Genesis · chapter 7 · verse 1
Genesis 7:1 in Kannada
ಕರ್ತನು ನೋಹನಿಗೆ--ನೀನೂ ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಬನ್ನಿರಿ; ಯಾಕಂದರೆ ಈ ಸಂತತಿಯಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವದನ್ನು ನಾನು ನೋಡಿ ದ್ದೇನೆ.
Kartanu nohanige--neenoo ninna maneyavarellaroo naaveyolage banniri; yaakandare ee santatiyalli neenobbane nanna munde neetivantanaagiruvadannu naanu nodi ddene.
Genesis 7:1 in English
- King James Version (KJV)
- And the LORD said unto Noah, Come thou and all thy house into the ark; for thee have I seen righteous before me in this generation.
- World English Bible (WEB)
- The LORD said to Noah, “Come with all of your household into the ship, for I have seen your righteousness before me in this generation.
- American Standard Version (ASV)
- And Jehovah said unto Noah, Come thou and all thy house into the ark; for thee have I seen righteous before me in this generation.
- Bible in Basic English (BBE)
- And the Lord said to Noah, Take all your family and go into the ark, for you only in this generation have I seen to be upright.
- Darby Translation (DBY)
- And Jehovah said to Noah, Go into the ark, thou and all thy house; for thee have I seen righteous before me in this generation.
- Webster's Bible (WBS)
- And the LORD said to Noah, Come thou and all thy house into the ark: for thee have I seen righteous before me in this generation.
- Young's Literal Translation (YLT)
- And Jehovah saith to Noah, 'Come in, thou and all thy house, unto the ark, for thee I have seen righteous before Me in this generation;
Read in context
- 1ಕರ್ತನು ನೋಹನಿಗೆ--ನೀನೂ ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಬನ್ನಿರಿ; ಯಾಕಂದರೆ ಈ ಸಂತತಿಯಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವದನ್ನು ನಾನು ನೋಡಿ ದ್ದೇನೆ.
- 2ಶುದ್ಧವಾದ ಎಲ್ಲಾ ಪ್ರಾಣಿಗಳಲ್ಲಿ ಗಂಡು ಹೆಣ್ಣಾಗಿರುವ ಏಳೇಳೂ ಅಶುದ್ಧ ಪ್ರಾಣಿಗಳಲ್ಲಿ ಗಂಡು ಹೆಣ್ಣು ಎರಡೆರಡರಂತೆಯೂ ನಿನ್ನ ಬಳಿಗೆ ತೆಗೆದುಕೋ.
- 3ಆಕಾಶದ ಪಕ್ಷಿಗಳಲ್ಲಿಯೂ ಗಂಡು ಹೆಣ್ಣು ಏಳೇಳ ರಂತೆ ತೆಗೆದುಕೊಂಡು ಭೂಮಿಯ ಮೇಲೆಲ್ಲಾ ಅವು ಗಳ ಸಂತತಿಯನ್ನು ಜೀವದಲ್ಲಿ ಕಾಪಾಡು.
Cross references
- Matthew 24:37–39 ಮತ್ತಾಯನು 24:37–39ಆದರೆ ನೋಹನ ದಿವಸಗಳು ಇದ್ದಂತೆಯೇ ಮನುಷ್ಯ ಕುಮಾರನ ಬರೋಣವೂ ಇರುವದು. ನೋಹನು ನಾವೆಯಲ್ಲಿ ಸೇರಿದ ದಿವಸದ ವರೆಗೆ ಪ್ರಳಯವು ಬರುವದಕ್ಕಿಂತ ಮುಂಚಿನ ಆ ದಿವಸಗಳಲ್ಲಿ ಜನರು ತಿನ್ನುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದರು. ಪ್ರಳಯವು ಬಂದು ಅವರನ್ನು ಬಡುಕೊಂಡು ಹೊಗುವವರೆಗೂ ಅವರಿಗೆ ತಿಳಿದಿರಲಿಲ್ಲ; ಹಾಗೆಯೇ ಮನುಷ್ಯ ಕುಮಾರನ ಬರೋಣವೂ ಇರುವದು.
- 2 Peter 2:5–9 2 ಪೇತ್ರನು 2:5–9ಆತನು ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಭಕ್ತಿಹೀನರ ಮೇಲೆ ಜಲಪ್ರಳಯವನ್ನು ಬರಮಾಡಿ ದನು; ಆದರೆ ನೀತಿಯನ್ನು ಸಾರುತ್ತಿದ್ದ ಎಂಟನೆಯ ವನಾದ ನೋಹನನ್ನು ರಕ್ಷಿಸಿದನು. ಆತನು ಸೊದೋಮ ಗೊಮೋರ ಪಟ್ಟಣಗಳನ್ನು ಬೂದಿ ಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರ ಗತಿಗೆ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು. ಆ ದುಷ್ಟರ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ತಪ್ಪಿಸಿದನು. ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ವೇದನೆಗೊಂಡನು. ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.
