25–31 ಆದಿಕಾಂಡ 34:25–31ಮೂರನೆಯ ದಿನದಲ್ಲಿ ಅವರಿಗೆ ನೋವು ಉಂಟಾದಾಗ ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ ದೀನಳ ಸಹೋದರರಾದ ಸಿಮೆಯೋನನೂ ಲೇವಿಯೂ ತಮ್ಮ ತಮ್ಮ ಕತ್ತಿಗಳನ್ನು ತಕ್ಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದುಹಾಕಿದರು. ಹಮೋರನನ್ನೂ ಅವನ ಮಗ ನಾದ ಶೆಕೆಮನನ್ನೂ ಕತ್ತಿಯಿಂದ ಕೊಂದುಹಾಕಿ ದೀನಳನ್ನು ಶೆಕೆಮನ ಮನೆಯಿಂದ ತಕ್ಕೊಂಡು ಹೊರಗೆ ಹೋದರು. ತಮ್ಮ ಸಹೋದರಿಯನ್ನು ಅಶುದ್ಧ ಮಾಡಿದ್ದರಿಂದ ಯಾಕೋಬನ ಮಕ್ಕಳು ಕೊಂದವರ ಬಳಿಗೆ ಬಂದು ಕೊಳ್ಳೆಹೊಡೆದರು. ಅವರ ಕುರಿ, ದನ, ಕತ್ತೆಗಳನ್ನು ಪಟ್ಟಣದಲ್ಲಿಯೂ ಹೊಲದಲ್ಲಿಯೂ ಇದ್ದವುಗಳೆಲ್ಲವನ್ನು ತಕ್ಕೊಂಡರು. ಅವರ ಎಲ್ಲಾ ಆಸ್ತಿಯನ್ನೂ ಅವರ ಎಲ್ಲಾ ಚಿಕ್ಕಮಕ್ಕಳನ್ನೂ ಅವರ ಹೆಂಡತಿಯರನ್ನೂ ಸೆರೆಹಿಡಿದು ಮನೆಯಲ್ಲಿದದ್ದೆ ಲ್ಲವನ್ನೂ ಅವರು ಕೊಳ್ಳೆಹೊಡೆದರು. ಆಗ ಯಾಕೋಬನು ಸಿಮೆಯೋನನಿಗೂ ಲೇವಿಗೂ ಹೇಳಿದ್ದೇನಂದರೆ--ನೀವು ನನ್ನನ್ನು ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಕಳವಳಪಡಿ ಸಿದಿರಿ; ನಾನು ಸ್ವಲ್ಪ ಮಂದಿಯುಳ್ಳವನು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ಕೊಲ್ಲುವರು. ಆಗ ನಾನೂ ನನ್ನ ಮನೆಯವರೂ ನಾಶವಾಗುವೆವು ಅಂದನು.ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು. ಆದರೆ ಅವರುನಮ್ಮ ತಂಗಿಯೊಂದಿಗೆ ಸೂಳೆಯಂತೆ ವರ್ತಿಸಬಹುದೋ ಅಂದರು.
- Proverbs 22:1 ಜ್ಞಾನೋಕ್ತಿಗಳು 22:1ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರನ್ನೂ ಬೆಳ್ಳಿ ಬಂಗಾರಕ್ಕಿಂತ ಪ್ರೀತಿಯ ದಯವನ್ನೂ ಆರಿಸಿಕೊಳ್ಳುವದು ಉತ್ತಮ.
- 2 Kings 8:13 2 ಅರಸುಗಳು 8:13ಹಜಾಯೇಲನು -- ಇಂಥಾ ಮಹಾ ಕೆಲಸವನ್ನು ಮಾಡುವದಕ್ಕೆ ನಿನ್ನ ಸೇವಕನು ನಾಯಿಯೋ ಏನು ಅಂದನು. ಎಲೀಷನು -- ನೀನು ಅರಾಮ್ಯರ ಮೇಲೆ ಅರಸನಾಗುವಿ ಎಂದು ಕರ್ತನು ನನಗೆ ತಿಳಿಸಿ ದ್ದಾನೆ ಅಂದನು.
- Hebrews 13:18 ಇಬ್ರಿಯರಿಗೆ 13:18ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳ ಬೇಕೆಂದು ಅಪೇಕ್ಷಿಸುವವರಾದ ನಮಗೆ ಒಳ್ಳೇ ಮನಸ್ಸಾಕ್ಷಿ ಇದೆಯೆಂದು ನಂಬಿದ್ದೇವೆ.
- Genesis 37:18–32 ಆದಿಕಾಂಡ 37:18–32ಅವರು ದೂರದಿಂದ ಅವನನ್ನು ನೋಡಿದಾಗ ಅವನು ಅವರ ಸವಿಾಪಕ್ಕೆ ಬರುವದಕ್ಕೆ ಮುಂಚೆಯೇ ಅವರು ಅವನನ್ನು ಕೊಂದುಹಾಕಬೇಕೆಂದು ಅವ ನಿಗೆ ವಿರೋಧವಾಗಿ ಒಳಸಂಚುಮಾಡಿಕೊಂಡರು. ಅವರು--ಇಗೋ, ಈ ಕನಸಿನವನು ಬರುತ್ತಿದ್ದಾನೆ; ಬನ್ನಿರಿ, ಈಗ ಅವನನ್ನು ಕೊಂದು--ಯಾವದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ; ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಆದರೆ ರೂಬೇನನು ಅದನ್ನು ಕೇಳಿ ಅವನನ್ನು ಅವರ ಕೈಗಳಿಂದ ತಪ್ಪಿಸಿ--ಅವನನ್ನು ಕೊಲ್ಲುವದು ಬೇಡ ಅಂದನು. ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ ತನ್ನ ತಂದೆಯ ಬಳಿಗೆ ತಿರಿಗಿ ಕರೆದುಕೊಂಡು ಹೋಗುವ ಹಾಗೆ ಅವರಿಗೆ--ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ತಗ್ಗಿನಲ್ಲಿ ಅವನನ್ನು ಹಾಕಿರಿ; ಆದರೆ ಅವನ ಮೇಲೆ ಕೈಹಾಕಬೇಡಿರಿ ಅಂದನು. ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ ಅವರು ಯೋಸೇಫನ ಮೇಲಿದ್ದ ಬಣ್ಣದ ಅಂಗಿಯನ್ನು ತೆಗೆದರು. ಅವನನ್ನು ತಕ್ಕೊಂಡು ತಗ್ಗಿನಲ್ಲಿ ಹಾಕಿದರು; ಆ ತಗ್ಗು ನೀರಿಲ್ಲದೆ ಬರಿದಾಗಿತ್ತು. ಅವರು ಊಟಕ್ಕೆ ಕೂತುಕೊಂಡಾಗ ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಇಷ್ಮಾಯೇಲ್ಯರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ ಸುಗಂಧತೈಲ ರಕ್ತಬೋಳಗಳನ್ನು ಹೊರು ತ್ತಿದ್ದವು. ಅವರು ಅವುಗಳನ್ನು ಐಗುಪ್ತಕ್ಕೆ ತೆಗೆದು ಕೊಂಡು ಹೋಗುತ್ತಿದ್ದರು. ಆಗ ಯೆಹೂದನು ತನ್ನ ಸಹೋದರರಿಗೆ--ನಾವು ನಮ್ಮ ಸಹೋದರನನ್ನು ಕೊಂದುಹಾಕಿ ಅವನ ರಕ್ತವನ್ನು ಮರೆಮಾಡುವದರಲ್ಲಿ ಲಾಭವೇನು? ಬನ್ನಿರಿ, ಇಷ್ಮಾಯೇಲ್ಯರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಯಾಕಂದರೆ ಅವನು ನಮ್ಮ ಸಹೋದರನೂ ನಮ್ಮ ಮಾಂಸವೂ ಆಗಿದ್ದಾನೆ ಅಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು. ಈ ಪ್ರಕಾರ (ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ) ಅವರು ಯೋಸೇಫನನ್ನು ತಗ್ಗಿನಿಂದ ಮೇಲೆತ್ತಿ ಇಷ್ಮಾಯೇಲ್ಯ ರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು, ಅವರು ಯೋಸೇಫನನ್ನು ಐಗುಪ್ತಕ್ಕೆ ಕರಕೊಂಡು ಹೋದರು. ರೂಬೇನನು ತಗ್ಗಿನ ಬಳಿಗೆ ತಿರಿಗಿ ಬಂದಾಗ ಇಗೋ, ಯೋಸೇಫನು ತಗ್ಗಿನಲ್ಲಿ ಇಲ್ಲದ್ದರಿಂದ ತನ್ನ ವಸ್ತ್ರಗಳನ್ನು ಹರಿದು ಕೊಂಡನು. ಅವನು ತನ್ನ ಸಹೋದರರ ಬಳಿಗೆ ತಿರಿಗಿಹೋಗಿ--ಆ ಮಗುವು ಇಲ್ಲವಲ್ಲಾ; ಹಾಗಾದರೆ ನಾನು ಎಲ್ಲಿಗೆ ಹೋಗಲಿ ಅಂದನು. ಆಗ ಅವರು ಯೋಸೇಫನ ಅಂಗಿಯನ್ನು ತೆಗೆದುಕೊಂಡು ಮೇಕೆಯ ಮರಿಯನ್ನು ಕೊಯ್ದು ಆ ಅಂಗಿಯನ್ನು ರಕ್ತದಲ್ಲಿ ಅದ್ದಿ ಆ ಬಣ್ಣದ ಅಂಗಿಯನ್ನು ಕಳುಹಿಸಿಕೊಟ್ಟರು. ಅವರು ಅದನ್ನು ಅವರ ತಂದೆಯ ಬಳಿಗೆ ತಂದು--ಇದು ನಮಗೆ ಸಿಕ್ಕಿತು. ಇದು ನಿನ್ನ ಮಗನ ಅಂಗಿಯೋ ಏನೋ ನೋಡು ಎಂದು ಹೇಳಿದರು.
- 2 Samuel 20:20 2 ಸಮುವೇಲನು 20:20ಅದಕ್ಕೆ ಯೋವಾಬನು ಪ್ರತ್ಯುತ್ತರವಾಗಿ--ನನಗೆ ಅದು ದೂರವಾಗಿರಲಿ, ನುಂಗುವದೂ ಕೆಡಿಸುವದೂ ನನಗೆ ದೂರವಾಗಿರಲಿ.