Jeremiah · chapter 13 · verse 11
Jeremiah 13:11 in Kannada
ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ.
Yaava prakaara dattiyu manushyana naduvige hattiko lluvado ade prakaara naanu israayelina manetanavannellavannoo yehoodada manetanava nnellavannoo nanage janaroo hesaroo stotravoo mahimeyoo aaguva haage nanage hattikolluvante maadidenu; aadare avaru kelalilla.
Jeremiah 13:11 in English
- King James Version (KJV)
- For as the girdle cleaveth to the loins of a man, so have I caused to cleave unto me the whole house of Israel and the whole house of Judah, saith the LORD; that they might be unto me for a people, and for a name, and for a praise, and for a glory: but they would not hear.
- World English Bible (WEB)
- For as the belt clings to the waist of a man, so I have caused the whole house of Israel and the whole house of Judah to cling to me,’ says the LORD; ‘that they may be to me for a people, for a name, for praise, and for glory; but they would not hear.’
- American Standard Version (ASV)
- For as the girdle cleaveth to the loins of a man, so have I caused to cleave unto me the whole house of Israel and the whole house of Judah, saith Jehovah; that they may be unto me for a people, and for a name, and for a praise, and for a glory: but they would not hear.
- Bible in Basic English (BBE)
- For as a band goes tightly round a man's body, so I made all the people of Israel and all the people of Judah tightly united to me; so that they might be a people for me and a name and a praise and a glory: but they would not give ear.
- Darby Translation (DBY)
- For as a girdle cleaveth to the loins of a man, so have I caused to cleave unto me the whole house of Israel and the whole house of Judah, saith Jehovah; that they might be unto me for a people, and for a name, and for a praise, and for a glory: but they would not hear.
- Webster's Bible (WBS)
- For as the girdle cleaveth to the loins of a man, so have I caused to cleave to me the whole house of Israel and the whole house of Judah, saith the LORD; that they might be to me for a people, and for a name, and for a praise, and for a glory: but they would not hear.
- Young's Literal Translation (YLT)
- For, as the girdle cleaveth unto the loins of a man, So I caused to cleave unto Me The whole house of Israel, And the whole house of Judah, an affirmation of Jehovah, To be to Me for a people, and for a name, And for praise, and for beauty, And they have not hearkened.
Read in context
- 9ಕರ್ತನು ಹೀಗೆ ಹೇಳುತ್ತಾನೆ --ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ ಯೆರೂಸಲೇಮಿನ ದೊಡ್ಡ ಗರ್ವವನ್ನೂ ಕೆಡಿಸುವೆನು.
- 10ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡಕೊಂಡು ಬೇರೆ ದೇವರುಗಳನ್ನು ಸೇವಿಸುವದಕ್ಕೂ ಅವುಗಳನ್ನು ಆರಾಧಿಸುವದಕ್ಕೂ ಹಿಂಬಾಲಿಸುವ ಈ ಕೆಟ್ಟ ಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.
- 11ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ.
- 12ಆದದರಿಂದ ನೀನು ಅವರಿಗೆ ಈ ಮಾತನ್ನು ಹೇಳಬೇಕು--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ ಬುದ್ದಲಿಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವವು; ಆಗ ಅವರು ನಿನಗೆ--ಬುದ್ದಲಿಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವವೆಂದು ನಮಗೆ ಚೆನ್ನಾಗಿ ತಿಳಿಯಿತಲ್ಲವೋ ಎಂದು ನಿನಗೆ ಹೇಳುವರು.
- 13ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕೂಡ್ರುವ ಅರಸುಗಳನ್ನೂ ಯಾಜಕರನ್ನೂ ಪ್ರವಾದಿ ಗಳನ್ನೂ ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು.
Cross references
- Exodus 19:5–6 ವಿಮೋಚನಕಾಂಡ 19:5–6ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ. ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
- Jeremiah 33:9 ಯೆರೆಮೀಯ 33:9ಅದು ನನಗೆ ಆನಂದದ ಹೆಸರೂ ನಾನು ಅವರಿಗೆ ಒಳ್ಳೇದನ್ನೆಲ್ಲಾ ಮಾಡುವದನ್ನು ಕೇಳುವ ಭೂಮಿಯಲ್ಲಿರುವ ಎಲ್ಲಾ ಜನಾಂಗಗಳ ಮುಂದೆ ಸ್ತೋತ್ರವೂ ಮಹಿಮೆಯೂ ಆಗುವದು; ನಾನು ಅದಕ್ಕೆ ಉಂಟು ಮಾಡುವ ಮೇಲಿಗಾಗಿಯೂ ಎಲ್ಲಾ ಅಭಿವೃದ್ಧಿಗಾಗಿಯೂ ಅವರು ಹೆದರಿ ನಡುಗುವರು.
- Isaiah 43:21 ಯೆಶಾಯ 43:21ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ.
- Psalm 81:11 ಕೀರ್ತನೆಗಳು 81:11ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ.
- Jeremiah 13:10 ಯೆರೆಮೀಯ 13:10ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡಕೊಂಡು ಬೇರೆ ದೇವರುಗಳನ್ನು ಸೇವಿಸುವದಕ್ಕೂ ಅವುಗಳನ್ನು ಆರಾಧಿಸುವದಕ್ಕೂ ಹಿಂಬಾಲಿಸುವ ಈ ಕೆಟ್ಟ ಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.
- Jeremiah 6:17 ಯೆರೆಮೀಯ 6:17ಇದಲ್ಲದೆ ನಿಮ್ಮ ಮೇಲೆ ಕಾವಲುಗಾರರನ್ನು ಇರಿಸಿ ತುತೂರಿಯ ಶಬ್ದವನ್ನು ಆಲೈ ಸಿರಿ ಅಂದೆನು; ಆದರೆ ಅವರು--ನಾವು ಆಲೈಸುವ ದಿಲ್ಲ ಅಂದರು.
- Deuteronomy 32:10–15 ಧರ್ಮೋಪದೇಶಕಾಂಡ 32:10–15ಆತನು ಅರಣ್ಯದ ಭೂಮಿಯಲ್ಲಿಯೂ ಕಿರುಚುವ ಅಡವಿಯ ಕಾಡಿನಲ್ಲಿಯೂ ಅವನನ್ನು ಕಂಡುಕೊಂಡನು; ಆತನು ಅವನನ್ನು ನಡಿಸಿ, ಉಪದೇಶಿಸಿದನು. ತನ್ನ ಕಣ್ಣುಗುಡ್ಡೆಯಂತೆ ಕಾಪಾಡಿದನು. ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ ಅವುಗಳ ಮೇಲೆ ರೆಕ್ಕೆಯನ್ನಾಡಿಸಿ ತನ್ನ ರೆಕ್ಕೆಗಳನ್ನು ಚಾಚಿ, ತಕ್ಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ ಕರ್ತನು ಒಬ್ಬನೇ ಅವನನ್ನು ನಡಿಸಿದನು. ಅನ್ಯ ದೇವರು ಒಬ್ಬನೂ ಅವನ ಸಂಗಡ ಇದ್ದಿಲ್ಲ. ಅವನು ಹೊಲದ ಆದಾಯವನ್ನು ತಿನ್ನುವ ಹಾಗೆ ಭೂಮಿಯ ಎತ್ತರವಾದ ಸ್ಥಳಗಳಲ್ಲಿ ಅವನನ್ನು ಹೋಗ ಮಾಡಿ ಬಂಡೆಯೊಳಗಿಂದ ಜೇನನ್ನೂ ಬಿಳೀ ಕಲ್ಲಿನ ಬಂಡೆಯೊಳಗಿಂದ ಎಣ್ಣೆಯನ್ನೂ ಅವನಿಗೆ ಕುಡಿಯಲು ಕೊಟ್ಟನು. ಹಸುಗಳ ಬೆಣ್ಣೆಯನ್ನೂ ಕುರಿಗಳ ಹಾಲನ್ನೂ ಕುರಿಮರಿಗಳ ಕೊಬ್ಬಿನೊಂದಿಗೆ ಬಾಷಾನಿನ ಟಗರು ಗಳನ್ನೂ ಹೋತಗಳನ್ನೂ ಉತ್ತಮ ಗೋಧಿಯ ಸಂಗಡ ಕೊಟ್ಟನು. ನೀನು ಶುದ್ಧ ದ್ರಾಕ್ಷಾರಸವನ್ನು ಕುಡಿದಿ. ಆದರೆ ಯೆಶುರೂನು ಕೊಬ್ಬಿ ಒದ್ದನು, ನೀನು ಕೊಬ್ಬಿದವನಾಗಿ ಉಬ್ಬಿದಿ, ನೀನು ಕೊಬ್ಬಿನಿಂದ ಮುಚ್ಚ ಲ್ಪಟ್ಟಿ. ಅವನು ತನ್ನನ್ನು ಉಂಟುಮಾಡಿದ ದೇವರನ್ನು ತೊರೆದು ತನ್ನ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದನು.
- John 5:37–40 ಯೋಹಾನನು 5:37–40ನನ್ನನ್ನು ಕಳುಹಿಸಿದ ತಂದೆಯು ತಾನೇ ನನ್ನ ವಿಷಯದಲ್ಲಿ ಸಾಕ್ಷಿ ಹೇಳಿದ್ದಾನೆ; ನೀವು ಎಂದಾದರೂ ಆತನ ಧ್ವನಿಯನ್ನು ಕೇಳಲಿಲ್ಲ ಇಲ್ಲವೆ ಆತನ ರೂಪವನ್ನು ನೋಡಲಿಲ್ಲ. ಆತನ ವಾಕ್ಯವು ನಿಮ್ಮಲ್ಲಿ ನೆಲೆಯಾಗಿರುವದಿಲ್ಲ; ಯಾಕಂದರೆ ಆತನು ಕಳುಹಿಸಿದಾತನನ್ನು ನೀವು ನಂಬು ವದಿಲ್ಲ. ಬರಹಗಳನ್ನು ಪರಿಶೋಧಿಸಿರಿ; ಅವುಗಳಲ್ಲಿ ನಿಮಗೆ ನಿತ್ಯಜೀವ ಉಂಟೆಂದು ನೀವು ನೆನಸುತ್ತೀರಲ್ಲಾ; ಅವುಗಳೇ ನನ್ನ ವಿಷಯವಾಗಿ ಸಾಕ್ಷಿಕೊಡುವವುಗಳಾ ಗಿವೆ. ಆದರೆ ನೀವು ಜೀವವನ್ನು ಹೊಂದುವಂತೆ ನನ್ನ ಬಳಿಗೆ ಬರುವದಿಲ್ಲ.
- Deuteronomy 26:18 ಧರ್ಮೋಪದೇಶಕಾಂಡ 26:18ಕರ್ತನು ಈಹೊತ್ತು ನಿನಗೆ ತಾನು ವಾಗ್ದಾನಮಾಡಿದಂತೆ ನೀನು ಆತನಿಗೆ ಅಸಮಾನ್ಯ ಜನವಾಗಬೇಕೆಂದೂ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಬೇಕೆಂದೂಆತನು ಮಾಡಿದ ಎಲ್ಲಾ ಜನಾಂಗಗಳ ಮೇಲೆ ಸ್ತುತಿಯಲ್ಲಿಯೂ ಹೆಸರಿನಲ್ಲಿಯೂ ಘನತೆಯಲ್ಲಿಯೂ ನೀನು ಉನ್ನತ ವಾಗಬೇಕೆಂದೂ ನೀನು ನಿನ್ನ ದೇವರಾದ ಕರ್ತನಿಗೆ ಆತನು ಹೇಳಿದಂತೆ ಪರಿಶುದ್ಧ ಜನವಾಗಬೇಕೆಂದೂ ದೃಢವಾಗಿ ಹೇಳಿದ್ದಾನೆ.
- Deuteronomy 4:7 ಧರ್ಮೋಪದೇಶಕಾಂಡ 4:7ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ನಮಗೆ ಸವಿಾಪವಿರುವ ಪ್ರಕಾರ ಬೇರೆ ಸವಿಾಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು?
- Psalm 147:20 ಕೀರ್ತನೆಗಳು 147:20ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
- Isaiah 62:12 ಯೆಶಾಯ 62:12ಆಗ ಅವರು--ಪರಿಶುದ್ಧ ಜನರೂ ಕರ್ತನು ವಿಮೋಚಿಸಿದ ವರೂ ಎಂದು ಕರೆಯಲ್ಪಡುವರು; ನೀನು ಕಂಡು ಕೊಳ್ಳಲ್ಪಟ್ಟವಳೂ ತೊರೆಯಲ್ಪಡದ ಪಟ್ಟಣವೂ ಎಂದು ಕರೆಯಲ್ಪಡುವಿ.
Original words (Hebrew)
- girdle · H232אֵזוֹר ʼêzôwr
- cleaveth · H1692דָּבַק dâbaq
- loins · H4975מֹתֶן môthen
- man · H376אִישׁ ʼîysh
- cleave · H1692דָּבַק dâbaq
- house · H1004בַּיִת bayith
- Israel · H3478יִשְׂרָאֵל Yisrâʼêl
- house · H1004בַּיִת bayith
- Judah · H3063יְהוּדָה Yᵉhûwdâh
- saith · H5002נְאֻם nᵉʼum
- people · H5971עַם ʻam
- name · H8034שֵׁם shêm
- praise · H8416תְּהִלָּה tᵉhillâh
- glory · H8597תִּפְאָרָה tiphʼârâh
- hear · H8085שָׁמַע shâmaʻ