- Genesis 6:9 ಆದಿಕಾಂಡ 6:9ನೋಹನ ವಂಶಾವಳಿಗಳು ಇವೇ: ನೋಹನು ತನ್ನ ವಂಶದವರಲ್ಲಿ ನೀತಿವಂತನೂ ಸಂಪೂರ್ಣನೂ ಆಗಿದ್ದನು; ನೋಹನು ದೇವರ ಸಂಗಡ ನಡೆಯು ತ್ತಿದ್ದನು.
- Hebrews 11:7 ಇಬ್ರಿಯರಿಗೆ 11:7ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಸ ಲ್ಪಟ್ಟು ಭಯಗ್ರಸ್ತನಾಗಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧ ಮಾಡಿದನು. ಆದರಿಂದ ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಯಿಂ ದುಂಟಾಗುವ ನೀತಿಗೆ ಬಾಧ್ಯನಾದನು.
- Genesis 7:13 ಆದಿಕಾಂಡ 7:13ಅದೇ ದಿನದಲ್ಲಿ ನೋಹನೂ ಅವನ ಕುಮಾರರಾದ ಶೇಮ್ ಹಾಮ್ ಯೆಫೆತ್ ಇವರೂ ನೋಹನ ಹೆಂಡತಿಯೂ ಅವರ ಕೂಡ ಅವನ ಕುಮಾರರ ಮೂವರು ಹೆಂಡತಿಯರೂ ನಾವೆಯಲ್ಲಿ ಪ್ರವೇಶಿಸಿ ದರು.
- Isaiah 3:10–11 ಯೆಶಾಯ 3:10–11ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು. ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.
- 1 Peter 3:20 1 ಪೇತ್ರನು 3:20ಆದರೆ ನೋಹನ ದಿನಗಳಲ್ಲಿ ನಾವೆಯನ್ನು ಕಟ್ಟುತ್ತಿರಲು ದೇವರ ದೀರ್ಘಶಾಂತಿಯು ಒಂದು ಸಾರಿ ಕಾದಿದ್ದಾಗ ಆತನಿಗೆ ಅವಿಧೇಯರಾ ಗಿದ್ದವರ ಬಳಿಗೆ ಹೋಗಿ ಆತನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ನೀರಿನ ಮೂಲಕ ರಕ್ಷಣೆ ಹೊಂದಿದರು.
- Ezekiel 9:4–6 ಯೆಹೆಜ್ಕೇಲನು 9:4–6ಕರ್ತನು ಅವನಿಗೆ ಹೇಳಿದ್ದೇನಂದರೆ--ಯೆರೂ ಸಲೇಮಿನ ಪಟ್ಟಣದ ಮಧ್ಯೆ ಹಾದುಹೋಗಿ ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು ಅಂದನು. ಅದನ್ನು ನಾನು ಕೇಳುತ್ತಿರುವಾಗ ಇತರರಿಗೆ ಅವನು ಹೇಳಿದ್ದೇನಂದರೆ --ನೀವೂ ಅವನ ಹಿಂದೆ ಪಟ್ಟಣದಲ್ಲಿ ಹಾದು ಹೋಗಿ ಹೊಡೆಯಿರಿ; ನಿಮ್ಮ ಕಣ್ಣುಗಳು ಕನಿಕರಿಸದೆ ಇರಲಿ, ಕಟಾಕ್ಷಿಸದೆಯೂ ಇರಲಿ. ವೃದ್ಧ ಯುವಕ ಯುವತಿ ಯರನ್ನು ಎಳೆಕೂಸುಗಳನ್ನು ಮತ್ತು ಹೆಂಗಸರನ್ನು ಸಂಪೂರ್ಣವಾಗಿ ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ ಅವನ ಹತ್ತಿರ ಹೋಗ ಬೇಡಿರಿ; ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ ಅಂದಾಗ, ಅವರು ಆಲಯದ ಮುಂದಿದ್ದ ಹಿರಿಯರಿಂದ ಪ್ರಾರಂಭಿಸಿದರು.
- Luke 17:26 ಲೂಕನು 17:26ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು.
- Acts 2:39 ಅಪೊಸ್ತಲರ ಕೃತ್ಯಗಳು 2:39ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು.
- Proverbs 14:26 ಜ್ಞಾನೋಕ್ತಿಗಳು 14:26ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು.
- Psalm 33:18–19 ಕೀರ್ತನೆಗಳು 33:18–19ಇಗೋ, ಕರ್ತನ ಕಣ್ಣು ಆತನಿಗೆ ಭಯಪಡುವ ವರ ಮೇಲೆಯೂ ಆತನ ಕರುಣೆಯನ್ನು ಎದುರು ನೋಡುವವರ ಮೇಲೆಯೂ ಅದೆ. ಇದರಿಂದ ಅವರ ಪ್ರಾಣವನ್ನು ಮರಣದಿಂದ ಬಿಡಿಸಿ ಬರಗಾಲ ದಲ್ಲಿ ಅವರ ಜೀವವನ್ನು ಕಾಪಾಡುತ್ತಾನೆ.