2 Samuel · chapter 11 · verse 4
2 Samuel 11:4 in Kannada
ದಾವೀದನು ದೂತರನ್ನು ಕಳುಹಿಸಿ ಅವಳನ್ನು ಕರೆಯಿಸಿದನು. ಅವಳು ಅವನ ಬಳಿಗೆ ಬಂದಾಗ ಅವಳು ತನ್ನ ಮೈಲಿಗೆಯನ್ನು ಕಳಕೊಂಡು ಶುಚಿಯಾಗಿದ್ದದರಿಂದ ದಾವೀದನು ಅವಳ ಸಂಗಡ ಮಲಗಿದನು.
Daaveedanu dootarannu kaluhisi avalannu kareyisidanu. Avalu avana balige bandaaga avalu tanna mailigeyannu kalakondu shuchiyaagiddadarinda daaveedanu avala sangada malagidanu.
2 Samuel 11:4 in English
- King James Version (KJV)
- And David sent messengers, and took her; and she came in unto him, and he lay with her; for she was purified from her uncleanness: and she returned unto her house.
- World English Bible (WEB)
- David sent messengers, and took her; and she came in to him, and he lay with her (for she was purified from her uncleanness); and she returned to her house.
- American Standard Version (ASV)
- And David sent messengers, and took her; and she came in unto him, and he lay with her (for she was purified from her uncleanness); and she returned unto her house.
- Bible in Basic English (BBE)
- And David sent and took her; and she came to him, and he took her to his bed: (for she had been made clean;) then she went back to her house.
- Darby Translation (DBY)
- And David sent messengers, and took her; and she came in to him, and he lay with her; and she had purified herself from her uncleanness; and she returned to her house.
- Webster's Bible (WBS)
- And David sent messengers, and took her; and she came in to him, and he lay with her; for she was purified from her uncleanness: and she returned to her house.
- Young's Literal Translation (YLT)
- And David sendeth messengers, and taketh her, and she cometh unto him, and he lieth with her — and she is purifying herself from her uncleanness — and she turneth back unto her house;
Read in context
- 2ಆಗ ಆದದ್ದೇನಂದರೆ, ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು ಅರಮನೆಯ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇರುವಾಗ ಸ್ನಾನಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಉಪ್ಪರಿಗೆಯ ಮೇಲಿನಿಂದ ನೋಡಿದನು.
- 3ಆ ಸ್ತ್ರೀಯು ಮಹಾಸೌಂದರ್ಯ ರೂಪವುಳ್ಳವಳಾಗಿದ್ದಳು. ಆಗ ದಾವೀದನು ಆ ಸ್ತ್ರೀ ಯಾರೆಂದು ಕೇಳುವದಕ್ಕೆ--ಕಳುಹಿಸಿದಾಗ ಒಬ್ಬನು--ಅವಳು ಹಿತ್ತಿಯನಾದ ಊರೀಯನ ಹೆಂಡತಿಯಾಗಿರುವ ಎಲೀಯಾಮನ ಮಗಳಾದ ಬತ್ಷೆಬೆಯಲ್ಲವೋ ಅಂದನು.
- 4ದಾವೀದನು ದೂತರನ್ನು ಕಳುಹಿಸಿ ಅವಳನ್ನು ಕರೆಯಿಸಿದನು. ಅವಳು ಅವನ ಬಳಿಗೆ ಬಂದಾಗ ಅವಳು ತನ್ನ ಮೈಲಿಗೆಯನ್ನು ಕಳಕೊಂಡು ಶುಚಿಯಾಗಿದ್ದದರಿಂದ ದಾವೀದನು ಅವಳ ಸಂಗಡ ಮಲಗಿದನು.
- 5ತರುವಾಯ ಆಕೆಯು ತನ್ನ ಮನೆಗೆ ಹೋದಳು. ಆ ಸ್ತ್ರೀಯು ಗರ್ಭಧರಿಸಿ ತಾನು ಗರ್ಭವತಿಯಾದೆನೆಂದು ದಾವೀದನಿಗೆ ಹೇಳಿ ಕಳುಹಿಸಿದಳು.
- 6ಆಗ ದಾವೀದನು ಹಿತ್ತಿಯನಾದ ಊರೀಯನನ್ನು ತನ್ನ ಬಳಿಗೆ ಕಳುಹಿಸೆಂದು ಯೋವಾಬನಿಗೆ ಹೇಳಿ ಕಳುಹಿಸಿದನು. ಹಾಗೆಯೇ ಯೋವಾಬನು ಊರೀಯ ನನ್ನು ದಾವೀದನ ಬಳಿಗೆ ಕಳುಹಿಸಿದನು.
Cross references
- Leviticus 18:19 ಯಾಜಕಕಾಂಡ 18:19ಇದು ಮಾತ್ರವಲ್ಲದೆ ಒಬ್ಬಳು ತನ್ನ ಅಶುದ್ಧತ್ವದ ನಿಮಿತ್ತವಾಗಿ ಪ್ರತ್ಯೇಕಿಸಲ್ಪಟ್ಟಾಗ ನೀನು ಆ ಸ್ತ್ರೀಯ ಬೆತ್ತಲೆತನವನ್ನು ನೋಡುವಂತೆ ಅವಳ ಹತ್ತಿರ ಹೋಗ ಬೇಡ.
- James 1:14–15 ಯಾಕೋಬನು 1:14–15ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ. ಆಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ; ಪಾಪವು ಸಂಪೂರ್ಣವಾದ ಮೇಲೆ ಮರಣ ವನ್ನು ಹಡೆಯುತ್ತದೆ.
- Psalm 51:1–19 ಕೀರ್ತನೆಗಳು 51:1–19ಓ ದೇವರೇ, ನನ್ನ ಮೇಲೆ ಕರುಣೆಯಿಡು; ನಿನ್ನ ಪ್ರೀತಿಕರುಣೆಯ ಪ್ರಕಾರ ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ದ್ರೋಹ ಗಳನ್ನು ಅಳಿಸಿಬಿಡು. ನನ್ನ ಅಕ್ರಮದಿಂದ ನನ್ನನ್ನು ಪೂರ್ಣವಾಗಿ ತೊಳೆ; ನನ್ನ ಪಾಪದಿಂದ ನನ್ನನ್ನು ಶುದ್ಧಿಮಾಡು. ನನ್ನ ದ್ರೋಹಗಳನ್ನು ನಾನು ಒಪ್ಪಿ ಕೊಳ್ಳುತ್ತೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. ನೀನು ನಿನ್ನ ಮಾತುಗಳಲ್ಲಿ ನೀತಿವಂತ ನಾಗಿಯೂ ನಿನ್ನ ನ್ಯಾಯತೀರ್ವಿಕೆಯಲ್ಲಿ ನಿರ್ಮಲನಾ ಗಿಯೂ ಇದ್ದಿಯಲ್ಲಾ; ನಿನಗೆ ಮಾತ್ರವೇ ವಿರೋಧ ವಾಗಿ ನಾನು ಪಾಪಮಾಡಿ ನಿನ್ನ ದೃಷ್ಟಿಯಲ್ಲಿ ಈ ಕೆಟ್ಟದ್ದನ್ನು ಮಾಡಿದ್ದೇನೆ. ಇಗೋ, ನಾನು ಅಕ್ರ ಮದಲ್ಲಿ ರೂಪಿಸಲ್ಪಟ್ಟೆನು; ಪಾಪದಲ್ಲಿ ನನ್ನ ತಾಯಿ ನನ್ನನ್ನು ಗರ್ಭಧರಿಸಿದಳು. ಇಗೋ, ಅಂತರಂಗದಲ್ಲಿ ನೀನು ಸತ್ಯವನ್ನು ಅಪೇಕ್ಷಿಸುತ್ತೀ; ರಹಸ್ಯದಲ್ಲಿ ನನಗೆ ಜ್ಞಾನವನ್ನು ನೀನು ತಿಳಿಯಮಾಡು. ಹಿಸ್ಸೋಪ್ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು. ನಾನು