Luke · chapter 15 · verse 28
Luke 15:28 in Kannada
ಅದಕ್ಕೆ ಅವನು ಕೋಪಗೊಂಡು ಒಳಗೆ ಹೋಗಲೊಲ್ಲದೆ ಇದ್ದನು. ಆದಕಾರಣ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿ ಕೊಂಡನು.
Adakke avanu kopagondu olage hogalollade iddanu. Aadakaarana avana tandeyu horage bandu avanannu bedi kondanu.
Luke 15:28 in English
- King James Version (KJV)
- And he was angry, and would not go in: therefore came his father out, and intreated him.
- World English Bible (WEB)
- But he was angry and would not go in. Therefore his father came out and begged him.
- American Standard Version (ASV)
- But he was angry, and would not go in: and his father came out, and entreated him.
- Bible in Basic English (BBE)
- But he was angry and would not go in; and his father came out and made a request to him to come in.
- Darby Translation (DBY)
- But he became angry and would not go in. And his father went out and besought him.
- Webster's Bible (WBS)
- And he was angry, and would not go in; therefore his father came out, and entreated him.
- Young's Literal Translation (YLT)
- 'And he was angry, and would not go in, therefore his father, having come forth, was entreating him;
Read in context
- 26ಅವನು ಸೇವಕರಲ್ಲಿ ಒಬ್ಬನನ್ನು ಕರೆದು ಇವುಗಳು ಏನೆಂದು ಕೇಳಿದನು.
- 27ಆ ಸೇವಕನು ಅವನಿಗೆ--ನಿನ್ನ ತಮ್ಮನು ಬಂದಿದ್ದಾನೆ; ನಿನ್ನ ತಂದೆಯು ಅವನನ್ನು ಸುರಕ್ಷಿತವಾಗಿ ಸೌಖ್ಯದಲ್ಲಿ ಸ್ವೀಕರಿಸಿದ್ದರಿಂದ ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ ಅಂದನು.
- 28ಅದಕ್ಕೆ ಅವನು ಕೋಪಗೊಂಡು ಒಳಗೆ ಹೋಗಲೊಲ್ಲದೆ ಇದ್ದನು. ಆದಕಾರಣ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿ ಕೊಂಡನು.
- 29ಆದರೆ ಅವನು ಪ್ರತ್ಯುತ್ತರವಾಗಿ ತನ್ನ ತಂದೆಗೆ--ಇಗೋ, ಇಷ್ಟು ವರುಷಗಳ ವರೆಗೆ ನಾನು ನಿನ್ನ ಸೇವೆ ಮಾಡುತ್ತಿದ್ದೇನೆ, ನಾನು ನಿನ್ನ ಅಪ್ಪಣೆ ಯನ್ನು ಎಂದಾದರೂ ವಿಾರಲಿಲ್ಲ; ಆದಾಗ್ಯೂ ನಾನು ನನ್ನ ಸ್ನೇಹಿತರೊಂದಿಗೆ ಸಂತೋಷಪಡುವದಕ್ಕಾಗಿ ನೀನ
- 30ಆದರೆ ನಿನ್ನ ಬದುಕನ್ನು ಸೂಳೆಯ ರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದ ಕೂಡಲೆ ಅವನಿಗೋಸ್ಕರ ಕೊಬ್ಬಿದ ಕರುವನ್ನು ನೀನು ಕೊಯ್ಸಿದ್ದೀ ಅಂದನು.
Cross references
- 1 Samuel 18:8 1 ಸಮುವೇಲನು 18:8ಸೌಲನಿಗೆ ಬಹು ಕೋಪವಾಯಿತು; ಆ ಮಾತು ಅವನಿಗೆ ವ್ಯಸನಕರವಾಗಿತ್ತು. ಇವರು ದಾವೀದ ನಿಗೆ ಹತ್ತು ಸಾವಿರಗಳನ್ನು ಹೇಳಿದ್ದಾರೆ; ನನಗೆ ಸಾವಿರ ಗಳನ್ನು ಹೇಳಿದ್ದಾರೆ; ಅವನಿಗೆ ರಾಜ್ಯವಲ್ಲದೆ ಇನ್ನು ಹೆಚ್ಚು ಬೇಕಾದದ್ದೇನು ಅಂದನು.
- Luke 15:2 ಲೂಕನು 15:2ಫರಿಸಾಯರು ಮತ್ತು ಶಾಸ್ತ್ರಿಗಳು--ಇವನು ಪಾಪಿಗಳನ್ನು ಅಂಗೀಕರಿಸಿ ಅವರೊಂದಿಗೆ ಊಟ ಮಾಡುತ್ತಾನೆ ಎಂದು ಹೇಳುತ್ತಾ ಗುಣುಗುಟ್ಟಿದರು.
- Jonah 4:9 ಯೋನ 4:9ಆಗ ದೇವರು ಯೋನನಿಗೆ--ನೀನು ಸೋರೇ ಗಿಡವನ್ನು ಕುರಿತು ಕೋಪಮಾಡುವದು ಒಳ್ಳೇದೋ ಅಂದನು. ಅವನು --ನಾನು ಸಾಯುವಷ್ಟು ಕೋಪಮಾಡುವದು ಒಳ್ಳೇದೇ ಅಂದನು.
- Genesis 4:5–7 ಆದಿಕಾಂಡ 4:5–7ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ. ಆಗ ಕಾಯಿ ನನು ಬಹು ಕೋಪಗೊಂಡನು, ಅವನ ಮುಖವು ಕಳೆಗುಂದಿತು. ಆಗ ಕರ್ತನು ಕಾಯಿನನಿಗೆ--ಯಾಕೆ ಕೋಪಗೊಂಡಿದ್ದೀ? ಯಾಕೆ ನಿನ್ನ ಮುಖವು ಕಳೆಗುಂದಿತು? ನೀನು ಒಳ್ಳೆಯದನ್ನು ಮಾಡಿದರೆ ಅಂಗೀಕರಿಸಲ್ಪಡುವದಿಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ ಪಾಪವು ಬಾಗಲಲ್ಲಿ ಹೊಂಚಿ ಕೊಂಡಿರುವದು; ನಿನ್ನ ಮೇಲೆ ಅದಕ್ಕೆ ಆಶೆ ಇರುವದು, ನೀನು ಅದನ್ನು ಆಳಬೇಕು ಎಂದು ಹೇಳಿದನು.
- Isaiah 65:5 ಯೆಶಾಯ 65:5ನಿನ್ನ ಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ, ಯಾಕಂದರೆ ನಿನಗಿಂತ ನಾನು ಪರಿಶುದ್ಧನಾಗಿದ್ದೇ ನೆಂದು ಹೇಳುವವರು; ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ ಹಗಲೆಲ್ಲಾ ಉರಿಯುವ ಬೆಂಕಿ ಯಾಗಿಯೂ ಇದ್ದಾರೆ.
- Luke 7:39 ಲೂಕನು 7:39ಆಗ ಆತನನ್ನು ಕರೆದ ಫರಿಸಾಯನು ಅದನ್ನು ನೋಡಿ ತನ್ನೊಳಗೆ--ಈ ಮನುಷ್ಯನು ಒಬ್ಬ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿದ್ದವಳು ಯಾರು ಎಂದೂ ಎಂಥತರವಾದ ಹೆಂಗಸು ಎಂದೂ ತಿಳಿದುಕೊಳ್ಳುತ್ತಿದ್ದನು; ಯಾಕಂದರೆ ಅವಳು ಒಬ್ಬ ಪಾಪಿ ಎಂದು ತನ್ನೊಳಗೆ ಅಂದು ಕೊಂಡನು.
- Luke 13:34 ಲೂಕನು 13:34ಓ ಯೆರೂಸಲೇಮೇ,ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರಿಗೆ ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟೋ ಸಾರಿ ಕೂಡಿಸಬೇಕೆಂದಿದ್ದೆನು; ಆದರೆ ನಿನಗೆ ಅದು ಮನಸ್ಸಿಇಗೋ, ನಿಮ್ಮ ಮನೆಯು ಹಾಳಾಗಿ ನಿಮಗೆ ಬಿಡಲ್ಪಟ್ಟಿದೆ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- Jonah 4:1–4 ಯೋನ 4:1–4ಆದರೆ ಅದು ಯೋನನಿಗೆ ತುಂಬಾಕರೆಕರೆಯಾಗಿ ಅವನಿಗೆ ಬಹು ಕೋಪ ಬಂತು. ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಓ ಕರ್ತನೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನೇ ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು; ನೀನು ಕರುಣೆಯೂ ಕನಿಕರವೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳದೇವರೆಂದೂ ಕೇಡಿನ ವಿಷಯವಾಗಿ ಪಶ್ಚಾತ್ತಾಪ ಪಡುವಾತನೆಂದೂ ನನಗೆ ತಿಳಿದಿತ್ತು. ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು. ಆಗ ಕರ್ತನು -- ನೀನು ಕೋಪಮಾಡಿಕೊಳ್ಳುವದು ಒಳ್ಳೇದೋ ಎಂದು ಅವನಿಗೆ ಹೇಳಿದನು.
- Luke 24:47 ಲೂಕನು 24:47ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವ ರೊಳಗೆ ಆತನ ಹೆಸರಿನಲ್ಲಿ ಮಾನಸಾಂತರ ಮತ್ತು ಪಾಪಗಳ ಕ್ಷಮಾಪಣೆ ಸಾರಲ್ಪಡಬೇಕೆಂತಲೂ ಬರೆಯ ಲ್ಪಟ್ಟಿದೆ.
- Luke 5:30 ಲೂಕನು 5:30ಆದರೆ ಅವರ ಶಾಸ್ತ್ರಿಗಳೂ ಫರಿಸಾಯರೂ ಆತನ ಶಿಷ್ಯರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಯಾಕೆ ಸುಂಕದವರ ಮತ್ತು ಪಾಪಿಗಳ ಸಂಗಡ ತಿಂದು ಕುಡಿಯುತ್ತೀರಿ ಎಂದು ಕೇಳಿದರು.
- 1 Samuel 17:28 1 ಸಮುವೇಲನು 17:28ಆದರೆ ಅವನು ಆ ಮನುಷ್ಯರ ಸಂಗಡ ಮಾತನಾಡುತ್ತಿರು ವದನ್ನು ಅವನ ಹಿರಿಯ ಸಹೋದರನಾದ ಎಲೀಯಾ ಬನು ಕೇಳಿ ಅವನ ಮೇಲೆ ಕೋಪಗೊಂಡು--ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು; ನೀನು ಯುದ್ಧವನ್ನು ನೋಡಲು ಇಳಿದು ಬಂದಿದ್ದೀ ಅಂದನು.
- Romans 10:19 ರೋಮಾಪುರದವರಿಗೆ 10:19ಆದರೆ--ಇಸ್ರಾಯೇಲ್ಯರು ತಿಳುಕೊಳ್ಳಲಿಲ್ಲವೇನು ಎಂದು ನಾನು ಕೇಳುತ್ತೇನೆ. ಈ ವಿಷಯದಲ್ಲಿ--ನನ್ನ ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಹುರುಡು ಹುಟ್ಟಿಸುವೆನು; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು ಎಂದು ಮೊದಲು ಮೋಶೆಯು ಹೇಳುತ್ತಾನೆ.