Jeremiah · chapter 13 · verse 9
Jeremiah 13:9 in Kannada
ಕರ್ತನು ಹೀಗೆ ಹೇಳುತ್ತಾನೆ --ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ ಯೆರೂಸಲೇಮಿನ ದೊಡ್ಡ ಗರ್ವವನ್ನೂ ಕೆಡಿಸುವೆನು.
Kartanu heege heluttaane --ee prakaara naanu yehoodada garvavannoo yeroosalemina dodda garvavannoo kedisuvenu.
Jeremiah 13:9 in English
- King James Version (KJV)
- Thus saith the LORD, After this manner will I mar the pride of Judah, and the great pride of Jerusalem.
- World English Bible (WEB)
- “The LORD says, ‘In this way I will ruin the pride of Judah, and the great pride of Jerusalem.
- American Standard Version (ASV)
- Thus saith Jehovah, After this manner will I mar the pride of Judah, and the great pride of Jerusalem.
- Bible in Basic English (BBE)
- The Lord has said, In this way I will do damage to the pride of Judah and to the great pride of Jerusalem.
- Darby Translation (DBY)
- Thus saith Jehovah: After this manner will I spoil the pride of Judah, and the great pride of Jerusalem.
- Webster's Bible (WBS)
- Thus saith the LORD, After this manner will I mar the pride of Judah, and the great pride of Jerusalem.
- Young's Literal Translation (YLT)
- Thus do I mar the excellency of Judah, And the great excellency of Jerusalem.
Read in context
- 7ಆಗ ನಾನು ಯೂಫ್ರೇಟೀಸಿಗೆ ಹೋಗಿ ಅಗೆದು ಆ ದಟ್ಟಿಯನ್ನು ನಾನು ಅಡಗಿಸಿದ್ದಲ್ಲಿಂದ ತೆಗೆದೆನು; ಇಗೋ, ಆ ದಟ್ಟಿಯು ಯಾವ ಕೆಲಸಕ್ಕಾದರೂ ಬಾರದೆ ಕೆಟ್ಟು ಹೋಗಿತ್ತು.
- 8ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
- 9ಕರ್ತನು ಹೀಗೆ ಹೇಳುತ್ತಾನೆ --ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ ಯೆರೂಸಲೇಮಿನ ದೊಡ್ಡ ಗರ್ವವನ್ನೂ ಕೆಡಿಸುವೆನು.
- 10ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡಕೊಂಡು ಬೇರೆ ದೇವರುಗಳನ್ನು ಸೇವಿಸುವದಕ್ಕೂ ಅವುಗಳನ್ನು ಆರಾಧಿಸುವದಕ್ಕೂ ಹಿಂಬಾಲಿಸುವ ಈ ಕೆಟ್ಟ ಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.
- 11ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ.
Cross references
- Leviticus 26:19 ಯಾಜಕಕಾಂಡ 26:19ನಿಮ್ಮ ಬಲದ ಗರ್ವವನ್ನು ಮುರಿದು ಹಾಕಿ ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಹಿತ್ತಾಳೆಯಂತೆಯೂ ಮಾಡುವೆನು.
- Isaiah 2:10–17 ಯೆಶಾಯ 2:10–17ಕರ್ತನ ಭಯಕ್ಕೂ ಆತನ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ, ದೂಳಿನಲ್ಲಿ ನೀನು ಅಡಗಿಕೋ. ಮನು ಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವದು, ಮನು ಷ್ಯರ ಗರ್ವವು ತಗ್ಗುವದು, ಆಗ ಕರ್ತನೊಬ್ಬನೇ ಆ ದಿನದಲ್ಲಿ ಉನ್ನತನಾಗಿರುವನು. ಸೈನ್ಯಗಳ ಕರ್ತನ ದಿನವು ಗರ್ವ ಮತ್ತು ಅಹಂಭಾವದಿಂದ ತುಂಬಿರು ವವರ ಮೇಲೆಯೂ ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವದು; ಆತನು ಅವರನ್ನು ತಗ್ಗಿಸುವನು. ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳ ಮತ್ತು ಬಾಷಾನಿನ ಎಲ್ಲಾ ಏಲಾಮರಗಳ ಮೇಲೆಯೂ ಎಲ್ಲಾ ಎತ್ತರವಾದ ಪರ್ವತಗಳ ಮತ್ತು ಎತ್ತರವಾಗಿ ರುವ ಗುಡ್ಡಗಳ ಮೇಲೆಯೂ ಎಲ್ಲಾ ಎತ್ತರವಾದ ಗೋಪುರಗಳ ಭದ್ರವಾದ ಎಲ್ಲಾ ಗೋಡೆಗಳ ಮೇಲೆ ಯೂ ಎಲ್ಲಾ ತಾರ್ಷೀಷ್ ಹಡಗುಗಳು, ಅಂತೂ ನೋಡತಕ್ಕ ಮನೋಹರವಾದ ಎಲ್ಲಾ ಚಿತ್ರಗಳ ಮೇಲೆಯೂ ಆ ದಿನವು ಬರುವದು. ಮನುಷ್ಯನ ಅಹಂಭಾವವು ಕುಗ್ಗುವದು, ಮನುಷ್ಯರ ಗರ್ವವು ತಗ್ಗಿಸಲ್ಪಡುವದು; ಆ ದಿನದಲ್ಲಿ ಕರ್ತನೊಬ್ಬನೇ ಉನ್ನತ ನಾಗಿರುವನು.