ಉತ್ಸಾಹವನ್ನೂ ಸಂತೋಷವನ್ನೂ ಕೇಳುವ ಹಾಗೆ ಮಾಡು. ಆಗ ನನ್ನ ಮುರಿದ ಎಲುಬುಗಳು ಆನಂದಿಸುವವು. ನನ್ನ ಪಾಪಗಳನ್ನು ನೋಡದಂತೆ ನೀನು ವಿಮುಖನಾಗು; ನನ್ನ ಅಕ್ರಮಗಳನ್ನೆಲ್ಲಾ ಅಳಿಸಿ ಬಿಡು. ಓ ದೇವರೇ, ಶುದ್ಧಹೃದಯವನ್ನು ನನ್ನಲ್ಲಿ ಸೃಷ್ಟಿಸು, ಸ್ಥಿರವಾದ ಆತ್ಮವನ್ನು ನನ್ನ ಅಂತರಂಗದಲ್ಲಿ ನೂತನಪಡಿಸು. ನಿನ್ನ ಸಮ್ಮುಖದಿಂದ ನನ್ನನ್ನು ಹೊರಗೆ ಹಾಕಬೇಡ; ನಿನ್ನ ಪರಿಶುದ್ಧಾತ್ಮನನ್ನು ನನ್ನಿಂದ ತೆಗೆದುಕೊಳ್ಳಬೇಡ. ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು. ಆಗ ದ್ರೋಹಿಗಳಿಗೆ ನಿನ್ನ ಮಾರ್ಗಗಳನ್ನು ಕಲಿಸುವೆನು; ಪಾಪಾತ್ಮರು ನಿನ್ನ ಕಡೆಗೆ ತಿರುಗುವರು. ಓ ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧ ದಿಂದ ನೀನು ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ನಿನ್ನ ನೀತಿಯನ್ನು ಗಟ್ಟಿಯಾಗಿ ಹಾಡುವದು. ಓ ಕರ್ತನೇ, ನನ್ನ ತುಟಿಗಳನ್ನು ತೆರೆ; ಆಗ ನನ್ನ ಬಾಯಿ ನಿನ್ನ ಸ್ತೋತ್ರವನ್ನು ಪ್ರಕಟಮಾಡುವದು. ಯಜ್ಞ ವನ್ನು ನೀನು ಇಷ್ಟಪಡುದಿಲ್ಲ. ಇಲ್ಲವಾದರೆ ನಾನು ಅದನ್ನು ಕೊಡುತ್ತಿದ್ದೆನು. ದಹನಬಲಿಯಲ್ಲಿ ನೀನು ಸಂತೋಷಪಡುವದಿಲ್ಲ. ಮುರಿದ ಮನಸ್ಸೇ ದೇವರ ಯಜ್ಞಗಳು. ಓ ದೇವರೇ, ಪಶ್ಚಾತ್ತಾಪದಿಂದ ಜಜ್ಜಿ ಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ. ನಿನ್ನ ದಿವ್ಯ ಚಿತ್ತದ ಪ್ರಕಾರ ಚೀಯೋನಿಗೆ ಒಳ್ಳೇದು ಮಾಡು; ಯೆರೂಸಲೇಮಿನ ಗೋಡೆಗಳನ್ನು ಕಟ್ಟು.ಆಗ ನೀತಿಯ ಯಜ್ಞಗಳಲ್ಲಿಯೂ ದಹನ ಬಲಿಯಲ್ಲಿಯೂ ಪೂರ್ಣವಾದ ದಹನಬಲಿಯ ಲ್ಲಿಯೂ ನೀನು ಸಂತೋಷಪಡುವಿ; ಆಗ ನಿನ್ನ ಬಲಿ ಪೀಠದ ಮೇಲೆ ಅವರು ಹೋರಿಗಳನ್ನು ಅರ್ಪಿಸುವರು. ಆಗ ನೀತಿಯ ಯಜ್ಞಗಳಲ್ಲಿಯೂ ದಹನ ಬಲಿಯಲ್ಲಿಯೂ ಪೂರ್ಣವಾದ ದಹನಬಲಿಯ ಲ್ಲಿಯೂ ನೀನು ಸಂತೋಷಪಡುವಿ; ಆಗ ನಿನ್ನ ಬಲಿ ಪೀಠದ ಮೇಲೆ ಅವರು ಹೋರಿಗಳನ್ನು ಅರ್ಪಿಸುವರು.
- Leviticus 12:2–5 ಯಾಜಕಕಾಂಡ 12:2–5ಇಸ್ರಾಯೇಲ್ಯರ ಮಕ್ಕಳಿಗೆ ಹೇಳ ಬೇಕಾದದ್ದೇನಂದರೆ--ಒಬ್ಬ ಸ್ತ್ರೀಯು ಗರ್ಭಧರಿಸಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು; ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು. ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿಮಾಡಿಸ ಬೇಕು. ಅವಳು ಮೂವತ್ತಮೂರು ದಿನಗಳು ಶುದ್ಧೀ ಕರಣದಲ್ಲಿ ಮುಂದುವರಿಯಬೇಕು, ಅವಳು ಶುದ್ಧೀ ಕರಣದ ದಿನಗಳು ಪೂರೈಸುವ ತನಕ ಪರಿಶುದ್ಧ ವಾದದ್ದನ್ನು ಮುಟ್ಟಬಾರದು ಪರಿಶುದ್ಧ ಸ್ಥಳಕ್ಕೆ ಬರ ಬಾರದು. ಅವಳು ಹೆಣ್ಣುಮಗುವನ್ನು ಹೆತ್ತರೆ ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿರ ಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಸಬೇಕು.
- Proverbs 30:20 ಜ್ಞಾನೋಕ್ತಿಗಳು 30:20ಜಾರಸ್ತ್ರೀಯ ನಡತೆಯು ಹಾಗೆಯೇ ಇದೆ; ಅವಳು ತಿಂದು ತನ್ನ ಬಾಯನ್ನು ಒರಸಿಕೊಂಡು--ನಾನು ಯಾವ ಕೆಟ್ಟದ್ದನ್ನೂ ಮಾಡಲಿಲ್ಲ ಎಂದು ಹೇಳುತ್ತಾಳೆ.
- Job 31:9–11 ಯೋಬನು 31:9–11ನನ್ನ ಹೃದಯವು ಸ್ತ್ರೀಗೋಸ್ಕರ ಮರುಳು ಗೊಂಡಿದ್ದರೆ, ನನ್ನ ನೆರೆಯವನ ಬಾಗಲ ಹತ್ತಿರ ನಾನು ಹೊಂಚಿಕೊಂಡಿದ್ದರೆ, ನನ್ನ ಹೆಂಡತಿ ಮತ್ತೊಬ್ಬನಿ ಗೊಸ್ಕರ ಬೀಸಲಿ; ಮತ್ತೊಬ್ಬರು ಅವಳ ಮೇಲೆ ಒರಗಲಿ. ಯಾಕಂದರೆ ಅದು ಮಹಾ ಪಾಪವೂ ಹೌದು, ನ್ಯಾಯಾಧಿಪತಿಗಳಿಗೆ ಬರುವ ಅಕ್ರಮವೂ ಆಗಿರುವದು.
- Genesis 39:7 ಆದಿಕಾಂಡ 39:7ಇವುಗಳಾದ ಮೇಲೆ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣುಹಾಕಿ--ನನ್ನ ಸಂಗಡ ಮಲಗು ಅಂದಳು.
- Psalm 50:18 ಕೀರ್ತನೆಗಳು 50:18ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ.
- Leviticus 15:19–33 ಯಾಜಕಕಾಂಡ 15:19–33ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತಸ್ರಾವವಿದ್ದರೆ ಅವಳು ಏಳು ದಿವಸಗಳ ವರೆಗೆ ಪ್ರತ್ಯೇಕಿಸಲ್ಪಡಬೇಕು. ಅವಳನ್ನು ಯಾವನಾದರೂ ಮುಟ್ಟಿದರೆ ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರಬೇಕು. ಅವಳು ಕೂತುಕೊ ಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರಬೇಕು. ಅವಳ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆ ಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು. ಅವಳು ಕೂತುಕೊಂಡಿರುವ ಯಾವದನ್ನಾದರೂ ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಅವನು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು. ಇದಲ್ಲದೆ ಅವಳ ಹಾಸಿಗೆಯ ಮೇಲಾಗಲಿ ಇಲ್ಲವೆ ಅವಳು ಕೂತುಕೊಂಡ ಯಾವದರ ಮೇಲಾಗಲಿ ಇರುವದನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು. ಯಾವನಾದರೂ ಅವಳೊಂದಿಗೆ ಮಲಗಿದರೆ ಅವಳ ಸಾರವು (ಹೊಲೆ) ಅವನಿಗೆ ತಗಲಿದರೆ ಅವನು ಏಳು ದಿವಸ ಅಶುದ್ಧನಾಗಿರಬೇಕು; ಅವನು ಮಲಗಿ ಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವದು. ಇದಲ್ಲದೆ ಹೆಂಗಸಿಗೆ ಅವಳ ಮುಟ್ಟಿನ ಕಾಲಕ್ಕಿಂತಲೂ ಹೆಚ್ಚು ದಿನ ರಕ್ತಸ್ರಾವವು ಇದ್ದರೆ ಇಲ್ಲವೆ ಮುಟ್ಟಾಗಿದ್ದ ಕಾಲದಲ್ಲಾಗುವ ರಕ್ತಸ್ರಾವಕ್ಕಿಂತ ಹೆಚ್ಚಾಗಿ ಹರಿ ಯುತ್ತಿದ್ದರೆ ಅವಳ ಸ್ರಾವದ ಅಶುದ್ಧತ್ವದ ಎಲ್ಲಾ ದಿನ ಗಳು ಅವಳ ಮುಟ್ಟಿನ ದಿನಗಳಂತೆ ಇರಬೇಕು; ಅವಳು ಅಶುದ್ಧಳಾಗಿರುವಳು. ಅವಳ ಸ್ರಾವದ ಎಲ್ಲಾ ದಿನಗಳಲ್ಲಿ ಅವಳು ಮಲಗಿಕೊಳ್ಳುವ ಪ್ರತಿಯೊಂದು ಹಾಸಿಗೆಯೂ ಅವಳ ಮುಟ್ಟಿನ ಹಾಸಿಗೆಯಂತಿರಬೇಕು; ಅವಳು ಕೂತುಕೊಳ್ಳುವದೆಲ್ಲವೂ ಅವಳ ಪ್ರತ್ಯೇಕದ ಮುಟ್ಟಿನ ಅಶುದ್ಧತೆಯಂತೆಯೇ ಅಶುದ್ಧವಾಗಿರುವದು. ಯಾವನಾದರು ಆ ವಸ್ತುಗಳನ್ನು ಮುಟ್ಟಿದರೆ ಅಶುದ್ಧ ನಾಗಿರುವನು, ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಅವಳು ತನ್ನ ಸ್ರಾವದಿಂದ ಶುದ್ಧಳಾದ ದಿನದಿಂದ ಏಳು ದಿನ ಲೆಕ್ಕಿಸಬೇಕು ತರು ವಾಯ ಅವಳು ಶುದ್ಧಳಾಗಿರುವಳು. ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಿಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಯಾಜಕನ ಬಳಿಗೆ ತರ ಬೇಕು. ಯಾಜಕನು ಒಂದನ್ನು ಪಾಪಬಲಿಗಾ ಗಿಯೂ ಇನ್ನೊಂದನ್ನು ದಹನಬಲಿಗಾಗಿಯೂ ಸಮ ರ್ಪಿಸಬೇಕು; ಯಾಜಕನು ಅವಳಿಗಾಗಿ ಅವಳ ಅಶುದ್ಧ ತೆಯ ಸ್ರಾವದ ವಿಷಯದಲ್ಲಿ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು. ಹೀಗೆ ನೀವು ಇಸ್ರಾಯೇಲ್ ಮಕ್ಕಳನ್ನು ಅವರ ಅಶುದ್ಧತ್ವದಿಂದ ಪ್ರತ್ಯೇಕಿಸಬೇಕು; ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡದೆ ತಮ್ಮ ಅಶುದ್ಧತ್ವದಿಂದ ಸಾಯುವದಿಲ್ಲ. ಮೇಹಸ್ರಾವವುಳ್ಳವನಿಗೂ ವೀರ್ಯಸ್ರಾವವುಳ್ಳ ವನಿಗೂ ಅವುಗಳಿಂದ ಅಶುದ್ಧವಾಗುವವರಿಗೂ ಇರುವ ನಿಯಮವು ಇದೇ.ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ. ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ.