Genesis · chapter 6 · verse 13
Genesis 6:13 in Kannada
ಆಗ ದೇವರು ನೋಹನಿಗೆ--ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು.
Aaga devaru nohanige--manushyarellara antyavu nanna munde bantu; avarinda bhoomiyu balaatkaaradinda tumbide; igo, naanu bhoomiyondige avarannu naashamaadu venu.
Genesis 6:13 in English
- King James Version (KJV)
- And God said unto Noah, The end of all flesh is come before me; for the earth is filled with violence through them; and, behold, I will destroy them with the earth.
- World English Bible (WEB)
- God said to Noah, “I will bring an end to all flesh, for the earth is filled with violence through them. Behold, I will destroy them and the earth.
- American Standard Version (ASV)
- And God said unto Noah, The end of all flesh is come before me; for the earth is filled with violence through them; and, behold, I will destroy them with the earth.
- Bible in Basic English (BBE)
- And God said to Noah, The end of all flesh has come; the earth is full of their violent doings, and now I will put an end to them with the earth.
- Darby Translation (DBY)
- And God said to Noah, The end of all flesh is come before me, for the earth is full of violence through them; and behold, I will destroy them with the earth.
- Webster's Bible (WBS)
- And God said to Noah, The end of all flesh is come before me; for the earth is filled with violence through them: and behold, I will destroy them with the earth.
- Young's Literal Translation (YLT)
- And God said to Noah, 'An end of all flesh hath come before Me, for the earth hath been full of violence from their presence; and lo, I am destroying them with the earth.
Read in context
- 11ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು; ಭೂಮಿಯು ಬಲಾತ್ಕಾರದಿಂದ ತುಂಬಿತ್ತು.
- 12ದೇವರು ಭೂಮಿಯನ್ನು ನೋಡಲಾಗಿ, ಇಗೋ, ಅದು ಕೆಟ್ಟುಹೋದದ್ದಾಗಿತ್ತು; ಮನುಷ್ಯ ರೆಲ್ಲರು ಭೂಮಿಯ ಮೇಲೆ ತಮ್ಮ ಮಾರ್ಗವನ್ನು ಕೆಡಿಸಿಕೊಂಡಿದ್ದರು.
- 13ಆಗ ದೇವರು ನೋಹನಿಗೆ--ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು.
- 14ನೀನು ಗೋಫೆರ್ ಮರದಿಂದ ನಾವೆಯನ್ನು ಮಾಡಿಕೊಂಡು ಆ ನಾವೆಯಲ್ಲಿ ಕೋಣೆಗಳನ್ನು ಮಾಡು; ಅದರ ಹೊರಭಾಗಕ್ಕೂ ಒಳಭಾಗಕ್ಕೂ ರಾಳವನ್ನು ಹಚ್ಚು.
- 15ನೀನು ಅದನ್ನು ಮಾಡತಕ್ಕ ಮಾದರಿಯು ಇದೇ; ನಾವೆಯ ಉದ್ದವು ಮುನ್ನೂರು ಮೊಳ ಅಗಲ ಐವತ್ತು ಮೊಳ ಎತ್ತರ ಮೂವತ್ತು ಮೊಳ ಇರಬೇಕು.
Cross references
- Hosea 4:1–2 ಹೋಶೇಯ 4:1–2ಇಸ್ರಾಯೇಲಿನ ಮಕ್ಕಳಾದ ನೀವು ಕರ್ತನ ವಾಕ್ಯವನ್ನು ಕೇಳಿರಿ; ದೇಶದ ನಿವಾಸಿಗಳ ಸಂಗಡ ಕರ್ತನಿಗೆ ತರ್ಕವುಂಟು; ದೇಶದಲ್ಲಿ ಸತ್ಯವೂ ಇಲ್ಲ, ಕನಿಕರವೂ ಇಲ್ಲ, ಇಲ್ಲವೆ ದೇವರ ತಿಳುವಳಿ ಕೆಯೂ ಇಲ್ಲ. ಆಣೆಯಿಡುವದೂ ಸುಳ್ಳು ಹೇಳು ವದೂ ಕೊಲ್ಲುವದೂ ಕದಿಯುವದೂ ವ್ಯಭಿಚಾರ ಮಾಡುವದೂ ಹೆಚ್ಚಾಗಿಬಿಟ್ಟಿವೆ; ರಕ್ತಕ್ಕೆ ರಕ್ತ ಸೇರುತ್ತದೆ;
- 1 Peter 4:7 1 ಪೇತ್ರನು 4:7ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಸ್ವಸ್ಥಚಿತ್ತರಾಗಿಯೂ ಪ್ರಾರ್ಥನೆಗೆ ಎಚ್ಚರ ವಾಗಿಯೂ ಇರ್ರಿ.
- Ezekiel 7:2–6 ಯೆಹೆಜ್ಕೇಲನು 7:2–6ಮನುಷ್ಯಪುತ್ರನೇ, ದೇವರಾದ ಕರ್ತನು ಇಸ್ರಾ ಯೇಲ್ ದೇಶಕ್ಕೆ ಹೀಗೆ ಹೇಳುತ್ತಾನೆ--ಅಂತ್ಯವು ಬಂದಿದೆ; ಈ ದೇಶದ ನಾಲ್ಕು ಮೂಲೆಗಳಲ್ಲೂ ಅಂತ್ಯವು ಬಂದಿದೆ. ಈಗ ನಿನ್ನ ಮೇಲೂ ಅಂತ್ಯವು ಬಂದಿದೆ ಮತ್ತು ನನ್ನ ಕೋಪವನ್ನು ನಿನ್ನ ಮೇಲೆ ಕಳುಹಿಸುತ್ತೇನೆ; ನಿನ್ನ ಮಾರ್ಗಗಳ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿ ತೀರಿಸುವೆನು. ನನ್ನ ಕಣ್ಣುಗಳು ನಿನ್ನನ್ನು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸು ವದೂ ಇಲ್ಲ, ಆದರೆ ನಿನ್ನ ಮಾರ್ಗಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುತ್ತೇನೆ, ನಿನ್ನ ಅಸಹ್ಯಗಳು ನಿನ್ನ ಮಧ್ಯೆ ಇರುವವು, ನಾನೇ ಕರ್ತನೆಂದು ನಿನಗೆ ತಿಳಿಯುವದು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಕೇಡು ಒಂದೇ ಒಂದು ಕೇಡು, ಇಗೋ, ಬಂತು. ಅಂತ್ಯವು ಬಂತು. ಅಂತ್ಯವು ಬಂದು ಅದು ನಿನಗೋಸ್ಕರ ಕಾಯುತ್ತಾ ಇದೆ. ಇಗೋ, ಅದು ಬಂತು.
- Genesis 6:11–12 ಆದಿಕಾಂಡ 6:11–12ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು; ಭೂಮಿಯು ಬಲಾತ್ಕಾರದಿಂದ ತುಂಬಿತ್ತು. ದೇವರು ಭೂಮಿಯನ್ನು ನೋಡಲಾಗಿ, ಇಗೋ, ಅದು ಕೆಟ್ಟುಹೋದದ್ದಾಗಿತ್ತು; ಮನುಷ್ಯ ರೆಲ್ಲರು ಭೂಮಿಯ ಮೇಲೆ ತಮ್ಮ ಮಾರ್ಗವನ್ನು ಕೆಡಿಸಿಕೊಂಡಿದ್ದರು.
- 2 Peter 3:6–7 2 ಪೇತ್ರನು 3:6–7ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಳಯದಲ್ಲಿ ನಾಶ ವಾಯಿತು. ಆದರೆ ಈಗಿನ ಆಕಾಶಗಳೂ ಭೂಮಿಯೂ ಅದೇ ವಾಕ್ಯದಿಂದ ಭದ್ರವಾಗಿ ಇಡಲ್ಪಟ್ಟಿದ್ದು ನ್ಯಾಯ ತೀರ್ವಿಕೆಯ ದಿನದವರೆಗೂ ಭಕ್ತಿಹೀನರ ನಾಶನಕ್ಕಾಗಿ ಬೆಂಕಿಯು ಕಾದಿಡಲ್ಪಟ್ಟಿದೆ ಎಂಬದು.
- 2 Peter 3:10–12 2 ಪೇತ್ರನು 3:10–12ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು. ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದ ರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು. ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿ ಹತ್ತಿ ಲಯವಾಗಿ ಹೋಗುವವು, ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
- Genesis 6:4 ಆದಿಕಾಂಡ 6:4ಆ ದಿನಗಳಲ್ಲಿ ಭೂಮಿಯ ಮೇಲೆ ಮಹಾ ಶರೀರಗಳಾದವರು ಇದ್ದರು, ಆಮೇಲೆಯೂ ಇದ್ದರು; ದೇವಕುಮಾರರು ಮನುಷ್ಯ ಕುಮಾರ್ತೆಯರನ್ನು ಕೂಡಿದಾಗ ಅವರಿಗೆ ಮಕ್ಕಳನ್ನು ಹೆತ್ತರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾದ ಪರಾಕ್ರಮಶಾಲಿ ಗಳಾಗಿದ್ದವರು.
- Amos 8:2 ಆಮೋಸ 8:2ಆಗ ಅವನು--ಆಮೋಸನೇ, ಏನು ನೋಡುತ್ತಿರುವೆ ಎಂದಾಗ ನಾನು--ಮಾಗಿದ ಹಣ್ಣುಗಳ ಪುಟ್ಟಿ ಅಂದೆನು. ಆಗ ಕರ್ತನು ನನಗೆ--ನನ್ನ ಜನರಾದ ಇಸ್ರಾಯೇಲ್ಯರಿಗೆ ಅಂತ್ಯವು ಬಂತು; ನಾನು ಇನ್ನು ಮೇಲೆ ಅವರನು ದಾಟಿಹೋಗುವದಿಲ್ಲ ಎಂದು ಹೇಳಿದೆನು.
- Genesis 7:23 ಆದಿಕಾಂಡ 7:23ಮನುಷ್ಯರೂ ಪಶು ಗಳೂ ಕ್ರಿಮಿಗಳೂ ಆಕಾಶದ ಪಕ್ಷಿಗಳೂ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳೂ ನಾಶವಾದವು. ಅವು ಭೂಮಿಯ ಮೇಲಿಂದ ಅಳಿಸಲ್ಪಟ್ಟವು. ನೋಹನೂ ಅವನ ಸಂಗಡ ನಾವೆಯಲ್ಲಿದ್ದವರೂ ಮಾತ್ರ ಜೀವದಿಂದ ಉಳಿಸಲ್ಪಟ್ಟರು.ಜಲವು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲ ವಾಯಿತು.
- Hebrews 11:7 ಇಬ್ರಿಯರಿಗೆ 11:7ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಸ ಲ್ಪಟ್ಟು ಭಯಗ್ರಸ್ತನಾಗಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧ ಮಾಡಿದನು. ಆದರಿಂದ ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಯಿಂ ದುಂಟಾಗುವ ನೀತಿಗೆ ಬಾಧ್ಯನಾದನು.
- Jeremiah 4:23–28 ಯೆರೆಮೀಯ 4:23–28ನಾನು ಭೂಮಿಯನ್ನು ನೋಡಿದೆನು, ಇಗೋ, ಅದು ನಿರಾಕಾರವಾಗಿಯೂ ಹಾಳಾಗಿಯೂ ಶೂನ್ಯವಾಗಿಯೂ ಇತ್ತು; ಆಕಾಶಗಳನ್ನು ಸಹ ನೋಡಿದೆನು, ಅವುಗಳಿಗೆ ಬೆಳಕಿರಲಿಲ್ಲ. ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹೌರವಾಗಿ ಅದುರಿದವು. ನಾನು ನೋಡಿದೆನು, ಇಗೋ, ಮನುಷ್ಯನು ಇರಲಿಲ್ಲ; ಆಕಾಶದ ಪಕ್ಷಿಗಳೆಲ್ಲಾ ಹಾರಿಹೋಗಿದ್ದವು. ನಾನು ನೋಡಿದೆನು, ಇಗೋ, ಫಲವುಳ್ಳ ಸ್ಥಳವು ಅರಣ್ಯವಾಯಿತು; ಅದರ ಪಟ್ಟಣಗಳೆಲ್ಲಾ ಕರ್ತನ ಮುಂದೆಯೂ ಆತನ ಕೋಪದ ಉರಿಯ ಮುಂದೆಯೂ ಕೆಡವಲ್ಪಟ್ಟಿದ್ದವು. ಕರ್ತನು ಹೀಗೆ ಹೇಳಿದ್ದಾನೆ--ದೇಶವೆಲ್ಲಾ ಹಾಳಾಗುವದು; ಆದಾಗ್ಯೂ ನಾನು ಅದನ್ನು ಪೂರ್ಣ ಮಾಡಿಲ್ಲ. ಇದರ ನಿಮಿತ್ತ ಭೂಮಿಯು ದುಃಖಿಸುವದು; ಮೇಲಿರುವ ಆಕಾಶವು ಕಪ್ಪಾಗುವದು; ನಾನು ಅದನ್ನು ಹೇಳಿ ನಿಶ್ಚಯಿಸಿದ್ದೇನೆ; ಮಾನಸಾಂತರಪಡುವದಿಲ್ಲ; ಇಲ್ಲವೆ ಅದರಿಂದ ಹಿಂತಿರುಗುವದಿಲ್ಲ;
- Jeremiah 51:13 ಯೆರೆಮೀಯ 51:13ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳ ವಳೇ, ನಿನ್ನ ಅಂತ್ಯವೂ ನಿನ್ನ ದುರ್ಲಾಭದ ಅಳತೆಯೂ ಬಂತು.
Original words (Hebrew)
- God · H430אֱלֹהִים ʼĕlôhîym
- said · H559אָמַר ʼâmar
- Noah · H5146נֹחַ Nôach
- end · H7093קֵץ qêts
- flesh · H1320בָּשָׂר bâsâr
- come · H935בּוֹא bôwʼ
- me · H6440פָּנִים pânîym
- earth · H776אֶרֶץ ʼerets
- with · H4390מָלֵא mâlêʼ
- violence · H2555חָמָס châmâç
- them · H6440פָּנִים pânîym
- destroy · H7843שָׁחַת shâchath
- with · H854אֵת ʼêth
- earth · H776אֶרֶץ ʼerets