- Proverbs 16:18 ಜ್ಞಾನೋಕ್ತಿಗಳು 16:18ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.
- Zephaniah 3:11 ಚೆಫನ್ಯ 3:11ಆ ದಿನದಲ್ಲಿ ನೀನು ನನಗೆ ವಿರೋಧ ವಾಗಿ ಪಾಪ ಮಾಡಿದ ನಿನ್ನ ಎಲ್ಲಾ ಕ್ರಿಯೆಗಳ ನಿಮಿತ್ತ ನಾಚಿಕೆಪಡದೆ ಇರುವಿ; ಆಗ ನಿನ್ನ ಹೆಚ್ಚಳದಲ್ಲಿ ಸಂಭ್ರಮ ಪಡುವವರನ್ನು ನಿನ್ನ ಮಧ್ಯದೊಳಗಿಂದ ತೆಗೆದುಹಾಕು ವೆನು; ನನ್ನ ಪರಿಶುದ್ಧ ಪರ್ವತಕ್ಕೋಸ್ಕರ ಇನ್ನು ಮೇಲೆ ನೀನು ಗರ್ವಪಡುವದೇ ಇಲ್ಲ.
- Jeremiah 13:15–17 ಯೆರೆಮೀಯ 13:15–17ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಕರ್ತನು ಮಾತನಾಡಿದ್ದಾನೆ. ಆತನು ಕತ್ತಲೆಯನ್ನು ತರುವದಕ್ಕಿಂತ ಮುಂಚೆಯೂ ನಿಮ್ಮ ಕಾಲುಗಳು ಅಂಧಕಾರದ ಪರ್ವತಗಳ ಮೇಲೆ ಎಡವುವದಕ್ಕಿಂತ ಮುಂಚೆಯೂ ನೀವು ಬೆಳಕಿಗೆ ಕಾದುಕೊಳ್ಳುತ್ತಿರುವಾಗ ಆತನು ಅದನ್ನು ಮರಣದ ನೆರಳಾಗಿ ಮಾಡಿ ಕಾರ್ಗ ತ್ತಲಿಗೆ ಬದಲಾಯಿಸುವದಕ್ಕಿಂತ ಮುಂಚೆಯೇ ನಿಮ್ಮ ದೇವರಾದ ಕರ್ತನನ್ನು ಮಹಿಮೆಪಡಿಸಿರಿ. ಆದರೆ ನೀವು ಅದನ್ನು ಕೇಳದೆ ಹೋದರೆ ನನ್ನ ಪ್ರಾಣವು ನಿಮ್ಮ ಗರ್ವದ ನಿಮಿತ್ತ ಅಂತರಂಗದ ಸ್ಥಳಗಳಲ್ಲಿ ಅಳು ವದು. ನನ್ನ ಆತ್ಮವು ಬಹಳವಾಗಿ ದುಃಖಿಸುವದು; ಕಣ್ಣೀರು ಬಹಳವಾಗಿ ಸುರಿಸುವದು; ಕರ್ತನ ಮಂದೆಯು ಸೆರೆಯಾಗಿ ಒಯ್ಯಲ್ಪಟ್ಟಿದೆ.
- Isaiah 23:9 ಯೆಶಾಯ 23:9ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇ ಕೆಂತಲೂ ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವ ಮಾನಪಡಿಸಬೇಕೆಂತಲೂ ಸೈನ್ಯಗಳ ಕರ್ತನೇ, ಹೀಗೆ ಸಂಕಲ್ಪಿಸಿದ್ದಾನೆ.
- Isaiah 16:6 ಯೆಶಾಯ 16:6ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ; ಅವನಿಗೆ ಬಹಳ ಗರ್ವವುಂಟು, ಅಹಂಕಾರವು, ಗರ್ವ ವು ಕೋಪವು ಸಹ ಉಂಟು; ಆದರೆ ಅವನು ಕೊಚ್ಚಿ ಕೊಳ್ಳುವದು ವ್ಯರ್ಥ.
- Ezekiel 16:56 ಯೆಹೆಜ್ಕೇಲನು 16:56ನಿನ್ನ ಸಹೋದರಿಯಾದ ಸೊದೋಮ್ ನಿನ್ನ ಗರ್ವದ ದಿವಸಗಳಲ್ಲಿ ನಿನ್ನ ಬಾಯಿಂದ ಉಚ್ಚರಿಸಲ್ಪಡಲಿ.
- Nahum 2:2 ನಹೂಮ 2:2ಕರ್ತನು ಯಾಕೋಬನ ಹೆಚ್ಚಳವನ್ನು ಇಸ್ರಾಯೇಲಿನ ಹೆಚ್ಚಳದ ಹಾಗೆಯೇ ತಿರುಗಿಸಿಬಿಟ್ಟಿ ದ್ದಾನೆ; ಬರಿದು ಮಾಡುವವರು ಅವರನ್ನು ಬರಿದು ಮಾಡಿ ಅವರ ದ್ರಾಕ್ಷೇ ಬಳ್ಳಿಗಳನ್ನು ಕೆಡಿಸಿದ್ದಾರೆ.
- Lamentations 5:5–8 ಪ್ರಲಾಪಗಳು 5:5–8ನಮ್ಮ ಕುತ್ತಿಗೆಗಳು ಹಿಂಸೆಗೊಳ ಗಾದವು; ನಾವು ವಿಶ್ರಾಂತಿಯಿಲ್ಲದೆ ಕಷ್ಟಪಡುತ್ತೇವೆ. ರೊಟ್ಟಿಯಿಂದ ತೃಪ್ತಿಪಡುವದಕ್ಕಾಗಿ ನಮ್ಮ ಕೈಯನ್ನು ಐಗುಪ್ತ್ಯರಿಗೂ ಅಶ್ಶೂರ್ಯರಿಗೂ ಕೊಟ್ಟಿದ್ದೇವೆ. ನಮ್ಮ ತಂದೆಗಳು ಪಾಪ ಮಾಡಿ ಇಲ್ಲದೆ ಹೋದರು; ನಾವು ಅವರ ಅಕ್ರಮಗಳನ್ನು ಹೊರುತ್ತೇವೆ. ಆಳುಗಳು ನಮ್ಮ ಮೇಲೆ ಆಳಿದ್ದಾರೆ; ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವದಿಲ್ಲ.
- Jeremiah 18:4–6 ಯೆರೆಮೀಯ 18:4–6ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು; ಆಗ ಕುಂಬಾರನಿಗೆ ಒಳ್ಳೇದೆಂದು ತೋರುವ ಪ್ರಕಾರ ಅದನ್ನು ಮತ್ತೊಂದು ಪಾತ್ರೆ ಯನ್ನಾಗಿ ಮಾಡಿದನು. ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- ಓ ಇಸ್ರಾಯೇಲಿನ ಮನೆತನದ ವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡ ಕೂಡದೋ ಎಂದು ಕರ್ತನು ಅನ್ನುತ್ತಾನೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.
- Job 40:10–12 ಯೋಬನು 40:10–12ಗಾಂಭೀರ್ಯದಿಂದಲೂ ಘನತೆಯಿಂದ ಲೂ ನಿನ್ನನ್ನು ಅಲಂಕರಿಸಿಕೋ; ಮಹಿಮೆಯನ್ನೂ ಪ್ರಭೆಯನ್ನೂ ಧರಿಸಿಕೋ. ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು. ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು.