Jonah · chapter 1 · verse 4
Jonah 1:4 in Kannada
ಆದರೆ ಕರ್ತನು ದೊಡ್ಡ ಗಾಳಿಯನ್ನು ಸಮುದ್ರದ ಮೇಲೆ ಕಳುಹಿಸಿದನು; ಸಮುದ್ರದಲ್ಲಿ ಮಹಾಬಿರುಗಾಳಿ ಉಂಟಾಗಿ ಹಡಗು ಒಡೆಯುವ ದಕ್ಕಿತ್ತು.
Aadare kartanu dodda gaaliyannu samudrada mele kaluhisidanu; samudradalli mahaabirugaali untaagi hadagu odeyuva dakkittu.
Jonah 1:4 in English
- King James Version (KJV)
- But the LORD sent out a great wind into the sea, and there was a mighty tempest in the sea, so that the ship was like to be broken.
- World English Bible (WEB)
- But the LORD sent out a great wind on the sea, and there was a mighty storm on the sea, so that the ship was likely to break up.
- American Standard Version (ASV)
- But Jehovah sent out a great wind upon the sea, and there was a mighty tempest on the sea, so that the ship was like to be broken.
- Bible in Basic English (BBE)
- And the Lord sent out a great wind on to the sea and there was a violent storm in the sea, so that the ship seemed in danger of being broken.
- Darby Translation (DBY)
- But Jehovah sent out a great wind upon the sea, and there was a mighty tempest upon the sea, so that the ship was like to be broken.
- Webster's Bible (WBS)
- But the LORD sent out a great wind into the sea, and there was a mighty tempest in the sea, so that the ship was in danger of being broken.
- Young's Literal Translation (YLT)
- And Jehovah hath cast a great wind on the sea, and there is a great tempest in the sea, and the ship hath reckoned to be broken;
Read in context
- 2ಹೇಗಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದಕ್ಕೆ ವಿರೋಧವಾಗಿ ಕೂಗು; ಅವರ ಕೆಟ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ ಎಂಬದು.
- 3ಆದರೆ ಯೋನನು ಕರ್ತನ ಸಮ್ಮುಖದಿಂದ ತಾರ್ಷೀಷಿಗೆ ಓಡಿ ಹೋಗುವದಕ್ಕೆ ಎದ್ದು ಯೊಪ್ಪಕ್ಕೆ ಇಳಿದು ತಾರ್ಷೀಷಿಗೆ ಹೋಗುವ ಹಡಗನ್ನು ಕಂಡು ಅದರ ಪ್ರಯಾಣದ ತೆರವನ್ನು ಕೊಟ್ಟು ಕರ್ತನ ಸಮ್ಮುಖದಿಂದ ಅವರ ಸಂಗಡ ತಾರ್ಷಿಷಿಗೆ ಹೋಗುವದಕ್ಕೆ ಅದನ್ನು ಹತ್ತಿದನು.
- 4ಆದರೆ ಕರ್ತನು ದೊಡ್ಡ ಗಾಳಿಯನ್ನು ಸಮುದ್ರದ ಮೇಲೆ ಕಳುಹಿಸಿದನು; ಸಮುದ್ರದಲ್ಲಿ ಮಹಾಬಿರುಗಾಳಿ ಉಂಟಾಗಿ ಹಡಗು ಒಡೆಯುವ ದಕ್ಕಿತ್ತು.
- 5ಆಗ ಹಡಗಿನವರು ಭಯಪಟ್ಟು ಒಬ್ಬೊಬ್ಬನು ತನ್ನ ತನ್ನ ದೇವರಿಗೆ ಕೂಗಿ ಹಡಗನ್ನು ಹಗುರ ಮಾಡುವ ಹಾಗೆ ಅದರಲ್ಲಿದ್ದ ಸಾಮಾನುಗಳನ್ನು ಸಮುದ್ರದಲ್ಲಿ ಹಾಕಿಬಿಟ್ಟರು; ಆದರೆ ಯೋನನು ಹಡಗಿನ ಒಳಗೆ ಇಳಿದುಹೋಗಿ ಮಲಗಿಕೊಂಡು ಗಾಢ ನಿದ್ರೆಯಲ್ಲಿ ದ್ದನು.
- 6ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು--ನಿದ್ರೆಮಾಡುವವನೇ, ನಿನಗೆ ಏನಾಯಿತು? ಎದ್ದು ನಿನ್ನ ದೇವರನ್ನು ಕೂಗು; ಒಂದು ವೇಳೆ ನಾವು ನಾಶವಾಗದ ಹಾಗೆ ದೇವರು ನಮ್ಮನ್ನು ಜ್ಞಾಪಕ ಮಾಡ್ಯಾನು ಅಂದನು.
Cross references
- Psalm 107:23–31 ಕೀರ್ತನೆಗಳು 107:23–31ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗಿ ಬಹಳ ನೀರುಗಳಲ್ಲಿ ವ್ಯಾಪಾರಮಾಡುವವರು ಕರ್ತನ ಕೆಲಸಗಳನ್ನೂ ಅಗಾಧಗಳಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ. ಆತನು ಆಜ್ಞಾಪಿಸಿ ಬಿರುಗಾಳಿಯನ್ನು ಏಳಮಾಡುತ್ತಾನೆ; ಅದು ಅದರ ತೆರೆಗಳನ್ನು ಎಬ್ಬಿಸುತ್ತದೆ. ಅವರು ಆಕಾಶಕ್ಕೆ ಏರು ತ್ತಾರೆ; ತಿರುಗಿ ಅಗಾಧಗಳಿಗೆ ಇಳಿಯುತ್ತಾರೆ; ಅವರ ಪ್ರಾಣವು ಕಳವಳದಿಂದ ಕರಗಿಹೋಗುತ್ತದೆ. ಅವರು ಅತ್ತಿತ್ತ ತೂಗಾಡಿ ಮತ್ತನ ಹಾಗೆ ಓಲಾ ಡುತ್ತಾರೆ. ಅವರ ಜ್ಞಾನವೆಲ್ಲಾ ನುಂಗಿ ಹೋಯಿತು. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ ಬಿರುಗಾಳಿಯನ್ನು ಶಾಂತಮಾಡುತ್ತಾನೆ; ಹೀಗೆ ಅದರ ತೆರೆಗಳು ನಿಂತು ಹೋಗುವವು. ಅವು ಶಾಂತವಾದಾಗ ಅವರು ಸಂತೋಷಪಡುತ್ತಾರೆ; ಹೀಗೆ ಅವರು ಅಪೇಕ್ಷಿಸಿದ ರೇವಿಗೆ ಅವರನ್ನು ನಡೆಸುತ್ತಾನೆ. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿ ಗೋಸ್ಕರವೂ ಕೊಂಡಾಡಲಿ.
- Matthew 8:24–27 ಮತ್ತಾಯನು 8:24–27ಆಗ ಇಗೋ, ಸಮುದ್ರದಲ್ಲಿ ದೊಡ್ಡ ತುಫಾನು ಎದ್ದ ಕಾರಣ ದೋಣಿಯು ತೆರೆಗಳಿಂದ ಮುಚ್ಚಲ್ಪಟ್ಟಿತು; ಆದರೆ ಆತನು ನಿದ್ರಿಸುತ್ತಿದ್ದನು. ಆಗ ಆತನ ಶಿಷ್ಯರು ಬಂದು ಆತನನ್ನು ಎಬ್ಬಿಸಿ--ಕರ್ತನೇ ನಮ್ಮನ್ನು ರಕ್ಷಿಸು; ನಾವು ನಾಶವಾಗುತ್ತೇವೆ ಅಂದರು. ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು. ಆದರೆ ಅವರು ಆಶ್ಚರ್ಯದಿಂದ--ಈತನು ಎಂಥಾ ಮನುಷ್ಯ ನಾಗಿರಬಹುದು! ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ಅಂದರು.
- Psalm 135:7 ಕೀರ್ತನೆಗಳು 135:7ಭೂಮಿಯ ಅಂತ್ಯಗಳಿಂದ ಮೋಡಗಳನ್ನು ಏಳ ಮಾಡಿ, ಮಳೆಗೋಸ್ಕರ ಮಿಂಚು ಗಳನ್ನು ಮಾಡಿ, ಗಾಳಿಯನ್ನು ತನ್ನ ಉಗ್ರಾಣಗಳಿಂದ ಹೊರಗೆ ಬರಮಾಡುತ್ತಾನೆ.
- Amos 4:13 ಆಮೋಸ 4:13ಇಗೋ, ಬೆಟ್ಟಗಳನ್ನು ರೂಪಿಸಿ ಗಾಳಿ ಯನ್ನು ನಿರ್ಮಿಸಿ ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ ಉದಯವನ್ನು ಅಂಧಕಾರವನ್ನಾಗಿ ಮಾಡಿ ಭೂಮಿಯ ಉನ್ನತ ಸ್ಥಳಗಳನ್ನು ತುಳಿದು ಬಿಡುವಾತನು ಆತನೇ. ಕರ್ತನೂ ಸೈನ್ಯಗಳ ದೇವರೂ ಎಂಬದು ಆತನ ಹೆಸರು.
- Exodus 14:21 ವಿಮೋಚನಕಾಂಡ 14:21ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು.
- Exodus 10:19 ವಿಮೋಚನಕಾಂಡ 10:19ಕರ್ತನು ಮಹಾಬಲವಾದ ಪಶ್ಚಿಮಗಾಳಿಯನ್ನು ಬೀಸಮಾಡಿದನು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದಲ್ಲಿ ಹಾಕಿತು. ಐಗುಪ್ತದ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯ ಲಿಲ್ಲ.
- Numbers 11:31 ಅರಣ್ಯಕಾಂಡ 11:31ಕರ್ತನ ಕಡೆಯಿಂದ ಗಾಳಿಯು ಹೊರಟು ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನು ತಂದು ಪಾಳೆಯದ ಸುತ್ತಲೂ ಈ ಕಡೆ ಒಂದು ದಿನ ದೂರದ ಪ್ರಯಾಣದಷ್ಟು ಆ ಕಡೆ ಒಂದು ದಿನ ದೂರದ ಪ್ರಯಾಣದಷ್ಟು ಪಾಳೆಯದ ಬಳಿಯಲ್ಲಿ ಭೂಮಿಯ ಮೇಲೆ ಎರಡು ಮೊಳ ಎತ್ತರದಲ್ಲಿ ಅವುಗಳನ್ನು ಬೀಳುವಂತೆ ಮಾಡಿತು.
- Exodus 15:10 ವಿಮೋಚನಕಾಂಡ 15:10ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು.
- Acts 27:13–20 ಅಪೊಸ್ತಲರ ಕೃತ್ಯಗಳು 27:13–20ಇದಾದ ಮೇಲೆ ದಕ್ಷಿಣದ ಗಾಳಿಯು ಮೆಲ್ಲಗೆ ಬೀಸಿದಾಗ ಅವರು ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಅಲ್ಲಿಂದ ಹೊರಟು ಕ್ರೇತಕ್ಕೆ ಸವಿಾಪವಾಗಿ ಪ್ರಯಾಣಮಾಡಿದರು. ಆದರೆ ಸ್ವಲ್ಪ ಹೊತ್ತಿನ ಮೇಲೆ ಊರಕಲೋನು ಎಂಬ ಬಿರುಗಾಳಿಯು ಎದುರಾಗಿ ಬೀಸಿತು. ಆಗ ಹಡಗು ಅದಕ್ಕೆ ಸಿಕ್ಕಿಕೊಂಡು ಗಾಳಿಗೆ ತಾಳಲಾರದೆ ಇದ್ದದರಿಂದ ಅದು ನೂಕಿಕೊಂಡು ಹೋಗುವಂತೆ ನಾವು ಬಿಟ್ಟುಕೊಟ್ಟೆವು ನಾವು ಕ್ಲೌಡವೆಂಬ ಒಂದು ದ್ವೀಪದ ಮರೆಯಲ್ಲಿ ಹೋಗುತ್ತಿ ದ್ದದರಿಂದ ದೋಣಿಯನ್ನು ಭದ್ರಮಾಡಿಕೊಳ್ಳುವದು ನಮಗೆ ಬಹಳ ಪ್ರಯಾಸವಾಗಿತ್ತು. ಅದನ್ನು ಮೇಲಕ್ಕೆ ಎತ್ತಿ ಸಾಧನಗಳಿಂದ ಹಡಗಿನ ಕೆಳಭಾಗವನ್ನು ಬಿಗಿಯಾಗಿ ಕಟ್ಟಿದರು. ಆಮೇಲೆ ಕಳ್ಳುಸುಬಿಗೆ ನಾವು ಸಿಕ್ಕಿಕೊಂಡೇವೆಂದು ಭಯಪಟ್ಟು ಹಾಯಿಯನ್ನು ಸಡಿಲು ಮಾಡಿ ನೂಕಿಸಿಕೊಂಡು ಹೋದೆವು. ಬಿರುಗಾಳಿಯು ನಮ್ಮನ್ನು ಬಹಳವಾಗಿ ಹೊಯಿದಾಡಿಸಿದ್ದರಿಂದ ಮರುದಿನ ಅವರು ಹಡಗನ್ನು ಹಗುರವಾಗಿ ಮಾಡಿ ದರು; ಮೂರನೆಯ ದಿನ ನಮ್ಮ ಕೈಗಳಿಂದಲೇ ಹಡಗಿನ ಸಾಮಾನುಗಳನ್ನು ಎತ್ತಿ ಹೊರಗೆ ಹಾಕಿದೆವು. ಅನೇಕ ದಿವಸಗಳವರೆಗೆ ಸೂರ್ಯನಾಗಲಿ ನಕ್ಷತ್ರ ಗಳಾಗಲಿ ಕಾಣಿಸದೆ ದೊಡ್ಡ ಬಿರುಗಾಳಿಯು ನಮ್ಮ ಮೇಲೆ ಹೊಡೆದದ್ದರಿಂದ ನಾವು ಪಾರಾದೇವೆಂಬ ಎಲ್ಲಾ ನಿರೀಕ್ಷೆಯು ತಪ್ಪಿಹೋಯಿತು.
- Exodus 10:13 ವಿಮೋಚನಕಾಂಡ 10:13ಮೋಶೆಯು ತನ್ನ ಕೋಲನ್ನು ಐಗುಪ್ತದೇಶದ ಮೇಲೆ ಚಾಚಿದಾಗ ಕರ್ತನು ಹಗಲಿರುಳೂ ಮೂಡಣಗಾಳಿಯನ್ನು ಬರಮಾಡಿದನು. ಉದ ಯವಾದಾಗ ಆ ಮೂಡಣ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು.